ದಾಳಿಯ ಭಯದಿಂದಾಗಿ ಕ್ಯಾಲಿಫೋರ್ನಿಯಾದ ಧರ್ಮಾಧ್ಯಕ್ಷರು ವಲಸಿಗರನ್ನು ದಿವ್ಯಬಲಿಪೂಜೆಯ ಬಾಧ್ಯತೆಯಿಂದ ಬಿಡುಗಡೆ ಮಾಡಿದ್ದಾರೆ
ಇಸಾಬೆಲ್ಲಾ ಹೆಚ್. ಡಿ ಕಾರ್ವಾಲ್ಹೋ
ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊದ ಧರ್ಮಾಧ್ಯಕ್ಷರು, ಧರ್ಮಾಧ್ಯಕ್ಷರಾದ ಆಲ್ಬರ್ಟೊ ರೋಜಾಸ್ ರವರು, ಜುಲೈ 8, 2025 ರಂದು ಒಂದು ಆದೇಶವನ್ನು ಹೊರಡಿಸಿದರು, ಸಂಭಾವ್ಯ ವಲಸೆ ಜಾರಿ ಕ್ರಮಗಳ "ನಿಜವಾದ ಭಯದ” ಹಿನ್ನೆಲೆಯಲ್ಲಿ, ಮುಂದಿನ ಸೂಚನೆ ಬರುವವರೆಗೂ ಭಾನುವಾರದ ದಿವ್ಯಬಲಿಪೂಜೆಯ ವಿಧಿಗೆ ಹಾಜರಾಗುವ ಬಾಧ್ಯತೆಯಿಂದ ವಲಸೆ ಬಂದ ಭಕ್ತವಿಶ್ವಾಸಿಗಳನ್ನು ಬಿಡುಗಡೆ ಮಾಡಿದರು.
ನಮ್ಮ ಧರ್ಮಕೇಂದ್ರದ ಸಮುದಾಯಗಳಲ್ಲಿ ಅನೇಕರು ಯಾವುದೇ ರೀತಿಯ ಸಾರ್ವಜನಿಕ ಸ್ಥಳಕ್ಕೆ ಹೋದರೆ, ವಲಸೆ ಅಧಿಕಾರಿಗಳಿಂದ ಬಂಧಿಸಲ್ಪಡುವ ಭಯವಿದೆ. ದುಃಖಕರವೆಂದರೆ, ಭಾನುವಾರದ ದಿವ್ಯಬಲಿಪೂಜೆಯ ವಿಧಿಗೆ ಹಾಜರಾಗುವುದೂ ಸೇರಿದೆ" ಎಂದು ಜುಲೈ 10 ರಂದು ಬಿಡುಗಡೆಯಾದ ಸುಗ್ರೀವಾಜ್ಞೆಯ ಜೊತೆಗಿನ ಮಾಧ್ಯಮ ಹೇಳಿಕೆಯಲ್ಲಿ ಧರ್ಮಾಧ್ಯಕ್ಷರಾದ ರೋಜಾಸ್ ರವರು ಹೇಳಿದರು. ನಮ್ಮ ವಲಸೆ ಸಮುದಾಯಗಳು ತಮ್ಮ ಧರ್ಮಸಭೆಯ ಈ ಕಷ್ಟದ ಸಮಯದಲ್ಲಿ ಅವರೊಂದಿಗೆ ನಿಂತಿದೆ ಎಂದು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ.
ಜೂನ್ 20 ರಂದು, ಧರ್ಮಕ್ಷೇತ್ರದ ಅಧಿಕಾರಿಗಳು, ICE ಏಜೆಂಟರು ಮಾಂಟ್ಕ್ಲೇರ್ ಮತ್ತು ಹೈಲ್ಯಾಂಡ್‌ನಲ್ಲಿರುವ ಎರಡು ಕಥೋಲಿಕ ಧರ್ಮಕೇಂದ್ರದ ಆಸ್ತಿಗಳನ್ನು ಪ್ರವೇಶಿಸಿದರು ಮತ್ತು ಕ್ಯಾಲಿಫೋರ್ನಿಯಾದ ಹೈಲ್ಯಾಂಡ್‌ನಲ್ಲಿರುವ ಸಂತ ಅಡಿಲೇಡ್ ರವರ ದೇವಾಲಯದ ಪಾರ್ಕಿಂಗ್ ಸ್ಥಳದಲ್ಲಿ ಹಲವಾರು ಜನರನ್ನು ಬಂಧಿಸಿದರು ಎಂದು ಹೇಳಿದರು.
ಸ್ಯಾನ್ ಬರ್ನಾರ್ಡಿನೊದ ಧರ್ಮಕ್ಷೇತ್ರದ ಸಂವಹನ ನಿರ್ದೇಶಕ ಜಾನ್ ಆಂಡ್ರ್ಯೂಸ್ ರವರು, ಆ ಸಮಯದಲ್ಲಿ ಧರ್ಮಕೇಂದ್ರದ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು, ಬಂಧಿತ ಇತರರು ಧರ್ಮಕೇಂದ್ರದ ಸದಸ್ಯರಲ್ಲ ಅಥವಾ ಧರ್ಮಕೇಂದ್ರಕ್ಕಾಗಿ ಕೆಲಸ ಮಾಡುತ್ತಿದವರಲ್ಲ ಎಂದು ಹೇಳಿದರು.
ಈ ಘಟನೆಗಳು ಅನೇಕ ವಲಸೆ ಭಕ್ತವಿಶ್ವಾಸಿಗಳ ಭಯವನ್ನು "ತೀವ್ರಗೊಳಿಸಿವೆ" ಎಂದು ಧರ್ಮಾಧ್ಯಕ್ಷರು ತಮ್ಮ ಇತ್ತೀಚಿನ ಸಂದೇಶದಲ್ಲಿ ವಿವರಿಸಿದರು. ಜೂನ್ 23 ರಂದು ಅವರು ಈಗಾಗಲೇ ಒಂದು ಪತ್ರ ಬರೆದಿದ್ದರು, ಅದರಲ್ಲಿ ಅವರು ರಾಜಕೀಯ ನಾಯಕರು ಮತ್ತು ನಿರ್ಧಾರ ತೆಗೆದುಕೊಳ್ಳುವವರು ಮಾನವ ಹಕ್ಕುಗಳು ಮತ್ತು ಮಾನವ ಘನತೆಯನ್ನು ಗೌರವಿಸುವ ವಿಧಾನದ ಪರವಾಗಿ ಈ ತಂತ್ರಗಳನ್ನು "ಮರುಪರಿಶೀಲಿಸಿ ತಕ್ಷಣವೇ ನಿಲ್ಲಿಸಬೇಕು" ಎಂದು ಕೇಳಿಕೊಂಡರು.