SECAM ನ 20ನೇ ಪರಿಪೂರ್ಣ ಸಭೆ ಕಿಗಾಲಿಯಲ್ಲಿ ಆರಂಭ
ಕ್ರಿಸ್ಟೋಫರ್ ವೆಲ್ಸ್
ಈ ವಾರ ಜುಲೈ 30 ರಿಂದ ಆಗಸ್ಟ್ 4 ರವರೆಗೆ) ಆಫ್ರಿಕಾ ಮತ್ತು ಮಡಗಾಸ್ಕರ್‌ನ (SECAM) ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಸಿಂಪೋಸಿಯಂನ 20ನೇ ಪರಿಪೂರ್ಣ ಸಭೆಗಾಗಿ ಆಫ್ರಿಕಾದ ಕಥೋಲಿಕ ಧರ್ಮಸಭೆಗಳ 250ಕ್ಕೂ ಹೆಚ್ಚು ಪ್ರತಿನಿಧಿಗಳು ರುವಾಂಡಾದ ಕಿಗಾಲಿಯಲ್ಲಿ ಒಟ್ಟುಗೂಡುತ್ತಿದ್ದಾರೆ.
SECAM ಆಫ್ರಿಕಾದ ಎಲ್ಲಾ ಕಥೋಲಿಕ ಧರ್ಮಾಧ್ಯಕ್ಷರುಗಳ ಸಂಘವಾಗಿದೆ ಮತ್ತು ಮೋಕ್ಷದ ಸಾಧನವಾಗಿ ಧರ್ಮಸಭೆಯ ಪಾತ್ರವನ್ನು ಉತ್ತೇಜಿಸುವುದು ಮತ್ತು ಆಫ್ರಿಕಾ ಹಾಗೂ ಅದರ ದ್ವೀಪಗಳ ಎಲ್ಲಾ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳಲ್ಲಿ ಐಕ್ಯತೆ, ಸಹಯೋಗ ಮತ್ತು ಜಂಟಿ ಕ್ರಿಯೆಯನ್ನು ಬೆಳೆಸುವ ಮೂಲಕ ಆಫ್ರಿಕಾದಲ್ಲಿ ಧರ್ಮಸಭೆಯನ್ನು ದೇವರ ಕುಟುಂಬವಾಗಿ ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು SECAM ಅಧ್ಯಕ್ಷ ಫ್ರಿಡೋಲಿನ್ ಕಾರ್ಡಿನಲ್ ಅಂಬೊಂಗೊ, ಕಿನ್ಶಾಸಾದ ಮಹಾಧರ್ಮಾಧ್ಯಕ್ಷರು ಹೇಳಿದ್ದಾರೆ.
ಈ ವರ್ಷದ ಸಮಗ್ರ ಸಭೆಯು ಕಾರ್ಡಿನಲ್‌ಗಳು, ಧರ್ಮಾಧ್ಯಕ್ಷರುಗಳು, ಯಾಜಕರು, ಧಾರ್ಮಿಕ ಪುರುಷರು ಮತ್ತು ಮಹಿಳೆಯರು, ಆಫ್ರಿಕಾದಾದ್ಯಂತದ ಸಾಮಾನ್ಯ ನಾಯಕರು ಮತ್ತು ಇತರ ಖಂಡಗಳ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸುತ್ತದೆ. ಈ ವರ್ಷದ ಸಭೆಯ ವಿಷಯ: "ಕ್ರಿಸ್ತ, ಭರವಸೆಯ ಮೂಲ, ಸಮನ್ವಯ ಮತ್ತು ಶಾಂತಿ."
ಪರಿಪೂರ್ಣಸ ಭೆಯ ಸಮಯದಲ್ಲಿ, ಭಾಗವಹಿಸುವವರು 2022 ರಲ್ಲಿ ಘಾನಾದ ಅಕ್ರಾದಲ್ಲಿ ನಡೆದ ಹಿಂದಿನ ಸಭೆಯ ನಂತರ ಸಾಧಿಸಿದ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತಾರೆ.
2025ರ ಸಭೆಯ ಕಾರ್ಯಸೂಚಿಯ ಅಂಶಗಳಲ್ಲಿ 2025ರ SECAMನ ದೀರ್ಘಾವಧಿಯ ದೃಷ್ಟಿ ದಾಖಲೆಯ ಪ್ರಸ್ತುತಿಯೂ ಸೇರಿದೆ. ಇದು ಸುವಾರ್ತಾಬೋಧನೆ, ಕುಟುಂಬ ನಾಯಕತ್ವ, ಯುವಜನರ ತೊಡಗಿಸಿಕೊಳ್ಳುವಿಕೆ, ಸೃಷ್ಟಿಗಾಗಿ ಕಾಳಜಿ, ಡಿಜಿಟಲ್ ಧ್ಯೇಯದ ಮತ್ತು ರಾಜಕೀಯ ಜವಾಬ್ದಾರಿ ಸೇರಿದಂತೆ ಹನ್ನೆರಡು "ಮೂಲ ಸ್ತಂಭಗಳ" ಸುತ್ತಲೂ ನಿರ್ಮಿಸಲಾಗಿದೆ.
ಬಹುಪತ್ನಿತ್ವ ಒಕ್ಕೂಟಗಳಂತಹ "ಸಂಕೀರ್ಣ ಸಾಂಸ್ಕೃತಿಕ ವಾಸ್ತವಗಳಲ್ಲಿ" ಕಥೊಲಿಕರ ಜೊತೆಗಿನ ಸಭಾಪಾಲಕನ ಪ್ರತಿಬಿಂಬವನ್ನು ಸಭೆಯು ಒಳಗೊಂಡಿರುತ್ತದೆ; ಜೊತೆಗೆ ಆಡಳಿತ, ನ್ಯಾಯ, ಶಾಂತಿ, ಅಂತರಧರ್ಮೀಯ ಸಂವಾದ, ಹವಾಮಾನ ಬದಲಾವಣೆ ಮತ್ತು ಸುರಕ್ಷತೆಯ ಕುರಿತು ಚರ್ಚೆಯನ್ನು ಒಳಗೊಂಡಿರುತ್ತದೆ.
20ನೇ ಪರಿಪೂರ್ಣ ಸಭೆಯ ಪ್ರಮುಖ ಅಂಶವೆಂದರೆ 2025-2028 ರ ತ್ರೈವಾರ್ಷಿಕ ಕಾರ್ಯತಂತ್ರದ ಯೋಜನೆಯ ಅನಾವರಣ ಮತ್ತು ಸಂಸ್ಥೆಯ ಸಂವಿಧಾನಕ್ಕೆ ಅನುಗುಣವಾಗಿ SECAM ನ ನಾಯಕತ್ವದ ನವೀಕರಣದ ಪ್ರಾರಂಭವಾಗಿದೆ.
ಐತಿಹಾಸಿಕ ಟಿಪ್ಪಣಿ
SECAMಜಾಲತಾಣದಿಂದ: ಎರಡನೇ ವ್ಯಾಟಿಕನ್ ಸಮ್ಮೇಳನದ (1962-1965) ಸಮಯದಲ್ಲಿ ಆಫ್ರಿಕಾದ ಯುವ ಧರ್ಮಾಧ್ಯಕ್ಷರುಗಳ ಇಚ್ಛೆಯಿಂದ ಆಫ್ರಿಕಾ ಮತ್ತು ಮಡಗಾಸ್ಕರ್‌ನ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಸಿಂಪೋಸಿಯಂ ಹುಟ್ಟಿಕೊಂಡಿತು. ಅವರು ಒಂದೇ ಧ್ವನಿಯಲ್ಲಿ ಮಾತನಾಡಲು ಬಯಸಿದ್ದರು. ಆದ್ದರಿಂದ SECAM ಸ್ಥಾಪನೆಯು ಇಡೀ ಧರ್ಮಸಭೆಗೆ ಆಫ್ರಿಕಾದ ದೃಷ್ಟಿಕೋನವನ್ನು ತರುವ ಸಲುವಾಗಿ ಭೂಖಂಡದ ರಚನೆಯನ್ನು ನಿರ್ಮಿಸುವ ಧರ್ಮಾಧ್ಯಕ್ಷರುಗಳ ನಿರ್ಣಯದ ಫಲಿತಾಂಶವಾಗಿದೆ.