ತಂಜಾನಿಯಾದ ಅನನುಕೂಲಕರ ಯುವಜನತೆಯನ್ನು ಮೇಲಕ್ಕೆತ್ತುವ ಮೇರಿ ಸಭೆಯ ಧಾರ್ಮಿಕ ಭಗಿನಿಯರು
ಸಾರಾ ಪೆಲಾಜಿ
ತಂಜಾನಿಯಾದ ಪೂರ್ವ ಆಫ್ರಿಕಾದಲ್ಲಿ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದ್ದರೂ, ಅದು ಇನ್ನೂ ಕಡಿಮೆ ಆದಾಯದ ದೇಶವಾಗಿದೆ ಮತ್ತು ಅದರ ಅನೇಕ ನಾಗರಿಕರು ದೈನಂದಿನ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅನೇಕ ಸಾಮಾನ್ಯ ಕುಟುಂಬಗಳಿಗೆ, ಸಮಗ್ರ ಶಿಕ್ಷಣವನ್ನು ಪಡೆಯುವುದು ಅವರ ಸಾಧನಗಳಿಗಿಂತ ಹೆಚ್ಚಿನದಾಗಿದೆ.
1964ರಲ್ಲಿ ಶ್ರೇಷ್ಠಗುರು ಅಲೋಶಿಯಸ್ ಶ್ವಾರ್ಟ್ಜ್ ರವರು ಸ್ಥಾಪಿಸಿದ ಅಂತರರಾಷ್ಟ್ರೀಯಚ ವಿಶ್ವದಾದ್ಯಂತ ಅನಾನುಕೂಲಕರ ಮಕ್ಕಳಿಗಾಗಿ ಅವರ ಬದ್ಧತೆಗೆ ಹೆಸರುವಾಸಿಯಾಗಿದೆ, ಇದು ತಂಜಾನಿಯಾದ ಕೆಲವು ದುರ್ಬಲ ಮಕ್ಕಳೊಂದಿಗೆ ಕೆಲಸ ಮಾಡುವ ಧ್ಯೇಯವನ್ನು ವಹಿಸಿಕೊಂಡಿದೆ.
ಮೇರಿ ಸಭೆಯ ಧಾರ್ಮಿಕ ಭಗಿನಿಯರು, ಕಲಿಯುವವರಿಗೆ ಗುಣಮಟ್ಟದ ಶಿಕ್ಷಣ ಮತ್ತು ಭವಿಷ್ಯದಲ್ಲಿ ನಿಜ ಜೀವನದ ಸವಾಲುಗಳಿಗೆ ಅವರನ್ನು ಸಿದ್ಧಪಡಿಸುವ ಅವಕಾಶಗಳನ್ನು ಒದಗಿಸಲು ಬದ್ಧವಾಗಿದೆ.
2019ರಲ್ಲಿ, ಮೇರಿ ಸಭೆಯ ಧಾರ್ಮಿಕ ಭಗಿನಿಯರು, ದಾರ್ ಎಸ್ ಸಲಾಮ್ ಧರ್ಮಕ್ಷೇತ್ರದ ಕಿಸಾರಾವೆಯಲ್ಲಿ ಹೆಚ್ಚಾಗಿ ಬಡ ಕುಟುಂಬಗಳ ಹುಡುಗಿಯರಿಗಾಗಿ ಶಾಲೆಯನ್ನು ಪ್ರಾರಂಭಿಸಿತು. ಆರಂಭದಲ್ಲಿ ಮೂಲಭೂತ ಶಿಕ್ಷಣವನ್ನು ನೀಡುತ್ತಿದ್ದ ಶಾಲೆಯು 2024ರಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು ಸೇರಿಸಲು ವಿಸ್ತರಿಸಿತು. ಪ್ರಸ್ತುತ, ಈ ಸಂಸ್ಥೆಯಲ್ಲಿ 1,029 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಹುಡುಗಿಯರು ಶೈಕ್ಷಣಿಕ ವಿಷಯಗಳು ಸೇರಿದಂತೆ ಸರ್ಕಾರಿ ಮಾನದಂಡಗಳಿಗೆ ಅನುಗುಣವಾಗಿ ಸಮಗ್ರ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಶಾಲೆಯು ಪೋಷಿಸುವ ವಾತಾವರಣವಾಗಿದ್ದು, ಹೆಣ್ಣುಮಗುವಿಗೆ ಸ್ನೇಹಿತರನ್ನು ಮಾಡಿಕೊಳ್ಳುವುದು, ಕ್ರೀಡೆಗಳನ್ನು ಆಡುವುದು ಮತ್ತು ಹೊಸ ಹವ್ಯಾಸಗಳನ್ನು ಅನ್ವೇಷಿಸುವುದು ಸೇರಿದಂತೆ ಸಾಮಾನ್ಯ ಬಾಲ್ಯತನದ ಜೀವನವನ್ನು ಅನುಭವಿಸಲು ಅನುವು ಮಾಡಿಕೊಡುತ್ತಿದೆ. ಜೊತೆಗೆ ಭವಿಷ್ಯದ ಉದ್ಯೋಗಕ್ಕಾಗಿ ಪ್ರಾಯೋಗಿಕ ಕೌಶಲ್ಯಗಳನ್ನೂ ಸಹ ನೀಡುತ್ತಿದೆ.