MAP

Peter To Rot Peter To Rot 

ಪೀಟರ್ ಟು ರೋಟ್: ಒಬ್ಬ ಸಂತ, ಧ್ಯೇಯದ ಫಲ

ವಿಶ್ವಗುರು ಹದಿನಾಲ್ಕನೇ ಲಿಯೋರವರು ತಮ್ಮ ವಿಶ್ವಗುರುವಿನ ಪ್ರೇಷಿತ ಸೇವಾಧಿಕಾರದ ಮೊದಲ ಸಾಮಾನ್ಯ ಸಾರ್ವಜನಿಕ ಕನ್ಸಿಸ್ಟರಿಯಲ್ಲಿ, ಎಂಟು ಜನ ಪುನೀತರನ್ನು ಸಂತರ ಪದವಿಗೇರಿಸುವ ದಿನಾಂಕವನ್ನು ನಿಗದಿಪಡಿಸುತ್ತಾರೆ, ಇದರಲ್ಲಿ ಪಾಪುವಲ್ ನ್ಯೂ ಗಿನಿಯಾದ ಮೊದಲ ಸಂತರಾದ ಸಂತ ಪೀಟರ್ ಟು ರೋಟ್ ರಾದವರು ಸೇರಿದ್ದಾರೆ.

ಜೇವಿಯರ್ ಟ್ರಾಪೆರೊ

ಪಪುವಾ ನ್ಯೂಗಿನಿಯಾದ ಮೊದಲ ಸಂತರನ್ನು ಸೆಪ್ಟೆಂಬರ್ ತಿಂಗಳ 7, 2025ರಂದು ಸಂತರೆಂದು ಘೋಷಿಸಲಾಗುವುದು, ವಿಶ್ವಗುರು ಹದಿನಾಲ್ಕನೇ ಲಿಯೋರವರು ಜೂನ್ 13, ಶುಕ್ರವಾರದಂದು ತಮ್ಮ ವಿಶ್ವಗುರುವಿನ ಪ್ರೇಷಿತ ಸೇವಾಧಿಕಾರದ ಮೊದಲ ಸಾಮಾನ್ಯ ಸಾರ್ವಜನಿಕ ಸಂರಚನೆಯಲ್ಲಿ ಘೋಷಿಸಿದರು.

ರೋಟ್ ರವರು ಒಬ್ಬ ಸಾಮಾನ್ಯ ಧರ್ಮೋಪದೇಶಕರಾಗಿದ್ದರು, ಜಪಾನಿನವರು ವಿಧಿಸಿದ ನಿಷೇಧದ ಹೊರತಾಗಿಯೂ ತಮ್ಮ ಧರ್ಮಪ್ರಚಾರವನ್ನು ಮುಂದುವರೆಸಿದ್ದಕ್ಕಾಗಿ 1945ರಲ್ಲಿ ರಕ್ತಸಾಕ್ಷಿಯಾದರು. ಅವರ ಪ್ರಕರಣವು ಹಲವಾರು ಕಾರಣಗಳಿಗಾಗಿ ವಿಶೇಷವಾಗಿದೆ. ಇವರೇ ಪಾಪುವಾನಿನ ಪ್ರಪ್ರಥಮ ಸ್ಥಳೀಯ ಸಂತ, ವಿವಾಹ ಮತ್ತು ಕುಟುಂಬದ ಉತ್ಸಾಹಭರಿತ ರಕ್ಷಕ, ಪ್ರಭುವಿನ ಪವಿತ್ರ ಹೃದಯದ ಧರ್ಮಪ್ರಚಾರಕರ ಧ್ಯೇಯಕ್ಕೆ ಬದ್ಧರಾಗಿರುವ ಧರ್ಮೋಪದೇಶಕರಾಗಿದ್ದರು. ಅವರ ಪವಿತ್ರತೆಯು ಶುಭಸಂದೇಶದ ಧರ್ಮಪ್ರಚಾರದಲ್ಲಿ ಯಾಜಕರು ಮತ್ತು ಶ್ರೀ ಸಾಮಾನ್ಯ ಜನರ ನಿಕಟ ಸಹಯೋಗದ ಫಲವಾಗಿದೆ.

'ವಿವಾಹದ ವಾಗ್ದಾನಗಳನ್ನು ಮುರಿಯುವವರಿಗಾಗಿ ಮತ್ತು ದೇವರ ಕಾರ್ಯವನ್ನು ನೋಡಲು ಬಯಸದವರಿಗಾಗಿ ನಾನು ಬಂಧಿಯಾಗಿದ್ದೇನೆ. ಅಷ್ಟೇ. ನಾನು ಸಾಯಲೇಬೇಕು. ನನಗೆ ಈಗಾಗಲೇ ಮರಣದಂಡನೆ ವಿಧಿಸಲಾಗಿದೆ. ಪೀಟರ್ ಟು ರಾಟ್ ರವರು ಈ ಮಾತುಗಳನ್ನು ತಮ್ಮ ಸಾವಿಗೆ ಕೆಲವೇ ಗಂಟೆಗಳ ಮೊದಲು ಹೇಳಿದ್ದು, ಅವರ ಹುತಾತ್ಮತೆಯ ಕಾರಣಗಳನ್ನು ವಿವರಿಸುತ್ತದೆ, ಆದರೆ ಇವೆಲ್ಲವೂ ಅರ್ಥಪೂರ್ಣವಾಗುವುದು ಅದರ ಹಿಂದಿನ ಅನೇಕ ಇತರ ಘಟನೆಗಳ ಜ್ಞಾನ ಮತ್ತು ಅರಿವಿನೊಂದಿಗೆ ಮಾತ್ರ ಸಾಧ್ಯ, ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದಿದ್ದಲ್ಲಿ, ಅವರ ಆಳವಾದ ವಿಶ್ವಾಸ ಮತ್ತು ಪವಿತ್ರ ಜೀವನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಒಬ್ಬ ನಾಯಕನಾಗಿ, ಅವರನ್ನು ಉಳಿದ ಜನಸಂಖ್ಯೆಯು ಬಹಳ ಗೌರವದಿಂದ ಕಾಣುತ್ತಿತ್ತು, ಆದರೆ ಅದಕ್ಕಿಂತಲೂ ಹೆಚ್ಚಾಗಿ ಅವರ ಅಗತ್ಯವಿದ್ದವರಿಗೆ ಅವರ ದಯೆ ಮತ್ತು ವೈಯಕ್ತಿಕ ಸಮರ್ಪಣೆಗಾಗಿ ಅವರನ್ನು ಗೌರವದಿಂದ ಕಾಣುತ್ತಿತ್ತು. ಅವರ ಪತ್ನಿ ಮಾರಿಯಾ ಇಯಾ ತುಮುಲ್ ಅವರೊಂದಿಗೆ, ಅವರು ಧರ್ಮಪ್ರಚಾರಕರೊಂದಿಗೆ ನಿಕಟ ಸಂಬಂಧವನ್ನು ಪ್ರಾರಂಭಿಸಿದರು. ಈ ರೀತಿಯಾಗಿ, ಅವರ ವಿಶಾವಸವನ್ನು ಸಮುದಾಯದ ಇತರ ಸದಸ್ಯರು ಇದು ಒಳ್ಳೆಯದು ಎಂದು ಅರ್ಥಮಾಡಿಕೊಂಡರು.

ವಿಶ್ವಾಸ ಮತ್ತು ದಾನಶೀಲತೆಯ ಈ ಕೌಟುಂಬಿಕ ವಾತಾವರಣದಲ್ಲಿ ಪೀಟರ್ ಟು ರೋಟ್ ರವರು ಜನಿಸಿದರು. ಚಿಕ್ಕ ವಯಸ್ಸಿನಿಂದಲೂ, ಅವರು ಭಾನುವಾರದ ದಿವ್ಯಬಲಿಪೂಜೆಯಲ್ಲಿ ಪ್ರಾರ್ಥನೆಯಲ್ಲಿ ಮಾತ್ರವಲ್ಲದೆ ದೈನಂದಿನದ ದಿವ್ಯಬಲಿಪೂಜೆಯಲ್ಲಿ ಪೀಠಸೇವಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಟು ರೋಟ್‌ನ ಹದಿಹರೆಯದಿಂದಲೂ ಆ ಧರ್ಮಪ್ರಚಾರಕ ಧರ್ಮಕೇಂದ್ರದ ಧರ್ಮಗುರುವಾಗಿದ್ದ ಎಂಎಸ್‌ಸಿ ಕಾರ್ಲ್ ಲಾಫರ್ ರವರು, 18 ನೇ ವಯಸ್ಸಿನಲ್ಲಿ ಧರ್ಮೋಪದೇಶಕರ ಶಾಲೆಗೆ ಸೇರಲು ಸಲಹೆ ನೀಡಿದರು.

ಧರ್ಮೋಪದೇಶಕರ ಪರಿಕಲ್ಪನೆ ಮತ್ತು ಅವರ ಕಾರ್ಯಗಳು, ಒಂದು ಧ್ಯೇಯದಲ್ಲಿ ಸಮುದಾಯದ ಕಡೆಗೆ ಬಲವಾದ ಬದ್ಧತೆಯನ್ನು ಹೊಂದಿವೆ. ಅವರು ನಿಜವಾದ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದು, ವಿಶ್ವಾಸದ ಜ್ವಾಲೆಯನ್ನು ಜೀವಂತವಾಗಿಡುವ ಜವಾಬ್ದಾರಿಯನ್ನು ಹೊಂದಿದ್ದಾರೆ, ಧರ್ಮಪ್ರಚಾರಕರ ಅನುಪಸ್ಥಿತಿಯಲ್ಲಿ ಪರಮಪ್ರಸಾದದ ಪವಿತ್ರೀಕರಣವನ್ನು ಹೊರತುಪಡಿಸಿ , ಅವರ ಎಲ್ಲಾ ಚಟುವಟಿಕೆಗಳನ್ನು ಇವರು ನಿರ್ವಹಿಸುತ್ತಾರೆ. ಅವರು ದೀಕ್ಷಸ್ನಾನ ನೀಡುತ್ತಿದ್ದರು, ವಿವಾಹಗಳನ್ನುಆರ್ಶೀವದಿಸುತ್ತಿದ್ದರು, ದೇವರ ವಾಕ್ಯವನ್ನು ತರುತ್ತಿದ್ದರು... ಕೆಲವೊಮ್ಮೆ ಅವರ ಬದ್ಧತೆ ತುಂಬಾ ದೊಡ್ಡದಾಗಿದ್ದು, ಅದಕ್ಕಾಗಿ ಅವರು ತಮ್ಮ ಪ್ರಾಣವನ್ನೂ ನೀಡಲು ಸಿದ್ಧರಿದ್ದರು. 1980 ರ ದಶಕದಲ್ಲಿ ಗ್ವಾಟೆಮಾಲಾದಲ್ಲಿ, ಎಲ್ ಕ್ವಿಚೆ ಪ್ರದೇಶದಲ್ಲಿ, ಪ್ರಭುವಿನ ಪವಿತ್ರ ಹೃದಯದ ಧರ್ಮಪ್ರಚಾರಕರ ಕೆಲಸಕ್ಕೆ ಸಹಾಯ ಮಾಡಿದ್ದಕ್ಕಾಗಿ ಅಥವಾ ದೇಶದಿಂದ ಹೊರಹಾಕಲ್ಪಟ್ಟಾಗ ಅದನ್ನು ಮುಂದುವರಿಸಿದ್ದಕ್ಕಾಗಿ ಡಜನ್ಗಟ್ಟಲೆ ಧರ್ಮೋಪದೇಶಕರನ್ನು ಸೈನ್ಯವು ಕೊಂದಿತು.

ಪೀಟರ್ ಟು ರೋಟ್ ಹುತಾತ್ಮರಾಗಲು ಕಾರಣವಾದ ಸಂದರ್ಭಗಳು ತುಂಬಾ ಹೋಲುತ್ತಿದ್ದವು. ಎರಡನೇ ಮಹಾಯುದ್ಧದ ಸಮಯದಲ್ಲಿ, 1942ರಲ್ಲಿ, ಜಪಾನಿನ ಸೈನ್ಯವು ಪಪುವಾ ನ್ಯೂಗಿನಿಯಾವನ್ನು ಆಕ್ರಮಿಸಿತು. ಅವರು ತೆಗೆದುಕೊಂಡ ಮೊದಲ ಕ್ರಮಗಳಲ್ಲಿ ಎಲ್ಲಾ ಧರ್ಮಪ್ರಚಾರಕರನ್ನು ಜೈಲಿಗೆ ಹಾಕುವುದು ಒಂದಾಗಿತ್ತು, ಆದರೂ ಅವರು ತಮ್ಮ ಜನರಿಗೆ ಧಾರ್ಮಿಕ ಆಚರಣೆಗೆ ಅವಕಾಶ ನೀಡುವುದನ್ನು ಮುಂದುವರೆಸಿದರು. ಇಲ್ಲಿ ಸಾಮಾನ್ಯವಾಗಿ ಧರ್ಮೋಪದೇಶಕರು ಮತ್ತು ನಿರ್ದಿಷ್ಟವಾಗಿ ಪೀಟರ್ ಟು ರಾಟ್, ವಿಶ್ವಾಸ, ಆಚರಣೆಗಳು ಮತ್ತು ಸಂಸ್ಕಾರಗಳ ವಿತರಣೆಯನ್ನು ಉಳಿಸಿಕೊಳ್ಳುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದರು. ಒಂದು ವರ್ಷದ ನಂತರ, ಅವರು ಕೆಲವು ಚಟುವಟಿಕೆಗಳನ್ನು ನಿಷೇಧಿಸಲು ಪ್ರಾರಂಭಿಸಿದರು, ಅಂತಿಮವಾಗಿ, ಅವರು ಎಲ್ಲಾ ಅಭ್ಯಾಸಗಳನ್ನು ನಿಷೇಧಿಸಿದರು. ಆದರೆ ಪೀಟರ್ ಟು ರೋಟ್ ಈಗಾಗಲೇ ದೇವರ ವಾಕ್ಯದ ಘೋಷಣೆಗೆ ಮತ್ತು ಶುಭಸಂದೇಶದ ಪ್ರಕಾರ ಯೇಸುವಿನ ಬೋಧನೆಗಳನ್ನು ಆಚರಣೆಗೆ ತರಲು ಬಲವಾದ ಬದ್ಧತೆಯನ್ನು ಹೊಂದಿದ್ದರು.

ಹೀಗೆ ಅವರ ಧರ್ಮಪ್ರಚಾರದಿಂದ ಕೋಪಗೊಂಡಿದ್ದ ಜರ್ಮಿನ್ನಿನ ಸೇನಾದಳವು, ಜುಲೈ 1945ರ ಆರಂಭದ ದಿನಗಳಲ್ಲಿ, ಪೀಟರ್ ಟು ರೋಟ್ ಗೆ ಶೀತ ಬಂದ ಕಾರಣ. ಅವರಿಗೆ ಕಠಿಣ ಶಿಕ್ಷೆಯ ಅಗತ್ಯವಿರಲಿಲ್ಲ, ಮರಣದಂಡನೆಗೆ ಯಾವುದೇ ಅಧಿಕೃತ ವಿಧಾನವಿರಲಿಲ್ಲ. ಆತನ ಶೀತದ ಲಾಭ ಪಡೆದು, ಜರ್ಮಿನ್ನಿನ ವೈದ್ಯರು ಅವನಿಗೆ ಇಂಜೆಕ್ಷನ್ ನೀಡಿ, ಔಷಧ ಎಂದು ಕರೆಯಲ್ಪಡುವ ಔಷಧಿಯನ್ನು ತೆಗೆದುಕೊಳ್ಳುವಂತೆ ಮಾಡಿದರು. ಸ್ವಲ್ಪ ಸಮಯದ ನಂತರ, ಆತನಿಗೆ ವಾಂತಿ ಬರುವಂತೆ ಅನಿಸಿತು, ಆದರೆ, ವೈದ್ಯರು ಆತನ ಬಾಯಿಯನ್ನು ಮುಚ್ಚಿ ಮತ್ತು ಆತನನ್ನುಕೊಂದು ಹಾಕಿದರು. ಇದಾದ ಬಳಿಕ, ಆತನ ಬಂಧನಕ್ಕೆ ಕಾರಣವಾದ ಪೊಲೀಸ್ ವ್ಯಕ್ತಿಯೊಬ್ಬನಾದ ಟೋ ಮೆಟಾಪನು ಸ್ಥಳಕ್ಕೆ ಬಂದು 'ಅವನು, "ಧರ್ಮಪ್ರಚಾರಕ ಹುಡುಗ", ತುಂಬಾ ಅಸ್ವಸ್ಥನಾಗಿದ್ದನು ಮತ್ತು ಸತ್ತು ಹೋದನು ಎಂದು ಹೇಳಿದನು.
 

13 ಜೂನ್ 2025, 13:07