MAP

Archive photo of Catholics in Myanmar praying at St. Mary's Cathedral in Yangon Archive photo of Catholics in Myanmar praying at St. Mary's Cathedral in Yangon  (AFP or licensors)

ಸಂಘರ್ಷದ ನಡುವೆಯೂ ಮ್ಯಾನ್ಮಾರ್ ಕಥೋಲಿಕರು ಜೂಬಿಲಿಯನ್ನು ಆಚರಿಸಿದರು

ಪಂಚದಶಮಿ ಭಾನುವಾರದಂದು ಮ್ಯಾನ್ಮಾರ್‌ನಲ್ಲಿ ಕಥೋಲಿಕ ಭಕ್ತವಿಶ್ವಾಸಿಗಳು "ಧರ್ಮಸಭೆಯ ಚಳುವಳಿಗಳ ಜೂಬಿಲಿಯನ್ನು” ಆಚರಿಸಿದರು.

ಎಮಿಲ್ ಸ್ಯಾಂಡ್‌ಬರ್ಗ್

ಮುಂದುವರೆಯುತ್ತಿರುವ ಸಂಘರ್ಷದಿಂದಾಗಿ ಮ್ಯಾನ್ಮಾರ್‌ನ ಜನರು ಬಳಲುತ್ತಿದ್ದರೂ, ಧರ್ಮಸಭೆಯ ಕಥೊಲಿಕರು "ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ, ನಿಮ್ಮ ಶತ್ರುಗಳನ್ನು ಪ್ರೀತಿಸಿ" ಎಂಬ ಶುಭಸಂದೇಶದ ಕರೆಯ ಮಹತ್ವದ ಮೇಲೆ ಗಮನ ಹರಿಸಲು ಪ್ರೋತ್ಸಾಹಿಸುತ್ತಿದೆ.

ಸಂಘರ್ಷ ಮತ್ತು ಅನೇಕ ನೈಸರ್ಗಿಕ ವಿಕೋಪಗಳ ಹೊರತಾಗಿಯೂ, ಅನೇಕ ಕುಟುಂಬಗಳು ಮತ್ತು ಯುವಕರು ಪಂಚದಶಮಿ ಭಾನುವಾರದಂದು, ಕ್ರೈಸ್ತ ಚಳುವಳಿಗಳ ಜೂಬಿಲಿಯಲ್ಲಿ ಭಾಗವಹಿಸಿದರು.

ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಜೂಬಿಲಿಯು ದೇಶದ ಎಲ್ಲಾ ಭಾಗಗಳಿಂದ ವಿವಿಧ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಧರ್ಮಸಭೆಯ ಸಂಘಗಳು ಮತ್ತು ಚಳುವಳಿಗಳ ಸದಸ್ಯರನ್ನು ಒಟ್ಟುಗೂಡಿಸಿತು.

ಜನರಿಗೆ ಭರವಸೆ ನೀಡುವುದು
ಪಂಚದಶಮಿ ಭಾನುವಾರದಂದು, ಯಾಂಗೂನ್‌ನಲ್ಲಿರುವ ಸಂತ ಮಾತೆ ಮರಿಯಳ ಪ್ರಧಾನಾಲಯದಲ್ಲಿ ಭಕ್ತಾಧಿಗಳು ಒಟ್ಟುಗೂಡಿದರು, ದುಷ್ಟತನ ಮತ್ತು ಹಿಂಸೆಯಿಂದ ಉಂಟಾಗುವ ದುಃಖವನ್ನು ವಿರೋಧಿಸಲು ಶಕ್ತಿಯನ್ನು ನೀಯುವ ಕ್ರಿಸ್ತರೊಂದಿಗೆ ಮುಖಾಮುಖಿಯಾಗಿ ಎದುರುಗೊಳ್ಳುವ ಅನುಭವವನ್ನು ಸಂತೋಷದಿಂದ ಹಂಚಿಕೊಂಡರು. ಮ್ಯಾನ್ಮಾರ್‌ನಲ್ಲಿರುವ ಹಲವಾರು ಕಥೋಲಿಕರು ಧರ್ಮಸಭೆಯ ಚಳುವಳಿಗಳು ಅಥವಾ ಭಕ್ತವಿಶ್ವಾಸಿಗಳ ಸಂಘಗಳ ಸದಸ್ಯರಾಗಿದ್ದಾರೆ, ಅವರ ವಿಶ್ವಾಸದ ಪ್ರಯಾಣದಲ್ಲಿ ಒಂದು ಸಮುದಾಯವನ್ನು ಹುಡುಕುತ್ತಿದ್ದಾರೆ.

ಫೋಕೊಲೇರ್ ಚಳವಳಿಯ ವಿನ್ನಿ, ಯಾಂಗೋನ್‌ನ ಸಂತ ಮಾತೆ ಮರಿಯಳ ಪ್ರಧಾನಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ "ತಮ್ಮ ನೆರೆಹೊರೆಯವರ ಮೇಲಿನ ಪ್ರೀತಿ ಮೊದಲು ತಮ್ಮ ತಮ್ಮ ಕುಟುಂಬಗಳಿಂದಲೇ ಪ್ರಾರಂಭವಾಗುತ್ತದೆ" ಎಂದು ನೆನಪಿಸಿದರು. ಮಾನವ ಗ್ರಹಿಕೆಗೂ ಮೀರಿದ ಎಲ್ಲಾ ಕಷ್ಟಗಳಲ್ಲಿಯೂ, ಕ್ರೈಸ್ತ ಭಕ್ತಾಧಿಗಳು ಶಿಲುಬೆಯ ಮೇಲೆ ನೇತಾಡುತ್ತಿರುವ ಪ್ರಭುಕ್ರಿಸ್ತರ ಮೇಲೆ ತಮ್ಮ ದೃಷ್ಟಿಯನ್ನು ನೆಟ್ಟಿರಬೇಕು ಎಂದು ಅವರು ಹೇಳಿದರು.

ಮ್ಯಾನ್ಮಾರ್‌ನ ಪ್ರೇಷಿತ ರಾಯಭಾರಿಯಾದ ಶ್ರೇಷ್ಠಗುರು ಚಾರ್ಜ್ ಡಿ'ಅಫೇರ್ಸ್ ಆಂಡ್ರಿಯಾ ಫೆರಾಂಟೆರವರು, ಮ್ಯಾನ್ಮಾರ್‌ಗಾಗಿ ಅತಿಯಾಗಿ ಪ್ರಾರ್ಥಿಸಿದ ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರನ್ನು ತಮ್ಮ ಪ್ರಾರ್ಥನೆಯಲ್ಲಿ ಸ್ಮರಿಸಿ ಅವರಿಗಾಗಿ ಪ್ರಾರ್ಥಿಸುವಂತೆ ಎಲ್ಲರನ್ನೂ ಆಹ್ವಾನಿಸಿದರು. ಪವಿತ್ರಾತ್ಮದ ಉಡುಗೊರೆ ಜೀವ ನೀಡುತ್ತದೆ, ಪವಿತ್ರಾತ್ಮವು ನಮಗೆ ಹೊಸ ಜೀವನ, ಪ್ರೀತಿ, ಶಾಂತಿ ಮತ್ತು ಸ್ವಾತಂತ್ರ್ಯವನ್ನು ತರುತ್ತದೆ ಎಂದು ಹೇಳಿದರು. ಅಭದ್ರತೆ ಮತ್ತು ಭೂಕಂಪದಿಂದಾಗಿ ಈ ಜೂಬಿಲಿ ಆಚರಣೆಯಲ್ಲಿ ಹಾಜರಾಗಲು ಸಾಧ್ಯವಾಗದವರೊಂದಿಗೆ ಸೊಲಿಡಾರಿಟಿಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮ್ಯಾನ್ಮಾರ್‌ನ ಕಥೋಲಿಕರನ್ನು ಆಹ್ವಾನಿಸಿದರು.

ಮ್ಯಾನ್ಮಾರ್‌ನಲ್ಲಿ ಜೀವನದ ಹೋರಾಟ
ಫೆಬ್ರವರಿ 2021 ರಲ್ಲಿ, ಮಿಲಿಟರಿ ದಂಗೆಯನ್ನು ಪ್ರಾರಂಭಿಸಿದ ನಂತರ ಮ್ಯಾನ್ಮಾರ್‌ನ ಪ್ರಜಾಸತ್ತಾತ್ಮಕ ಪರಿವರ್ತನೆಯ ಪ್ರಯತ್ನ ಕೊನೆಗೊಂಡಿತು. ಅಂದಿನಿಂದ, ಹಿಂಸೆ ಮತ್ತು ಮಾನವ ಹಕ್ಕುಗಳ ಬಿಕ್ಕಟ್ಟು ರಾಷ್ಟ್ರದ ಜೀವನದ ಹಲವು ಅಂಶಗಳ ಮೇಲೆ ಪರಿಣಾಮ ಬೀರಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಅವರ ವರದಿಯ ಪ್ರಕಾರ, ಮಾರ್ಚ್ 31, 2025ರ ಹೊತ್ತಿಗೆ, ಕನಿಷ್ಠ ಪಕ್ಷ 6,473 ನಾಗರಿಕರು ಮಿಲಿಟರಿಯ ಕೈಯಲ್ಲಿ ಕೊಲ್ಲಲ್ಪಟ್ಟಿದ್ದಾರೆ, ಇದರಲ್ಲಿ 1,487 ಮಹಿಳೆಯರು ಮತ್ತು 748 ಮಕ್ಕಳು ಸೇರಿದ್ದಾರೆ.

3.5 ಮಿಲಿಯನ್‌ಗಿಂತಲೂ ಹೆಚ್ಚು ಜನರ ಸ್ಥಳಾಂತರದಲ್ಲಿ ಹಿಂಸಾಚಾರವು ಒಂದು ಪಾತ್ರವನ್ನು ವಹಿಸಿದೆ ಮತ್ತು ಸುಮಾರು 20 ಮಿಲಿಯನ್‌ ಜನರಿಗೆ ನೆರವಿನ ಅಗತ್ಯವಿದೆ. ಇತ್ತೀಚಿನ ಭೂಕಂಪದಂತಹ ನೈಸರ್ಗಿಕ ವಿಕೋಪಗಳ ಸಮಯದಲ್ಲಿಯೂ ಸಹ ಮ್ಯಾನ್ಮಾರ್ ಜನರಿಗೆ ನಿರಂತರವಾಗಿ ಮಾನವೀಯ ನೆರವಿನ ಲಭ್ಯತೆಯನ್ನು ನಿರಾಕರಿಸಲಾಗುತ್ತಿದೆ.
 

13 ಜೂನ್ 2025, 10:15