MAP

FBL-WC-CLUB-2025-MATCH FBL-WC-CLUB-2025-MATCH  (AFP or licensors)

ಜ್ಯೂಬಿಲಿಯ ಕ್ರೀಡೆ: 'ನನಗೆ ಶಕ್ತಿಯನ್ನು ನೀಡುವ ಕ್ರಿಸ್ತರ ಮೂಲಕ ನಾನು ಎಲ್ಲವನ್ನೂ ಸಾಧಿಸಬಹುದು'

ಜ್ಯೂಬಿಲಿಯ ಕ್ರೀಡೆಯ ಸಂದರ್ಭದಲ್ಲಿ, ಮಾಜಿ ವೃತ್ತಿಪರ ಫುಟ್ಬಾಲ್ ಆಟಗಾರ ಧರ್ಮಗುರು ಚೇಸ್ ಹಿಲ್ಗೆನ್‌ಬ್ರಿಂಕ್ ರವರು, ಕ್ರೀಡೆಯು ನೀಡುವ ಸಕಾರಾತ್ಮಕ ಮೌಲ್ಯಗಳ ಬಗ್ಗೆ ಹಾಗೂ ಅದು ಸ್ಥಿತಿಸ್ಥಾಪಕತ್ವ ಮತ್ತು ಭ್ರಾತೃತ್ವದ ಮೂಲವಾಗಬಹುದು ಎಂಬ ಅಂಶದ ಬಗ್ಗೆ ಪ್ರತಿಬಿಂಬಿಸುತ್ತಾರೆ.

ಎಮಿಲ್ ಸ್ಯಾಂಡ್‌ಬರ್ಗ್

ಈ ವಾರಾಂತ್ಯದಲ್ಲಿ, ಜ್ಯೂಬಿಲಿಯ ಕ್ರೀಡೆಯನ್ನು ವ್ಯಾಟಿಕನ್‌ನಲ್ಲಿ ಭಾನುವಾರ ಸಂತ ಪೇತ್ರರ ಮಹಾದೇವಾಲಯದಲ್ಲಿ ವಿಶ್ವಗುರು ಹದಿನಾಲ್ಕನೇ ಲಿಯೋರವರ ಅಧ್ಯಕ್ಷತೆಯಲ್ಲಿ ದಿವ್ಯಬಲಿಪೂಜೆಯೊಂದಿಗೆ ಮತ್ತು ಜ್ಯೂಬಿಲಿಯ ವಿಶೇಷ ಪ್ರೇಕ್ಷಕರು ಹಾಗೂ ಹಲವಾರು ಕಾರ್ಯಕ್ರಮಗಳನ್ನು ಆಚರಿಸಲಾಯಿತು.

ಕ್ರೀಡಾಪಟುಗಳು, ತರಬೇತುದಾರರು ಮತ್ತು ಕ್ರೀಡಾ ಉತ್ಸಾಹಿಗಳು ಒಟ್ಟಾಗಿ ಸೇರಿ ವಿಶ್ವಾಸ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಚೌಕಟ್ಟಿನೊಳಗೆ ಕ್ರೀಡೆಯ ಸಕಾರಾತ್ಮಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಮಹತ್ವವನ್ನು ಈ ಕಾರ್ಯಕ್ರಮ ಒತ್ತಿಹೇಳುತ್ತದೆ.

ಕ್ರೀಡಾಪಟುವಿನ ದೃಷ್ಟಿಕೋನ
ಕ್ರೀಡೆಯ ಪ್ರಾಮುಖ್ಯತೆ ಮತ್ತು ವಿಶ್ವಾಸದ ಸಂಬಂಧದ ಬಗ್ಗೆ ಇನ್ನಷ್ಟು ಹೇಳಲು, ನಾನು ಧರ್ಮಗುರು ಚೇಸ್ ಹಿಲ್ಗೆನ್‌ಬ್ರಿಂಕ್ ರವರೊಂದಿಗೆ ಕುಳಿತುಕೊಂಡೆ. ಧರ್ಮಗುರು ಚೇಸ್ ಇಲಿನಾಯ್ಸ್‌ ಪಿಯೋರಿಯಾರವರು ಧರ್ಮಕ್ಷೇತ್ರದ ಧರ್ಮಗುರುವಾಗಿದ್ದು, ಅಲ್ಲಿ ಅವರು ತಮ್ಮ ಐದನೇ ವರ್ಷದಲ್ಲಿ ದೈವಕರೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಯುವಕರೊಂದಿಗೆ ಕೆಲಸ ಮಾಡುತ್ತಿದ್ದಾರೆ, ಯುವಕರ ಜೀವನದಲ್ಲಿ ದೇವರ ಚಿತ್ತವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತಿದ್ದಾರೆ ಮತ್ತು ನಿರ್ದಿಷ್ಟವಾಗಿ, ಗುರುವಿದ್ಯಾಮಂದಿರ ಮತ್ತು ಬಹುಶಃ ಯಾಜಕತ್ವಕ್ಕೆ ನನಗೆ ದೇವರ ಕರೆಯಿದೆ ಭಾವಿಸುವ ಯುವಕರಿಗೆ ದೇವರ ಚಿತ್ತವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತಿದ್ದಾರೆ.

ಯಾಜಕದೀಕ್ಷೆ ಸ್ವೀಕರಿಸುವ ಮೊದಲು, ಧರರ್ಮಗುರು ಚೇಸ್ ರವರು ಅಮೆರಿಕ ಮತ್ತು ವಿದೇಶಗಳಲ್ಲಿ ಆಡುತ್ತಿದ್ದ ವೃತ್ತಿಪರ ಫುಟ್ಬಾಲ್ ಆಟಗಾರರಾಗಿದ್ದರು.

"ನಾನು ದಕ್ಷಿಣ ಅಮೆರಿಕಾದಲ್ಲಿ ಆಡುತ್ತಿದ್ದಾಗ, ನನ್ನ ಜೀವನ ಎಷ್ಟು ಅದ್ಭುತವಾಗಿದೆ, ನಾನು ಆಡುತ್ತಿರುವ ಕ್ರೀಡೆಯ ಬಗ್ಗೆ ಜನರು ಎಷ್ಟು ಉತ್ಸಾಹಭರಿತರಾಗಿದ್ದಾರೆಂದು ನಾನು ಅರಿತುಕೊಂಡೆ" ಎಂದು ಅವರು ಹೇಳಿದರು.

ಆದರೂ, ಆತನು ತನ್ನ ವೃತ್ತಿಜೀವನವನ್ನು ಮುಂದುವರಿಸಲು ಪ್ರಾರಂಭಿಸಿದಾಗ, "ಪ್ರಭುಯೇಸು ನಿಜವಾಗಿಯೂ ನನ್ನನ್ನು ಕರೆಯುತ್ತಿದ್ದಾರೆ, ಆಧ್ಯಾತ್ಮಿಕ ಜೀವನದ ಶ್ರೇಷ್ಠತೆಗೆ ನನ್ನನ್ನು ಸಿದ್ಧಪಡಿಸಲು ನನ್ನ ಕ್ರೀಡೆಯು ಒಂದು ನಿರ್ದಿಷ್ಟ ರೀತಿಯಲ್ಲಿ ನನ್ನನ್ನು ರೂಪಿಸಲು ಉದ್ದೇಶಿಸಲಾಗಿದೆ ಎಂದು ಪ್ರಭುವು ನನಗೆ ಬಹಿರಂಗಪಡಿಸುತ್ತಿದ್ದರು" ಎಂದು ಗುರುತಿಸಿದರು.

ನಾನು ಆಟದ ಸಮಯದಲ್ಲಿ ಧರಿಸಲು ಒಳ ಅಂಗಿಗಳನ್ನು ತಯಾರಿಸಲು ಪ್ರಾರಂಭಿಸಿದೆ. ಅವುಗಳು ನಮ್ಮ ತಂಡದ ಲೋಗೋ ಮತ್ತು ಧರ್ಮಗ್ರಂಥಗಳಿಂದ ನನ್ನ ನೆಚ್ಚಿನ ವಾಕ್ಯವನ್ನು ಒಳಗೊಂಡಿತ್ತು: ನನಗೆ ಶಕ್ತಿಯನ್ನು ನೀಡುವ ಕ್ರಿಸ್ತರ ಮೂಲಕ ನಾನು ಎಲ್ಲವನ್ನೂ ಸಾಧಿಸಬಹುದು. (ಫಿಲಿಪ್ಪಿ 4:13)

“ಕ್ರೀಡೆಯು ನಾನು ಇಂದು ಧರ್ಮಗುರುವಾಗಲು ಅವಕಾಶ ಮಾಡಿಕೊಟ್ಟಿದೆ”
ಕಥೋಲಿಕ ಫುಟ್ಬಾಲ್ ಶಿಬಿರಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಫಾದರ್ ಚೇಸ್ ಕ್ರೀಡೆಯ ಮೂಲಕ ಈ ಬೋಧನೆಯನ್ನು ಹಂಚಿಕೊಳ್ಳುವುದನ್ನು ಮುಂದುವರೆಸಿದ್ದಾರೆ. ಈ ಶಿಬಿರಗಳಲ್ಲಿ, ಅವರು ನೈತಿಕ ಸದ್ಗುಣಗಳನ್ನು ಕಲಿಸುವ ಮಹತ್ವವನ್ನು ಒತ್ತಿಹೇಳುತ್ತಾರೆ, ಅಥ್ಲೆಟಿಕ್ಸ್ ಒಬ್ಬರ ಉಳಿದ ಜೀವನಕ್ಕೆ ಸಿದ್ಧತೆಯನ್ನು ಒದಗಿಸುತ್ತದೆ ಎಂಬ ಅವರ ವಿಶ್ವಾಸವನ್ನು ಎತ್ತಿ ತೋರಿಸುತ್ತಾರೆ.

ನೀವು ಕ್ರೀಡೆಯಲ್ಲಿ ಕಲಿಯುವ ವಿಷಯಗಳು ಉತ್ತಮ ಕಥೋಲಿಕ ಮತ್ತು ಉತ್ತಮ ಕ್ರೈಸ್ತರಾಗಲು ಸಹಾಯ ಮಾಡುತ್ತವೆ.
 

14 ಜೂನ್ 2025, 22:42