MAP

Soon-to-be  Blessed Floribert Bwana Chui Bin Kositi Soon-to-be Blessed Floribert Bwana Chui Bin Kositi 

ಫ್ಲೋರಿಬರ್ಟ್ ಬ್ವಾನಾ ಚುಯಿ: ಸಂತ ಎಜಿಡಿಯೊ ಸಮುದಾಯದ ಮೊದಲ ಪುನೀತರು

ಗೋಮಾದಲ್ಲಿರುವ ಸಮುದಾಯದ ಮುಖ್ಯಸ್ಥೆ ಅಲೈನ್ ಮಿನಾನಿರವರ ಪ್ರಕಾರ, ಸಂತ ಎಜಿಡಿಯೊ ಸಮುದಾಯವು ತನ್ನ ಮೊದಲ ಪುನೀತರನ್ನು, ಕಾಂಗೋಲೀಸ್ ನ ರಕ್ತಸಾಕ್ಷಿಯಾದ ಫ್ಲೋರಿಬರ್ಟ್ ಬ್ವಾನಾ ಚುಯಿರವರು ಪುನೀತರಾಗುವುದನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿದೆ. ಅವರನ್ನು ಜೂನ್ 15ರ ಭಾನುವಾರದಂದು ಸೇಂಟ್ ಪಾಲ್ ಔಟ್‌ಸೈಡ್ ದಿ ವಾಲ್ಸ್ ಮಹಾದೇವಾಲಯದಲ್ಲಿ ಪುನೀತರ ಪದವಿಗೆ ಪವಿತ್ರೀಕರಿಸಲಾಗುವುದು.

ಸ್ಟಾನಿಸ್ಲಾಸ್ ಕಂಬಾಶಿ

ಭ್ರಷ್ಟಾಚಾರವನ್ನು ವಿರೋಧಿಸಿದ್ದಕ್ಕಾಗಿ 2007ರಲ್ಲಿ 26ನೇ ವಯಸ್ಸಿನಲ್ಲಿ ಕೊಲ್ಲಲ್ಪಟ್ಟ ಫ್ಲೋರಿಬರ್ಟ್ ಬ್ವಾನಾ ಚುಯಿರವರು, ಗೋಮಾದಲ್ಲಿನ ಸಂತ ಎಜಿಡಿಯೊ ಸಮುದಾಯದ ಎಲ್ಲಾ ಚಟುವಟಿಕೆಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು.

ಸಮುದಾಯವು, ವಿಶೇಷವಾಗಿ ಗೋಮಾದ ಸದಸ್ಯರು, ತಮ್ಮ ಸದಸ್ಯರಲ್ಲಿ ಒಬ್ಬರು ಪುನೀತರಾಗುತ್ತಿರುವ ಪವಿತ್ರೀಕರಣದ ಸುದ್ದಿಯನ್ನು "ಕೃತಜ್ಞತೆ ಮತ್ತು ಹರ್ಷದಿಂದ" ಸ್ವೀಕರಿಸಿದರು.

ನಮ್ಮ ಸಮುದಾಯದ ಭಾಗವಾಗಿದ್ದ ಒಬ್ಬ ಪೂಜ್ಯ ವ್ಯಕ್ತಿಯನ್ನು ನಾವು ಧರ್ಮಸಭೆಗೆ ನೀಡುತ್ತಿದ್ದೇವೆ ಎಂದು ಕಾಣಲು ನಮಗೆ ತುಂಬಾ ಹೆಮ್ಮೆಯಾಗುತ್ತದೆ ಎಂದು ಗೋಮಾದಲ್ಲಿರುವ ಸಂತ ಎಜಿಡಿಯೊ ಸಮುದಾಯದ ಮುಖ್ಯಸ್ಥೆ ಅಲೈನ್ ಮಿನಾನಿರವರು ಹೇಳಿದರು.

ಫ್ಲೋರಿಬರ್ಟ್ ಬ್ವಾನಾ ಚುಯಿ: ಶಾಂತಿ, ಒಗ್ಗಟ್ಟು ಮತ್ತು ಏಕತೆಯ ವ್ಯಕ್ತಿ
ಬೀದಿ ಮಕ್ಕಳ ಬಗೆಗಿನ ಅವರ ಬದ್ಧತೆಯ ಜೊತೆಗೆ, ಫ್ಲೋರಿಬರ್ಟ್ ಶಾಂತಿ, ಒಗ್ಗಟ್ಟು ಮತ್ತು ಏಕತೆಯ ವ್ಯಕ್ತಿಯಾಗಿದ್ದರು. ಅವರು ಎಲ್ಲರನ್ನೂ ಒಟ್ಟಿಗೆ ನೋಡಲು ಬಯಸಿದ್ದರು. ಅವರು ಯಾವಾಗಲೂ 'ಎಲ್ಲರೂ ಒಂದೇ ಮೇಜಿನಲ್ಲಿ ಕುಳಿತುಕೊಳ್ಳುವ ಕಾಂಗೋ ಬಗ್ಗೆ ನಾನು ಕನಸು ಕಾಣುತ್ತಿದ್ದೇನೆ' ಎಂದು ಹೇಳುತ್ತಿದ್ದರು ಎಂಬ ವಿಷಯವನ್ನು ಸಿಸ್ಟರ್ ಮಿನಾನಿರವರು ಈ ಸಮಯದಲ್ಲಿ ಹಂಚಿಕೊಂಡರು. ಸಮುದಾಯದಲ್ಲಿ ಅಥವಾ ಬೇರೆಡೆ, "ಅವರು ತಮ್ಮ ಸುತ್ತ ಮುತ್ತಲಿನ ಜನರೆಲ್ಲರೂ ಸಂತೋಷವಾಗಿರುವುದನ್ನು ನೋಡಲು ಬಯಸಿದ್ದರು."

ಸಂತ ಎಜಿಡಿಯೊ ಹಂಚಿಕೊಂಡ ಫೋಟೋದಲ್ಲಿ, ಫ್ಲೋರಿಬರ್ಟ್ ಮಕ್ಕಳೊಂದಿಗೆ ಮೇಜಿನ ಬಳಿ ಕಾಣಿಸಿಕೊಂಡಿದ್ದಾರೆ. ಅದು ಸಮುದಾಯವು ಬಡವರಿಗಾಗಿ ಆಯೋಜಿಸಿದ ಕ್ರಿಸ್ತಜಯಂತಿಯ ಔತಣವಾಗಿತ್ತು. ಫೋಟೋದಲ್ಲಿ, “ಸೇವೆ ಮಾಡುತ್ತಿರುವವರು ಮತ್ತು ಆಹಾರ ಬಡಿಸುತ್ತಿರುವವರು ಬೇರೆ ಬೇರೆಯಾಗಿಲ್ಲ ಎಂದು ನೀವು ಕಾಣಬಹುದು. "ಈ ಉದ್ದೇಶವನ್ನೇ ಫ್ಲೋರಿಬರ್ಟ್ ರವರು ಬಯಸಿದ್ದರು," ಎಂದು ಸಮುದಾಯದ ಮುಖ್ಯಸ್ಥರು ಒತ್ತಿ ಹೇಳಿದರು.

ಫ್ಲೋರಿಬರ್ಟ್ ಬ್ವಾನಾ ಚುಯಿ ರಾಜಕೀಯ ನಾಯಕರಿಗೂ ಮಾದರಿ.
ಯುವಜನರ ಜೊತೆಗೆ, ಫ್ಲೋರಿಬರ್ಟ್ ರವರ ಜೀವನವು ಸಮಾಜದ ಇತರ ಸದಸ್ಯರಿಗೆ ಸ್ಫೂರ್ತಿ ಮತ್ತು ಸವಾಲು ಹಾಕಬಲ್ಲದು ಎಂದು ಸಿಸ್ಟರ್ ಮಿನಾನಿರವರು ಹೇಳಿದರು. ತಮ್ಮ ದೇಶದಲ್ಲಿ, ಸಾಮಾಜಿಕ ರಚನೆಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ಅವರು ಗಮನಿಸಿದರು.

ವಿಶೇಷವಾಗಿ ಪೂರ್ವ ಪ್ರದೇಶದಲ್ಲಿ, ಭವಿಷ್ಯದ ಪುನೀತ ಹುತಾತ್ಮರಾದರು, ಇಲ್ಲಿ ಅಸ್ಥಿರತೆ ಮೂರು ದಶಕಗಳಿಂದ ಮುಂದುವರೆದಿದೆ. ಇಂದು, ಗೋಮಾ ಮತ್ತು ಬುಕಾವು ನಗರಗಳು ಡಿರ್‌ಸಿ ನೆರೆಯ ರಾಷ್ಟ್ರವಾದ ರುವಾಂಡಾದ ಬೆಂಬಲದೊಂದಿಗೆ AFC/M23 ಎಂಬ ರಾಜಕೀಯ-ಮಿಲಿಟರಿ ಗುಂಪಿನ ನಿಯಂತ್ರಣದಲ್ಲಿವೆ. ಇಲ್ಲಿ ಅನೇಕರು ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಗ್ರೇಟ್ ಲೇಕ್ಸ್ ಪ್ರದೇಶದ ನಾಯಕರಿಗೆ, ಅವರು ಫ್ಲೋರಿಬರ್ಟ್‌ನಂತಹ ಧೈರ್ಯಶಾಲಿ ಆಯ್ಕೆಗಳಿಗೆ ಕರೆ ನೀಡುತ್ತಾರೆ, ಒಳ್ಳೆಯದರೊಂದಿಗೆ ಕೆಟ್ಟದ್ದನ್ನು ಹೋರಾಡುವುದು, ಹತ್ಯೆಗಳನ್ನು ಕೊನೆಗೊಳಿಸುವುದು, ರಕ್ತಪಾತವನ್ನು ನಿಲ್ಲಿಸುವುದು ಮತ್ತು ಶಾಂತಿಯನ್ನು ನಿರ್ಮಿಸಬೇಕಾಗಿದೆ, ಏಕೆಂದರೆ ಪ್ರತಿಯೊಬ್ಬರ ಜೀವನವು ಎಲ್ಲರಿಗೂ ಮುಖ್ಯವಾಗಿದೆ.

ಶಾಂತಿಯಲ್ಲಿ ಎಲ್ಲರೂ ವಿಜಯಶಾಲಿಗಳು
ಶಾಂತಿ ಎಂದರೆ ಒಟ್ಟಿಗೆ ಹಂಚಿಕೊಳ್ಳಬೇಕಾದ ಸಿಹಿ ಕೇಕ್ ನ ತುಂಡು. ಶಾಂತಿಯಲ್ಲಿ ಎಲ್ಲರೂ ವಿಜಯಶಾಲಿಗಳು,” ಎಂದು ಸಿಸ್ಟರ್ ಮಿನಾನಿರವರು ಹೇಳಿದರು. ಭವಿಷ್ಯದ ಪುನೀತರನ್ನು ನೆನಪಿಸಿಕೊಳ್ಳುತ್ತಾ, "ಆಫ್ರಿಕಾದ ಪುನರುತ್ಥಾನದ ಹಾಡು" ನ್ನು ಆಗಾಗ್ಗೆ ಹಾಡುತ್ತಿದ್ದರು, ಇದು ಸಂತ ಎಜಿಡಿಯೊ ಸಮುದಾಯದ ಸ್ತುತಿಗೀತೆಯಾಗಿದೆ.

"ಹೌದು! ಗೋಮಾ ಶಾಂತಿಯ ಉದ್ಯಾನವಾಗಬಹುದು! ಹೌದು, ಡಿಆರ್‌ಸಿ ಉದ್ಯಾನವಾಗಬಹುದು. ಗೋಮಾದ ಅವ್ಯವಸ್ಥೆ, ಗೊಂದಲ ಅಥವಾ ಕತ್ತಲೆಯಾದ ಜ್ವಾಲಾಮುಖಿ ಮಣ್ಣಿನಲ್ಲಿಯೂ ಸಹ, ನಾವು ಪ್ರತಿಯೊಬ್ಬರೂ ಹಣ್ಣು ಮತ್ತು ನೆರಳು ನೀಡುವ ಮರವನ್ನು ನೆಡಬಹುದು."

ಫ್ಲೋರಿಬರ್ಟ್ ಬ್ವಾನಾ ಚುಯಿರವರ ಪುನೀತ ಪದವಿ ಪ್ರದಾನವು ಇಡೀ ಡಿಆರ್‌ಸಿಗೆ ಸಂತೋಷದ ಕ್ಷಣವಾಗಲಿದೆ ಎಂದು ಸಿಸ್ಟರ್‌ ಮಿನಾನಿರವರು ಆಶಿಸುತ್ತಾರೆ. ಇದು ಕಾಂಗೋಲೀಸ್ ಜನರನ್ನು ಒಂದುಗೂಡಿಸುತ್ತದೆ ಮತ್ತು ಅವರ ದೇಶದ ಪರಿಸ್ಥಿತಿಯ ಬಗ್ಗೆ ಚಿಂತನೆಯನ್ನು ಉತ್ತೇಜಿಸುತ್ತದೆ.

ಜೂನ್ 15 ರ ಭಾನುವಾರದಂದು ಸಂಜೆ 5:30ಕ್ಕೆ ಸೇಂಟ್ ಪಾಲ್ ಔಟ್‌ಸೈಡ್ ದಿ ವಾಲ್ಸ್ ಮಹಾದೇವಾಲಯದಲ್ಲಿ ನಡೆಯಲಿರುವ ಪುನೀತ ಪದವಿಗೇರಿಸುವ ದಿವ್ಯಬಲಿಪೂಜೆಯಲ್ಲಿ ಭಾಗವಹಿಸಲು ಸಾಧ್ಯವಿರುವ ಎಲ್ಲರನ್ನೂ ಅವರು ಆಹ್ವಾನಿಸುತ್ತಾರೆ.

ಡಿಕ್ಯಾಸ್ಟ್ರಿಯ ಪ್ರಿಫೆಕ್ಟ್ ಕಾರ್ಡಿನಲ್ ಮಾರ್ಸೆಲ್ಲೊ ಸೆಮೆರಾರೊರವರು ಪವಿತ್ರೀಕರಣದ ಪುನೀತ ಪದವಿಗೇರಿಸುವ ದಿವ್ಯಬಲಿಪೂಜೆಯಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಿನ್ಶಾಸಾದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಫ್ರಿಡೋಲಿನ್ ಅಂಬೊಂಗೊರವರು ಮತ್ತು ಫ್ಲೋರಿಬರ್ಟ್ ಮೂಲದ ಧರ್ಮಕ್ಷೇತ್ರ, ಗೋಮಾದ ಧರ್ಮಾಧ್ಯಕ್ಷರಾದ ವಿಲ್ಲಿ ನ್ಗುಂಬಿರವರು ಈ ದಿವ್ಯಬಲಿಪೂಜೆಯನ್ನು ಅರ್ಪಿಸುವ ಸಹಶ್ರೇಷ್ಠಗುರುಗಳಗಿದ್ದಾರೆ.
 

13 ಜೂನ್ 2025, 11:42