ಪಾಶ್ಚಾತ್ಯ ಧರ್ಮಸಭೆಗಳ ಸುದ್ದಿ ಸಮಾಚಾರ- ಜೂನ್ 5, 2025
ಈ ವಾರದ ಪಾಶ್ಚಾತ್ಯ ಧರ್ಮಸಭೆಗಳ ಸುದ್ದಿ ಸಮಾಚಾರ
ಸ್ವರ್ಗಾರೋಹಣ ದಿನದಂದು ಯಾಜಕಾದೀಕ್ಷೆ
ಈ ಗುರುವಾರ ಪಾಶ್ಚಾತ್ಯ ಧರ್ಮಸಭೆಗಳಾದ್ಯಂತ ಹಲವಾರು ಯಾಜಕರ ಸಂಸ್ಥೆಗಳು ಸ್ವರ್ಗಾರೋಹಣ ದಿನದಂದು ಯಾಜಕಾದೀಕ್ಷೆಯ ಆಚರಣೆಯನ್ನು ಕಂಡವು. ಭಾರತದಲ್ಲಿ, ಸಿರೋ-ಮಲಂಕರ ಪಿತೃಪ್ರಧಾನದ ಸಹಾಯಕ ಧರ್ಮಾಧ್ಯಕ್ಷರಾಗಿದ್ದ ಮ್ಯಾಥ್ಯೂರವರನ್ನು ಕೇರಳದ ಮಾವೆಲಿಕರ ಧರ್ಮಪ್ರಾಂತ್ಯವನ್ನು ಮುನ್ನಡೆಸಲು ನೇಮಿಸಲಾಗಿದೆ. ಇಥಿಯೋಪಿಯಾದಲ್ಲಿ, ಅರ್ಬಾ ಮಿಂಚ್ ಪಟ್ಟಣದಲ್ಲಿ ಪವಿತ್ರಾತ್ಮರ ಧಾರ್ಮಿಕ ಸಭೆಯ ಇಬ್ಬರು ಹೊಸ ಯಾಜಕರಿಗೆ ಯಾಜಕಾದೀಕ್ಷೆ ನೀಡಲಾಯಿತು. ಫ್ರಾನ್ಸ್‌ನಲ್ಲಿ, ಚಾಲ್ಡಿಯನ್ ಡಯಾಸ್ಪೊರಾರವರು ಹೊಸ ಯಾಜಕರಾದ ಜೆರೋಮ್ ಜೆರೆನ್ ರವರನ್ನು ಪಿತೃಪ್ರಧಾನ ಲೂಯಿಸ್ ರಾಫೆಲ್ ಸಾಕೊರವರು ನೇತೃತ್ವದಲ್ಲಿ ಯಾಜಕಾದೀಕ್ಷೆ ನೀಡಿ ಅವರನ್ನು ಧರ್ಮಸಭೆಯ ಪಾಲನಾ ಸೇವೆಗೆ ಸ್ವಾಗತಿಸಿತು.
ವ್ಯಾಟಿಕನ್‌ನಲ್ಲಿ ಕಾರ್ಡಿನಲ್ ಹೊಸ್ಸುರವರ ಅವಶೇಷಗಳು
ರೊಮೇನಿಯಾದ ಕಮ್ಯೂನಿಸ್ಟ್ ಆಡಳಿತದಲ್ಲಿ ರಕ್ತಸಾಕ್ಷಿಗಳಾದ ಏಳು ಗ್ರೀಕ್-ಕಥೋಲಿಕ ಧರ್ಮಾಧ್ಯಕ್ಷಗಳಲ್ಲಿ ಒಬ್ಬರಾದ ಕಾರ್ಡಿನಲ್ ಇಯುಲಿಯು ಹೊಸ್ಸುರವರ ಅವಶೇಷಗಳನ್ನು ಶೀಘ್ರದಲ್ಲೇ ವ್ಯಾಟಿಕನ್‌ನಲ್ಲಿರುವ ಸಂತ ಪೇತ್ರರ ಮಹಾದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುವುದು. ಜೂನ್ 1ರ ಭಾನುವಾರದಂದು ಸಂತ ಪೇತ್ರರ ಮಹಾದೇವಾಲಯದಲ್ಲಿ ನಡೆದ ಭಾವಪೂರ್ಣ ದೈವಿ ಪ್ರಾರ್ಥನೆಯ ಸಂದರ್ಭದಲ್ಲಿ ಪಾಶ್ಚಾತ್ಯ ಧರ್ಮಸಭೆಗಳ ಡಿಕ್ಯಾಸ್ಟ್ರಿಯ ಪ್ರಿಫೆಕ್ಟ್ ಕಾರ್ಡಿನಲ್ ಕ್ಲಾಡಿಯೊ ಗುಗೆರೊಟ್ಟಿರವರು ಈ ಘೋಷಣೆಯನ್ನು ಮಾಡಿದರು. ಈ ಕಾರ್ಯಕ್ರಮವು ಸಾವಿರಕ್ಕೂ ಹೆಚ್ಚು ರೊಮೇನಿಯದ ಭಕ್ತವಿಶ್ವಾಸಗಳನ್ನು, ರೊಮೇನಿಯದ ಗ್ರೀಕ್-ಕಥೋಲಿಕ ಧರ್ಮಸಭೆಗಳ ಧರ್ಮಾಧ್ಯಕ್ಷರುಗಳನ್ನು, ಪ್ರೇಷಿತ ರಾಯಭಾರಿಯಾದ ಗಿಯಾಂಪಿಯೆರೊ ಗ್ಲೋಡರ್ ಮತ್ತು ಹಲವಾರು ಧರ್ಮಸಭೆಯ ಗಣ್ಯರನ್ನು ಒಟ್ಟುಗೂಡಿಸಿತು.
ಜಾಗತಿಕ ಕಾಪ್ಟಿಕ್ ದಿನ
ಜೂನ್ 1 ರಂದು, ಪ್ರಪಂಚದಾದ್ಯಂತದ ಕಾಪ್ಟ್ಸ್ ಜಾಗತಿಕ ಕಾಪ್ಟಿಕ್ ದಿನವನ್ನು ಆಚರಿಸಿದರು, ಇದು ಪವಿತ್ರ ಕುಟುಂಬದ ಈಜಿಪ್ಟ್‌ಗೆ ಪಲಾಯನ ಮಾಡಿದ ಸ್ಮರಣೆಯ ಆಚರಣೆಯಾಗಿದೆ, ಇದನ್ನು ಎಲ್ಲಾ ಮಾನವ ಕುಲದ ಮೋಕ್ಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ವಾರ್ಷಿಕ ಆಚರಣೆಯು ಹುತಾತ್ಮತೆ, ಸನ್ಯಾಸಿಗಳ ಆಧ್ಯಾತ್ಮಿಕತೆ, ಪವಿತ್ರ ಪ್ರತಿಮಾಶಾಸ್ತ್ರ ಮತ್ತು ಅಚಲವಾದ ಸನಾತನ ವಿಶ್ವಾಸದಿಂದ ರೂಪುಗೊಂಡ ಕಾಪ್ಟ್ಸ್‌ನ ಶ್ರೀಮಂತ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಇದು ಕಾಪ್ಟಿಕ್ ಸನಾತನ ಧರ್ಮಸಭೆಯ ಮತ್ತು ಅದರ ಆಳವಾದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಏಕತೆ ಮತ್ತು ಜಾಗತಿಕ ಮನ್ನಣೆಯ ಕ್ಷಣವಾಗಿ ಕಾರ್ಯನಿರ್ವಹಿಸುತ್ತದೆ.