ಕಥೋಲಿಕ ಧಾರ್ಮಿಕ ಭಗಿನಿಯರು ಜೈಲಿಗೆ ಸಿನೊಡಲ್ ವಿಧಾನವನ್ನು ತರುತ್ತಾರೆ
ಕ್ರಿಸಾನ್ನೆ ವೈಲನ್‌ಕೋರ್ಟ್ ಮರ್ಫಿ, ಕ್ಯಾಥೋಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್
ಅಮೇರಿಕದ ದಂಡನಾ ವ್ಯವಸ್ಥೆಯ ಬಗ್ಗೆ ಯೋಚಿಸುವಾಗ, ಜನಪ್ರಿಯ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಚಿತ್ರಿಸಲಾದ ಕಠಿಣ ಪರಿಸ್ಥಿತಿಗಳನ್ನು ನಾವು ನೆನಪಿಸಿಕೊಳ್ಳಬಹುದು. ಈ ಪರಿಸರದಲ್ಲಿ ನ್ಯಾಯವನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಕೇಳಿದಾಗ, ಮನಸ್ಸಿಗೆ ಬರುವ ಮೊದಲ ಪದಗಳು ಶಿಕ್ಷೆ ಮತ್ತು ಪ್ರತೀಕಾರವಾಗಿರಬಹುದು.
ಸಹಜವಾಗಿ, ನ್ಯಾಯದ ಬಗ್ಗೆ ನಮ್ಮ ಕಥೋಲಿಕರ ತಿಳುವಳಿಕೆಯು ಈ ಕಿರಿದಾದ ವ್ಯಾಖ್ಯಾನವನ್ನು ಮೀರಿ ಪುನರ್ವಸತಿ ಮತ್ತು ಪುನಃಸ್ಥಾಪನೆಯಂತಹ ಪರಿಕಲ್ಪನೆಗಳು ಹಾಗೂ ಗುರಿಗಳನ್ನು ಒಳಗೊಂಡಿದೆ. ನಿಜವಾದ ನ್ಯಾಯ, ಸುವಾರ್ತಾ ಪ್ರೇರಿತ ನ್ಯಾಯ, ನಿಜವಾದ ಶಾಂತಿ, ಸಮೃದ್ಧಿ ಮತ್ತು ಸಹಭಾಗಿತ್ವದ ಕಡೆಗೆ ಆಧಾರಿತವಾಗಿದೆ. ನ್ಯಾಯದ ಈ ದೃಷ್ಟಿಕೋನವು ನೈಜವಾದ ಸಿನೊಡಲ್ ವಿಧಾನವಾಗಿದೆ. ಅದು ಪ್ರತಿಯೊಬ್ಬ ವ್ಯಕ್ತಿಯ ಘನತೆಯಲ್ಲಿ ಬೇರೂರಿದೆ, ಅದು ಸಹಜವಾದ ಮತ್ತು ಕಳೆದುಕೊಳ್ಳಲು ಸಾಧ್ಯವಿಲ್ಲದ ವಿಷಯವಾಗಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೆರೆವಾಸ ಮತ್ತು ಮರಣದಂಡನೆಯ ಸ್ವರೂಪವನ್ನು ಗಮನಿಸಿದರೆ, ನ್ಯಾಯದ ಆ ದೃಷ್ಟಿಕೋನ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಗುರುತಿಸುವುದು, ಅವರು ಗಂಭೀರ ಅಪರಾಧಗಳನ್ನು ಮಾಡಿದಾಗಲೂ ಸಹ, ಕೇವಲ ಕಲ್ಪನೆಯಂತೆ ತೋರುತ್ತದೆಯೇ?
ಒಸ್ಎಫ್ ಸಭೆಯ ಸಿಸ್ಟರ್ ಜಾನೆಟ್ ರಯಾನ್ ರವರು ಹಾಗೆ ಭಾವಿಸುವುದಿಲ್ಲ. ಅದಕ್ಕಾಗಿಯೇ ಅವರು ಇಲಿನಾಯ್ಸ್‌ನಾದ್ಯಂತ ಜೈಲುಗಳಲ್ಲಿ ಪುನಶ್ಚೈತನ್ಯಕಾರಿ ನ್ಯಾಯ ತರಬೇತಿಗಳನ್ನು ನಡೆಸುತ್ತಿದ್ದಾರೆ.
ಜೈಲಿನಲ್ಲಿ ಭರವಸೆಯ ಬೀಜಗಳನ್ನು ಬಿತ್ತಲಾಗುತ್ತಿದೆ
ಸಿಸ್ಟರ್ ಜಾನೆಟ್ ರವರು ಅಯೋವಾದ ಕ್ಲಿಂಟನ್‌ನ ಫ್ರಾನ್ಸಿಸ್ಕನ್ ಸಭೆಯ ಧಾರ್ಮಿಕ ಭಗಿನಿ. ಒಂದು ದಶಕಕ್ಕೂ ಹೆಚ್ಚು ಕಾಲ, ಅವರು ಇಲಿನಾಯ್ಸ್‌ನ ಚಿಕಾಗೋದ ಬ್ಯಾಕ್ ಆಫ್ ದಿ ಯಾರ್ಡ್ಸ್ ನೆರೆಹೊರೆಯಲ್ಲಿರುವ ಪ್ರೆಷಿಯಸ್ ಬ್ಲಡ್ ಮಿನಿಸ್ಟ್ರಿ ಆಫ್ ರಿಕನ್ಸಿಲಿಯೇಶನ್ (ಪಿಬಿಎಂಆರ್) ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ, ಇದು ಆತಿಥ್ಯ, ಭರವಸೆ ಮತ್ತು ಗುಣಪಡಿಸುವಿಕೆಯ ಮೂಲಕ ಮಾನವ ಘನತೆಯನ್ನು ಪುನಃಸ್ಥಾಪಿಸಲು ಅಸ್ತಿತ್ವದಲ್ಲಿದೆ.
ಭರವಸೆಗೆ ಮೀಸಲಾದ ಈ ವಿಶೇಷ ಜೂಬಿಲಿಯ ವರ್ಷವನ್ನು ನಾವು ಆಚರಿಸುವುದನ್ನು ಮುಂದುವರಿಸುತ್ತಿರುವಾಗ, ಜೈಲಿನಲ್ಲಿ ಅವರ ಭರವಸೆ ತುಂಬಿದ ಕೆಲಸದ ಕಥೆಯನ್ನು ಹಂಚಿಕೊಳ್ಳುವುದು ವಿಶೇಷವಾಗಿ ಸೂಕ್ತವಾಗಿದೆ.
ಗುಣಪಡಿಸುವಿಕೆ ಮತ್ತು ಏಕತೆಯ ಕಡೆಗೆ ಸಿನೊಡಲ್ ಅನುಭವ
ಈ ವಿಧಾನದ ಯಶಸ್ಸಿಗೆ ಸಾಕ್ಷಿಯೆಂದರೆ, ಸಿಸ್ಟರ್ ಜಾನೆಟ್ ರವರ ಸಹ-ತರಬೇತುದಾರ ಎರಿಕ್ ಆಂಡರ್ಸನ್ ರವರು, ಸುಮಾರು ಐದು ವರ್ಷಗಳ ಹಿಂದೆ ಅವರನ್ನು ಸೆರೆಮನೆಯಲ್ಲಿ ಇರಿಸಲಾಗಿದ್ದ ಸೌಲಭ್ಯದಲ್ಲಿ ವಲಯಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತಿದ್ದಾರೆ. ಅವರ ಕಥೆಯು ಅವರ ಇತಿಹಾಸವನ್ನು ತಿಳಿದಿರುವ ಮತ್ತು ಉತ್ತಮ ಮಾರ್ಗವನ್ನು ಬಯಸುವ ಅನೇಕ ಪುರುಷರಿಗೆ ಒಂದು ದೊಡ್ಡ ಸ್ಫೂರ್ತಿಯಾಗಿದೆ.
ಈ ಕೆಲಸ ಎಷ್ಟು ನಿರ್ಣಾಯಕ ಎಂಬುದನ್ನು ಇಲ್ಲಿ ಉತ್ತಮವಾಗಿ ಸಂಕ್ಷೇಪಿಸಬಹುದು: ಜೈಲಿನಲ್ಲಿರುವ ಕೆಲವು ವ್ಯಕ್ತಿಗಳು ತಮ್ಮ ತರಬೇತಿಗಳಿಗೆ ತಿದ್ದುಪಡಿ ಇಲಾಖೆಯು ಯಾವುದೇ ಹಣವನ್ನು ಒದಗಿಸಿಲ್ಲ ಎಂದು ತಿಳಿದಾಗ, ಅವರು ತಮ್ಮದೇ ಆದ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಸಿಸ್ಟರ್ ಜಾನೆಟ್‌ರವರಿಗೆ $1,000 ಕ್ಕಿಂತ ಹೆಚ್ಚಿನ ಮೊತ್ತದ ಚೆಕ್ ಅನ್ನು ಬರೆದರು.
ವೃತ್ತ ಅಥವಾ ವಲಯದ ಪ್ರಕ್ರಿಯೆಯ ಬಗ್ಗೆ ಸಿಸ್ಟರ್ ಜಾನೆಟ್ ರವರ ಬೋಧನೆ ಮತ್ತು ಪುನಶ್ಚೈತನ್ಯಕಾರಿ ನ್ಯಾಯದ ಅಭ್ಯಾಸಗಳ ಮೂಲಕ ಸಾಧ್ಯವಾದ ಪರಿವರ್ತನೆಯು ಇಂದು ನಿಜವಾಗಿಯೂ ಭರವಸೆಯ ಸ್ಪಷ್ಟ ಸಂಕೇತವಾಗಿದೆ.