ಐಸಿಇ ದಾಳಿಗಳಲ್ಲಿ ಧರ್ಮಾಧ್ಯಕ್ಷರಾದ ರೋಜಾಸ್, 'ಇದು ಪ್ರಭು ಯೇಸುಕ್ರಿಸ್ತರ ಸುವಾರ್ತೆಯಲ್ಲ'
ಕೀಲ್ಸ್ ಗುಸ್ಸಿ
ಜೂನ್ 23 ರಂದು, ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಆಲ್ಬರ್ಟೊ ರೋಜಾಸ್ ರವರು, ಕಥೋಲಿಕ ಧರ್ಮಸಭೆಗಳಿಗೆ ಅಮೇರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಮಧ್ಯವರ್ತಿಗಳು ಪ್ರವೇಶಿಸುತ್ತಿದ್ದಾರೆ ಎಂಬ ಇತ್ತೀಚಿನ ವರದಿಗಳಿಗೆ ಪ್ರತಿಕ್ರಿಯಿಸಿ ಪತ್ರವೊಂದನ್ನು ಬಿಡುಗಡೆ ಮಾಡಿದರು.
ಧರ್ಮಸಭೆಯ ಆಸ್ತಿಯತ್ತ
ಜೂನ್ 20 ರಂದು, ಧರ್ಮಕ್ಷೇತ್ರದ ಅಧಿಕಾರಿಗಳು ICE ಮಧ್ಯವರ್ತಿಗಳು ಮಾಂಟ್ಕ್ಲೇರ್ ಮತ್ತು ಹೈಲ್ಯಾಂಡ್‌ನಲ್ಲಿರುವ ಎರಡು ಕಥೋಲಿಕ ಧರ್ಮಕೇಂದ್ರಗಳ ಆಸ್ತಿಗಳಿಗೆ ಪ್ರವೇಶಿಸಿ ಕ್ಯಾಲಿಫೋರ್ನಿಯಾದ ಹೈಲ್ಯಾಂಡ್‌ನಲ್ಲಿರುವ ಸೇಂಟ್ ಅಡಿಲೇಡ್ ದೇವಾಲಯದ ಪಾರ್ಕಿಂಗ್ ಸ್ಥಳದಲ್ಲಿ ಹಲವಾರು ಜನರನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಸ್ಯಾನ್ ಬರ್ನಾರ್ಡಿನೊ ಧರ್ಮಕ್ಷೇತ್ರದ ಸಂವಹನ ನಿರ್ದೇಶಕ ಜಾನ್ ಆಂಡ್ರ್ಯೂಸ್ ರವರು, ಬಂಧಿತರಾದ ವ್ಯಕ್ತಿಗಳು ಧರ್ಮಕೇಂದ್ರಕ್ಕಾಗಿ ಕೆಲಸ ಮಾಡುತ್ತಿರಲಿಲ್ಲ ಅಥವಾ ಧರ್ಮಕೇಂದ್ರದ ಭಕ್ತಾಧಿಗಳಿಗಾಗಿಯೂ ಕೆಲಸ ಮಾಡುತ್ತಿರಲಿಲ್ಲ ಎಂದು ಹೇಳಿದರು.
ಆದಾಗ್ಯೂ, ಜೂನ್ 20 ರಂದು ಮಾಂಟ್ಕ್ಲೇರ್‌ನಲ್ಲಿರುವ ಲೂರ್ದು ಮಾತೆಯ ದೇವಾಲಯದಲ್ಲಿ ಒಬ್ಬ ಪುರುಷ ಧರ್ಮಕೇಂದ್ರದ ಭಕ್ತಾಧಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ವರದಿ ಮಾಡಿದ್ದಾರೆ.
ನಾವು ನಿಮ್ಮೊಂದಿಗಿದ್ದೇವೆ.
ಅಮೇರಿಕದ ಆರನೇ ಅತಿದೊಡ್ಡ ಕಥೋಲಿಕ ಧರ್ಮಕ್ಷೇತ್ರದ ಮುಖ್ಯಸ್ಥರಾಗಿರುವ ಧರ್ಮಾಧ್ಯಕ್ಷರಾದ ರೋಜಾಸ್ ರವರು, ಐಸಿಇ ಚಟುವಟಿಕೆಗಳನ್ನು ಹೆಚ್ಚಿಸುವುದನ್ನು ಬಲವಾಗಿ ಖಂಡಿಸಿದರು.
ಕಥೋಲಿಕ ಸಮುದಾಯಕ್ಕೆ ನೀಡಿದ ಸಂದೇಶದಲ್ಲಿ, "ಅಧಿಕಾರಿಗಳು ಈಗ ಸಹೋದರ ಸಹೋದರಿಯರನ್ನು ವಿವೇಚನೆಯಿಲ್ಲದೆ ವಶಪಡಿಸಿಕೊಳ್ಳುತ್ತಿದ್ದಾರೆ, ಅವರ ನ್ಯಾಯಯುತ ಪ್ರಕ್ರಿಯೆಯ ಹಕ್ಕು ಮತ್ತು ದೇವರ ಮಕ್ಕಳಾಗಿ ಅವರ ಘನತೆಯನ್ನು ಗೌರವಿಸದೆ" ಅವರ ಗಮನಸೆಳೆದರು. ವಲಸೆ ಸಮುದಾಯಗಳಿಗೆ ಅವರು ತಮ್ಮ ಒಗ್ಗಟ್ಟು ಮತ್ತು ನಿಕಟತೆಯನ್ನು ವ್ಯಕ್ತಪಡಿಸಿದರು, "ಈ ಕಷ್ಟಕರವಾದ ಶಿಲುಬೆಯನ್ನು ಹೊರುವಲ್ಲಿ ನಾವು ನಿಮ್ಮೊಂದಿಗೆ ಸೇರುತ್ತೇವೆ" ಎಂದು ಅವರಿಗೆ ನೆನಪಿಸಿದರು.
ಬದಲಾವಣೆಗೆ ಕರೆ
ಧರ್ಮಾಧ್ಯಕ್ಷರು ಎಲ್ಲಾ ರಾಜಕೀಯ ನಾಯಕರನ್ನು "ಈ ತಂತ್ರಗಳನ್ನು ತಕ್ಷಣವೇ ಮರುಪರಿಶೀಲಿಸಿ ನಿಲ್ಲಿಸಿ" ಮತ್ತು ಮಾನವ ಹಕ್ಕುಗಳು ಮತ್ತು ಮಾನವ ಘನತೆಯನ್ನು ಗೌರವಿಸುವ ವಿಧಾನದ ಪರವಾಗಿ ಅವುಗಳನ್ನು ಬದಲಾಯಿಸಲು ಕರೆ ನೀಡಿದರು. ಈ ಬದಲಾವಣೆಗಳು ನಮ್ಮ ವಲಸೆ ವ್ಯವಸ್ಥೆಯ ಹೆಚ್ಚು ಶಾಶ್ವತವಾದ, ಸಮಗ್ರ ಸುಧಾರಣೆಯನ್ನು ನಿರ್ಮಿಸಲು ಸಹಾಯ ಮಾಡಬಹುದು.
ಪ್ರಸ್ತುತ ICE ತಂತ್ರಗಳಿಗೆ ಅನೇಕ ಜನರು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಂತೆ, ಧರ್ಮಾಧ್ಯಕ್ಷ ರೋಜಾಸ್ ರವರು ಪ್ರತಿಭಟನಾಕಾರರಿಗೆ "ಅಶ್ಲೀಲತೆ, ಇತರರ ಮೇಲೆ ಹಿಂಸಾಚಾರ ಅಥವಾ ಆಸ್ತಿ ನಾಶವಿಲ್ಲದೆ ವರ್ತಿಸಿರಿ" ಎಂದು ಸವಾಲು ಹಾಕಿದರು. ಇದರಿಂದ ಉದ್ವಿಗ್ನತೆ ಹೆಚ್ಚಾಗುವುದನ್ನು ತಪ್ಪಿಸಬಹುದು.
"ಈ ಕ್ಷಣದಲ್ಲಿ ದೇವರ ಜನರ ನಡುವೆ ಇಂತಹ ವಿಭಜನೆಯನ್ನು ನೋಡುವುದು ನೋವಿನ ಸಂಗತಿ" ಎಂದು ಧರ್ಮಾಧ್ಯಕ್ಷರಾದ ರೋಜಾಸ್ ರವರು ಮುಂದುವರಿಸಿದರು, ಏಕೆಂದರೆ ಇದು ದೇವರು ತನ್ನ ಮಕ್ಕಳಿಗಾಗಿ ಕೈಗೊಂಡಿರುವ ಯೋಜನೆಗೆ ವಿರುದ್ಧವಾಗಿದೆ.
ಜೂಬಿಲಿ ವರ್ಷದ ಆಶಾವಾದದ ಸಂದರ್ಭದಲ್ಲಿ, ನಮ್ಮ ಸಮುದಾಯಗಳಲ್ಲಿನ ಕಲಹ ಮತ್ತು ಸಂಕಟಗಳಿಗೆ ಈ ಭರವಸೆಯು ಪ್ರತಿವಿಷವಾಗಿದೆ ಎಂದು ಅವರು ಪ್ರಭರಕ್ರಿಸ್ತನ ಭರವಸೆಯನ್ನು ಜಗತ್ತಿಗೆ ಹಂಚಿಕೊಳ್ಳಲು ಪ್ರತಿಯೊಬ್ಬರನ್ನು ಒತ್ತಾಯಿಸಿದರು.