ರಷ್ಯಾದ ವೈಮಾನಿಕ ದಾಳಿಯಲ್ಲಿ ಕೈವ್‌ನ ಐತಿಹಾಸಿಕ ಪ್ರಧಾನಾಲಯವು ಹಾನಿಗೊಳಗಾಗಿದೆ
ಬಾರ್ಬ್ ಫ್ರೇಜ್, ಸಿಎನ್‌ಇಡಬ್ಲ್ಯೂಎ
ಮಂಗಳವಾರ ಕೈವ್ ಮತ್ತು ಒಡೆಸಾ ಮೇಲೆ ನಡೆದ ದೊಡ್ಡ ಪ್ರಮಾಣದ ರಷ್ಯಾದ ಡ್ರೋನ್ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದರು ಮತ್ತು 13 ಜನರು ಗಾಯಗೊಂಡರು, ಇದು ಐತಿಹಾಸಿಕ ಹೋಲಿ ವಿಸ್ಡಮ್ ಪ್ರಧಾನಾಲಯವನ್ನೂ ಸಹ ಹಾನಿಗೊಳಿಸಿತು. 315ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಸಿದ ರಷ್ಯಾ, ಐದು ಗಂಟೆಗಳ ಸತತ ದಾಳಿಯು ಮೂರು ವರ್ಷಗಳ ಯುದ್ಧದಲ್ಲಿ ಉಕ್ರೇನ್‌ನ ರಾಜಧಾನಿಯ ಮೇಲೆ ನಡೆದ "ಅತಿದೊಡ್ಡ" ದಾಳಿಗಳಲ್ಲಿ ಇದು ಒಂದಾಗಿದೆ ಎಂದು ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರವರು ಹೇಳಿದರು.
ಉಕ್ರೇನಿನ ಸಂಸ್ಕೃತಿ ಸಚಿವೆ ಮೈಕೋಲಾ ಟೊಚಿಟ್ಸ್ಕಿರವರು ಮಾತನಾಡಿ, ರಷ್ಯಾ ನಡೆಸಿದ ಸ್ಫೋಟದಿಂದಾಗಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಧಾನಾಲಯದ ಮುಖ್ಯ ಕಮಾನು ಮೇಲಿನ ಕಾರ್ನಿಸ್ ಹಾನಿಗೊಳಗಾಗಿದೆ, ಈ ಪ್ರಧಾನಾಲಯವು ಪ್ರಾಚೀನ ರುಸ್, ಕಥೊಲಿಕರು ಮತ್ತು ಆರ್ಥೊಡಾಕ್ಸ್‌ಗೆ ತಮ್ಮ ಮೂಲಗಳನ್ನು ಗುರುತಿಸುವ ಎಲ್ಲಾ ಕ್ರೈಸ್ತರ ತಾಯಿ ಧರ್ಮಸಭೆಯಾಗಿ ಕಾರ್ಯನಿರ್ವಹಿಸುತ್ತದೆ.
ಕೈವನ್ ರುಸ್‌ನ ಮಹಾ ರಾಜಕುಮಾರ ವ್ಲಾಡಿಮಿರ್ 10ನೇ ಶತಮಾನದಲ್ಲಿ ಬೈಜಾಂಟೈನ್ ವಿಧದಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ಪ್ರಧಾನಾಲಯದ ನಿರ್ಮಾಣವು 11ನೇ ಶತಮಾನದಲ್ಲಿ ಪ್ರಾರಂಭವಾಯಿತು.
"ನಿನ್ನೆ ರಾತ್ರಿಯ ದೈತ್ಯಾಕಾರದ ಡ್ರೋನ್ ದಾಳಿಯಲ್ಲಿ ಉಕ್ರೇನ್‌ನ ಹೃದಯಭಾಗದಲ್ಲಿರುವ ಸಂತ ಸೋಫಿಯಾ ಎಂದು ಕರೆಯಲ್ಪಡುವ ಹೋಲಿ ವಿಸ್ಡಮ್ ಪ್ರಧಾನಾಲಯದ" ಮೇಲೆ ಅಪ್ಪಳಿಸಿತು ಎಂದು ಫಿಲಡೆಲ್ಫಿಯಾದ ಉಕ್ರೇನಿನ ಗ್ರೀಕ್ ಕಥೋಲಿಕ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಮೆಟ್ರೋಪಾಲಿಟನ್ ಬೋರಿಸ್ ಗುಡ್ಜಿಯಾಕ್ ರವರು ಹೇಳಿದರು.
ಈ ಪವಿತ್ರ ಸ್ಥಳವು ಸಾವಿರಾರು ವರ್ಷಗಳಿಂದ ಆಕ್ರಮಣಗಳು ಮತ್ತು ಕಮ್ಯುನಿಸ್ಟ್ ಗಳ ಕಿರುಕುಳಗಳನ್ನು ತಡೆದುಕೊಂಡಿದೆ. "ಪ್ಯಾರಿಸ್‌ನ ನೊಟ್ರೆ ಡೇಮ್, ರೋಮ್‌ನ ಸಂತ ಪೇತ್ರರ ಮಹಾದೇವಾಲಯ, ಮೆಕ್ಸಿಕೋ ನಗರದ ಗ್ವಾಡಾಲುಪೆಯ ಮಹಾದೇವಾಲಯ ಮತ್ತು ನ್ಯೂಯಾರ್ಕ್ ನಗರದ ಸೇಂಟ್ ಪ್ಯಾಟ್ರಿಕ್ ಪ್ರಧಾನಾಲಯದಂತೆ, ಸಂತ ಸೋಫಿಯಾ ಪ್ರಧಾನಾಲಯವು ರಾಷ್ಟ್ರದಲ್ಲಿ ವಿಶಿಷ್ಟವಾದ ಆಧ್ಯಾತ್ಮಿಕ ಸಂಕೇತ ಮತ್ತು ನೈತಿಕ ಮಹತ್ವವನ್ನು ಹೊಂದಿದೆ."
ಅಮಾಯಕ ನಾಗರಿಕರ ಹತ್ಯೆಯನ್ನು ಗಮನಿಸಿದ ಅವರು, ರಷ್ಯಾದ ಉಕ್ರೇನ್ ಆಕ್ರಮಣ ಮತ್ತು ನಿರಂತರ ದೈನಂದಿನ ಬಾಂಬ್ ದಾಳಿಗಳು ಏನನ್ನೂ ಮತ್ತು ಯಾರನ್ನೂ ಉಳಿಸುತ್ತಿಲ್ಲ ಎಂದು ಹೇಳಿದರು. ಈ ಯುದ್ಧದಲ್ಲಿ 4,000ಕ್ಕೂ ಹೆಚ್ಚು ಶಾಲೆಗಳು, ಸುಮಾರು 1,600 ವೈದ್ಯಕೀಯ ಸೌಲಭ್ಯಗಳು ಮತ್ತು 236,000 ವಸತಿ ಕಟ್ಟಡಗಳು ನಾಶವಾಗಿವೆ ಎಂದು ಅವರು ವರದಿ ಮಾಡಿದ್ದಾರೆ.