ವಿಶ್ವಗುರು ಲಿಯೋರವರಿಗೆ ಗೇಲಿಕ್ ಫುಟ್ಬಾಲ್ ಕ್ರೀಡಾಪಟುಗಳಿಂದ ಜೂಬಿಲಿ ಜೆರ್ಸಿಯ ಉಡುಗೊರೆ
ಕೀಲ್ಸ್ ಗುಸ್ಸಿ
ಈ ವಾರಾಂತ್ಯದಲ್ಲಿ ಜ್ಯೂಬಿಲಿಯ ಕ್ರೀಡೆಗಾಗಿ ವ್ಯಾಟಿಕನ್‌ನಲ್ಲಿ ಜಮಾಯಿಸಿದ ಡಜನ್ಗಟ್ಟಲೆ ಗುಂಪುಗಳಲ್ಲಿ ರೋಮ್ ಹೈಬರ್ನಿಯಾ ಗೇಲಿಕ್ ಅಥ್ಲೆಟಿಕ್ ಅಸೋಸಿಯೇಷನ್ (GAA) ಕೂಡ ಒಂದು, ಅಲ್ಲಿ ಮೂವರು ವಲಸಿಗರು ತಮ್ಮ ಊರಿನಿಂದ ದೂರದಲ್ಲಿ ತಮ್ಮ ಆಶ್ರಯವನ್ನು ಕಂಡುಕೊಂಡಿದ್ದಾರೆ.
ಹನ್ನೆರಡು ವರ್ಷಗಳ ಹಿಂದೆ, ಉತ್ತರ ಐರ್ಲೆಂಡ್‌ನ ವ್ಯಕ್ತಿಯೊಬ್ಬರು, ಜನರು ಒಟ್ಟಾಗಿ ಕ್ರೀಡೆಯನ್ನು ಆಡಬಹುದಾದ ಸ್ಥಳದಲ್ಲಿ ಒಂದು ಸಂಘವನ್ನು ರಚಿಸಿದರು. ಐರ್ಲೆಂಡ್ ಗಣರಾಜ್ಯದ ನಿಯಾಮ್ ರಯಾನ್ ಮತ್ತು ಕ್ಯಾಥರೀನ್ ಹ್ಯಾಲಿನನ್ ಮತ್ತು ನ್ಯೂಯಾರ್ಕ್‌ನ ಕೇಟೀ ಮೊಲ್ಲೊಯ್ ಕೆಲವು ವರ್ಷಗಳ ಹಿಂದೆ ಗೇಲಿಕ್ ಅಥ್ಲೆಟಿಕ್ ಅಸೋಸಿಯೇಷನ್ಗೆ ಸೇರಿಕೊಂಡರು ಮತ್ತು ಅಂದಿನಿಂದ ಇಂದಿನವರೆಗೂ ಆಡುತ್ತಲ್ಲೇ ಇದ್ದಾರೆ.
ಎಲ್ಲರಿಗಾಗಿ ಜ್ಯೂಬಿಲಿ
ಮೂವರು ಮಹಿಳೆಯರಿಗೆ, ಈ ಜ್ಯೂಬಿಲಿಯ ವಾರಾಂತ್ಯವನ್ನು ಕ್ರೀಡೆಗೆ ಮೀಸಲಿಡುವುದು ವಿಶೇಷವಾಗಿತ್ತು ಏಕೆಂದರೆ, ಕ್ಯಾಥರೀನ್ ರವರು ವಿವರಿಸಿದಂತೆ, ಗೇಲಿಕ್ ಅಥ್ಲೆಟಿಕ್ ಅಸೋಸಿಯೇಷನ್ ಜ್ಯೂಬಿಲಿ ವಾರಾಂತ್ಯದ ಥೀಮ್‌ಗೆ ಒಂದು ಪ್ರಮುಖ ಉದಾಹರಣೆಯಾಗಿದೆ, ಕ್ರೀಡೆಯು ಜೀವನದ ಎಲ್ಲಾ ಹಂತಗಳ ಜನರನ್ನು ಒಟ್ಟುಗೂಡಿಸುತ್ತದೆ.
ನಮ್ಮನ್ನು, ನಮ್ಮ ಸಮುದಾಯವನ್ನು ಮತ್ತು ವಿಶ್ವದಾದ್ಯಂತದ ಗೇಲಿಕ್ ಆಟಗಳು ಮತ್ತು ಕ್ರೀಡೆಯ ಸಮುದಾಯವನ್ನು ಪ್ರತಿನಿಧಿಸುವ ಜ್ಯೂಬಿಲಿಯನ್ನು ಹೊಂದಿರುವುದು ಅತ್ಯಂತ ಮುಖ್ಯವಾಗಿದೆ ಮತ್ತು ಅದರ ಅರ್ಥ ಹಾಗೂ ಅದು ನಮ್ಮೆಲ್ಲರನ್ನೂ ಹೇಗೆ ಸಂಪರ್ಕಿಸುತ್ತದೆ ಎಂಬುದರ ಕುರಿತು ಎಂದು ಅವರು ಹಂಚಿಕೊಂಡರು.
ವಿಶ್ವಗುರುಗಾಗಿ ಮಾತ್ರ
ಜೂನ್ ತಿಂಗಳ 14, ಶನಿವಾರ ಸಂತ ಪೇತ್ರರ ಮಹಾದೇವಾಲಯದಲ್ಲಿ ಎರಡು ದಿನಗಳ ಜ್ಯೂಬಿಲಿ ಕ್ರೀಡೆಯ ಕಾರ್ಯಕ್ರಮವು ಪ್ರೇಕ್ಷಕರೊಂದಿಗೆ ಪ್ರಾರಂಭವಾಯಿತು ಮತ್ತು ಮೂವರು ಮಹಿಳೆಯರು ವಿಶ್ವಗುರುಗಳ ಹತ್ತಿರದಲ್ಲಿಯೇ ಆಸನಗಳನ್ನು ಹುಡುಕುವಲ್ಲಿ ಯಶಸ್ವಿಯಾದರು. ತಮ್ಮ ಶುಭಕಾಮನೆಯ ಮಾತಿನ ಸಮಯದಲ್ಲಿ, ವಿಶ್ವಗುರು ಐರ್ಲೆಂಡ್ ನ ಬಗ್ಗೆ ಪ್ರಸ್ತಾಪಿಸಿದರು ಮತ್ತು ನಿಯಾಮ್ ಅದನ್ನು ಕೇಳಿ ತಮಗೆ ಎಷ್ಟು ಆಶ್ಚರ್ಯವಾಯಿತು ಎಂದು ವಿವರಿಸಿದರು. ಅವರು ವಿಶೇಷವಾಗಿ ನಮ್ಮ ದೇಶವನ್ನು ಕರೆದಿದ್ದು ಅದ್ಭುತ, ಅವಿಸ್ಮರಣೀಯ" ಎಂದು ಅವರು ಹೇಳಿದರು. ಹೆಮ್ಮೆಯಿಂದ ತಮ್ಮ ಐರಿಶ್ ಧ್ವಜವನ್ನು ಬೀಸುತ್ತಾ, ಕೇಟೀರವರು ವಿಶ್ವಗುರು ಲಿಯೋರವರೊಂದಿಗೆ ವಿಶೇಷ ಕ್ಷಣವನ್ನು ಹೇಗೆ ಹಂಚಿಕೊಳ್ಳಲು ಸಾಧ್ಯವಾಯಿತು ಎಂಬುದನ್ನು ವಿವರಿಸಿದರು.
"ನಾವು ನಮ್ಮ ವಿಶೇಷ ಜ್ಯೂಬಿಲಿ ಆಫ್ ಸ್ಪೋರ್ಟ್ ಆವೃತ್ತಿಯ ರೋಮ್ ಹೈಬರ್ನಿಯಾ ಜೆರ್ಸಿಯನ್ನು ವಿಶ್ವಗುರುವಿಗೆ ನೀಡಲು ಸಾಧ್ಯವಾಯಿತು. ನಾವು ಗೇಲಿಕ್ ಭಾಷೆಯಲ್ಲಿ ಬರೆದ ತೋಳಿನ ಮೇಲೆ ಜ್ಯೂಬಿಲಿ ಲೋಗೋವನ್ನು ಮುದ್ರಿಸಿದ್ದೇವೆ," ಎಂದು ಅವರು ಹೇಳಿದರು.
ಈಗ ವಿಶ್ವಗುರು ಲಿಯೋರವರು ಜೆರ್ಸಿಯನ್ನು ಸ್ವೀಕರಿಸಿರುವುದರಿಂದ, ವಿಶ್ವಗುರುವನ್ನು GAAಯ ಗೌರವಾನ್ವಿತ ಸದಸ್ಯ ಎಂದು ಪರಿಗಣಿಸುತ್ತಾರೆ ಎಂದು ಕ್ಯಾಥರೀನ್ ರವರು ತಮಾಷೆ ಮಾಡಿದರು.
ವಿಶ್ವಾಸ ಮತ್ತು ಕ್ರೀಡೆ
ಕಥೋಲಿಕ ಧರ್ಮಸಭೆಯ ಕೇಂದ್ರಬಿಂದುವಾಗಿರುವ ರೋಮ್‌ನಲ್ಲಿ ವಾಸಿಸುವ ಈ ಮೂವರು ಕ್ರೀಡಾಪಟುಗಳಿಗೆ ವಿಶ್ವಾಸ ಮತ್ತು ಕ್ರೀಡೆಯ ನಡುವೆ ಬಿಗಿಯಾದ ಹಾಗೂ ದೃಢವಾದ ಸಂಬಂಧವಿದೆ. "ಐರ್ಲೆಂಡ್‌ನಲ್ಲಿ, ಗೇಲಿಕ್ ಅಥ್ಲೆಟಿಕ್ ಅಸೋಸಿಯೇಷನ್‌ನ ಪಿಚ್‌ಗಳೆಷ್ಟಿವೆಯೋ ಅಷ್ಟೇ, ಧರ್ಮಸಭೆಗಳೂ ಇವೆ ಎಂದು ನಾನು ಭಾವಿಸುತ್ತೇನೆ" ಎಂದು ಕ್ಯಾಥರೀನ್ ರವರು ತಮಾಷೆ ಮಾಡಿದರು.
ಐರ್ಲೆಂಡ್‌ನ ಐತಿಹಾಸಿಕ ಕ್ರೀಡೆಯ ಇತಿಹಾಸದ ಹೃದಯಭಾಗದಲ್ಲಿ ವಿಶ್ವಾಸ ಮತ್ತು ಕ್ರೀಡೆಯನ್ನು ಕಾಣಬಹುದು ಎಂದು ಅವರು ಗಮನಸೆಳೆದರು. ಐರ್ಲೆಂಡ್‌ನ ರಾಷ್ಟ್ರೀಯ ಕ್ರೀಡೆಗಳಲ್ಲಿ ಒಂದಾದ ಗೇಲಿಕ್ ಫುಟ್‌ಬಾಲ್ "ಬಹುತೇಕ ಜನರ ಭರವಸೆಯ ದಾರಿದೀಪವಾಗಿದೆ ಮತ್ತು ನಮ್ಮ ಧರ್ಮವು ದೀರ್ಘ ಮತ್ತು ಕೆಲವೊಮ್ಮೆ ತೊಂದರೆಗೊಳಗಾದ ಇತಿಹಾಸದ ಮೂಲಕ ಐರಿಶ್ ಗುರುತನ್ನು ಜೀವಂತವಾಗಿಡುವಲ್ಲಿ ಕೈಜೋಡಿಸಿದೆ" ಎಂದು ಕ್ಯಾಥರೀನ್ ರವರು ಮುಂದುವರಿಸಿದರು.
ಇದಲ್ಲದೆ, ನಿಯಾಮ್ ವಿವರಿಸಿದಂತೆ, ಗೇಲಿಕ್ ಅಥ್ಲೆಟಿಕ್ ಅಸೋಸಿಯೇಷನ್‌ನ ಜನರನ್ನು ಒಟ್ಟುಗೂಡಿಸಲು ಸಹಾಯ ಮಾಡುವ ತಂಡದ ಕೆಲಸಕ್ಕೆ ಬಲವಾದ ಒತ್ತು ನೀಡುವ ಮೂಲಕ ಜ್ಯೂಬಿಲಿ ಕ್ರೀಡೆಯ ವಿಷಯವನ್ನು ಜೀವಂತಗೊಳಿಸುತ್ತದೆ. ನಮ್ಮ ತಂಡದಲ್ಲಿ ಆರು ವಿಭಿನ್ನ ಭಾಷೆಗಳಿವೆ, ಆದ್ದರಿಂದ ನೀವು ಎಲ್ಲಿಂದ ಬಂದಿದ್ದರೂ ಸಹ ನಮ್ಮಆಟದ ಹಿನ್ನೆಲೆಯು ಈ ಜನರ ಗುಂಪನ್ನು ಒಟ್ಟಿಗೆ ಸೇರಿಸುವುದಾಗಿದೆ.