MAP

Poor Clare Sisters after Mass in Waterfalls, Zimbabwe Poor Clare Sisters after Mass in Waterfalls, Zimbabwe 

ಜಿಂಬಾಬ್ವೆ: ಕ್ಲೇರ್ ಸಭೆಯ ಧಾರ್ಮಿಕ ಕನ್ಯಾಭಗಿನಿಯರು ಅನೇಕ ಬಡವರಿಗೆ ಸಾಂತ್ವನದ ಧ್ಯಾನಭರಿತ ಪ್ರಾರ್ಥನೆಯ ಭರವಸೆಯನ್ನು ನೀಡುತ್ತಿದ್ದಾರೆ

ಜಿಂಬಾಬ್ವೆಯಲ್ಲಿರುವ ಕ್ಲೇರ್ ಸಭೆಯ ಧಾರ್ಮಿಕ ಕನ್ಯಾಭಗಿನಿಯರು ಬಡವರಿಗೆ, ನಿಗೂಢವಾಗಿ ನೆಲೆಸಿದ್ದರೂ, ಗಂಟೆಗಟ್ಟಲೆ ಧ್ಯಾನಭರಿತ ಪ್ರಾರ್ಥನೆಯ ಮೂಲಕ ತಮ್ಮ ಸುತ್ತಮುತ್ತಲ್ಲಿ ಇರುವವರ ಜೀವನವನ್ನು ಸದ್ದಿಲ್ಲದೆ ದೇವರ ಅನುಗ್ರಹದಿಂದ ಉತ್ತಮಗೊಳಿಸಲು ಶ್ರಮಿಸುತ್ತಿದ್ದಾರೆ.

ಸಿಸ್ಟರ್ ಮುಫಾರೊ ಚಕುಯಿಂಗಾ, LCBL

ಹಿಂಸಾಚಾರ ಮತ್ತು ಅನ್ಯಾಯದಿಂದ ಗಾಯಗೊಂಡಿರುವ ಜಗತ್ತಿನಲ್ಲಿ, ಜಿಂಬಾಬ್ವೆಯಲ್ಲಿರುವ ಕ್ಲೇರ್ ಸಭೆಯ ಕನ್ಯಾಭಗಿನಿಯರು ಅನೇಕರ ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತಿದ್ದಾರೆ. ಧ್ಯಾನಭರಿತ ಪ್ರಾರ್ಥನೆಯ ಗುಪ್ತ ಜೀವನವನ್ನು ಜೀವಿಸುತ್ತಿದ್ದರೂ, ಅವರು ಜಿಂಬಾಬ್ವೆಯ ಜನರ ಮೇಲೆ ಪ್ರಾರ್ಥನೆಯ ಮೂಲಕ ಆಳವಾದ ಪ್ರಭಾವ ಬೀರುತ್ತಿದ್ದಾರೆ.

ಪ್ರಾರ್ಥನೆಯ ಸೇವಾಕಾರ್ಯ
ಕ್ಲೇರ್ ಸಭೆಯ ಧಾರ್ಮಿಕ ಕನ್ಯಾಭಗಿನಿಯರ ಸಂಘ 1212ರಲ್ಲಿ ಸಂತ ಕ್ಲೇರ್ ರವರು ಸ್ಥಾಪಿಸಿದ ಧಾರ್ಮಿಕ ಮಹಿಳೆಯರ ಸಭೆಯಾಗಿದೆ. ಜಿಂಬಾಬ್ವೆಯಲ್ಲಿ, ಸಂತ ಕ್ಲೇರ್ ರವರ ಮಠವನ್ನು 1985ರಲ್ಲಿ ಸ್ಪೇನ್‌ನಿಂದ ಬಂದ ಧರ್ಮಪ್ರಚಾರಕರುಗಳು ಸ್ಥಾಪಿಸಿದರು.

ಸಹೋದರಿಯರು ಪ್ರತಿದಿನ ಗಂಟೆಗಟ್ಟಲೆ ಮೊಣಕಾಲುಗಳ ಮೇಲೆ ಪ್ರಾರ್ಥಿಸುತ್ತಾ, ನಿತ್ಯಾ ಆರಾಧನೆಯಲ್ಲಿ ತಮ್ಮನ್ನೇ ತಾವು ಪ್ರಾರ್ಥನೆಯಲ್ಲಿ ಅರ್ಪಿಸಿಕೊಳ್ಳುತ್ತಾರೆ. ಅವರು ಸಾಂತ್ವನದ, ಮಾರ್ಗದರ್ಶನ ಮತ್ತು ಗುಣಪಡಿಸುವಿಕೆಯನ್ನು ಬಯಸುವ ಜನರಿಂದ ಕೋರಿಕೆಯ ಉದ್ದೇಶಗಳನ್ನು ಸ್ವೀಕರಿಸಿ, ಅವರ ಕೋರಿಕೆಯ ಅಗತ್ಯಗಳಿಗಾಗಿ ದಣಿವರಿಯಿಲ್ಲದೆ ನಿತ್ಯವೂ ಪ್ರಾರ್ಥಿಸುತ್ತಿರುತ್ತಾರೆ.

ಭರವಸೆಯ ಸಂದೇಶ
ಸವಾಲುಗಳು ಮತ್ತು ಅನಿಶ್ಚಿತತೆಗಳಿಂದ ತುಂಬಿರುವ ವಿಶ್ವದಲ್ಲಿ, ಭರವಸೆಯ ಜಲಪಾತದಂತಿರುವ ಕ್ಲೇರ್ ಸಭೆಯ ಧಾರ್ಮಿಕ ಕನ್ಯಾಭಗಿನಿಯರು ಭರವಸೆಯ ಸಂದೇಶವನ್ನು ನೀಡುತ್ತಾರೆ. ಪ್ರಾರ್ಥನೆ ಮತ್ತು ಧ್ಯಾನಭರಿತ ಆರಾಧನೆಗೆ ಅವರ ಸಮರ್ಪಣೆ, ಪ್ರಕ್ಷುಬ್ಧತೆಯ ನಡುವೆಯೂ ಸಹ ಯಾವಾಗಲೂ ಸಾಂತ್ವನ ಮತ್ತು ಶಕ್ತಿಯ ಮೂಲವಿದೆ ಎಂಬುದನ್ನು ಜಗತ್ತಿಗೆ ನೆನಪಿಸುತ್ತದೆ.

ಹರಾರೆಯಲ್ಲಿರುವ ಉಗಾಂಡಾ ಹುತಾತ್ಮರ ಮುಫಕೋಸ್‌ನ ಧರ್ಮಕೇಂದ್ರದಲ್ಲಿರುವ ಡೊಮಿನಿಕ್ ಆಂಡರ್ಸನ್ ಬೆಹರಿರವರು, ಕ್ಲೇರ್ ಸಭೆಯ ಧಾರ್ಮಿಕ ಕನ್ಯಾಭಗಿನಿಯರೊಂದಿಗೆ, ತಮ್ಮ ಜೀವನದ ಮೇಲೆ ಬೀರಿದ ಪ್ರಭಾವದ ಬಗ್ಗೆ ತಮ್ಮ ಸಾಕ್ಷ್ಯವನ್ನು ಹಂಚಿಕೊಂಡರು.

ನನ್ನ ದಿವಂಗತ ಪತ್ನಿಗೆ ಕ್ಯಾನ್ಸರ್ ಇರುವುದು ವೈದ್ಯರಿಂದ ಪತ್ತೆಯಾಯಿತು ಮತ್ತು ಪ್ರತಿ ಮಂಗಳವಾರ ಕೀಮೋಥೆರಪಿಗೆ 700 ಡಾಲರ್ ಅಗತ್ಯವಿತ್ತು, ಆ ಆರ್ಥಿಕ ಹೊರೆಯನ್ನು ನಾನು ಭರಿಸಲಾಗಲಿಲ್ಲ. ಆದ್ದರಿಂದ. ನಾನು ಕ್ಲೇರ್ ಸಭೆಯ ಧಾರ್ಮಿಕ ಕನ್ಯಾಭಗಿನಿಯರ ಮಠಕ್ಕೆ ಭೇಟಿ ಮಾಡಿದೆ, ಅವರು ನನ್ನೊಂದಿಗೆ ಪ್ರಾರ್ಥಿಸಿ ಸಾಂತ್ವನ ಹೇಳಿದರು. ಅಂದಿನಿಂದ, ನನ್ನ ಹೆಂಡತಿ ಎಂದಿಗೂ ಕೀಮೋಥೆರಪಿಯನ್ನು ತಪ್ಪಿಸಲಿಲ್ಲ ಎಂಬುದು ಇನ್ನೂ ನಿಗೂಢವಾಗಿದೆ.

ವಿಶ್ವಗುರು ಹದಿನಾಲ್ಕನೇ ಲಿಯೋರವರು ನಮಗೆ ನೆನಪಿಸುವಂತೆ: "ಯುದ್ಧ, ಹಿಂಸೆ ಮತ್ತು ಅನ್ಯಾಯದಿಂದ ಗಾಯಗೊಂಡಿರುವ ನಮ್ಮ ಜಗತ್ತು ದೇವರ ಪ್ರೀತಿಯ ಸುವಾರ್ತೆ ಸಂದೇಶವನ್ನು ಕೇಳಬೇಕಾಗಿದೆ." ಭರವಸೆಯ ಜಲಪಾತದಂತಿರುವ ಕ್ಲೇರ್ ಸಭೆಯ ಧಾರ್ಮಿಕ ಕನ್ಯಾಭಗಿನಿಯರು ಭರವಸೆಯ. ಆ ಸಂದೇಶವನ್ನು ಸದ್ದಿಲ್ಲದೆ ಜೀವಿಸುತ್ತಿದ್ದಾರೆ.
 

17 ಜೂನ್ 2025, 19:28