ಜೈಟೊಮಿರ್‌ನ ನಜರೇತ್‌ನಲ್ಲಿರುವ ಪವಿತ್ರ ಕುಟುಂಬದ ಸಭೆಯ ಧಾರ್ಮಿಕ ಕನ್ಯಾಭಗಿನಿಯರು: ಯುದ್ಧದ ನಡುವೆ ಆಶ್ರಯ, ಪ್ರಾರ್ಥನೆ, ಭರವಸೆ
ಟೊಮಾಸ್ ಝೀಲೆನ್‌ಕಿವಿಚ್
ಮೇ 2022ರಲ್ಲಿನಜರೇತ್‌ನ ಪವಿತ್ರ ಕುಟುಂಬದ ಸಭೆಯ ಧಾರ್ಮಿಕ ಸಹೋದರಿಯರು ನಿರ್ಣಾಯಕ ಮೂಲಸೌಕರ್ಯಗಳ ಉದ್ಯೋಗಿಗಳು ಮತ್ತು ಸ್ವಯಂಸೇವಕರ ಮಕ್ಕಳಿಗಾಗಿ ಕಾರಿತಾಸ್ ಒದಗಿಸಿದ ಕೊಠಡಿಗಳಲ್ಲಿ ಶಿಶುವಿಹಾರವನ್ನು ತೆರೆದಿದ್ದಾರೆ.
ಅವರಿಗೆ ತಮ್ಮ ಮಕ್ಕಳನ್ನು ಬಿಟ್ಟು ಹೋಗಲು ಎಲ್ಲಿಯೂ ಸೂಕ್ತವಾದ ಸ್ಥಳವಿರಲಿಲ್ಲ ಆದ್ದರಿಂದ ನಾವು ಕೆಲವು ಕೋಣೆಗಳಲ್ಲಿ ಹೊಂದಿಕೊಳ್ಳುವಷ್ಟು ಮಕ್ಕಳನ್ನು ಸ್ವಾಗತಿಸಿದೆವು ಎಂದು ಸಿಸ್ಟರ್ ಫ್ರಾನ್ಸಿಸ್ಕಾ ತುಮಾನಿವಿಚ್ ರವರು ವಿವರಿಸಿದರು. ಇಂದು, ಪ್ರತಿದಿನ ನಾಲ್ಕರಿಂದ ಐದು ವರ್ಷ ವಯಸ್ಸಿನ ಸುಮಾರು 20 ಮಕ್ಕಳು ಶಿಶುವಿಹಾರಕ್ಕೆ ಹಾಜರಾಗುತ್ತಿದ್ದಾರೆ. ಕಲೆ ಮತ್ತು ಇಂಗ್ಲಿಷ್ ತರಗತಿಗಳ ಜೊತೆಗೆ, ಅವರು ಪ್ರಾರ್ಥನೆಯಲ್ಲಿಯೂ ಸಮಯವನ್ನು ಕಳೆಯುತ್ತಿದ್ದಾರೆ.
ಮಕ್ಕಳು ಪ್ರತಿದಿನ ಸೈನಿಕರಿಗಾಗಿ ಮತ್ತು ಶಾಂತಿಗಾಗಿ ಪ್ರಾರ್ಥಿಸುತ್ತಾರೆ ಎಂದು ಅವರು ಹೇಳಿದರು. ಉಕ್ರೇನ್‌ನಲ್ಲಿ ಯಾವುದೇ ಕ್ರೈಸ್ತ ಶಿಶುವಿಹಾರಗಳಿಲ್ಲ. ಕಾರಿತಾಸ್ SPES ನಿಂದ ಸಾಧ್ಯವಾದ ನಮ್ಮ ಯೋಜನೆಯು ಹೊಸದಾಗಿದೆ.
ಸ್ಥಳಾಂತರಗೊಂಡ ಅರ್ಧದಷ್ಟು ಸಿಬ್ಬಂದಿ ಮಹಿಳೆಯರು, ಭಾಷಣ ಚಿಕಿತ್ಸೆ, ಮನೋವಿಜ್ಞಾನ ಮತ್ತು ಶಿಕ್ಷಣಶಾಸ್ತ್ರದಲ್ಲಿ ತಜ್ಞರು, ಅವರು ಸ್ವತಃ ಆಘಾತಕಾರಿ ಅನುಭವಗಳನ್ನು ಅನುಭವಿಸಿದ್ದಾರೆ. ಈ ಎಲ್ಲಾ ಮಹಿಳೆಯರು ನಮಗೆ ದೇವರು ಕೊಟ್ಟ ಒಂದು ಉಡುಗೊರೆಯಂತೆ" ಎಂದು ಸಿಸ್ಟರ್ ಫ್ರಾನ್ಸಿಸ್ಕಾರವರು ವಿವರಿಸಿದರು, ಭಾಷಾ ಜಿಮ್ನಾಸ್ಟಿಕ್ಸ್, ನೃತ್ಯ ಮತ್ತು ಸಂಗೀತ ಸೇರಿದಂತೆ ಅವರು ಕೊಡುಗೆ ನೀಡುವ ಆಕರ್ಷಕ ಚಟುವಟಿಕೆಗಳನ್ನು ನೆನಪಿಸಿಕೊಳ್ಳುತ್ತಾರೆ.
ಈ ಮಹಿಳೆಯರ ಜೀವನ ಕಥೆಗಳು ತುಂಬಾ ಕಷ್ಟಕರ ಮತ್ತು ಹೃದಯಸ್ಪರ್ಶಿಯಾಗಿವೆ, ಅದಕ್ಕಾಗಿಯೇ ಈ ಕೇಂದ್ರವು ತುಂಬಾ ಮುಖ್ಯವಾಗಿದೆ ಎಂದು ಅವರು ಗಮನಿಸಿದರು.
ಕುಟುಂಬ ಸಹಾಯ ಕೇಂದ್ರವನ್ನು ನಡೆಸುವುದು ಎಂದರೆ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳುವುದು ಎಂದರ್ಥ. "ನಾವು ಸಹಾಯ ಮಾಡುವ ಜನರಿಗೆ ಆಹಾರ, ಚಹಾ ಮತ್ತು ಸ್ಥಳಾವಕಾಶವಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ, ಇದರಿಂದ ಅವರು ಆರಾಮದಾಯಕವಾಗುತ್ತಾರೆ ಮತ್ತು ನಮ್ಮೊಂದಿಗೆ ಊಟ ಮಾಡಬಹುದು ಹಾಗೂ ಪ್ರಾರ್ಥಿಸಬಹುದು" ಎಂದು ಸಿಸ್ಟರ್ ಫ್ರಾನ್ಸಿಸ್ಕಾರವರು ಹೇಳಿದರು. ಶಿಶುವಿಹಾರ ಮತ್ತು ಕೇಂದ್ರದಲ್ಲಿ ತಮ್ಮ ದೈನಂದಿನ ಸೇವೆಯ ಜೊತೆಗೆ, ಧಾರ್ಮಿಕ ಕನ್ಯಾಭಗಿನಿಯರು ಕುಟುಂಬಗಳೊಂದಿಗೆ ಧ್ಯಾನಕೂಟಗಳನ್ನು ಮತ್ತು ತರಬೇತಿಯನ್ನು ಆಯೋಜಿಸುತ್ತಾರೆ.