ಪುನರುತ್ಥಾನದ ಬೆಳಕಿನಲ್ಲಿ ಗೊಂದಲಗಳ ನಡುವೆ ಭರವಸೆ
ಧರ್ಮಗುರು ಜಾನ್ ಲ್ಯೂಕ್ ಗ್ರೆಗೊರಿ
ಸಂಘರ್ಷ, ಅವ್ಯವಸ್ಥೆ ಮತ್ತು ಹತಾಶೆಯ ಮಧ್ಯೆ ಪವಿತ್ರ ನಾಡಿನಲ್ಲಿ ಫ್ರಾನ್ಸಿಸ್ಕನ್ ಸಭೆಯವರಿಗಾಗಿ ನಮ್ಮ ಜೀವಂತ ಉಪಸ್ಥಿತಿಯು ಕತ್ತಲೆಯಲ್ಲಿ ಹೊಳೆಯುವ ಸ್ಥಿತಿಸ್ಥಾಪಕತ್ವ ಮತ್ತು ವಿಶ್ವಾಸದ ಕಥೆಗಳನ್ನು ಬಹಿರಂಗಪಡಿಸುತ್ತದೆ.
ನಾವು ಪವಿತ್ರ ನಾಡಿನ ಜನರಿಗೆ ಸೇವೆ ಸಲ್ಲಿಸಲು ನಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದೇವೆ ಮತ್ತು ಗಾಜಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಇಸ್ರಯೇಲ್ ಹಾಗೂ ಇರಾನ್ ಒಳಗೊಂಡ ಅನಿಯಂತ್ರಿತ ಹಿಂಸಾಚಾರದ ನಡುವೆಯೂ ಅದ್ಭುತವಾದ ಪುನರುತ್ಥಾನದ ಬೆಳಕಿನಿಂದ ಹೊರಹೊಮ್ಮುವ ಭರವಸೆಯ ಅಚಲ ದೀಪಗಳಾಗಿರಲು ಪ್ರಯತ್ನಿಸಿದ್ದೇವೆ.
ಪ್ರಕ್ಷುಬ್ಧ ರಾಜಕೀಯ ಭೂದೃಶ್ಯವು ಅಗಾಧವಾಗಿದ್ದರೂ, ನನ್ನ ವೈಯಕ್ತಿಕ ಅನುಭವವು ಪ್ರೀತಿ, ಭರವಸೆ ಮತ್ತು ಶಾಂತಿಯ ಆತ್ಮದ ಪೆಂಥಕೋಸ್ಟರ ಉಡುಗೊರೆಗಳಿಗೆ ಆಳವಾದ ಬೇರೂರಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಇವೆಲ್ಲವೂ ಪುನರುತ್ಥಾನದ ಭರವಸೆಯಲ್ಲಿ ಸಾಕಾರಗೊಂಡಿವೆ.
ಪ್ರಸ್ತುತವಾಗಿ ಭುಗಿಲೆದ್ದಿರುವ ಹಗೆತನಗಳು ಪ್ರಾರಂಭವಾಗುವ ಮುಂಚೆಯೇ ಭರವಸೆಯ ರಕ್ಷಕನಾಗಿ ನನ್ನ ಪ್ರಯಾಣವು ಆರಂಭವಾಯಿತು. ನಾನು ಪ್ರಭುಕ್ರಿಸ್ತರ ಬೋಧನೆಗಳು ಮತ್ತು ಬಡತನ, ನಮ್ರತೆ ಮತ್ತು ಸೇವೆಯನ್ನು ಸ್ವೀಕರಿಸುವ ಫ್ರಾನ್ಸಿಸ್ಕನ್ ಸಭೆಯ ಬದ್ಧತೆಯಿಂದ ಪ್ರೇರಿತನಾಗಿ, ಕರುಣಾಭರಿತ ಹೃದಯದೊಂದಿಗೆ ಪವಿತ್ರ ನಾಡಿಗೆ ಬಂದೆ. ಆದರೆ, ದೈನಂದಿನ ಜೀವನವನ್ನು ಜೀವಿಸುತ್ತಿರುವಾಗ ಹಿಂಸಾಚಾರದ ನಡುವೆಯೂ ಒಬ್ಬರು ಇಂತಹ ಮನೋಭಾವವನ್ನು ಹೇಗೆ ಕಾಪಾಡಿಕೊಳ್ಳಬಹುದು?
ಇದಕ್ಕೆಲ್ಲಾ ಉತ್ತರವು, ಪುನರುತ್ಥಾನದಲ್ಲಿ ಆಳವಾದ ವಿಶ್ವಾಸ ಮತ್ತು ಅರಿವಿನಲ್ಲಿದೆ. ಪ್ರತಿದಿನ ನಾವು ಜೀವನದ ದುರ್ಬಲತೆಯನ್ನು ವೀಕ್ಷಿಸುತ್ತೇವೆ. ಪವಿತ್ರ ನಾಡಿನ ಮತ್ತು ರೋಡ್ಸ್ ಸೇರಿದಂತೆ ಕಸ್ಟಡಿ ಸೇವೆ ಸಲ್ಲಿಸಿದ ಪ್ರದೇಶಗಳಲ್ಲಿ ನಮ್ಮ ಧ್ಯೇಯಕ್ಕೆ ಸೈರನ್‌ಗಳು, ಸ್ಫೋಟಗಳು ಮತ್ತು ಬಳಲುತ್ತಿರುವವರ ಧ್ವನಿಗಳು ನಿರಂತರ ಕೇಳಿಸುತ್ತಿವೆ.
ನಮ್ಮನ್ನು ಸುತ್ತುವರೆದಿರುವ ಜನರು, ಛಿದ್ರಗೊಂಡ ಕುಟುಂಬಗಳು, ಯುದ್ಧದ ಶಬ್ದಗಳಿಂದ ಭಯಭೀತರಾದ ಮಕ್ಕಳು ಮತ್ತು ದುಃಖದಿಂದ ಹೊರೆಯಾಗಿರುವ ಹಿರಿಯರು. ಈ ಸಂವಹನಗಳಲ್ಲಿ, ನಾವು ಭರವಸೆ ಮತ್ತು ಪ್ರೀತಿಯ ಸಾರವನ್ನು ಕಾಣಬಹುದು. ಎಲ್ಲವನ್ನೂ ಕಳೆದುಕೊಂಡರೂ ಸಹ, ಪರಸ್ಪರ ಸಹಾಯ ಮಾಡುವುದನ್ನು ಮುಂದುವರಿಸುವ, ಕ್ರಿಸ್ತರ ಬೋಧನೆಗಳನ್ನು ಸಾಕಾರಗೊಳಿಸುವ ವ್ಯಕ್ತಿಗಳಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ನಮ್ಮ ಸೇವೆಯು ಆಧ್ಯಾತ್ಮಿಕ ಆರೈಕೆಯನ್ನು ಮೀರಿ ನಮ್ಮ ಸೇವಾಕಾರ್ಯವು ವಿಸ್ತರಿಸುತ್ತಿದೆ, ಇದು ಸ್ಪಷ್ಟವಾದ ಸೇವಾ ಕಾರ್ಯಗಳನ್ನು ಒಳಗೊಂಡಿರುತ್ತದೆ, ಶಾಂತಿಗಾಗಿ ಸಾಮಾನ್ಯ ಅನ್ವೇಷಣೆಯಲ್ಲಿ ವಿಭಿನ್ನ ಧರ್ಮದ ಭಕ್ತವಿಶ್ವಾಸಿಗಳನ್ನು ಒಂದುಗೂಡಿಸಲು ನಾವು ಸಾಧ್ಯವಾದ ಎಲ್ಲ ಕಾರ್ಯವನ್ನು ಮಾಡುತ್ತೇವೆ.
ಪುನರುತ್ಥಾನದ ಭರವಸೆಯು ಕೇವಲ ಒಂದು ಘಟನೆಯಲ್ಲ, ಬದಲಾಗಿ ಕತ್ತಲೆಯ ಪ್ರತಿ ಕ್ಷಣವನ್ನು ಬೆಳಕಿನೆಡೆಗೆ ಕರೆದೊಯ್ಯುವ ಪ್ರಬಲ ಆಹ್ವಾನವಾಗಿದೆ. ಆತ್ಮದ ಉಡುಗೊರೆಯನ್ನು ಹಿಡಿದಿಟ್ಟುಕೊಳ್ಳುವುದು ಎಂದರೆ ಬಾಹ್ಯ ಸಂದರ್ಭಗಳನ್ನು ಲೆಕ್ಕಿಸದೆ ಶಾಂತಿಯ ಆಂತರಿಕ ಮನೋಭಾವವನ್ನು ಬೆಳೆಸುವುದು.
ಭರವಸೆ ಕೇವಲ ಒಂದು ಭಾವನೆಯಲ್ಲ, ಅದು ಮಾನವೀಯತೆಯ ಒಳ್ಳೆಯತನದಲ್ಲಿನ ಅಚಲ ವಿಶ್ವಾಸ ಮತ್ತು ಸತ್ಯದ ಆತ್ಮದಲ್ಲಿ ಸಾಕಾರಗೊಂಡ ದೈವಿಕ ಪ್ರೀತಿಯ ಭರವಸೆಯಿಂದ ಹುಟ್ಟಿದ ಪ್ರಬಲ ಕ್ರಿಯೆಯಾಗಿದೆ.