ಧರ್ಮಾಧ್ಯಕ್ಷರಾದ ರೋಡೆಸ್ ರವರು ಧಾರ್ಮಿಕ ಸ್ವಾತಂತ್ರ್ಯದ ಕಾಳಜಿಗಳನ್ನು ಎತ್ತಿ ತೋರಿಸುತ್ತಾರೆ
ಕ್ರಿಸ್ಟೋಫರ್ ವೆಲ್ಸ್ ಮತ್ತು ಕೀಲ್ಸ್ ಗುಸ್ಸಿ
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ವಾರವು ಭಾನುವಾರದಂದು ರಾಜಕೀಯ ಧ್ರುವೀಕರಣದ ಮೇಲೆ ಕೇಂದ್ರೀಕರಿಸಿ ಪ್ರಾರಂಭವಾಯಿತು, ಇದು ಒಂದು ಅಥವಾ ಇನ್ನೊಂದು ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಬೆಂಬಲಿಸುವ ಸಲುವಾಗಿ ಸತ್ಯ ಮತ್ತು ಧರ್ಮಸಭೆಗೆ ನಿಷ್ಠೆಯ ಹುಡುಕಾಟವನ್ನು ತ್ಯಜಿಸಲು ಕಾರಣವಾಗಬಹುದು.
"ಜನರು ತಮ್ಮ ವಿಶ್ವಾಸಕ್ಕಿಂತ ತಮ್ಮ ರಾಜಕೀಯ ಸಿದ್ಧಾಂತದಿಂದ ಹೆಚ್ಚು ಪ್ರಭಾವಿತರಾದಾಗ" ಧ್ರುವೀಕರಣವು ಅಮೆರಿಕದ ಧರ್ಮಾಧ್ಯಕ್ಷರುಗಳಿಗೆ ಮತ್ತು ಧರ್ಮಸಭೆಗೆ ಎದುರಾಗುವ ಸಮಸ್ಯೆಯ ವಿಶೇಷ ಕಾಳಜಿಯ ವಿಷಯವಾಗಿದೆ ಎಂದು ಧರ್ಮಾಧ್ಯಕ್ಷರಾದ ಕೆವಿನ್ ರೋಡ್ಸ್ ರವರು ಹೇಳಿದರು.
ಸೈದ್ಧಾಂತಿಕ ಸವಾಲುಗಳು
ಧಾರ್ಮಿಕ ಸ್ವಾತಂತ್ರ್ಯ ವಾರದ ಮೊದಲು ವ್ಯಾಟಿಕನ್ ಸುದ್ದಿಯೊಂದಿಗೆ ಮಾತನಾಡಿದ USCCBಯ ಧಾರ್ಮಿಕ ಸ್ವಾತಂತ್ರ್ಯ ಸಮಿತಿಯ ಅಧ್ಯಕ್ಷ ಧರ್ಮಾಧ್ಯಕ್ಷರಾದ ರೋಡೆಸ್ ರವರ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಎದುರಾಗುತ್ತಿರುವ ಬೆದರಿಕೆಗಳು, ರಾಜಕೀಯ ವರ್ಣಪಟಲದ ವಿವಿಧ ಅಂಶಗಳಿಂದ ಬರಬಹುದು, ಬಲ ಮತ್ತು ಎಡ ಎರಡೂ ರಾಜಕೀಯ ಪಕ್ಷಗಳು ತಮ್ಮ ಸೈದ್ಧಾಂತಿಕ ವಿರೋಧಿಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಗಮನಿಸಿದರು.
ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪೋಷಕರ ಹಕ್ಕುಗಳು
ಧಾರ್ಮಿಕ ಸ್ವಾತಂತ್ರ್ಯ ವಾರದಲ್ಲಿ ಒತ್ತು ನೀಡಬೇಕಾದ ವಿಷಯಗಳ ಆಯ್ಕೆಯು ಹೆಚ್ಚಾಗಿ ಅಮೆರಿಕದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯ ಕುರಿತು USCCBಯ ವಾರ್ಷಿಕ ವರದಿಯನ್ನು ಆಧರಿಸಿದೆ ಎಂದು ಧರ್ಮಾಧ್ಯಕ್ಷರಾದ ರೋಡೆಸ್ ರವರು ವಿವರಿಸಿದರು. ಈ ವರ್ಷ ಎದುರಿಸಲಾದ ಇತರ ಸವಾಲುಗಳೆಂದರೆ, ಇನ್ ವಿಟ್ರೊ ಫರ್ಟಿಲೈಸೇಶನ್‌ಗೆ ಸರ್ಕಾರಿ ಧನಸಹಾಯ ಮತ್ತು ಮಾನವ ಜೀವನದ ಘನತೆಯನ್ನು ಎತ್ತಿಹಿಡಿಯಲು ವಿಫಲವಾದ ಮತ್ತು ಅವರ ಮಕ್ಕಳ ಶಿಕ್ಷಣದಲ್ಲಿ ಪೋಷಕರ ಆಯ್ಕೆಯ ಇತರ ಕಾರ್ಯವಿಧಾನಗಳು.
ಸಂತರಿಂದ ಪ್ರೇರಿತರಾಗಿ
ಮುಕ್ತಾಯದ ಮಾತುಗಳಲ್ಲಿ, ಧರ್ಮಾಧ್ಯಕ್ಷರಾದ ರೋಡೆಸ್ ರವರು ಪ್ರತಿ ವರ್ಷ ಧಾರ್ಮಿಕ ಸ್ವಾತಂತ್ರ್ಯ ವಾರವು ಸಂತರುಗಳಾದ ಸಂತ ಥಾಮಸ್ ಮೋರ್ ಮತ್ತು ಜಾನ್ ಫಿಶರ್ ರವರ ಹಬ್ಬದಂದು ಪ್ರಾರಂಭವಾಗುತ್ತದೆ ಎಂದು ಗಮನಿಸಿದರು, ಇಬ್ಬರೂ ತಮ್ಮ ಸ್ವಾತಂತ್ರ್ಯಕ್ಕಾಗಿ ಬಳಲುತ್ತಿದ್ದರು ಮತ್ತು ಇಂಗ್ಲೆಂಡ್ ರಾಜನನ್ನು ಇಂಗ್ಲೆಂಡ್‌ನಲ್ಲಿ ಧರ್ಮಸಭೆಯ ಸರ್ವೋಚ್ಚ ಮುಖ್ಯಸ್ಥರೆಂದು ಅಥವಾ ನಾಯಕರೆಂದು ಗುರುತಿಸಲು ನಿರಾಕರಿಸಿದ್ದಕ್ಕಾಗಿ ಹುತಾತ್ಮರಾದರು. ಅವರು ತಮ್ಮ ದೇಶವನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೂ, "ಅವರ ಅಂತಿಮ ನಿಷ್ಠೆ ಕ್ರಿಸ್ತರಿಗೆ ಮತ್ತು ಆತನ ರಾಜ್ಯಕ್ಕೆ" ಎಂದು ಅವರು ಹೇಳಿದರು.
ಅದೇ ರೀತಿ, ಧಾರ್ಮಿಕ ಸ್ವಾತಂತ್ರ್ಯ ವಾರದ ಅಂತ್ಯವನ್ನು ಸೂಚಿಸುವ ಹಬ್ಬವನ್ನು ಆಚರಿಸುವ ಸಂತರುಗಳಾದ ಸಂತ ಪೇತ್ರ ಮತ್ತು ಪೌಲರು ತಮ್ಮ ವಿಶ್ವಾಸವನ್ನು ನಿರಾಕರಿಸಲು ನಿರಾಕರಿಸಿದಾಗ "ರೋಮ್‌ನಲ್ಲಿ ಕಿರುಕುಳಕ್ಕೊಳಗಾದರು, ಬಂಧಿಸಲ್ಪಟ್ಟರು ಮತ್ತು ಹುತಾತ್ಮರಾದರು". ಹಾಗಾಗಿ, ಧರ್ಮಾಧ್ಯಕ್ಷರಾದ ರೋಡೆಸ್ ರವರು "ಧಾರ್ಮಿಕ ಸ್ವಾತಂತ್ರ್ಯ ವಾರದ ದಿನಾಂಕಗಳು, ಈ ಎರಡು ಹಬ್ಬಗಳು ನಮಗೆ ಬಹಳ ಮಹತ್ವದ್ದಾಗಿವೆ ಎಂದು ನಾನು ಭಾವಿಸುತ್ತೇನೆ" ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಕೆಲಸ ಮಾಡುವವರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.