ಅಮೆರಿಕದ ಧರ್ಮಾಧ್ಯಕ್ಷರುಗಳು: ಪ್ರಾರ್ಥನೆ, ಚಿಂತನೆ ಮತ್ತು ಕ್ರಿಯೆಯ ಮೂಲಕ ಧಾರ್ಮಿಕ ಸ್ವಾತಂತ್ರ್ಯವನ್ನು ಉತ್ತೇಜಿಸಿ
ಕ್ರಿಸ್ಟೋಫರ್ ವೆಲ್ಸ್
ಜೂನ್ 22ರಂದು ಆರಂಭಗೊಂಡು, ಸಂತ ಜಾನ್ ಫಿಶರ್ ಮತ್ತು ಥಾಮಸ್ ಮೋರ್ ರವರ ಹಬ್ಬದಿಂದ, ಅಮೆರಿಕದ ಧರ್ಮಸಭೆಯು ಧಾರ್ಮಿಕ ಸ್ವಾತಂತ್ರ್ಯ ವಾರವನ್ನು ಆಚರಿಸುತ್ತದೆ, ಇದು ಜೂನ್ 29ರಂದು ಸಂತ ಪೇತ್ರ ಮತ್ತು ಪೌಲ್ ರವರ ಹಬ್ಬದಂದು ಮುಕ್ತಾಯಗೊಳ್ಳುತ್ತದೆ.
ಅಮೆರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ (USCCB) ಉಪಕ್ರಮದ ಪ್ರಕಾರ, ಧಾರ್ಮಿಕ ಸ್ವಾತಂತ್ರ್ಯ ವಾರವು, ಕಥೋಲಿಕರು ಮತ್ತು ಎಲ್ಲಾ ಧರ್ಮಗಳ ಜನರಿಗೆ ಧಾರ್ಮಿಕ ಸ್ವಾತಂತ್ರ್ಯದ ಅಗತ್ಯ ಹಕ್ಕನ್ನು ಉತ್ತೇಜಿಸಲು ಭಕ್ತವಿಶ್ವಾಸಿಗಳನ್ನು ಆಹ್ವಾನಿಸುತ್ತದೆ.
'ಭರವಸೆಗೆ ಸಾಕ್ಷಿಗಳು'
ಈ ವರ್ಷದ ಆಚರಣೆಯ ಶೀರ್ಷಿಕೆ, "ಭರವಸೆಗೆ ಸಾಕ್ಷಿಗಳು", ಅಮೇರಿಕದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯ ಕುರಿತು ಸಮ್ಮೇಳನದ 2025ರ ವಾರ್ಷಿಕ ವರದಿಯನ್ನು ಆಧರಿಸಿದೆ, ಇದು "ಧಾರ್ಮಿಕ ಸ್ವಾತಂತ್ರ್ಯದ ಮೇಲೆ ರಾಜಕೀಯ ಧ್ರುವೀಕರಣದ ಪರಿಣಾಮ" ವಲಸಿಗರಿಗೆ ಸೇವೆ ಸಲ್ಲಿಸುವ ಕಥೋಲಿಕ ಸಚಿವಾಲಯಗಳಿಗೆ ಬೆದರಿಕೆಗಳು ಮತ್ತು ಶಿಕ್ಷಣದಲ್ಲಿ ಪೋಷಕರ ಆಯ್ಕೆಯಂತಹ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ.
ಈ ವರ್ಷದ ವಿಷಯವು ವಿಶ್ವಗುರು ಫ್ರಾನ್ಸಿಸ್ ರವರು ಘೋಷಿಸಿದ ಜೂಬಿಲಿ ವರ್ಷಕ್ಕೆ ಸಂಬಂಧಿಸಿದೆ ಎಂದು ಇಲಿನಾಯ್ಸ್‌ನ ಸ್ಪ್ರಿಂಗ್‌ಫೀಲ್ಡ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಥಾಮಸ್ ಪ್ಯಾಪ್ರೋಕಿರವರು ಹೇಳುತ್ತಾರೆ, ಅವರು ಮೂಲ ಫೋರ್ಟ್‌ನೈಟ್ ಆಫ್ ಫ್ರೀಡಮ್ ನ್ನು ಪ್ರಸ್ತಾಪಿಸಿದರು, ಅದು ನಂತರ ಧಾರ್ಮಿಕ ಸ್ವಾತಂತ್ರ್ಯ ವಾರವಾಗಿ ವಿಕಸನಗೊಂಡಿದೆ.
"ಭರವಸೆಯು ನಿರಾಸೆಗೊಳಿಸುವುದಿಲ್ಲ" ಎಂಬ ಸಂತ ಪೌಲರ ಹೇಳಿಕೆಯಿಂದ ಸ್ಫೂರ್ತಿ ಪಡೆದು, ಧರ್ಮಾಧ್ಯಕ್ಷರಾದ ಪ್ಯಾಪ್ರೋಕಿರವರು ವ್ಯಾಟಿಕನ್ ಸುದ್ಧಿಗೆ "ಭವಿಷ್ಯದಲ್ಲಿ, ದೇವರು ಶಾಶ್ವತ ಜೀವನದ ಬಗ್ಗೆ ಭರವಸೆ ನೀಡುವ ವಿಷಯದಲ್ಲಿ ನಮಗೆ ವಿಶ್ವಾಸವನ್ನು ನೀಡುತ್ತದೆ" ಎಂದು ಹೇಳಿದರು.
ಸ್ವಾತಂತ್ರ್ಯ ಮತ್ತು ಸತ್ಯ
ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪ್ಯಾಪ್ರೊಕಿರವರು, ಧಾರ್ಮಿಕ ಸ್ವಾತಂತ್ರ್ಯದ ಪ್ರಶ್ನೆಯನ್ನು ಧರ್ಮಸಭೆಯ ಸ್ವಾತಂತ್ರ್ಯದ ಬೋಧನೆಯ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ. ವಿಶ್ವಗುರು ದ್ವಿತೀಯಾ ಸಂತ ಜಾನ್ ಪೌಲ್ರವರ ಬೋಧನೆಗಳನ್ನು ಉಲ್ಲೇಖಿಸುತ್ತಾ, ಧರ್ಮಾಧ್ಯಕ್ಷರ ನಿಜವಾದ ಸ್ವಾತಂತ್ರ್ಯವು ಸತ್ಯಕ್ಕೆ ಸಂಬಂಧಿಸಿದೆ ಮತ್ತು ಅದನ್ನು "ಪರವಾನಗಿ" ಯಿಂದ, ಅಂದರೆ ಒಬ್ಬರಿಗೆ ಇಷ್ಟವಾದದ್ದನ್ನು ಮಾಡುವ ಸಾಮರ್ಥ್ಯದಿಂದ ಪ್ರತ್ಯೇಕಿಸಬೇಕು ಎಂದು ವಿವರಿಸುತ್ತಾರೆ.