ಪೋಲಿಷ್ ಧಾರ್ಮಿಕ ಭಗಿನಿಯರು ಯಾಜಕರಿಗಾಗಿ ಪ್ರಾರ್ಥಿಸಲು ಭಕ್ತವಿಶ್ವಾಸಿಗಳಿಗೆ ಕರೆ ನೀಡುತ್ತಾರೆ
ಕರೋಲ್ ಡಾರ್ಮೊರೋಸ್
ಬೆಥನಿ ಮಿಷನ್ ಟು ಸಪೋರ್ಟ್ ಪ್ರೀಸ್ಟ್ಸ್ ನ್ನು ಫೆಬ್ರವರಿ 4, 1999ರಂದು ಸಿಸ್ಟರ್ ಗೇಬ್ರಿಯೆಲಾ ಬಾಸ್ಸಿಸ್ಟಾರವರ ಉಪಕ್ರಮದ ಮೇರೆಗೆ ಸ್ಥಾಪಿಸಲಾಯಿತು, ಅವರು ಯಾಜಕರ ಸಂತೋಷ ಮತ್ತು ಚಿಂತೆಗಳನ್ನು ಆಲಿಸಿದರು ಮತ್ತು ಪ್ರಾರ್ಥನೆಯ ಮೂಲಕ ಅವರಿಗೆ ಪ್ರತಿಕ್ರಿಯಿಸಿದರು.
ಎಂಟು ಜನ ಪೋಲಿಷ್ ಧಾರ್ಮಿಕ ಭಗಿನಿಯರನ್ನು ಒಳಗೊಂಡ ಬೆಥನಿ ಸಭೆಯ ಸಹೋದರಿಯರು, ಯಾಜಕರಿಗಾಗಿ ಮೊದಲ ಬಾರಿ ಪೋಲೆಂಡ್‌ನಲ್ಲಿ ಪರಮಪೂಜ್ಯ ಸಂಸ್ಕಾರದ ಆರಾಧನೆಯನ್ನು ಅವರ ಕೋರಿಕೆಗಳಿಗಿಗಾಗಿ ಸಮರ್ಪಿಸಲಾಯಿತು, ಅವರು ತಮ್ಮ ಜೀವನದುದ್ದಕ್ಕೂ ನಿರ್ದಿಷ್ಟ ಯಾಜಕರಿಗಾಗಿ ಪ್ರಾರ್ಥಿಸಲು ಬದ್ಧರಾಗಿದ್ದರು.
ಇಂದು, ಈ ಧರ್ಮಪ್ರಚಾರಕ ಕ್ರಮದ ಸಂಘಟನೆಯು 8,800ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ ಮತ್ತು ಬೆಥನಿ ಕುಟುಂಬದ ಸಹೋದರಿಯರ ಸಭೆಯಿಂದ ಮಾರ್ಗದರ್ಶನ ಪಡೆಯುತ್ತಿದೆ, ಅವರ ಈ ಯಾಜಕತ್ವದ ವರ್ಚಸ್ಸು ಆ ಸಭೆಯ ಸ್ಥಾಪಕ, ದೇವರ ಸೇವಕ ಧರ್ಮಗುರುವಾದ ಜೋಜೆಫ್ ಮಾಲಿಸಿಯಾಕ್, SDS ರವರಿಂದ ಬಂದಿದೆ.
"ಬೆಥನಿ ಸಭೆಯ ಧಾರ್ಮಿಕ ಭಗಿನಿಯರ ವರ್ಚಸ್ಸು, ಪ್ರಾರ್ಥನೆ ಮತ್ತು ಪಾಲನಾ ಸೇವೆಯ ಕೆಲಸದಲ್ಲಿ ತಮ್ಮ ಸಹಾಯ ಹಸ್ತ ಚಾಚುವುದರ ಮೂಲಕ ಯಾಜಕರರನ್ನು ಬೆಂಬಲಿಸುವುದಾಗಿದೆ" ಎಂದು ಸಿಸ್ಟರ್ ಡೇರಿಯಾ ಟೈಬೋರ್ಸ್ಕಾ ರವರು ವಿವರಿಸಿದರು.
ಧರ್ಮಸಭೆಯ ಜವಾಬ್ದಾರಿ
ಧರ್ಮಸಭೆಯ ಜವಾಬ್ದಾರಿಯ ವಿಧಾನದಲ್ಲಿ ಬದಲಾವಣೆಯ ಅಗತ್ಯತೆಯ ಬಗ್ಗೆ ಬೆಥನಿ ಸಭೆಯ ಧಾರ್ಮಿಕ ಭಗಿನಿಯರ ಧ್ಯೇಯ ಗಮನ ಸೆಳೆಯಲು ಪ್ರಯತ್ನಿಸುತ್ತದೆ.
"ಈ ಒಂದು ಉಪಕ್ರಮದಲ್ಲಿ ಯಾಜಕರು ಮತ್ತು ಯಾಜಕ ವರ್ಗದ ಕ್ಷೇತ್ರ, ಮತ್ತು ಶ್ರೀ ಸಾಮಾನ್ಯ ಜನರು ಇದರಲ್ಲಿ ಕಡಿಮೆ ತೊಡಗಿಸಿಕೊಂಡಿದ್ದಾರೆ ಎಂಬ ಅಂಶಕ್ಕೆ ನಾವು ಒಗ್ಗಿಕೊಂಡಿದ್ದೇವೆ. ಅದೃಷ್ಟವಶಾತ್, ಈ ಮನಸ್ಥಿತಿ ಈಗಾಗಲೇ ಬದಲಾಗುತ್ತಿದೆ ಮತ್ತು ಅದು ನಮ್ಮ ಪ್ರಾರ್ಥನೆಯ ಮೂಲಕ ಬದಲಾಗುತ್ತಿದೆ” ಎಂದು ಸಿಸ್ಟರ್ ಟೈಬೋರ್ಸ್ಕಾರವರು ಗಮನಿಸಿದರು.
ಹೀಗೆ ಬೆಥನಿ ಸಭೆಯು, ಭಕ್ತವಿಶ್ವಾಸಿಗಳು ಯಾಜಕರನ್ನು, ತಮ್ಮ ಪಾವಿತ್ರತ್ಯತಯಲ್ಲಿ ಮತ್ತು ದೈವಕರೆಯ ಪಾಲನಾ ಸೇವೆಯಲ್ಲಿ ದೇವರಿಗೆ ವಿಧೇಯರಾಗಿರಲು ಬೆಂಬಲಿಸುತ್ತಾರೆ ಎಂಬುದನ್ನು ತೋರಿಸುತ್ತದೆ. "ಯಾಜಕರು ನಮಗೆ ಜವಾಬ್ದಾರರಾಗಿರುವಂತೆಯೇ, ಭಕ್ತವಿಶ್ವಾಸಿಗಳಾದ ನಾವು, ನಮ್ಮ ಯಾಜಕರಿಗೆ ಜವಾಬ್ದಾರರಾಗಿರುತ್ತೇವೆ" ಎಂದು ಅವರು ಹೇಳಿದರು.
ಯಾಜಕರಿಗಾಗಿ ಸಮುದಾಯ ಪ್ರಾರ್ಥನೆ
ಯಾಜಕರನ್ನು ಬೆಂಬಲಿಸುವ ಎದ್ದೇಶದಿಂದ, ಬೆಥನಿ ಸಭೆಯ ಧಾರ್ಮಿಕ ಭಗಿನಿಯರು, ಶ್ರೀ ಸಾಮಾನ್ಯ ಜನರನ್ನು, ಯಾಜಕರ ಸ್ನೇಹಿತರು, ಅವರ ಕುಟುಂಬಗಳು, ಸದ್ಭಾವನೆಯ ಜನರು ಮತ್ತು ಯಾಜಕರುಗಳನ್ನು ಒಟ್ಟುಗೂಡಿಸುತ್ತದೆ.
ಹೌದು, ಯಾಜಕರು ಒಬ್ಬರಿಗೊಬ್ಬರು ಪ್ರಾರ್ಥಿಸುತ್ತಾರೆ; ಧರ್ಮಾಧ್ಯಕ್ಷರುಗಳು ಮತ್ತು ಅಭ್ಯಂಗಿಸಲ್ಪಟ್ಟ ಜನರೂ ಸಹ ಈ ಉದ್ದೇಶಕ್ಕಾಗಿ ಪ್ರಾರ್ಥಿಸುತ್ತಾರೆ ಎಂದು ಸಿಸ್ಟರ್ ಟೈಬೋರ್ಸ್ಕಾರವರು ಒತ್ತಿ ಹೇಳಿದರು.
ಈ ಉಪಕ್ರಮವು ಪ್ರತಿಯೊಬ್ಬ ಸದಸ್ಯನು ಒಬ್ಬ ಯಾಜಕನ ದೈವೀಕ ಜೀವನದ ಜವಬ್ದಾರಿಯನ್ನು ಹೊಂದಿದ್ದಾನೆ, ಅವರಿಗಾಗಿ ಆತನು ಅಥವಾ ಆಕೆಯು ಅವರ ಪಾವಿತ್ರ್ಯತೆಗಾಗಿ ಪ್ರಾರ್ಥಿಸಬೇಕು, ಈ ಮೂಲಕ ಅವರೆಲ್ಲರೂ ಅವರ "ನೆರಳು" ಆಗುತ್ತಾರೆ, ಪವಿತ್ರಾತ್ಮ ಮತ್ತು ದೇವರ ತಾಯಿಗೆ ಪ್ರಾರ್ಥನೆಗಳೊಂದಿಗೆ ವಿವೇಚನೆಯಿಂದ ಅವರನ್ನು ಪೋಷಿಸುತ್ತಾರೆ.
ಭಾಗವಹಿಸುವವರಿಗೆ ಸದಸ್ಯತ್ವ ಕಾರ್ಡ್, ಬೆಥನಿ ಮಿಷನ್ ಪ್ರಾರ್ಥನಾ ಪುಸ್ತಕ ಮತ್ತು ಅವರು ಪ್ರಾರ್ಥಿಸಲು ಆಯ್ಕೆ ಮಾಡಿದ ಯಾಜಕನ ಭಾವಾ ಚಿತ್ರವನ್ನು ನೀಡಲಾಗುತ್ತದೆ.
ಯಾಜಕರಿಗಾಗಿ ಪ್ರಾರ್ಥಿಸುವುದು ಏಕೆ ಯೋಗ್ಯವಾಗಿದೆ?
ಪ್ರಸ್ತುತ ಪರಿಸ್ಥಿತಿಯಲ್ಲಿ ಯಾಜಕರಿಗಾಗಿ ಪ್ರಾರ್ಥಿಸುವ ಅಗತ್ಯವನ್ನು ಸಿಸ್ಟರ್ ಟೈಬೋರ್ಸ್ಕಾರವರು ಎತ್ತಿ ತೋರಿಸಿದರು.
"ವಿಶ್ವಾಸವುಳ್ಳವರಾಗಿ, ನಾವು ಅದರ ಬಗ್ಗೆ ಸ್ವಲ್ಪಮಟ್ಟಿಗೆ ಮರೆತಿದ್ದೇವೆ, ನಾವು ಧರ್ಮಸಭೆಯ ಜವಾಬ್ದಾರಿಯನ್ನು ಕೈಬಿಟ್ಟಿದ್ದೇವೆ, ಈ ಆದರ್ಶವಾದಿ ನೊಗವನ್ನು ಯಾಜಕರ ಮೇಲೆ ಹಾಕಿದ್ದೇವೆ" ಎಂದು ಅವರು ಹೇಳಿದರು, ಆರ್ಸ್ ಧರ್ಮಕೇಂದ್ರದ ಧರ್ಮಗುರುವಾದ ಸಂತ ಜಾನ್ ಮೇರಿ ವಿಯಾನ್ನಿಯವರನ್ನು ಉಲ್ಲೇಖಿಸಿ, "ಪ್ರಾರ್ಥನೆಯೊಂದಿಗೆ ಸ್ವೀಕರಿಸುವ ಯಾಜಕರಿಗಾಗಿ, ನಾವು ಪ್ರಾರ್ಥಿಸುವ ಜವಾಬ್ದಾರಿಯನ್ನು ಹೊಂದಿದ್ದೇವೆ" ಎಂದು ಹೇಳಿದರು.
ಧರ್ಮಸಭೆಯಲ್ಲಿ ನಮಗೆ ನಿಜವಾಗಿಯೂ ಈ ಯಾಜಕರ ಅಗತ್ಯವಿದೆಯೇ?"
ಇದು ಈಗಾಗಲೇ ಸಂಸ್ಕಾರಗಳಲ್ಲಿ ಮತ್ತು ಧರ್ಮಸಭೆಯಲ್ಲಿ ಕ್ರಿಸ್ತನ ಉಪಸ್ಥಿತಿಯನ್ನು ಅನುಮಾನಿಸುವ ಒಂದು ಭಯಾನಕ ಮಾರ್ಗವಾಗಿದೆ," ಎಂದು ಸಿಸ್ಟರ್ ಟೈಬೋರ್ಸ್ಕಾರವರು ಹೇಳಿದರು. "ಇಂದು, ದೇವರು ಯಾಜಕತ್ವವು ದುರ್ಬಲವಾದ ಎಲ್ಲವನ್ನೂ ಮೀರಿದ ಪವಿತ್ರ ಜೀವನವಾದದ್ದು ಈ ಯಾಜಕತ್ವ ಜೀವನ ಮತ್ತು ಅದು ಪ್ರಸ್ತುತವಾಗಿದೆ, ಆತನ ಕರುಣೆ ಪ್ರಸ್ತುತವಾಗಿದೆ ಎಂಬುದನ್ನು ಕಂಡುಕೊಳ್ಳಲು ನಮ್ಮನ್ನು ಮತ್ತೊಮ್ಮೆ ಕರೆಯುತ್ತಿದ್ದಾರೆ.
ಬೆಂಬಲದ ವಿವಿಧ ರೂಪಗಳು
ಯಾಜಕರನ್ನು ಬೆಂಬಲಿಸುವ ಬೆಥನಿ ಸಭೆಯು ತನ್ನ ಮುಖ್ಯ ವರ್ಚಸ್ಸನ್ನು ಪೂರೈಸುವ ಅನೇಕ ಉಪಕ್ರಮಗಳನ್ನು ನೀಡುತ್ತದೆ.
"ಯಾಜಕರಿಗಾಗಿ ಪ್ರಾರ್ಥನೆಯ ಉದ್ದೇಶಗಳು" ಎಂಬುದು ಆನ್‌ಲೈನ್ ಪುಸ್ತಕವಾಗಿದ್ದು, ಇದಕ್ಕೆ ಭಕ್ತವಿಶ್ವಾಸಿಗಳು ಮತ್ತು ಯಾಜಕರು ಸ್ವತಃ ಪ್ರಾರ್ಥನೆ ವಿನಂತಿಗಳನ್ನು ಕಳುಹಿಸುತ್ತಾರೆ, ನಂತರ ಸಹೋದರಿಯರು ಪೂಜ್ಯ ಸಂಸ್ಕಾರದ ಪರಮಪ್ರಸಾದ ಆರಾಧನೆಯ ಮುಂದೆ ಈ ವಿನಂತಿ ಮತ್ತು ಕೋರಿಕೆಗಳನ್ನು ಪ್ರಾರ್ಥನೆಯ ಮೂಲಕ ದೇವರಿಗೆ ಅರ್ಪಿಸುತ್ತಾರೆ.
ಪೂಜಾ-ಪುಸ್ತಕದ ಉದ್ದೇಶಗಳ ಕಚೇರಿಯು ಜನರು ಜೀವಂತವಾಗಿರಲಿ ಅಥವಾ ಸತ್ತಿರಲಿ ಯಾಜಕರಿಗೆ ಪ್ರಾರ್ಥನೆಗಳನ್ನು ಆದೇಶಿಸಲು ಅನುವು ಮಾಡಿಕೊಡುತ್ತದೆ.
"ಯಾಜಕತ್ವದ ಭಾನುವಾರಗಳಲ್ಲಿ" ಧರ್ಮಕೇಂದ್ರಗಳಲ್ಲಿ ಸಾಮಾನ್ಯ ಸಭೆಗಳನ್ನು ಕೈಗೊಂಡು, ಅಲ್ಲಿ ಸಹೋದರಿಯರು ಯಾಜಕರಿಗಾಗಿ ಪ್ರಾರ್ಥಿಸುವ ಮೂಲಕ ಧರ್ಮಸಭೆಯ ಅಭಿವೃದ್ಧಿಗೆ ಸಾಕ್ಷಿಯಾಗುತ್ತಾರೆ, ಅಂತೆಯೇ ಅವರ ಸೇವೆಯ ಸೌಂದರ್ಯವನ್ನು ತೋರ್ಪಡಿಸುತ್ತಾರೆ.
ಬೆಥನಿ ಮಿಷನ್ ಟು ಸಪೋರ್ಟ್ ಪ್ರೀಸ್ಟ್ಸ್‌ನ ಪ್ರಾರ್ಥನಾ ಗುಂಪುಗಳು ತಿಂಗಳ ಮೊದಲ ಗುರುವಾರದಂದು ಆರಾಧನೆಯನ್ನು ಆಯೋಜಿಸುತ್ತವೆ, ಜೊತೆಗೆ "ಯಾಜಕರಿಗೆ ತುರ್ತು ಸಂದೇಶಗಳ " ಸೇವೆಯನ್ನೂ ಸಹ ಆಯೋಜಿಸುತ್ತವೆ, ಇದು ಯಾಜಕರಿಗೆ ಪಠ್ಯ ಸಂದೇಶಗಳ ಮೂಲಕ ಪ್ರಾರ್ಥನೆಗಳನ್ನು ಕೋರಲು ಅನುವು ಮಾಡಿಕೊಡುತ್ತದೆ.