ವಿಶ್ವಗುರುಗಳ ಹಿಂದಿನ ಧರ್ಮಕ್ಷೇತ್ರವಾದ ಪೆರುವಿನ ಚಿಕ್ಲಾಯೊದಲ್ಲಿ, ತಮ್ಮ ದತ್ತಿ ಯೋಜನೆಗಳನ್ನು ನವೀಕರಿಸುತ್ತದೆ
ವ್ಯಾಟಿಕನ್ ಸುದ್ದಿ
ಪೆರುವಿನ ಲ್ಯಾಂಬಾಯೆಕ್ ಇಲಾಖೆಯಲ್ಲಿರುವ ಸಾವಿರಾರು ದುರ್ಬಲ ಕುಟುಂಬಗಳು 2014 ಮತ್ತು 2023 ರ ನಡುವೆ ಆಗಿನ ಚಿಕ್ಲಾಯೊ ಧರ್ಮಾಧ್ಯಕ್ಷರಾದ, ಈಗ ವಿಶ್ವಗುರುಗಳಾಗಿರುವ ಹದಿನಾಲ್ಕನೇ ಲಿಯೋರವರಾದ, ರಾಬರ್ಟ್ ಪ್ರೆವೋಸ್ಟ್ ರವರು ಸ್ಥಾಪಿಸಿದ ಐದು ದತ್ತಿ ಯೋಜನೆಗಳಿಂದ ಪ್ರಯೋಜನ ಪಡೆಯಲಿದ್ದಾರೆ.
ವಿಶ್ವಗುರುಗಳು ಆಯ್ಕೆಯಾದ ನಂತರ, ಪೆರುವಿಯನ ಧರ್ಮಕ್ಷೇತ್ರ ಈ ಉಪಕ್ರಮಗಳಿಗೆ ಹೊಸ ಆವೇಗವನ್ನು ನೀಡಿದೆ.
ಈ ಶೈಕ್ಷಣಿಕ, ಆರೋಗ್ಯ, ಉದ್ಯಮಶೀಲತೆ ಮತ್ತು ಪರಿಸರ ಕಾರ್ಯಕ್ರಮಗಳ ಮುಂದುವರಿಕೆಯನ್ನು ಲ್ಯಾಂಬಾಯೆಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಪ್ರೊಡಕ್ಷನ್, ಸಾಮಾಜಿಕ ಜವಾಬ್ದಾರಿ ಸಮಿತಿ, ವಾಯ್ಸಸ್ ಆಫ್ ಹೆಲ್ಪ್ ಸಂಸ್ಥೆ ಮತ್ತು ಪೆರುವಿನ ಉತ್ತರ ಕರಾವಳಿ ಪ್ರದೇಶದಲ್ಲಿ ಮಾನವ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ವಿವಿಧ ಸ್ಥಳೀಯ ಧರ್ಮಕೇಂದ್ರಗಳ ನಡುವಿನ ಒಪ್ಪಂದಗಳ ಮೂಲಕ ಖಚಿತಪಡಿಸಲಾಗಿದೆ.
“ಪಾಪಲೇಟಾ”: ವಿಶ್ವಗುರುವಿನ ಆಕಾರದಲ್ಲಿರುವ ಐಸ್ ಕ್ರೀಮ್
ಒಂದು ದತ್ತಿ ಯೋಜನೆಯು, ವಿಶ್ವಗುರುವಿನ ಆಕಾರದ ಅಚ್ಚರಿಯ ಬಿಳಿ ಚಾಕೊಲೇಟ್ ಪಾಪ್ಸಿಕಲ್ ತಯಾರಿಸುವುದರ ಮೂಲಕ ವಿಶೇಷ ಗಮನ ಸೆಳೆದಿದೆ, ಇದನ್ನು ಪಾಪಲೇಟಾ ಎಂದು ಹೆಸರಿಸಲಾಗಿದೆ, ಇದು "ಪಾಪಾ" (ವಿಶ್ವಗುರು) ಮತ್ತು ಪ್ಯಾಲೆಟಾ (ಸ್ಪ್ಯಾನಿಷ್‌ನಲ್ಲಿ ಪಾಪ್ಸಿಕಲ್).
ಇದರ ಮಾರಾಟವು ಜೋಸ್ ಲಿಯೊನಾರ್ಡೊ ಒರ್ಟಿಜ್ ಜಿಲ್ಲೆಯಲ್ಲಿರುವ ಸಾಂತಾ ಅನಾ ಪ್ರದೇಶದ ಮಕ್ಕಳ ಶಿಕ್ಷಣವನ್ನು ಬೆಂಬಲಿಸುತ್ತದೆ. ಆದಾಯದ ಇಪ್ಪತ್ತು ಪ್ರತಿಶತವನ್ನು ಸ್ಯಾನ್ ಜುವಾನ್ ಅಪೋಸ್ಟೋಲ್ ಧರ್ಮಕೇಂದ್ರದಲ್ಲಿ ಹೊಸ ಸ್ಥಳವನ್ನು ತೆರೆಯಲು ಬಳಸಲಾಗುತ್ತದೆ. ಈ ಸ್ಥಳವು ಓದುವ ಸಾಮಗ್ರಿಗಳು, ಶೈಕ್ಷಣಿಕ ಬೆಂಬಲ ಅವಧಿಗಳು, ಮನರಂಜನಾ ಚಟುವಟಿಕೆಗಳನ್ನು ನೀಡುತ್ತಿದೆ ಮತ್ತು ಮಕ್ಕಳಲ್ಲಿ ಓದುವಿಕೆಯನ್ನು ಉತ್ತೇಜಿಸುತ್ತಿದೆ.
ಆಹಾರ ಮತ್ತು ಆಮ್ಲಜನಕ, ಅಗತ್ಯಗಳನ್ನು ಪೂರೈಸುವುದು
ಗುಣಮಟ್ಟದ ಆಹಾರವನ್ನು ಪಡೆಯಲು ಕಷ್ಟಪಡುವ 800 ಜನರಿಗೆ ಸೇವೆ ಸಲ್ಲಿಸುವ ಐದು ಧರ್ಮಕೇಂದ್ರಗಳು ಸೂಪ್ ಕಿಚನ್‌ಗಳನ್ನು ಬೆಂಬಲಿಸುವ ಗುರಿಯ ಮತ್ತೊಂದು ಯೋಜನೆ ಹೊಂದಿದೆ. ಆಹಾರ, ಔಷಧ, ಬಟ್ಟೆ ಮತ್ತು ಮೂಲಭೂತ ಅವಶ್ಯಕತೆಗಳನ್ನು ಲ್ಯಾಂಬಾಯೆಕ್ ಚೇಂಬರ್ ಆಫ್ ಕಾಮರ್ಸ್‌ನೊಂದಿಗೆ ಸಂಯೋಜಿತವಾಗಿರುವ 25 ಕಂಪನಿಗಳು ಒದಗಿಸುತ್ತಿವೆ ಮತ್ತು ಮರಿಯಾ ರೇನಾ ಡಿ ಲಾಸ್ ಸ್ಯಾಸೆರ್ಡೋಟ್ಸ್, ಡಿವಿನಾ ಮಿಸೆರಿಕಾರ್ಡಿಯಾ, ಸ್ಯಾನ್ ಮಾರ್ಟಿನ್ ಡಿ ಟೂರ್ಸ್, ಸಾಂಟಾ ಮರಿಯಾ ಡೆಲ್ ಕ್ಯಾಮಿನೊ ಮತ್ತು ಸಮುದಾಯ ಕೇಂದ್ರವಾದ ಉಸ್ಟೆಡೆಸ್ ಡೆನ್ಲೆಸ್ ಡಿ ಕಾಮರ್ ("ನೀವು ಅವರಿಗೆ ತಿನ್ನಲು ಏನಾದರೂ ನೀಡಿ") ಧರ್ಮಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ.
ಮೂರನೆಯ ಉಪಕ್ರಮವು ಮೊಚುಮಿ ಜಿಲ್ಲೆಯಲ್ಲಿ ಆಮ್ಲಜನಕ ಚಿಕಿತ್ಸಾ ಪ್ರತಿಷ್ಠಾನವನ್ನು ಪುನಃ ಸಕ್ರಿಯಗೊಳಿಸುವುದನ್ನು ಒಳಗೊಂಡಿರುತ್ತದೆ. ಈ ಸೌಲಭ್ಯವನ್ನು ಮೂಲತಃ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಧರ್ಮಾಧ್ಯಕ್ಷರಾದ ಪ್ರೆವೋಸ್ಟ್ರವರು ಸ್ಥಾಪಿಸಿದರು, ಇದನ್ನು ನಿಧಿಸಂಗ್ರಹ ಅಭಿಯಾನದ ಮೂಲಕ ನಿರ್ವಹಿಸಲಾಗುತ್ತದೆ. ಆಮ್ಲಜನಕ ಚಿಕಿತ್ಸೆಯ ವಿಧಾನವನ್ನು ಅವಲಂಬಿಸಿರುವ ಪ್ರಾಂತ್ಯದ ಜನರಿಗೆ ಸೇವೆ ಸಲ್ಲಿಸಲು ಈ ಆಧುನಿಕ ಸೌಲಭ್ಯವನ್ನು ಕಾರ್ಯರೂಪಕ್ಕೆ ತರುವುದು ಗುರಿಯಾಗಿದೆ.
ಉದ್ಯಮಶೀಲತೆ ಮತ್ತು ಪರಿಸರ ಕಾಳಜಿ
ಈ ಹೊಸ ಒಪ್ಪಂದದ ಅಡಿಯಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು ಸಹ ಬೆಂಬಲವನ್ನು ಪಡೆಯುತ್ತವೆ. ಜರ್ಮನ್ ಅಭಿವೃದ್ಧಿ ಸಹಕಾರವು ನವೀನ ಉದ್ಯಮಶೀಲತಾ ಕಲ್ಪನೆಗಳನ್ನು ಹೊಂದಿರುವ ವ್ಯಕ್ತಿಗಳ ಕೌಶಲ್ಯಗಳನ್ನು ಹೆಚ್ಚಿಸುವ ಮತ್ತು ಪರಿಕರಗಳನ್ನು ಒದಗಿಸುವ ಕೇಂದ್ರವನ್ನು ಸ್ಥಾಪಿಸುತ್ತಿದೆ.
ಅಂತಿಮ ಯೋಜನೆಯು ಚಿಕ್ಲಾಯೊದ ನಗರ ಪರಿಸರವನ್ನು ಸುಂದರಗೊಳಿಸುವ ಮತ್ತು ರಕ್ಷಿಸುವತ್ತ ಗಮನಹರಿಸುತ್ತದೆ. ಈ ಉಪಕ್ರಮವು ನಗರದಲ್ಲಿ ಮರಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಘನತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ರೋಟರಿ ಕ್ಲಬ್ ಮತ್ತು ಸೆನೋರ್ ಡಿ ಸಿಪಾನ್ ವಿಶ್ವವಿದ್ಯಾಲಯವು ಈ ಪ್ರಯತ್ನವನ್ನು ಮುನ್ನಡೆಸಲಿದ್ದು, ಮರಗಳು ಮತ್ತು ತ್ಯಾಜ್ಯ ಸಂಗ್ರಹಣಾ ವಾಹನವನ್ನು ಖರೀದಿಸಲು ಹಣವನ್ನು ಸಂಗ್ರಹಿಸುವುದರ ಜೊತೆಗೆ ಪರಿಸರ ಶಿಕ್ಷಣ ಅಭಿಯಾನಗಳನ್ನು ಪ್ರಾರಂಭಿಸಲಿದೆ.
ಈ ಉಪಕ್ರಮಗಳು ಸಾಮಾಜಿಕ ಮತ್ತು ಪಾಲನಾ ಸೇವೆಯ ಆರೈಕೆಯ ಪ್ರಬಲ ಪರಂಪರೆಯನ್ನು ಎತ್ತಿ ತೋರಿಸುತ್ತವೆ, ಈಗ ವಿಶ್ವಗುರು ಹದಿನಾಲ್ಕನೇ ಲಿಯೋರವರ ಆಧ್ಯಾತ್ಮಿಕ ಪ್ರಭಾವದಿಂದ ಪುನರುಜ್ಜೀವನಗೊಂಡಿವೆ, ಉತ್ತರ ಪೆರುವಿನಲ್ಲಿ ಸಾವಿರಾರು ಜನರಿಗೆ ಹೊಸ ಭರವಸೆಯನ್ನು ತರುತ್ತಿವೆ.