MAP

People walk past destroyed buildings following Myanmar military airstrikes in Kyauktaw town People walk past destroyed buildings following Myanmar military airstrikes in Kyauktaw town  (AFP or licensors)

ನಾಗರಿಕರ ಸಂಕಷ್ಟದ ಬಗ್ಗೆ ಮ್ಯಾನ್ಮಾರ್ ಧರ್ಮಸಭೆಯ ಎಚ್ಚರಿಕೆ, ಬೆಂಬಲಕ್ಕಾಗಿ ವಿಶ್ವಗುರುಗಳಿಗೆ ಧನ್ಯವಾದ

ಮ್ಯಾನ್ಮಾರ್‌ನ ಕಥೋಲಿಕ ನಾಯಕರು ವಿಶ್ವಗುರು ಹದಿನಾಲ್ಕನೇ ಲಿಯೋರವರು ಶಾಂತಿಗಾಗಿ ನವೀಕರಿಸಿದ ಮನವಿಯನ್ನು ಸ್ವಾಗತಿಸಿದ್ದಾರೆ, ಏಕೆಂದರೆ ಹಿಂಸಾಚಾರ ಮತ್ತು ಸ್ಥಳಾಂತರವು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ, ವಿಶೇಷವಾಗಿ ಉತ್ತರ-ಮಧ್ಯ ಸಾಗೈಂಗ್ ಪ್ರದೇಶದಲ್ಲಿ ಸಮುದಾಯಗಳನ್ನು ಧ್ವಂಸಗೊಳಿಸುತ್ತಲೇ ಇದೆ.

ಲಿಕಾಸ್‌ ಸುದ್ಧಿ

ಮ್ಯಾನ್ಮಾರ್‌ನಾದ್ಯಂತ, ಹೋರಾಟ ನಡೆಯುತ್ತಿರುವ ಸ್ಥಳಗಳಿಂದ, ಜನರು ಸ್ಥಳಾಂತರಗೊಂಡಿದ್ದಾರೆ, ಸಂಘರ್ಷದಿಂದ ಪಾರಾಗಲು ಪಲಾಯನ ಮಾಡುವಾಗ ನಾಗರಿಕರು ಹೆಚ್ಚಿನ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ವ್ಯಾಟಿಕನ್‌ನ ಫೈಡ್ಸ್ ಸುದ್ಧಿ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ಮಂಡಲೆಯ ಮಹಾಧರ್ಮಕ್ಷೇತ್ರದ ಧರ್ಮಪ್ರಾಂತ್ಯದ ಪ್ರಧಾನ ಶ್ರೇಷ್ಠಗುರು ಪೀಟರ್ ಸೀನ್ ಹ್ಲೈಂಗ್ ಊರವರು ಹೇಳಿದರು.

ನಮ್ಮ ಮಂಡಲೆ ಮಹಾಧರ್ಮಕ್ಷೇತ್ರದಲ್ಲಿ, ನಿರ್ದಿಷ್ಟವಾಗಿ, ಸಾಗಿಂಗ್ ಪ್ರದೇಶದಲ್ಲಿ ಘರ್ಷಣೆಗಳು, ಬಾಂಬ್ ದಾಳಿಗಳು ಮತ್ತು ನಾಗರಿಕರ ಮೇಲೆ ಅಪಾರ ಪರಿಣಾಮ ಬೀರುತ್ತದೆ ಎಂದು ಧರ್ಮಗುರುಗಳು ಹೇಳಿದರು.

ಜೂನ್ 15, ಭಾನುವಾರದಂದು ತಮ್ಮ ತ್ರಿಕಾಲ ಪ್ರಾರ್ಥನೆಯ ಸಮಯದಲ್ಲಿ, ವಿಶ್ವಗುರು ಹದಿನಾಲ್ಕನೇ ಲಿಯೋರವರು ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನೆನಪಿಸಿಕೊಂಡರು, ಅವರ ಸಂದೇಶವು ಬಿಕ್ಕಟ್ಟಿನಿಂದ ಹೆಚ್ಚು ಹೆಚ್ಚು ಒಂಟಿಯಾಗಿರುವ ಸಮುದಾಯಗಳಿಗೆ ಪ್ರೋತ್ಸಾಹವನ್ನು ನೀಡಿದೆ ಎಂದು ಹೇಳುವ ಧರ್ಮಸಭೆಯ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆದರು. ನಾಗರಿಕರ ಸಂಕಷ್ಟಗಳ ಬಗ್ಗೆ ಅವರ ಗಮನ ಮತ್ತು ಮಾತುಗಳಿಗೆ ನಾವು ಅವರಿಗೆ ಧನ್ಯವಾದ ಹೇಳುತ್ತೇವೆ ಎಂದು ಧರ್ಮಗುರು ಪೀಟರ್ ರವರು ಹೇಳಿದರು.

ಸಾಗಿಂಗ್‌ನಲ್ಲಿನ ವಿನಾಶದ ದೃಶ್ಯಗಳ ಬಗ್ಗೆ ಅವರು ವಿವರಿಸಿದರು, ಅಲ್ಲಿ ಹಳ್ಳಿಗಳು "ನಿರಂತರ ಬಾಂಬ್ ದಾಳಿಯಿಂದಾಗಿ ಕೈಬಿಡಲ್ಪಟ್ಟಿವೆ. ಆಡಳಿತ ಮತ್ತು ಪ್ರತಿರೋಧ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಸಮುದಾಯಗಳು ವಿಭಜನೆಯಾಗಿರುವುದರಿಂದ, ಅಲ್ಲಿನ ಕಥೊಲಿಕರು ಘರ್ಷಣೆಯಲ್ಲಿ ಸಿಲುಕಿಕೊಂಡಿದ್ದಾರೆ. ಜನರು ಅಸಹಾಯಕರಾಗಿದ್ದಾರೆ ಮತ್ತು ರಕ್ಷಣೆಯಿಲ್ಲದವರಾಗಿದ್ದಾರೆ ಎಂದು ಹೇಳಿದರು.

ಯಾಂಗೋನ್‌ನಲ್ಲಿ, ಕಥೊಲಿಕ ಧರ್ಮದ ಶ್ರೀ ಸಾಮಾನ್ಯರು ಮತ್ತು ವಿಶ್ವವಿದ್ಯಾಲಯದ ಉಪನ್ಯಾಸಕ ಜೋಸೆಫ್ ಕುಂಗ್ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಬಿಕ್ಕಟ್ಟಿನ ಬಗ್ಗೆ ವ್ಯಾಟಿಕನ್ ಗಮನವನ್ನು ಸ್ವಾಗತಿಸಿದರು. ವಿಶ್ವಗುರು ಗಮನಿಸಿದಂತೆ, ದೇಶಾದ್ಯಂತ ನಾಗರಿಕ ಮೂಲಸೌಕರ್ಯಗಳ ಮೇಲೆ ಸೇನೆ ದಾಳಿ ಮಾಡಿ ಎಲ್ಲವನ್ನೂ ನಾಶಪಡಿಸುತ್ತಿದೆ ಎಂದು ಕುಂಗ್ ಫೈಡ್ಸ್‌ಗೆ ತಿಳಿಸಿದರು.

ವಿಶ್ವಗುರು ಹದಿನಾಲ್ಕನೇ ಲಿಯೋರವರ ಸಾರ್ವಜನಿಕ ಮನವಿಗಳು ಅನೇಕರಿಗೆ ಭರವಸೆಯ ಮೂಲವಾಗಿದೆ ಎಂದು ಅವರು ಗಮನಿಸಿದರು, ನಾಲ್ಕು ವರ್ಷಗಳ ನಾಗರಿಕ ಸಂಘರ್ಷದ ನಂತರ ಕೈಬಿಡಲ್ಪಟ್ಟ ಸಮುದಾಯಗಳಿಗೆ ಒಗ್ಗಟ್ಟಿನ ಭಾವನೆಯ ಭರವಸೆಯನ್ನು ನೀಡುತ್ತಿದೆ. ಬಳಲಿಕೆ ಮತ್ತು ಸಂಕಟದ ಹೊರತಾಗಿಯೂ, ವಿಶ್ವಾಸಿಗಳು ತಮ್ಮ ಭರವಸೆಯನ್ನು ಕಳೆದುಕೊಳ್ಳದೆ ದೃಢ-ವಿಶ್ವಾಸದಿಂದ ಪ್ರಾರ್ಥಿಸಬೇಕು, ತಮ್ಮ ಕಷ್ಟಗಳನ್ನು ದೇವರು ಮತ್ತು ಪೂಜ್ಯ ಕನ್ಯಾ ಮಾತೆಮೇರಿಗೆ ವಹಿಸಬೇಕು ಎಂದು ಅವರು ಒತ್ತಿ ಹೇಳಿದರು.
 

17 ಜೂನ್ 2025, 19:23