ಮೆಕ್ಸಿಕೋದಲ್ಲಿನ ಧರ್ಮಸಭೆಯು 'ಕಣ್ಮರೆಯಾದವರ' ಕುಟುಂಬಗಳಿಗೆ ಬೆಂಬಲ ನೀಡುತ್ತಿದೆ
ಫೆಲಿಪೆ ಹೆರೆರಾ-ಎಸ್ಪಾಲಿಯಟ್
ಕಾಣೆಯಾದ ತಮ್ಮ ಪ್ರೀತಿಪಾತ್ರರನ್ನು ಹುಡುಕಲು ಇನ್ನು ಮುಂದೆ ರಾಜ್ಯ ಅಥವಾ ಪೊಲೀಸರನ್ನು ಅವಲಂಬಿಸದೆ, ಶೋಧಕರು ಎಂದು ಕರೆಯಲ್ಪಡುವ 200ಕ್ಕೂ ಹೆಚ್ಚು ತಾಯಂದಿರು ಮತ್ತು ತಂದೆಯರ ಗುಂಪುಗಳು ಈಗ ಮೆಕ್ಸಿಕೋದಾದ್ಯಂತ ಖಾಲಿ ಜಾಗಗಳಲ್ಲಿ ತಮ್ಮ ಕೈಗಳಿಂದ ಸಂಶೋಧನೆ ಮಾಡುತ್ತಿದ್ದಾರೆ. ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವ ವ್ಯಕ್ತಿಗಳು, ರಹಸ್ಯ ಸಮಾಧಿಗಳ ಸ್ಥಳಗಳ ಬಗ್ಗೆ ಅನಾಮಧೇಯ ಸುಳಿವುಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ಮೆಕ್ಸಿಕೋದ ಆಂತರಿಕ ಸಚಿವಾಲಯದ ಪ್ರಕಾರ, 2006 ರಿಂದ 125,000ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ.
ಕಾಣೆಯಾದವರಲ್ಲಿ ಹೆಚ್ಚಿನವರು ಮಾದಕವಸ್ತು, ದಂಧೆ ಅಥವಾ ಮಾದಕವಸ್ತು-ರಾಜಕೀಯ ಪ್ರತೀಕಾರಕ್ಕೆ ಬಲಿಯಾಗಿದ್ದಾರೆಂದು ತಿಳಿದಿದ್ದರೂ, ಕಥೋಲಿಕ ಧರ್ಮಸಭೆಯು, ಇತರ ಸಂಸ್ಥೆಗಳೊಂದಿಗೆ, ಕಣ್ಮರೆಯಾದ ಈ ಕುಟುಂಬಗಳ ನೋವು ಮತ್ತು ಹೋರಾಟದಲ್ಲಿ ಜೊತೆಗೂಡಿದೆ. ಇನ್ನು ಕೆಲವರು ಅಕ್ರಮ ಮಾನವ ಅಂಗಾಂಗ ವ್ಯಾಪಾರದಲ್ಲಿ ಸಿಕ್ಕಿಬಿದ್ದಿರಬಹುದು, ಇದು ಕಾಣೆಯಾದವರಲ್ಲಿ ಮಕ್ಕಳು ಮತ್ತು ಶಿಶುಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಯುವಜನರನ್ನು ವಿವರಿಸುತ್ತದೆ.
ಧರ್ಮಾಧ್ಯಕ್ಷರುಗಳು ಆಕ್ರೋಶ ಮತ್ತು ದುಃಖವನ್ನು ವ್ಯಕ್ತಪಡಿಸುತ್ತಾರೆ
ಮಾರ್ಚ್ ತಿಂಗಳಿನಲ್ಲಿ, ಜಲಿಸ್ಕೊ ರಾಜ್ಯದಲ್ಲಿ ಕ್ರಿಮಿನಲ್ ಗುಂಪುಗಳು, ತರಬೇತಿ ಮೈದಾನ ಮತ್ತು ನಿರ್ನಾಮ ಶಿಬಿರವನ್ನು ಬಳಸುತ್ತಿದ್ದ ಎರಡೂ ಸ್ಥಳದ ಆವಿಷ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಆಘಾತವನ್ನುಂಟುಮಾಡಿತು. ದೇಶಾದ್ಯಂತದ ಧರ್ಮಕೇಂದ್ರಗಳಲ್ಲಿ ಸ್ಥಾಪಿಸಲಾದ "ಶಾಂತಿ ಪೆಟ್ಟಿಗೆಗಳು" ಎಂದು ಕರೆಯಲ್ಪಡುವ ಅಂಚೆ ಪೆಟ್ಟಿಕೆಗಳ ಮೂಲಕ ಅಲ್ಲಿ ಜನರು ಅನಾಮಧೇಯವಾಗಿ ತಮ್ಮ ಮಾಹಿತಿಗಳನ್ನು ಸಲ್ಲಿಸಬಹುದು..
ಮೆಕ್ಸಿಕೋದ ಧರ್ಮಾಧ್ಯಕ್ಷರುಗಳ ಸಮ್ಮೇಳನವು ಈ ಅಪರಾಧಗಳನ್ನು ಮಾನವೀಯತೆಯ ವಿರುದ್ಧದ ಅಪರಾಧಗಳೆಂದು ಖಂಡಿಸಿ, ಮಾದಕವಸ್ತು ಕಳ್ಳಸಾಗಣೆ ಮತ್ತು ರಾಜಕೀಯ ವಲಯಗಳ ನಡುವಿನ ಸಂಬಂಧವನ್ನು ಮುರಿಯುವಂತೆ ಅಧಿಕಾರಿಗಳಿಗೆ ಕರೆ ನೀಡಿತು. 2024ರಲ್ಲಿ ಮೆಕ್ಸಿಕೋದಲ್ಲಿ ಶಾಂತಿ ಸಂವಾದಗಳನ್ನು ಪ್ರಾರಂಭಿಸಲು ಸಹಾಯ ಮಾಡಿದ ಧರ್ಮಾಧ್ಯಕ್ಷರಾದ ಅಸೆರೊರವರು, ಮಾಸಿಕವಾಗಿ ತಮ್ಮ ಕುಟುಂಬದ ಕಣ್ಮರೆಯಾದ ಸದಸ್ಯರನ್ನು ಹುಡುಕುವ ತಾಯಂದಿರ ಗುಂಪುಗಳೊಂದಿಗೆ ಭೇಟಿಯಾಗುತ್ತಾರೆ, ಸಹಾನುಭೂತಿ, ಪರಸ್ಪರ ಬೆಂಬಲ ಮತ್ತು ಹೊಸ ಮಾಹಿತಿಯ ಹಂಚಿಕೆಗಾಗಿ ಸೂಕ್ತ ವಾತಾವರಣವನ್ನು ಸೃಷ್ಟಿಸಲಾಗಿದೆ.
ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ಕೊ ಕ್ಸೇವಿಯರ್ ಅಸೆರೊರವರೊಂದಿಗಿನ ಪೂರ್ಣ ಸಂದರ್ಶನವನ್ನು ಓದಿ:
ಪ್ರಶ್ನೆ: "ಶಾಂತಿ ಪೆಟ್ಟಿಗೆಗಳು" ಹೇಗೆ ಕೆಲಸ ಮಾಡುತ್ತವೆ?
ಅವು ಧರ್ಮಕೇಂದ್ರಗಳಲ್ಲಿ ಇರಿಸಲಾದ ಅಂಚೆಪೆಟ್ಟಿಗೆಗಳಾಗಿವೆ, ಅಲ್ಲಿ ಜನರು ಅನಾಮಧೇಯವಾಗಿ ಬರೆಯಬಹುದು. ಈ ಪ್ರದೇಶಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಕಂಡರೆ, ಅವರು ವಿಳಾಸವನ್ನು ಸಲ್ಲಿಸಬಹುದು. ಕಾರ್ಯಕರ್ತರು, ಜನರು ನೀಡಿದ ಮಾಹಿತಿಗಳನ್ನು ಮಾಸಿಕ ಸಭೆಗಳಲ್ಲಿ ಎಲ್ಲಾ ಸಲ್ಲಿಕೆಗಳನ್ನು ಓದಿ. ಈ ಸಲಹೆಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ, ನಾವು ಸಮಾಧಿ ಸ್ಥಳಗಳನ್ನು ಪತ್ತೆಹಚ್ಚಿದ್ದೇವೆ ಮತ್ತು ಅಪಹರಿಸಲ್ಪಟ್ಟ ವ್ಯಕ್ತಿಗಳನ್ನೂ ಸಹ ರಕ್ಷಿಸಿದ್ದೇವೆ ಎಂದು ಹೇಳಿದ್ದಾರೆ.
ಪ್ರಶ್ನೆ:ನೀವು ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತೀರಾ ಅಥವಾ ಕುಟುಂಬಗಳನ್ನು ಪೋಷಿಸುವತ್ತ ಮಾತ್ರ ಗಮನಹರಿಸುತ್ತೀರಾ?
ಸಮಾಜದ ಎಲ್ಲಾ ವಲಯಗಳಿಗೂ ನಮ್ಮ ಮನವಿ. ಮೆಕ್ಸಿಕೋದ ಪರಿಸ್ಥಿತಿಯನ್ನು ಎದುರಿಸುವಾಗ, ಸರ್ಕಾರ ಸೇರಿದಂತೆ ಸೇತುವೆಗಳನ್ನು ನಿರ್ಮಿಸುವುದು ನಮ್ಮ ಧ್ಯೇಯವಾಗಿದೆ. ನಾವು ಧ್ರುವೀಕರಣವನ್ನು ಬಯಸುವುದಿಲ್ಲ, ನಿರಂತರ ಸಂವಾದವನ್ನು ಬಯಸುತ್ತೇವೆ. ತಮ್ಮ ಪ್ರೀತಿಪಾತ್ರರ ಅವಶೇಷಗಳಿಲ್ಲದೆ ದುಃಖಿಸಲು ಸಾಧ್ಯವಾಗದೆ ಹುಡುಕುತ್ತಿರುವ ತಾಯಂದಿರು, ತಂದೆ ಮತ್ತು ಒಡಹುಟ್ಟಿದವರ ಮಾತುಗಳನ್ನು ಅಧಿಕಾರಿಗಳು ಕೇಳಬೇಕೆಂದು ನಾವು ಕೇಳುತ್ತೇವೆ. ನಮ್ಮ ಬದ್ಧತೆಯು ಸುವಾರ್ತೆಯಲ್ಲಿ ಬೇರೂರಿದೆ; ಯೇಸು ನಮ್ಮ ಮೊರೆಗಳನ್ನು ಆಲಿಸುವಂತೆ, ರಾಜಕೀಯ ಅಧಿಕಾರಿಗಳು ಕೂಡ, ಈ ಕುಟುಂಬಗಳ ಮೊರೆಯನ್ನು ಕೇಳಬೇಕು.