ಹಿಂಸಾಚಾರದಿಂದಾಗಿ ಕೆನ್ಯಾ ಪ್ರದೇಶದಲ್ಲಿ ಬೆನೆಡಿಕ್ಟೈನ್ ಸಿಸ್ಟರ್ಸ್ ಗಳ ಸೌಲಭ್ಯಗಳನ್ನು ಮುಚ್ಚಲಾಗಿದೆ
ಕೀಲ್ಸ್ ಗುಸ್ಸಿ
ಕೆನ್ಯಾದ ಕೆರಿಯೊ ಕಣಿವೆಯಲ್ಲಿ ನಡೆದ ಅಗಾಧ ಪ್ರಮಾಣದ ಹಿಂಸಾಚಾರದ ನಂತರ, ಧರ್ಮಪ್ರಚಾರಕರಾದ ಬೆನೆಡಿಕ್ಟೈನ್ ಸಿಸ್ಟರ್ಸ್ ಆಫ್ ದಿ ಸೇಕ್ರೆಡ್ ಹಾರ್ಟ್ ಪ್ರಿಯರಿಯ ನೆರವಿನ ಬಾಗಿಲುಗಳು ಮುಚ್ಚಲ್ಪಟ್ಟಿವೆ.
ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಧರ್ಮಪ್ರಚಾರಕರಾದ ಬೆನೆಡಿಕ್ಟೈನ್ ಸಿಸ್ಟರ್‌ಗಳ ಶ್ರೇಷ್ಠಾಧಿಕಾರಿ ಸಿಸ್ಟರ್ ರೋಸಾ ಪ್ಯಾಸ್ಕಲ್ ಒಎಸ್‌ಬಿರವರು ಪ್ರಕಟಣೆಗೆ ಸಹಿ ಹಾಕಿದ್ದು, "ಧರ್ಮಗುರು. ಅಲಾಯ್ ಬೆಟ್ ರವರ ಹತ್ಯೆ ಮತ್ತು ಈ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ನಂತರ" ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಅಶಾಂತಿಯು ಧರ್ಮಪ್ರಚಾರಕರ ಸೇವಾಕಾರ್ಯಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಮತ್ತು "ನಮ್ಮ ಸಹೋದರಿಯರಿಗೆ ಮಾನಸಿಕ, ಭಾವನಾತ್ಮಕ ಮತ್ತು ಮಾನಸಿಕ ಆಘಾತವನ್ನು" ಉಂಟುಮಾಡಿದೆ ಎಂದು ಶ್ರೇಷ್ಠಾಧಿಕಾರಿಯು ವಿವರಿಸಿದರು.
ಪರಿಣಾಮವಾಗಿ, ಬೆನೆಡಿಕ್ಟೈನ್ ಧರ್ಮಪ್ರಚಾರಕ ಸಿಸ್ಟರ್ಸ್ "ಪ್ರದೇಶದಿಂದ ಪಲಾಯನ ಮಾಡುತ್ತಿರುವ ಸಿಬ್ಬಂದಿ ಕೊರತೆಯಿಂದಾಗಿ ಅಗತ್ಯ ಸೇವೆಗಳನ್ನು ನಡೆಸಲು" ಸಾಧ್ಯವಾಗುತ್ತಿಲ್ಲ.
ಭವಿಷ್ಯದ ದೃಷ್ಟಿಯಿಂದ
ಸಿಸ್ಟರ್ ಪ್ಯಾಸ್ಕಲ್ ರವರ ಈ ನಿರ್ಧಾರವು "ಈ ಪ್ರದೇಶವು ಸೇವೆಗೆ ಸುರಕ್ಷಿತವಾಗುವವರೆಗೆ ಧರ್ಮಪ್ರಚಾರ ನಿಲುವುಗಳನ್ನು ಈ ಸ್ಥಳಗಳಲ್ಲಿ ಅನಿರ್ದಿಷ್ಟವಾಗಿ ಮುಚ್ಚುಲಾಗುವುದು" ಎಂದು ಹಂಚಿಕೊಂಡರು. "ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸಹೋದರಿಯರು, ನಮ್ಮ ಉದ್ಯೋಗಿಗಳು ಮತ್ತು ವಿವಿಧ ಸೇವೆಗಳಿಗಾಗಿ ನಮ್ಮ ಧರ್ಮಪ್ರಚಾರಕ ಸ್ಥಳಗಳಿಗೆ ಭೇಟಿ ನೀಡುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಧರ್ಮಪ್ರಚಾರಕ ಸ್ಥಳಗಳಲ್ಲಿ ಸೇವೆಯನ್ನು ನಿಲ್ಲಿಸುವ ನಿರ್ಧಾರವನ್ನು ಉದ್ದೇಶಿಸಲಾಗಿದೆ" ಎಂದು ಅವರು ಹೇಳಿದರು.
ಇದಲ್ಲದೆ, ಈ ನಿರ್ಧಾರವು "ನಾಗರಿಕರನ್ನು ನಿಶ್ಯಸ್ತ್ರಗೊಳಿಸುವುದು ಸೇರಿದಂತೆ ಪ್ರದೇಶದಲ್ಲಿ ಶಾಂತಿಗಾಗಿ ಶಾಶ್ವತ ಪರಿಹಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸುತ್ತದೆ" ಎಂದು ಸಹೋದರಿಯರು ಆಶಿಸುತ್ತಾರೆ. ಈ ನಿರ್ಧಾರವು ಚೆಸೊಂಗೋಚ್ ಧರ್ಮಪ್ರಚಾರಕ ಸೇವೆಯ ಆಸ್ಪತ್ರೆಯನ್ನು ಮುಚ್ಚುವುದನ್ನೂ ಒಳಗೊಂಡಿದೆ.
ಅಶಾಂತಿ
ಕೇವಲ ಕೆಲವೇ ದಿನಗಳ ಅಂತರದಲ್ಲಿ ಇಬ್ಬರು ಯಾಜಕರು ಸಾವನ್ನಪ್ಪಿದ ನಂತರ ಈ ಸೇವೆಯ ಸೌಲಭ್ಯಗಳನ್ನು ಮುಚ್ಚಲಾಗಿದೆ. ಇಗ್ವಾಮಿಟಿಯ ಸಂತ ಲೂಯಿಸ್ ರವರ ದೇವಾಲಯದ ಧರ್ಮಕೇಂದ್ರದ ಧರ್ಮಗುರು ಜಾನ್ ಎನ್‌ಡೆಗ್ವಾ ಮೈನಾರವರು ಮೇ 15 ರಂದು ಹೆದ್ದಾರಿಯ ಬದಿಯಲ್ಲಿ ವಿಷಪ್ರಾಶನದಿಂದ ನರಳುತ್ತಿರುವುದನ್ನು ಕಂಡು ಆಸ್ಪತ್ರೆಗೆ ದಾಖಲು ಮಾಡಿದರು, ನಂತರ ಗಂಭೀರ ಸ್ಥಿತಿಯಲ್ಲಿ ಕಂಡುಬಂದು, ಚಿಕತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾದರು.
ಏಳು ದಿನಗಳ ನಂತರ, ಮೇ 22 ರಂದು, ಕೆರಿಯೊ ಕಣಿವೆಯಲ್ಲಿ ಡಕಾಯಿತರ ದಾಳಿಯಿಂದ ಧರ್ಮಗುರು ಅಲಾಯ್ಸ್ ಚೆರುಯೊಟ್ ಬೆಟ್ಟ್ ರವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
"ಭವಿಷ್ಯದಲ್ಲಿ ನಮ್ಮ ಯಾಜಕರ ಮತ್ತು ಎಲ್ಲಾ ಕೆನ್ಯಾದವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ನಿಜವಾದ ಸಂದರ್ಭಗಳು ಮತ್ತು ಉದ್ದೇಶಗಳನ್ನು ಬಹಿರಂಗಪಡಿಸಲು" ಕಿಸುಮುವಿನ ಮಹಾಧರ್ಮಾಧ್ಯಕ್ಷರು ಮತ್ತು ಕೆನ್ಯಾದ ಕಥೊಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ (ಕೆಸಿಸಿಬಿ) ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷರಾದ ಮೌರಿಸ್ ಮುಹತಿಯಾ ಮಕುಂಬಾರವರು, ಇಲ್ಲಿ ಸಂಭವಿಸುತ್ತಿರುವ ಈ ಸಾವುಗಳ ತನಿಖೆಗೆ ಕರೆ ನೀಡಿದರು.