ಇರಾನ್ ಮತ್ತು ಇಸ್ರಯೇಲ್ ನಡುವಿನ ಉದ್ವಿಗ್ನತೆಯ ಮಧ್ಯೆ ಟೆಹ್ರಾನ್ ಕಾರ್ಡಿನಲ್ ಸಂವಾದಕ್ಕೆ ಒತ್ತಾಯಿಸಿದ್ದಾರೆ
ವ್ಯಾಟಿಕನ್ ಸುದ್ಧಿ
ಏಷ್ಯಾ ಸುದ್ಧಿ ಜೊತೆಗೆ ಮಾತನಾಡಿದ ಕಾರ್ಡಿನಲ್ ಡೊಮಿನಿಕ್ ಜೋಸೆಫ್ ಮ್ಯಾಥ್ಯೂರವರು, ಇತ್ತೀಚೆಗೆ ಇರಾನನ್ನು ಗುರಿಯಾಗಿಸಿಕೊಂಡ ದಾಳಿ ಮಾಡುತ್ತಿರುವ ಇಸ್ರಯೇಲ್, ಟೆಹ್ರಾನ್‌ನಿಂದ ಪ್ರತೀಕಾರದ ಡ್ರೋನ್ ದಾಳಿಗೆ ಕಾರಣವಾದ ಹಿಂಸಾಚಾರದ ಉಲ್ಬಣದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಈ ಎಲ್ಲಾ ಹಿಂಸಾಚಾರವನ್ನು ಮತ್ತು ಸಂಘರ್ಷವನ್ನು ಮುಕ್ತಾಯ ಮಾಡಲು, ಮಾತುಕತೆಯ ಮೇಜಿನ ಸುತ್ತ ಸಂವಾದಕ್ಕೆ ಬದ್ಧರಾಗುವ ಬದಲು ದಾಳಿಗಳನ್ನು ತಡೆಗಟ್ಟುವ ಮೂಲಕ ಶಾಂತಿಯ ಮಾರ್ಗವನ್ನು ಹುಡುಕಲಾಗುತ್ತಿದೆ ಎಂದು ನಾವು ಗಮನಿಸುತ್ತಿರುವುದು ವಿಷಾದಕರವಾಗಿದೆ" ಎಂದು ಲತೀನ್ ಟೆಹ್ರಾನ್-ಇಸ್ಪಹಾನ್‌ನ ಮಹಾಧರ್ಮಾಧ್ಯಕ್ಷರು ಹೇಳಿದರು.
ಪರಮಾಣು ತಾಣಗಳು ಮತ್ತು ಪ್ರಮುಖ ಇರಾನಿನ ವೈಜ್ಞಾನಿಕ ಹಾಗೂ ಮಿಲಿಟರಿ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರಯೇಲ್ ಮಿಲಿಟರಿ ಕಾರ್ಯಾಚರಣೆಯಾದ ʻರೈಸಿಂಗ್ ಲಯನ್‌ನ ಯೋಜನೆಯʼ ಹಿನ್ನೆಲೆಯಲ್ಲಿ ಕಾರ್ಡಿನಲ್ ಸಂವಾದಕ್ಕಾಗಿ ಮನವಿ ಮಾಡಿದ್ದಾರೆ. ಪ್ರಾದೇಶಿಕ ಉದ್ವಿಗ್ನತೆಗಳು ವಿಶಾಲ ಸಂಘರ್ಷಕ್ಕೆ ತಿರುಗುವ ಬೆದರಿಕೆಯನ್ನು ಒಡ್ಡುತ್ತಿದ್ದಂತೆ, ಥೆರಾನ್ ರವರ ಪ್ರತಿಕ್ರಿಯೆಯು ಇಸ್ರಯೇಲ್ ಪ್ರದೇಶದ ಕಡೆಗೆ ನೂರಕ್ಕೂ ಹೆಚ್ಚು ಡ್ರೋನ್‌ಗಳನ್ನು ಉಡಾಯಿಸುವುದನ್ನು ಒಳಗೊಂಡಿತ್ತು.
"ಒಮ್ಮತದ ಆಧಾರದ ಮೇಲೆ ಸಂವಾದದ ಮೂಲಕ ಶಾಂತಿ ನೆಲೆಸಲಿ ಎಂದು ನಾವು ಪ್ರಾರ್ಥಿಸುತ್ತೇವೆ" ಎಂದು ಕಾರ್ಡಿನಲ್ ಮ್ಯಾಥ್ಯೂರವರು ತಮ್ಮ ಮಾತುಗಳನ್ನು ಮುಂದುವರಿಸಿದರು. ಪವಿತ್ರಾತ್ಮರು ಈ ಪ್ರಕ್ರಿಯೆಯನ್ನು ಮಾರ್ಗದರ್ಶಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ.
ಹೆಚ್ಚುತ್ತಿರುವ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಕಳವಳದ ಮಧ್ಯೆ, ಕಾರ್ಡಿನಲ್ ಮ್ಯಾಥ್ಯೂರವರು ಮಧ್ಯಪ್ರಾಚ್ಯವನ್ನು ಆವರಿಸಿರುವ ವ್ಯಾಪಕ ಸಂಘರ್ಷದ ಅಪಾಯದ ಬಗ್ಗೆ ಎಚ್ಚರಿಸಿದರು.
ಸಂಭಾವ್ಯ ಪರಮಾಣು ಒಪ್ಪಂದದ ಕುರಿತು ಒಮಾನ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ಸ್ಥಗಿತಗೊಳ್ಳುವ ಲಕ್ಷಣಗಳನ್ನು ತೋರಿಸುತ್ತಿರುವಾಗ ಅವರ ಈ ಹೇಳಿಕೆಗಳು ಬಂದಿವೆ, ಹಾಗೂ ಟೆಹ್ರಾನ್ ಆರನೇ ಸುತ್ತಿನ ಮಾತುಕತೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದೆ.
ವಿಶ್ವಗುರು ಫ್ರಾನ್ಸಿಸ್ ರವರಿಂದ ನೇಮಕಗೊಂಡ ಮತ್ತು ಕಾರ್ಡಿನಲ್ಸ್ ಒಕ್ಕೂಟದ ಬಡ್ತಿ ಪಡೆದ ಮಹಾಧರ್ಮಾಧ್ಯಕ್ಷರು, ಈ ಹಿಂದೆ ಇರಾನ್‌ನಲ್ಲಿ ಕ್ರೈಸ್ತ ಸಮುದಾಯದ ಗುರುತನ್ನು "ಶಿಲುಬೆ ಮತ್ತು ಭರವಸೆ" ಯಿಂದ ಗುರುತಿಸಲಾಗಿದೆ ಎಂದು ವಿವರಿಸಿದ್ದಾರೆ. ವಿಶ್ವಗುರು ಫ್ರಾನ್ಸಿಸ್ ರವರೊಂದಿಗಿನ "ಬಲವಾದ ಬಾಂಧವ್ಯ"ವನ್ನು ವಿವರಿಸಿದರು ಮತ್ತು ಅವರ ಉತ್ತರಾಧಿಕಾರಿ ವಿಶ್ವಗುರು ಹದಿನಾಲ್ಕನೇ ಲಿಯೋರವರಲ್ಲಿ ವಿಶ್ವಾಸವನ್ನು ನವೀಕರಿಸಿದರು. "ನಾವು ಭರವಸೆಯಿಂದ ತುಂಬಿದ್ದೇವೆ" ಎಂದು ಕಾರ್ಡಿನಲ್ ಪ್ರಸ್ತುತವಾಗಿ ನಡೆಯುತ್ತಿರುವ ಜೂಬಿಲಿ ವರ್ಷವನ್ನು ಉಲ್ಲೇಖಿಸಿ ಹೇಳಿದರು. ಇರಾನ್‌ನಲ್ಲಿ ಲತೀನ್ ಸಮುದಾಯವು ಚಿಕ್ಕದಾಗಿದ್ದರೂ, 84 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯಲ್ಲಿ ಸುಮಾರು 22,000 ಕಥೋಲಿಕರಿದ್ದರೂ, ಇದು ಚಾಲ್ಡಿಯದವರು, ಅರ್ಮೇನಿಯದವರೊಂದಿಗೆ ಮತ್ತು ಇತರ ಕ್ರೈಸ್ತ ಸಂಪ್ರದಾಯಗಳ ಜೊತೆಗೆ ವೈವಿಧ್ಯಮಯ ಸಕ್ರಿಯವಾಗಿದೆ.
ಸವಾಲುಗಳ ಹೊರತಾಗಿಯೂ, ಕಾರ್ಡಿನಲ್ ಮ್ಯಾಥ್ಯೂರವರು ಇರಾನ್‌ನಲ್ಲಿ ಧರ್ಮಸಭೆಯಲ್ಲಿ ನಡೆಯುತ್ತಿರುವ ಧ್ಯೇಯವನ್ನು ಮುಕ್ತತೆ ಮತ್ತು ಭ್ರಾತೃತ್ವದ ಸಂಕೇತವೆಂದು ಎತ್ತಿ ತೋರಿಸಿದರು. ಅಂತರ್ಧರ್ಮೀಯ ಸಂವಾದಕ್ಕೆ ವಿಶ್ವಗುರು ಫ್ರಾನ್ಸಿಸ್ ರವರ ಬದ್ಧತೆಯನ್ನು, ವಿಶೇಷವಾಗಿ ಕೋಮ್‌ನ ಶಿಯಾ ನಾಯಕರೊಂದಿಗಿನ ಅವರ ಭೇಟಿಯನ್ನು ನೆನಪಿಸಿಕೊಂಡ ಅವರು, "ರಾಷ್ಟ್ರದ ವಿವಿಧ ಹಂತಗಳಲ್ಲಿ" ಏಕೀಕರಣ ಮತ್ತು ಉಪಸ್ಥಿತಿಯಲ್ಲಿ ಧರ್ಮಸಭೆಯ ಪಾತ್ರವನ್ನು ವಿವರಿಸಿದರು.
"ಕಷ್ಟದ ಸಮಯದಲ್ಲಿ ಕೆಲವೊಮ್ಮೆ ಎಲ್ಲಾ ಬಾಗಿಲುಗಳು ಮುಚ್ಚಿದಂತೆ ಕಾಣಿಸಬಹುದು, ಆದರೆ ಇನ್ನೂ ಪ್ರಾರ್ಥನೆಯ ಸಂಪರ್ಕದಲ್ಲಿರುವ ಜನರು, ಆ ಬಾಗಿಲುಗಳ ಮುಂದೆ ತಮ್ಮ ದೃಢವಾದ ವಿಶ್ವಾಸದಿಂದ ಪ್ರಾರ್ಥಿಸುತ್ತಿರುತ್ತಾರೆ. ಅಂತಹ ಕ್ಷಣಗಳಲ್ಲಿ, "ಪ್ರಾರ್ಥನೆಯನ್ನು ಹೊರತುಪಡಿಸಿ ಸಮಸ್ಯೆಗಳನ್ನಾಗಲಿ ಮತ್ತು ಅನೇಕ ವಿಷಯಗಳನ್ನು ಪರಿಹರಿಸಲಾಗುವುದಿಲ್ಲ" ಎಂದು ಹೇಳಿದರು.
ಕೊನೆಯಲ್ಲಿ, ಕಾರ್ಡಿನಲ್ ಮ್ಯಾಥ್ಯೂರವರು, ಸಾಂಸ್ಕೃತಿಕ ಮತ್ತು ಧಾರ್ಮಿಕ ಗಡಿಗಳಲ್ಲಿ ಶಾಂತಿಯ ಸಂವಾದದ ಸೇತುವೆಗಳನ್ನು ನಿರ್ಮಿಸುವ ಕಾರ್ಯಗಳನ್ನು ಮುಂದುವರಿಸುತ್ತಿರುವ ಧರ್ಮಸಭೆಯ ಅಗತ್ಯವನ್ನು ಪುನರುಚ್ಚರಿಸಿದರು.