ಭರವಸೆಯಿಂದ ಸಾಯುವುದು
ಎಮಿಲ್ ಸ್ಯಾಂಡ್‌ಬರ್ಗ್
"ಭರವಸೆಯಿಂದ ಸಾಯುವುದು" ಎಂಬುದು ಸಂತ ಎಜಿಡಿಯೊರವರ ವಾರ್ಷಿಕ ಪ್ರಾರ್ಥನಾ ಜಾಗರಣೆಯ ಶೀರ್ಷಿಕೆಯಾಗಿದ್ದು, ಉತ್ತಮ ಜೀವನಕ್ಕಾಗಿ ಭರವಸೆಯ ಪ್ರಯಾಣದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಗೌರವಿಸಲು ಮತ್ತು ಸ್ಮರಿಸಲು ವಾರ್ಷಿಕ ಪ್ರಾರ್ಥನಾ ಜಾಗರಣೆಯನ್ನು ನಡೆಸಲಾಗುತ್ತದೆ.
ಜೂನ್ 20 ರಂದು ಬುಧವಾರ ರೋಮ್ ಧರ್ಮಕ್ಷೇತ್ರ ಧರ್ಮಪ್ರಾಂತ್ಯದ ಪ್ರಧಾನ ಶ್ರೇಷ್ಠಗುರು ಕಾರ್ಡಿನಲ್ ಬಾಲ್ಡೊ ರೀನಾರವರು ಸಮುದಾಯದಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮವನ್ನು ಜೂನ್ 20ರಂದು ಆಚರಿಸಲಾಗುವ ವಿಶ್ವ ನಿರಾಶ್ರಿತರ ದಿನದ ಪೂರ್ವಭಾವಿಯಾಗಿ ಟ್ರಾಸ್ಟೆವೆರೆಯಲ್ಲಿರುವ ಸಂತ ಮರಿಯಳ ಮಹಾದೇವಾಲಯದಲ್ಲಿ ನಡೆಸಲಾಯಿತು.
ಅನೇಕ ವಲಸಿಗರು ಮತ್ತು ನಿರಾಶ್ರಿತರು ಉಪಸ್ಥಿತರಿದ್ದರು, ಹಾಗೆಯೇ ಪ್ರಯಾಣದಲ್ಲಿರುವ ದುರ್ಬಲ ಜನರನ್ನು ಸ್ವಾಗತಿಸಲು, ರಕ್ಷಿಸಲು ಮತ್ತು ಬೆಂಬಲಿಸಲು ಕೆಲಸ ಮಾಡುವ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇವುಗಳಲ್ಲಿ ರೋಮ್ ಮೂಲದ ಸೆಂಟ್ರೊ ಅಸ್ಟಾಲಿ, ಇಟಾಲಿಯದ ಕಾರಿತಾಸ್, ಫೊಂಡಾಜಿಯೋನ್ ವಲಸಿಗರು, ಇಟಲಿಯದಲ್ಲಿನ ಸುವಾರ್ತಾ ಧರ್ಮಸಭೆಗಳ ಒಕ್ಕೂಟ, ACLI, ಸ್ಕಾಲಾಬ್ರಿನಿ ಅಂತರರಾಷ್ಟ್ರೀಯ ವಲಸೆ ಜಾಲ, ವಿಶ್ವುಗುರು ಇಪ್ಪತ್ತಮೂರನೆಯ ಜಾನ್ ರವರ ಸಂಘ ಮತ್ತು ACSE ಸಂಘ ಸೇರಿವೆ.
ಒಂದು ಕ್ಷಣದ ಧ್ಯಾನ
ಆಶಾಭಾವನೆ ಮತ್ತು ಘನತೆಯನ್ನು ಹುಡುಕಿ ವಲಸೆ ಮಾರ್ಗಗಳಲ್ಲಿ ಸಾವನ್ನು ಕಂಡುಕೊಂಡವರ ಸ್ಮರಣೆಯನ್ನು ಜೀವಂತವಾಗಿಡಲು, ಆತ್ಮಾವಲೋಕನದ ಕ್ಷಣವನ್ನು ಒದಗಿಸಲು ಸಂತ ಎಜಿಡಿಯೊ ವಾರ್ಷಿಕ ಪ್ರಾರ್ಥನಾ ಜಾಗರಣೆಯ ಕಾರ್ಯಕ್ರಮವನ್ನು ಸ್ಥಾಪಿಸಿದರು.
ಎಲ್ಲರಿಗಾಗಿ ಪ್ರಾರ್ಥನೆ, ಬಡತನ ಮತ್ತು ಶಾಂತಿ
ಸಂತ ಎಜಿಡಿಯೊ ಎಂಬುದು 1968ರಲ್ಲಿ ಎರಡನೇ ವ್ಯಾಟಿಕನ್ ಕೌನ್ಸಿಲ್ ನಂತರ ರೋಮ್‌ನ ಮಧ್ಯಭಾಗದಲ್ಲಿರುವ ಮಾಧ್ಯಮಿಕ ಶಾಲೆಯಲ್ಲಿ ರಚಿಸಲಾದ ಕ್ರೈಸ್ತ ಸಮುದಾಯವಾಗಿದೆ.
ಆಂಡ್ರಿಯಾ ರಿಕಾರ್ಡಿಯವರ ಉಪಕ್ರಮವಾದ ಸಂತ ಎಜಿಡಿಯೊ ವಿಶ್ವದಾದ್ಯಂತ 70ಕ್ಕೂ ಹೆಚ್ಚು ದೇಶಗಳಲ್ಲಿ ಸಮುದಾಯಗಳ ಜಾಲವಾಗಿ ಮಾರ್ಪಟ್ಟಿದೆ.
ರೋಮ್ ಮತ್ತು ವಿಶ್ವದಾದ್ಯಂತ, ದೇವರ ವಾಕ್ಯವನ್ನು ಕೇಳಲು, ಸಾರಲು ಮತ್ತು ದೇವರಿಗೆ ತಮ್ಮ ಪ್ರಾರ್ಥನೆಯನ್ನು ಸಲ್ಲಿಸಲು ಬಯಸುವ ಯಾರಿಗಾದರೂ ಸಂತ ಎಜಿಡಿಯೊದ ಸಭೆಯು ಸ್ವಾಗತಿಸುತ್ತದೆ.