ಧಮಾಸ್ಕಸ್ ದೇವಾಲಯದ ಮೇಲೆ ಬಾಂಬ್ ದಾಳಿ: 'ಯಾವುದೇ ನ್ಯಾಯ ಸಮರ್ಥನೆಯಿಲ್ಲ'
ಕೀಲ್ಸ್ ಗುಸ್ಸಿ
ಧಮಾಸ್ಕಸ್‌ನಲ್ಲಿರುವ ಸಂತ ಎಲಿಯಾಸ್ ದೇವಾಲಯದ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 25 ಜನರು ಸಾವನ್ನಪ್ಪಿದರು ಮತ್ತು 63 ಜನರು ಗಾಯಗೊಂಡರು, ನಂತರ ಪವಿತ್ರ ಭೂಮಿಯ ಕಥೊಲಿಕ ಯಾಜಕ ವರ್ಗದ ಸಭೆಯು ತನ್ನ ಆಳವಾದ ಆಘಾತ ಮತ್ತು ಜುಗುಪ್ಸೆಯನ್ನು ವ್ಯಕ್ತಪಡಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿತು.
ದುಷ್ಟ ಕೃತ್ಯ
ಪವಿತ್ರ ನಾಡಿನಲ್ಲಿ ಕಥೋಲಿಕ ಯಾಜಕ ವರ್ಗದ ಸಭೆ (ACOHL) ಜೆರುಸಲೇಮ್, ಪ್ಯಾಲಸ್ತೀನ್, ಇಸ್ರಯೇಲ್, ಜೋರ್ಡಾನ್ ಮತ್ತು ಸೈಪ್ರಸ್‌ನಲ್ಲಿರುವ ಪವಿತ್ರ ನಢಿನ ಪ್ರದೇಶದ ಮೇಲೆ ನ್ಯಾಯವ್ಯಾಪ್ತಿಯನ್ನು ಹೊಂದಿರುವ ಕಥೋಲಿಕ ಧರ್ಮಸಭೆಯ ಧರ್ಮಾಧ್ಯಕ್ಷರುಗಳು, ಪ್ರಾಂತ್ಯಾಧಿಕಾರಿಗಳು, ಧರ್ಮಪ್ರಾಂತ್ಯಾಧಿಕಾರಿಗಳನ್ನು ಒಟ್ಟುಗೂಡಿಸುತ್ತದೆ.
"ಮುಗ್ಧರನ್ನು, ವಿಶೇಷವಾಗಿ ಪವಿತ್ರ ಸ್ಥಳದಲ್ಲಿ ಹತ್ಯೆ ಮಾಡಿದಕ್ಕೆ ಯಾವುದೇ ಧಾರ್ಮಿಕ, ನೈತಿಕ ಅಥವಾ ತರ್ಕಬದ್ಧ ಸಮರ್ಥನೆಯಿಲ್ಲ" ಎಂದು ACOHL ಹೇಳಿಕೆ ಮುಂದುವರಿಸಿತು. ಈ ಹಿಂಸಾಚಾರವನ್ನು ಸಮರ್ಥಿಸಲು ವಿಶ್ವಾಸವೇ ಕಾರಣ ಎಂದು ಹೇಳಿಕೊಳ್ಳುವುದು "ಪವಿತ್ರವಾದ ಎಲ್ಲದರ ಗಂಭೀರ ವಿಕೃತಿಯಾಗಿದೆ" ಎಂದು ಸಭೆಯು ವಾದಿಸಿತು. ಇದು "ಹೇಳಲಾಗದ ದುಷ್ಟ ಕೃತ್ಯ - ಮಾನವೀಯತೆಯ ವಿರುದ್ಧದ ಅಪರಾಧ ಮತ್ತು ದೇವರ ಮುಂದೆ ಪಾಪ."
ವಿಶ್ವಗುರು ಫ್ರಾನ್ಸಿಸ್ ರವರು ಸಹಿ ಮಾಡಿದ ಮಾನವ ಭ್ರಾತೃತ್ವದ ದಾಖಲೆಯನ್ನು (ಅಬುಧಬಿ, 2019) ಉಲ್ಲೇಖಿಸಿ, ಸಭೆಯು ಈ ದಾಳಿಯು ಶಾಂತಿ ಮತ್ತು ಸುರಕ್ಷತೆಯಲ್ಲಿ ಪೂಜಿಸುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಎತ್ತಿ ತೋರಿಸಿದೆ.
ಅವರೆಲ್ಲರೂ ಶಾಂತಿಯಿಂದ ಬದುಕಲಿ
ಇದಲ್ಲದೆ, ಅಂತಿಯೋಕ್ಯ ಮತ್ತು ಪೂರ್ವದ ಗ್ರೀಕ್ ಪಿತೃಪ್ರಧಾನರಿಗೆ ಸಭೆಯು ತನ್ನ ಸಂತಾಪವನ್ನು ವ್ಯಕ್ತಪಡಿಸಿತು. "ಅನಾಗರಿಕ ಕೃತ್ಯ"ವನ್ನು ಖಂಡಿಸಿತು ಮತ್ತು "ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ಸಮರ್ಥಿಸಲು ಪ್ರಯತ್ನಿಸುವ ಸಿದ್ಧಾಂತಗಳನ್ನು" ತಿರಸ್ಕರಿಸಿತು.
ವರ್ಷಗಳಿಂದ ಕಿರುಕುಳದಿಂದ ಬದುಕುತ್ತಿರುವ ಸಿರಿಯಾದ ಎಲ್ಲಾ ಕ್ರೈಸ್ತ ಸಮುದಾಯಗಳೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತಾ, ಹೇಳಿಕೆಯು ಸಂತ್ರಸ್ತರುಗಳಿಗಾಗಿ ಪ್ರಾರ್ಥನೆ, ಗಾಯಾಳುಗಳಿಗೆ ಚಿಕಿತ್ಸೆ ಮತ್ತು ಪೀಡಿತ ಕುಟುಂಬಗಳಿಗೆ ಸಾಂತ್ವನವನ್ನು ನೀಡಿತು.
ದೇಶಾದ್ಯಂತ ಕ್ರೈಸ್ತರ ರಕ್ಷಣೆ ಮತ್ತು ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವಂತೆ ಸಭೆಯು ಸಿರಿಯಾದ ಅಧಿಕಾರಿಗಳನ್ನು ಒತ್ತಾಯಿಸಿತು, ಇದರಿಂದ ಅವರು ಸುರಕ್ಷಿತವಾಗಿ ಬದುಕಬಹುದು ಮತ್ತು ಅವರ ತಾಯ್ನಾಡಿನ ಜೀವನಕ್ಕೆ ಸಂಪೂರ್ಣವಾಗಿ ಕೊಡುಗೆ ನೀಡಬಹುದು.