MAP

Sunday Gospel Reflections Sunday Gospel Reflections 

ಪ್ರಭುವಿನ ದಿನದ ಧ್ಯಾನ: ಸ್ನೇಹಿತರು, ಮೀನು

ತಾಯಿ ಧರ್ಮಸಭೆಯು ಪ್ರಭುವಿನ ದೇಹ ಮತ್ತು ರಕ್ತದ ಪವಿತ್ರ ಹಬ್ಬವನ್ನು ಆಚರಿಸುತ್ತಿರುವಾಗ, ಜೆನ್ನಿ ಕ್ರಾಸ್ಕಾರವರು "ಸ್ನೇಹಿತರು, ಮೀನು ಮತ್ತು ಉತ್ಸವದ" ಎಂಬ ವಿಷಯದ ಬಗ್ಗೆ ಧ್ಯಾನಿಸುತ್ತಾರೆ.

ಜೆನ್ನಿ ಕ್ರಾಸ್ಕಾ

ಈ ವಾರದ ಶುಭಸಂದೇಶದಲ್ಲಿ ನಾವು ರೊಟ್ಟಿಗಳು ಮತ್ತು ಮೀನುಗಳ ಗುಣಾಕಾರದ ಪರಿಚಿತ ಮತ್ತು ಅದರ ಆಳವಾದ ಕಥೆಯನ್ನು ಕೇಳುತ್ತೇವೆ. ಹಸಿದಿರುವ ಜನಸಮೂಹಕ್ಕೆ ಹೇಗೆ ಆಹಾರ ನೀಡುವುದು ಎಂಬ ಪ್ರಾಯೋಗಿಕ ಕಾಳಜಿಯಾಗಿ ಪ್ರಾರಂಭವಾಗುವುದು, ಪ್ರಭುವಿನ ಕೊನೆಯ ಭೋಜನ ಮತ್ತು ಕ್ರಿಸ್ತರ ಪೂಜ್ಯ ಶರೀರ ಮತ್ತು ರಕ್ತದ ಉಡುಗೊರೆಯನ್ನು ಮುನ್ಸೂಚಿಸುವ ಪವಿತ್ರ ಪರಮಪ್ರಸಾದದ ಕ್ಷಣವಾಗಿದೆ. ಕ್ರಿಸ್ತರ ಪೂಜ್ಯ ಶರೀರ ಮತ್ತು ರಕ್ತದ ಹಬ್ಬದಂದು, ತಾಯಿ ಧರ್ಮಸಭೆಯು ನಮ್ಮನ್ನು ಈ ಪವಾಡವನ್ನು ನೂತನ, ಅಂದರೆ ಆಧ್ಯಾತ್ಮಿಕ ಕಣ್ಣುಗಳಿಂದ ನೋಡಲು ಆಹ್ವಾನಿಸುತ್ತದೆ, ಇದು ಕೇವಲ ಆಹಾರದ ಗುಣಾಕಾರವಾಗಿ ಅಲ್ಲ, ಬದಲಾಗಿ ಪ್ರಭುಯೇಸುವಿಗೆ ನಮ್ಮ ಮೇಲಿನ ಪ್ರೀತಿ ಮತ್ತು ಅವರ ಶಾಶ್ವದ ಪ್ರೀತಿಯ ಸಂಕೇತವಾಗಿದೆ. ಸಹಭಾಗಿತ್ವ, ಸ್ನೇಹ ಮತ್ತು ತ್ಯಾಗದ ಸ್ವಯಂ-ನೀಡುವಿಕೆಯನ್ನು ಬಯಸುವ ಪ್ರೀತಿಯಾಗಿದೆ.

ಪವಿತ್ರ ಪರಮಪ್ರಸಾದವು ದೈವಿಕ ಸ್ನೇಹದ ಸಂಸ್ಕಾರವಾಗಿದೆ. ತನ್ನ ಶರೀರ ಮತ್ತು ರಕ್ತವನ್ನು ಅರ್ಪಿಸುವ ಮೂಲಕ, ಕ್ರಿಸ್ತರು ನಮ್ಮನ್ನು ತನ್ನೊಂದಿಗೆ ಮತ್ತು ಪರಸ್ಪರ ನಿಕಟ ಸಂಬಂಧಕ್ಕೆ ಸೆಳೆಯುತ್ತಾರೆ. ನಮ್ಮ ಹಸಿವು ದೈಹಿಕವಾಗಿರಲಿ, ಭಾವನಾತ್ಮಕವಾಗಿರಲಿ ಅಥವಾ ಆಧ್ಯಾತ್ಮಿಕವಾಗಿರಲಿ, ಪ್ರಭುವು ನಮ್ಮಿಂದ ದೂರವಿರುವುದಿಲ್ಲ. ಯಾವಾಗಲೂ ನಮ್ಮನ್ನು ಅವರ ಹತ್ತಿರ ಸೆಳೆದುಕೊಳ್ಳುತ್ತಾರೆ, ಕಲಿಸುತ್ತಾರೆ, ಗುಣಪಡಿಸುತ್ತಾರೆ ಮತ್ತು ನಂತರ ಆಹಾರವನ್ನು ನೀಡುತ್ತಾರೆ. ಪವಿತ್ರ ಪರಮಪ್ರಸಾದವು ಆತನ ವಾಗ್ದಾನವಾಗಿದೆ: "ಎಂದೆಂದಿಗೂ ನಾನು ನಿಮ್ಮೊಂದಿಗಿದ್ದೇನೆ." ಇದು ನಮ್ಮ ಜೀವನವನ್ನು ಸಮೃದ್ಧಿಗೊಳಿಸಲು ತನ್ನ ಪ್ರಾಣವನ್ನೇ ಕೊಡುವ ಸ್ನೇಹಿತನ ಪ್ರೀತಿಯಾಗಿದೆ.

ಸ್ನೇಹ ಮತ್ತು ತ್ಯಾಗವು ಕ್ರಿಸ್ತರಲ್ಲಿ ಬೇರ್ಪಡಿಸಲಾಗದು. ಪವಿತ್ರ ಪರಮಪ್ರಸಾದದ ಪ್ರೀತಿಯನ್ನು ಬಹಿರಂಗಪಡಿಸುತ್ತದೆ, ಅದು ವ್ಯವಹಾರಿಕವಲ್ಲ ಆದರೆ ಸಂಪೂರ್ಣವಾಗಿದೆ. ಅನುಕೂಲತೆಗಳು ಮತ್ತು ಸ್ವಯಂ ಸಂರಕ್ಷಣೆಯನ್ನು ಹೆಚ್ಚಾಗಿ ಗೌರವಿಸುವ ವಿಶ್ವದಲ್ಲಿ, ತನ್ನನ್ನೇ ಸರ್ಮಪಿಸಿಕೊಂಡ ತ್ಯಾಗದ ದಿವ್ಯಬಲಿಪೀಠವು ಪ್ರತಿ-ಸಾಂಸ್ಕೃತಿಕತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ, ನೈಜವಾದ ಪ್ರೀತಿಗೆ ಏನಾದರೂ ಸಂಭಾವ್ಯ ಸಿಗುತ್ತದೆ. ಇದರರ್ಥ ಏನೂ ಇಲ್ಲದವರೆಗೆ, ಕೃಪೆಯ ರಹಸ್ಯದಲ್ಲಿ ಕೊಡುವುದು, ರೊಟ್ಟಿಗಳಂತೆಯೇ ಅರ್ಪಿಸಲ್ಪಟ್ಟದ್ದು ಗುಣಿಸಲ್ಪಡುತ್ತದೆ ಎಂಬುದನ್ನು ಕಂಡುಕೊಳ್ಳುವುದು.

ಈ ಹಬ್ಬದಂದು, ನಾವು ಸಂತ ಥಾಮಸ್ ಮೋರ್ ಮತ್ತು ಸಂತ ಜಾನ್ ಫಿಶರ್ ರವರ ಪ್ರಬಲ ಸಾಕ್ಷಿಯನ್ನು ಸಹ ನೆನಪಿಸಿಕೊಳ್ಳುತ್ತೇವೆ, ಅವರ ಹಬ್ಬಗಳನ್ನೂ ಸಹ ನಾವು ಆಚರಿಸುತ್ತೇವೆ. ರಾಜ ಎಂಟನೇ ಹೆನ್ರಿರರವರ ಅಧಿಕಾರದ ಸಮಯದಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡಾಗಲೂ, ಈ ಇಬ್ಬರೂ ಪುರುಷರು ತಮ್ಮ ಕಥೋಲಿಕ ವಿಶ್ವಾಸ ಮತ್ತು ಪವಿತ್ರ ಪರಮಪ್ರಸಾದ ನಿಷ್ಠೆಯಲ್ಲಿ ದೃಢವಾಗಿ ನಿಂತರು. ಕ್ರಿಸ್ತರೊಂದಿಗಿನ ಮತ್ತು ಧರ್ಮಸಭೆಯೊಂದಿಗಿನ ಅವರ ಸ್ನೇಹವು ಆಕಸ್ಮಿಕವಾಗಿರಲಿಲ್ಲ. ಅದು ಪವಿತ್ರ ಪರಮಪ್ರಸಾದದೊಂದಿ ಹೊಂದಿದ ನಿಕಟ ಸಂಬಂಧವಾಗಿತ್ತು. ತಮ್ಮ ಆತ್ಮಸಾಕ್ಷಿಗೆ ದ್ರೋಹ ಮಾಡಲು ಅಥವಾ ಐಕ್ಯತೆಯ ಸಂಸ್ಕಾರದಲ್ಲಿ ಕ್ರಿಸ್ತರ ನೈಜ ಉಪಸ್ಥಿತಿಯನ್ನು ನಿರಾಕರಿಸಲು ನಿರಾಕರಿಸಿದರು.
 

21 ಜೂನ್ 2025, 22:31