ಮೇ 2025ರಲ್ಲಿ ಮಾತೆಮೇರಿಗೆ 'ಭರವಸೆಯ ಹೂವುಗಳನ್ನು' ಅರ್ಪಿಸಲು ವಿಯೆಟ್ನಾಂ ಧರ್ಮಾಧ್ಯಕ್ಷರು ಭಕ್ತವಿಶ್ವಾಸಿಗಳನ್ನು ಆಹ್ವಾನಿಸಿದ್ದಾರೆ
ಲಿಕಾಸ್ ಸುದ್ದಿ
ಏಪ್ರಿಲ್ 30 ರಂದು ಬಿಡುಗಡೆಯಾದ ಧರ್ಮಾಧ್ಯಕ್ಷರಾದ ಜೋಸೆಫ್ ಟ್ರಾನ್ ವ್ಯಾನ್ ಟೋಯೆನ್ ರವರ ಪಾಲನಾ ಪತ್ರವು ಧರ್ಮಸಭೇಯ 2025ರ ಜೂಬಿಲಿ ವರ್ಷವನ್ನು ಆಚರಿಸುತ್ತಿರುವಾಗ ಮತ್ತು ಲಾಂಗ್ ಕ್ಸುಯೆನ್ ಧರ್ಮಕ್ಷೇತ್ರದ ಸ್ಥಾಪನೆಯ 65ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ಬಂದಿತು.
ಸಾಂಪ್ರದಾಯಿಕವಾದ ಮೇ ತಿಂಗಳ ಮಾತೆ ಮೇರಿಯ ತಿಂಗಳಲ್ಲಿ, ಪರಮಪ್ರಸಾದದ ಮೇಲಿನ ಭಕ್ತಿಯನ್ನು ಗಾಢವಾಗಿಸುವ ಮೂಲಕ ಪೂಜ್ಯ ಕನ್ಯಾ ಮಾತೆಮೇರಿಗೆ "ಭರವಸೆಯ ಹೂವುಗಳನ್ನು" ಅರ್ಪಿಸುವಂತೆ ಧರ್ಮಾಧ್ಯಕ್ಷರಾದ ಟೋನ್ ರವರು ಕಥೊಲಿಕರನ್ನು ಒತ್ತಾಯಿಸಿದರು.
"ತಮ್ಮ ವಿಶ್ವಪರಪತ್ರವಾದ ʼಎಕ್ಲೇಸಿಯಾ ಡಿ ಯೂಕರಿಸ್ಟಿಯಾದಲ್ಲಿʼ, ದ್ವಿತೀಯ ಸಂತ ಜಾನ್ ಪಾಲ್ ರವರು ಪೂಜ್ಯ ಕನ್ಯಾ ಮಾತೆಮೇರಿಗೆ ' ಪರಮಪ್ರಸಾದ ಭರಿತ ಮಹಿಳೆ' ಎಂದು ಕರೆದಿದ್ದಾರೆ" ಎಂದು ಧರ್ಮಾಧ್ಯಕ್ಷರು ಬರೆದಿದ್ದಾರೆ.
"ಪವಿತ್ರಾತ್ಮರ ಶಕ್ತಿಯ ಮೂಲಕ, ಪೂಜ್ಯ ಕನ್ಯಾ ಮಾತೆಮೇರಿಯು ದೇವರ ವಾಕ್ಯಕ್ಕೆ ಮಾಂಸವನ್ನು ನೀಡಿದಳು, ಅವರ ಮಾನವ ಸ್ವಭಾವ ಹೊಂದಿದರು. ಹೀಗಾಗಿ, ಪರಮಪ್ರಸಾದಲ್ಲಿರುವ ಯೇಸುವಿನ ದೇಹ ಮತ್ತು ರಕ್ತವು, ಪೂಜ್ಯ ಕನ್ಯಾ ಮಾತೆಮೇರಿಯಿಂದ ಜನಿಸಿದ ದೇಹ ಮತ್ತು ರಕ್ತವಾಗಿದೆ" ಎಂದು ಅವರು ಹೇಳಿದರು.
ಧರ್ಮಾಧ್ಯಕ್ಷರಾದ ಟೋನ್ ರವರು, ಪೂಜ್ಯ ಕನ್ಯಾ ಮಾತೆಮೇರಿಯು ತನ್ನ ಜೀವನದುದ್ದಕ್ಕೂ, ಘೋಷಣೆಯಿಂದ ಕಲ್ವಾರಿ ಬೆಟ್ಟ ಮತ್ತು ಪಂಚಶತಮದಿನದವರೆಗೆ, ಪರಮಪ್ರಸಾದ ರಹಸ್ಯವನ್ನು ಜೀವಿಸುತ್ತಿದ್ದಳು ಎಂದು ಒತ್ತಿ ಹೇಳಿದರು.
"ಆಕೆಯ ಇಡೀ ಜೀವನವು ಭರವಸೆಯಲ್ಲಿ ಯೇಸುವಿನೊಂದಿಗೆ ಒಂದು ತೀರ್ಥಯಾತ್ರೆಯಾಗಿತ್ತು, ಆದಾಮ ಮತ್ತು ಅವ್ವರವರ ಅವಿಧೇಯತೆಯನ್ನು, ಯೇಸು ಮತ್ತು ಮಾತೆಮೇರಿಯ ವಿಧೇಯತೆಯಿಂದ ವಿಮೋಚನೆಗೊಳಿಸಲಾಗುತ್ತದೆ, ಮಾನವೀಯತೆಗೆ ಮೋಕ್ಷವನ್ನು ತರುತ್ತದೆ ಎಂಬ ಭರವಸೆ" ಎಂದು ಅವರು ಹೇಳಿದರು.
ಈ ಮೇ ತಿಂಗಳಲ್ಲಿ ಧರ್ಮಕ್ಷೇತ್ರವು ಮಾತೆಮೇರಿಯ ಮಾದರಿಯನ್ನು ಅನುಸರಿಸುವ ಮೂಲಕ ಪರಮಪ್ರಸಾದವನ್ನು ಗೌರವಿಸುವ ಐದು ವಿಧಾನಗಳನ್ನು ಅವರು ವಿವರಿಸಿದರು: ದೇವರಿಗೆ "ಹೌದು" ಎಂದು ಹೇಳುವುದು, ದಾನದಲ್ಲಿ ಸೇವೆ ಸಲ್ಲಿಸುವುದು, ಪರಮಪ್ರಸಾದದಲ್ಲಿ ಕ್ರಿಸ್ತರನ್ನು ಧ್ಯಾನಿಸುವುದು, ದಿವ್ಯಬಲಿಪೂಜೆಯಲ್ಲಿ ತನ್ನನ್ನು ತಾನು ಅರ್ಪಿಸಿಕೊಳ್ಳುವುದು ಮತ್ತು ಅಷ್ಟಭಾಗ್ಯಗಳನ್ನು ಜೀವಿಸುವ ಪರಮಪ್ರಸಾದ-ಕೇಂದ್ರಿತ ಕುಟುಂಬಗಳನ್ನು ರೂಪಿಸುವುದು.
ಮಾತೆಮೇರಿಯ ಭಕ್ತಿ ಮತ್ತು ಪರಮಪ್ರಸಾದದ ಆರಾಧನೆಯನ್ನು ಜೋಡಿಸಲು, ವಿಶೇಷವಾಗಿ ಮೇ ಮತ್ತು ಅಕ್ಟೋಬರ್ ತಿಂಗಳಿನನಲ್ಲಿ, ಪ್ರಾರ್ಥನೆಯ ಮೊದಲು ಹತ್ತು ಮಣಿಗಳೊಂದಿಗೆ ಕನಿಷ್ಠ ಒಂದು ಒಂದು ಜಪಸರ ಪ್ರಾರ್ಥನೆಯ ರಹಸ್ಯವನ್ನು ಪ್ರಾರ್ಥಿಸಲು ಸಮುದಾಯಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಅವರು ಹೇಳಿದರು.
ವಿಶ್ವಗುರು ದ್ವಿತೀಯ ಸಂತ ಪಾಲ್ ರವರ ಬೋಧನೆಗಳನ್ನು ಧ್ಯಾನಿಸುತ್ತಾ, ಧರ್ಮಾಧ್ಯಕ್ಷರಾದ ಟೋನ್ ರವರು, ಮೇ ತಿಂಗಳನ್ನು ಸಾಂಪ್ರದಾಯಿಕವಾಗಿ ವಿಶ್ವಾಸಿಗಳು ಮಾತೆಮೇರಿಯನ್ನು ಗೌರವಿಸಲು ಮೀಸಲಿಟ್ಟಿದ್ದಾರೆ ಎಂದು ಒತ್ತಿ ಹೇಳಿದರು, ಈ ಸಮಯದಲ್ಲಿ ದೈವಿ ಅನುಗ್ರಹಗಳು ಆಕೆಯ ತಾಯಿಯ ಮಧ್ಯಸ್ಥಿಕೆಯ ಮೂಲಕ ಹೇರಳವಾಗಿ ಹರಿಯುತ್ತವೆ ಎಂದು ವಿಶ್ವಾಸಿಸಲಾಗುತ್ತದೆ.
ಮೆಕಾಂಗ್ ಡೆಲ್ಟಾದ ನೈಸರ್ಗಿಕ ಸೌಂದರ್ಯ, ವಿಯೆಟ್ನಾಮೀಸ್ ಸಂಪ್ರದಾಯಗಳು, ಕ್ರೈಸ್ತ ಪರಂಪರೆ ಮತ್ತು ಧರ್ಮಪ್ರಚಾರರು ಹಾಗೂ ದತ್ತಿ ಪ್ರಯತ್ನಗಳನ್ನು, ವಿಶೇಷವಾಗಿ ಯುವಕರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಂದ ಪ್ರತಿನಿಧಿಸುವ ಹತ್ತು ಸಾಂಕೇತಿಕವಾದ "ಹೂವುಗಳನ್ನು" ಮಾತೆಮೇರಿಗೆ ಅರ್ಪಿಸಲು ಪತ್ರವು ಧರ್ಮಕ್ಷೇತ್ರದ ಭಕ್ತವಿಶ್ವಾಸಿಗಳನ್ನು ಆಹ್ವಾನಿಸಿದೆ.
ಇವು ಮಾತೆಮೇರಿಗೆ ಅತ್ಯಂತ ಪ್ರಿಯವಾದ ಹೂವುಗಳು, ವಿಶೇಷವಾಗಿ ಯುವಕರು ಅರ್ಪಿಸಿದಾಗ, ಅವು ಇನ್ನೂ ಅರ್ಥಭರಿತವಾದ ಹೂವುಗಳಾಗುತ್ತವೆ ಎಂದು ಅವರು ಬರೆದಿದ್ದಾರೆ.