ವ್ಯಾಟಿಕನ್ ಅಧಿಕೃತ ವೆಬ್'ಸೈಟ್'ಗೆ ಹೊಸ ಸ್ಪರ್ಶ
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ನಿನ ಅಧಿಕೃತ ವೆಬ್'ಸೈಟ್'ಗೆ ಹೊಸ ರೂಪ ಸಿಕ್ಕದ್ದು, ಇದೀಗ ಪೋಪ್ ಹಾಗೂ ಧರ್ಮಸಭೆಯ ಬೋಧನೆಗಳನ್ನು ಸುಲಭ ಹಾಗೂ ಸರಳವಾಗಿ ಹೆಚ್ಚು ಜನಕ್ಕೆ ತಲುಪಿಸಬಹುದಾಗಿದೆ. ಹೊಸ ರೂಪವು ಓದುಗ-ಸ್ನೇಹಿ ಆಗಿದೆ.
ವ್ಯಾಟಿಕನ್ನಿನ ಸಂವಹನ ಪೀಠವು ಇಂದು ಅಧಿಕೃತ ವೆಬ್'ಸೈಟ್ ಹೊಸ ರೂಪದಲ್ಲಿ ಓದುಗರಿಗೆ ಲಭ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಪೋಪರ ಅಧಿಕೃತ ಬೋಧನೆಯನ್ನು ಧರ್ಮಸಭೆಯ ಹೃದಯಭಾಗಕ್ಕೆ ಹಾಗೂ ಎಲ್ಲರಿಗೂ ಸುಲಭ ಮತ್ತು ಸರಳ ಪ್ರವೇಶಾತಿ ಸಿಗಬೇಕೆಂಬ ನಿಟ್ಟಿನಲ್ಲಿ ಹೊಸ ರೂಪದಲ್ಲಿ ಜಾಲತಾಣವನ್ನು ರೂಪಿಸಲಾಗಿದೆ.
ಈ ಅಧಿಕೃತ ಜಾಲತಾಣದಲ್ಲಿ ಓದುಗರು ಹಿಂದೆಂದಿಗಿಂತಲೂ ಬಹಳ ಸರಳವಾಗಿ ಹಾಗೂ ಸುಲಭವಾಗಿ ಪೋಪ್ ಹದಿನಾಲ್ಕನೇ ಲಿಯೋ ಹಾಗೂ ಅವರ ಪೂರ್ವಾಧಿಕಾರಿ ವಿಶ್ವಗುರುಗಳ ಬೋಧನೆಗಳ ಕುರಿತು ಅರಿತುಕೊಳ್ಳಬಹುದು.
1995 ರಿಂದ ಈವರೆಗೂ ಚಾಲ್ತಿಯಲ್ಲಿರುವ ಈ ಅಧಿಕೃತ ಜಾಲತಾಣವು ಇದೀಗ ಹೊಸ ರೂಪದೊಂದಿಗೆ ಓದುಗರ ಮುಂದೆ ಬಂದಿದೆ.
ಪೆರು ದೇಶದ ಗ್ರಾಫಿಕ್ ಡಿಸೈನರ್ ಹುವಾನ್ ಕಾರ್ಲೋಸ್ ವೈಟೋ ಅವರು ಈ ಹೊಸ ರೂಪವನ್ನು ನೀಡಿದ್ದಾರೆ ಎಂಬುದು ವಿಶೇಷವಾಗಿದೆ. ಹೊಸ ರೂಪದ ಹಿಂದಿನ ಕೆಲಸ ಹಾಗೂ ಅದರ ಗುರಿಯ ಕುರಿತು ವ್ಯಾಟಿಕನ್ನಿನಲ್ಲಿ ಹುವಾನ್ ಕಾರ್ಲೋಸ್ ವೈಟೋ ಅವರು ವಿವರಿಸಿದ್ದಾರೆ.