MAP

Sr. Linah Siabana, MSOLA (second from the right), visits the sick and elderly to provide essential food supplements Sr. Linah Siabana, MSOLA (second from the right), visits the sick and elderly to provide essential food supplements 

ಉಗಾಂಡಾ: ಕಥೋಲಿಕ ಕನ್ಯಾ ಭಗಿನಿಯರು ನಿರಾಶ್ರಿತರಿಗೆ ಆರೈಕೆಯನ್ನು ನೀಡುತ್ತಾರೆ

ಉತ್ತರ ಉಗಾಂಡಾದಲ್ಲಿ ದಕ್ಷಿಣ ಸುಡಾನ್ ನಿರಾಶ್ರಿತರು ಆಘಾತ ಮತ್ತು ಸಹಾಯದ ಕೊರತೆಯಿಂದ ಬಳಲುತ್ತಿರುವಾಗ, ಧರ್ಮಪ್ರಚಾರಕ ಸಭೆಯ ಕಥೊಲಿಕ ಕನ್ಯಾ ಭಗಿನಿಯೊಬ್ಬರು ಮಾನಸಿಕ ಆರೋಗ್ಯ ಬೆಂಬಲ, ಶಿಕ್ಷಣ ಮತ್ತು ವಿಶ್ವಾಸವನ್ನು ಸಂಯೋಜಿಸುವ ಅಪರೂಪದ, ಸಮಗ್ರ ಆರೈಕೆಯನ್ನು ನೀಡುತ್ತಾರೆ.

ಸಿಸ್ಟರ್ ಹೆಲೆನ್ ಕಸಕಾ, LSMI

ಮಿಷನರಿ ಸಿಸ್ಟರ್ಸ್ ಆಫ್ ಅವರ್ ಲೇಡಿ ಆಫ್ ಆಫ್ರಿಕಾದ (ಆಪ್ರಿಕಾದ ಮಾತೆ ಮರಿಯಮ್ಮನವರ ಧರ್ಮಪ್ರಚಾರಕ ಕನ್ಯಾ ಭಗಿನಿಯರ ಸಭೆ) ಮಾನಸಿಕ ಆರೋಗ್ಯ ತಜ್ಞೆ ಸಿಸ್ಟರ್ ಲಿನಾ ಸಿಯಾಬಾನಾರವರು, ಉಗಾಂಡಾದ ಅರುವಾ ಧರ್ಮಕ್ಷೇತ್ರದಲ್ಲಿ ಸ್ಥಳಾಂತರಗೊಂಡ ದಕ್ಷಿಣ ಸುಡಾನ್ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಗುಣಪಡಿಸುವ ಮತ್ತು ಸಾಂತ್ವನ ನೀಡುವ ಉಪಸ್ಥಿತಿಯು, ತನ್ನ ಸಭೆಯ ಧ್ಯೇಯದ ಭಾಗವಾಗಿ, ಅವರು ವಿಶ್ವದ ಅತ್ಯಂತ ನಿರ್ಲಕ್ಷಿತ ನಿರಾಶ್ರಿತರಲ್ಲಿ ಕೆಲವರಿಗೆ ಆರೈಕೆ, ಶಿಕ್ಷಣ ಮತ್ತು ಭರವಸೆಯನ್ನು ತರುತ್ತಾರೆ.

ಕಳೆದ ಐದು ವರ್ಷಗಳಿಂದ, ಸಿಸ್ಟರ್ ಲೀನಾರವರು ದಕ್ಷಿಣ ಸುಡಾನ್ ಗಡಿಯ ಸಮೀಪವಿರುವ ವಸಾಹತುಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಸಂಘರ್ಷದಿಂದ ಬೇರು ಸಹಿತ ನಾಶವಾದ ಜೀವನಗಳನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತಿದ್ದಾರೆ.

ಮಿತಿಮೀರಿದ ಬೆಂಬಲ
ಸುಮಾರು 1.7 ಮಿಲಿಯನ್ ನಿರಾಶ್ರಿತರಿಗೆ ಆಶ್ರಯ ನೀಡುತ್ತಿರುವ ಉಗಾಂಡಾ, ಅವರು ನೀಡುತ್ತಿರುವ ನೆರವಿನ ಮುಕ್ತ-ಬಾಗಿಲಿನ ನೀತಿಗಾಗಿ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ದೀರ್ಘಕಾಲೀನ ಹಣಕಾಸಿನ ಕೊರತೆ, ಜನದಟ್ಟಣೆ ಮತ್ತು ನೆರವು ಸಂಸ್ಥೆಗಳಿಂದ ನೀತಿ ಬದಲಾವಣೆಗಳು ವ್ಯವಸ್ಥೆಯನ್ನು ಒತ್ತಡಕ್ಕೆ ಒಳಪಡಿಸಿವೆ.

ಇಲ್ಲಿನ ವಸಾಹತುಗಳು, ಎಲ್ಲವನ್ನೂ ಕಳೆದುಕೊಂಡ ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಂದ ತುಂಬಿವೆ ಎಂದು ಸಿಸ್ಟರ್ ಲೀನಾರವರು ಹೇಳುತ್ತಾರೆ. ಅಡ್ಜುಮಾನಿ ಜಿಲ್ಲೆ ಮಾತ್ರ 54,000ಕ್ಕೂ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಿದೆ. ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿವೆ ಎಂದು ಅವರು ಎಚ್ಚರಿಸುತ್ತಾರೆ.

ಬಿಕ್ಕಟ್ಟಿನಲ್ಲಿ ಶಾಂತಿಯನ್ನು ನಿರ್ಮಿಸುವುದು ಮತ್ತು ಮಾರ್ಗದರ್ಶನ ನೀಡುವುದು
ಜನಾಂಗೀಯ ಗುಂಪುಗಳ ನಡುವೆ ಮತ್ತು ಆತಿಥೇಯ ಸಮುದಾಯಗಳೊಂದಿಗೆ ಉದ್ವಿಗ್ನತೆಗಳು ಮುಂದುವರಿಯುತ್ತವೆ. "ನಾವು ಕೇವಲ ನೆರವು ಕಾರ್ಯಕರ್ತರಲ್ಲ; ನಾವು ಮಧ್ಯವರ್ತಿಗಳು" ಎಂದು ಸಿಸ್ಟರ್ ಲೀನಾರವರು ವಿವರಿಸುತ್ತಾರೆ. ಅವರ ತಂಡವು ಸಂವಾದದ ಮೂಲಕ ಶಾಂತಿಯನ್ನು ಬೆಳೆಸುತ್ತದೆ, ಅವರ ಅಗತ್ಯಗಳು ಲಭ್ಯವಿರುವ ಸಂಪನ್ಮೂಲಗಳು ಮತ್ತು ಪಾಲುದಾರಿಕೆಗಳ ಕೊರೆಯಿದ್ದರೂ ಸಂವಾದದ ಮೂಲಕ ಶಾಂತಿಯನ್ನು ನಿರ್ಮಿಸಲು ಶ್ರಮಿಸುತ್ತಿದೆ.

ಶಿಬಿರಗಳ ಆಚೆಗೆ, ಸಿಸ್ಟರ್ ಲೀನಾರವರು ಅಡ್ಜುಮಾನಿ ಧರ್ಮಪ್ರಾಂತ್ಯದಲ್ಲಿ ಯುವ ಧಾರ್ಮಿಕ ಕನ್ಯಾಭಗಿನಿಯರಿಗೆ ಮಾರ್ಗದರ್ಶನ ನೀಡುತ್ತಾರೆ, ಮಾನಸಿಕ ಆರೋಗ್ಯ ಮತ್ತು ಆಧ್ಯಾತ್ಮಿಕ ರಚನೆಯ ಕುರಿತು ಕಾರ್ಯಾಗಾರಗಳನ್ನು ನೀಡುತ್ತಾರೆ.

ಯುವ ಧಾರ್ಮಿಕ ಕನ್ಯಾಭಗಿನಿಯರು ಮಾರ್ಗದರ್ಶನವನ್ನು ಪಡೆಯಲು ಬಯಸುತ್ತಾರೆ, ಆದರೆ ತರಬೇತಿ ಪಡೆದ ಸಲಹೆಗಾರರು ವಿರಳವಾಗಿದ್ದಾರೆ" ಎಂದು ಅವರು ಹೇಳುತ್ತಾರೆ. ಪ್ರಯಾಣದ ಸವಾಲುಗಳು ಮತ್ತು ಸೀಮಿತ ಮೂಲಸೌಕರ್ಯಗಳು ಕೆಲಸವನ್ನು ಸಂಕೀರ್ಣಗೊಳಿಸುತ್ತವೆ, ಆದರೆ ಧಾರ್ಮಿಕ ಕನ್ಯಾಭಗಿನಿಯರು ಸೇವೆಯಲ್ಲಿ ಮಾತ್ರ ಬದ್ಧರಾಗಿದ್ದಾರೆ.

ನವೀಕೃತ ಕರೆ
ಸಿಸ್ಟರ್ ಲೀನಾರವರಿಗೆ, ಈ ಧ್ಯೇಯವು ವೈಯಕ್ತಿಕವಾಗಿದೆ. "ನಾವು ನಿರಾಶ್ರಿತರೊಂದಿಗೆ ನಡೆಯುತ್ತೇವೆ ಮತ್ತು ಅವರ ಯಾತನೆಯಲ್ಲಿ ಯೇಸುವನ್ನು ನೋಡುತ್ತೇವೆ" ಎಂದು ಅವರು ಹೇಳುತ್ತಾರೆ. ಸವಾಲುಗಳು, ಹಸಿವು, ಕಣ್ಣೀರು, ನಮ್ಮ ಉದ್ದೇಶವನ್ನು ಪುನರುಜ್ಜೀವನಗೊಳಿಸುತ್ತವೆ, ಗುಣಪಡಿಸುವುದು, ಸಾಂತ್ವನ ನೀಡುವುದು ಮತ್ತು ಭರವಸೆಯನ್ನು ಪುನರುಜ್ಜೀವನಗೊಳಿಸುವುದು.

ಪ್ರಪಂಚದ ಗಮನ ಬೇರೆಡೆಗೆ ತಿರುಗುತ್ತಿದ್ದಂತೆ, ಅವರ ಸಂದೇಶವು ಇನ್ನೂ ತುರ್ತಾಗಿ ಉಳಿದಿದೆ. ಇವು ಬರೀ ಸಂಖ್ಯೆಗಳಲ್ಲ, ಅವರು ತಾಯಂದಿರು, ಮಕ್ಕಳು, ಹಿರಿಯರು, ಘನತೆಗೆ ಅರ್ಹರಾಗಿರುವವರು, ನಾವು ಅವರನ್ನು ನಿರ್ಲಕ್ಷಿಸುವಂತಿಲ್ಲ.
 

13 ಮೇ 2025, 13:02