ನಿರ್ಬಂಧಗಳ ಸಂಭವನೀಯ ಅಂತ್ಯದ ಬಗ್ಗೆ ಸಿರಿಯಾದ ಕ್ರೈಸ್ತರು ಹರ್ಷದಿಂದ, ಜಾಗರೂಕತೆಯಿಂದ ಇದ್ದಾರೆ
ಜೀನ್-ಬೆನೊಯಿಟ್ ಹರೆಲ್
ಈ ಘೋಷಣೆ ಬಹಳ ಬೇಗ ಬಂದಿದೆ, ನಾವು ಅದನ್ನು ನಿರೀಕ್ಷಿಸಿರಲಿಲ್ಲ, ನಮಗೆ ಆಶ್ಚರ್ಯವಾಯಿತು, ಎಂದು ಉತ್ತರ ಸಿರಿಯಾದ, ಅಲೆಪ್ಪೊ ನಗರದ ಫಾದರ್ ಜಾರ್ಜ್ ಸಾಬೆರವರು ಹೇಳುತ್ತಾರೆ. ಮೇ 13, ಮಂಗಳವಾರ, ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಮಧ್ಯಪ್ರಾಚ್ಯ ದೇಶಕ್ಕೆ "ಶ್ರೇಷ್ಠತೆಗೆ ಅವಕಾಶ" ನೀಡಲು ಸಿರಿಯಾ ವಿರುದ್ಧದ ಅಮೇರಿಕದ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಘೋಷಿಸಿದರು. ದೇಶಾದ್ಯಂತ ಸಂತೋಷದ ಪ್ರದರ್ಶನಗಳು ನಡೆದವು, ವಿಶೇಷವಾಗಿ ದಮಾಸ್ಕಸ್‌ನ ಉಮಯ್ಯದ್ ಚೌಕದಲ್ಲಿ, ಮಂಗಳವಾರ ಸಂಜೆ ದಟ್ಟವಾದ ಜನಸಮೂಹ ಸೇರಿತ್ತು.
‘ಇದು ನಮಗೆ ತುಂಬಾ ಸಂತೋಷ ತಂದಿದೆ’
ಸಿರಿಯಾದ ಅಲ್-ಅಸ್ಸಾದ್ ಆಡಳಿತದಲ್ಲಿದ್ದಾಗ ಜಾರಿಗೆ ಬಂದ ಅಮೆರಿಕದ ನಿರ್ಬಂಧಗಳು, ವಿಶೇಷವಾಗಿ 2011ರಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ದೇಶದ ನಿವಾಸಿಗಳ ಜೀವನವನ್ನು ಬಾಧಿಸಿದ್ದವು, ಆದರೂ ಮೊದಲ ನಿರ್ಬಂಧಗಳನ್ನು 1979ರ ಹಿಂದೆಯೇ ವಿಧಿಸಲಾಗಿತ್ತು. ಇದು ಸಿರಿಯಾ ನಾಗರಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಈ ಘೋಷಣೆ ನಮಗೆ ಬಹಳ ಸಂತೋಷವಾಗಿದೆ ಎಂದು ಮಾರಿಸ್ಟ್ ಧರ್ಮಗುರುವು ತಮ್ಮ ಮಾತುಗಳನ್ನು ಮುಂದುವರೆಸುತ್ತಾರೆ. ಆದಾಗ್ಯೂ, ಎಚ್ಚರಿಕೆ ಅಥವಾ ಜಾಗೂರಕತೆಯಿಂದ ಇರುವುದು ಅಗತ್ಯ ಎಂದು ಅವರು ಒತ್ತಿ ಹೇಳುತ್ತಾರೆ. "ಇದು ನನಸಾಗುತ್ತಿರುವ ಭರವಸೆ" ಎಂದು ಅವರು ಹೇಳುತ್ತಾರೆ, ಆದರೆ ಸಿರಿಯಾದವರು ಅಭಿವೃದ್ಧಿಗಳ ಮೇಲೆ ಜಾಗರೂಕತೆಯಿಂದ ಗಮನಹರಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ ಹಾಗೂ ಅದಕ್ಕೆ "ನಾವು ಕಾವಲುಗಾರರಂತೆ."
ಮೊದಲನೆಯದಾಗಿ, ಈ ನಿರ್ಬಂಧಗಳನ್ನು ಸಡಿಲಗೊಳಿಸುವುದಕ್ಕೆ ಅಥವಾ ತೆಗೆದುಹಾಕುವುದಕ್ಕೆ ಪ್ರತಿಯಾಗಿ ಅಮೆರಿಕವು ಬೇಡಿಕೆಯಿಡುವ ಸಾಧ್ಯತೆಯಿರಬಹದು ಎಂದು ಅವರು ವಿವರಿಸುತ್ತಾರೆ. ಎರಡನೆಯದಾಗಿ, ಧರ್ಮಗುರು ಸಾಬೆಯವರು ಒತ್ತಾಯಿಸುವಂತೆ, ರಸ್ತೆಗಳು ಮತ್ತು ಆಸ್ಪತ್ರೆಗಳಂತಹ ಅಗತ್ಯ ಮೂಲಸೌಕರ್ಯಗಳೊಂದಿಗೆ ದೇಶವನ್ನು ಪುನರ್ನಿರ್ಮಿಸುವುದರ ಜೊತೆಗೆ, "ನಾವು ಮಾನವ ವ್ಯಕ್ತಿ, ಸಂಬಂಧಗಳು, ಕ್ಷಮೆ ಮತ್ತು ನ್ಯಾಯವನ್ನು ಪುನರ್ನಿರ್ಮಿಸುವ ಬಗ್ಗೆ ಯೋಚಿಸಬೇಕಾಗಿದೆ."
ಕಾವಲುಗಾರನ ವರ್ತನೆ
ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ಸ್ಥಾನವು ಸ್ಪಷ್ಟಪಡಿಸಬೇಕಾದ ಮತ್ತೊಂದು ವಿಷಯವಾಗಿದೆ. ಪ್ರತಿಯೊಂದು ಸಮುದಾಯವು ತನ್ನದೇ ಆದ ಮೌಲ್ಯಗಳ ಪ್ರಕಾರ ಘನತೆಯಿಂದ ಬದುಕಲು ನ್ಯಾಯ ಮತ್ತು ಗೌರವವನ್ನು ಅನ್ವಯಿಸಲು ನಾವು ಕರೆ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಧರ್ಮಗುರು ಸಾಬೆಯವರು ಮತ್ತೊಮ್ಮೆ ಕಾವಲುಗಾರನ ಚಿತ್ರಣವನ್ನು ನೆನಪಿಸಿಕೊಳ್ಳುತ್ತಾರೆ: "ಒಬ್ಬ ಕಾವಲುಗಾರನು ಒಳ್ಳೆಯ ಸುದ್ದಿ ನೀಡುವುದರಿಂದ ತನ್ನನ್ನು ತಾನು ನಿದ್ರಿಸಲು ಬಿಡುವುದಿಲ್ಲ; ಕಾವಲುಗಾರ ಎಂದರೆ ಮೌಲ್ಯಗಳನ್ನು ಕಾಯುವವನು".
ಡಿಸೆಂಬರ್ 2024 ರಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ, ಅಮೇರಿಕವು ʻಕಾದು ನೋಡುʼ ಎನ್ನುವ ಮನೋಭಾವವನ್ನು ಅಳವಡಿಸಿಕೊಂಡಿತು, ಈ ಪ್ರದೇಶದಲ್ಲಿ ಮಾನವ ಹಕ್ಕುಗಳು ಮತ್ತು ಅಲ್ಪಸಂಖ್ಯಾತರ ಗೌರವದ ಬಗ್ಗೆ ಕಳವಳ ವ್ಯಕ್ತಪಡಿಸಿ ನಿರ್ಬಂಧಗಳನ್ನು ತಕ್ಷಣವೇ ಕೊನೆಗೊಳಿಸಲು ನಿರಾಕರಿಸಿತು. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬೆನ್ ಸಲ್ಮಾನ್ ರವರ ಕೋರಿಕೆಯ ಮೇರೆಗೆ, ಅಮೆರಿಕದ ಅಧ್ಯಕ್ಷ ಟ್ರಂಪ್ ರವರು ಯುರೋಪಿನ ಒಕ್ಕೂಟ, ಯುನೈಟೆಡ್ ಕಿಂಗ್‌ಡಮ್ ಮತ್ತು ಕೆನಡಾದ ನಿಲುವಿನೊಂದಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳಲು ಆತುರಪಟ್ಟರು. ನಿರ್ಬಂಧಗಳನ್ನು ತೆಗೆದುಹಾಕುವ ನಿರ್ದಿಷ್ಟ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲ, ಮತ್ತು ನಿಷೇಧವನ್ನು ತೆಗೆದುಹಾಕುವ ಮೊದಲು ಅಮೇರಿಕದ ಕಾಂಗ್ರೆಸ್‌ನಿಂದ ಮತ ಚಲಾಯಿಸಬೇಕಾಗಬಹುದು.