MAP

for over 100 years, religious sisters in Laski have been helping blind children to face life challenges for over 100 years, religious sisters in Laski have been helping blind children to face life challenges 

ಅಂಧರಿಗೆ ಒಂದು ಶತಮಾನದ ಸೇವೆ, ಜೀವನ ಮತ್ತು ಪ್ರೀತಿಯನ್ನು ಕಲಿಸುವುದು

106 ವರ್ಷಗಳಿಂದ ಫ್ರಾನ್ಸಿಸ್ಕನ್ ಸಿಸ್ಟರ್ಸ್ ಸರ್ವೆಂಟ್ಸ್ ಆಫ್ ದಿ ಕ್ರಾಸ್ ಸಭೆಯ ಧ್ಯೇಯವೆಂದರೆ, ಅಂಧರಿಗೆ ದೇಹ ಮತ್ತು ಆತ್ಮದಲ್ಲಿ ಸೇವೆ ಸಲ್ಲಿಸುವುದು. ಅವರ ಸೇವೆಯ ಮುಖ್ಯ ಕೇಂದ್ರಬಿಂದು ಲಾಸ್ಕಿ, ದೃಷ್ಟಿ ಕಳೆದುಕೊಂಡ ಅಸಾಧಾರಣ ವ್ಯಕ್ತಿಯನ್ನು ಆಯ್ಕೆ ಮಾಡಿದ ಸ್ಥಳ ಮತ್ತು ಇಂದು ಕಥೋಲಿಕ ಧರ್ಮಸಭೆಯಲ್ಲಿ ಸಂತ ಪದವಿಗೇರಿಸುವ ಪುನೀತ ಪದವಿಯನ್ನು ನೀಡಲಾಗಿದೆ: ಅವರೇ ಪೂಜ್ಯ ರೋಜಾ ಕ್ಜಾಕಾರವರು.

ಟೊಮಾಸ್ ಝೀಲೆನ್‌ಕಿವಿಚ್

ವಾರ್ಸಾದ ಹೊರಗೆ, ಫ್ರಾನ್ಸಿಸ್ಕನ್ ಸಿಸ್ಟರ್ಸ್ ಸರ್ವೆಂಟ್ಸ್ ಆಫ್ ದಿ ಕ್ರಾಸ್ ಸಭೆಯ ಧಾರ್ಮಿಕ ಸಹೋದರಿಯರು ಕುರುಡರು ಮತ್ತು ದೃಷ್ಟಿಹೀನರಿಗೆ ಶಿಕ್ಷಣ ನೀಡಲು, ಅವರನ್ನು ಜೀವನೋಪಾಯದ ವೃತ್ತಿಗಳಿಗೆ ಸಿದ್ಧಪಡಿಸಲು ಮತ್ತು ಆಧ್ಯಾತ್ಮಿಕ ಬೆಂಬಲವನ್ನು ಒದಗಿಸಲು ತಮ್ಮ ಸೇವೆಗಳಲ್ಲಿ, ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ.

ಈ ಸಭೆಯಲ್ಲಿ 151 ಸಹೋದರಿಯರಿದ್ದಾರೆ, ಅವರಲ್ಲಿ 75 ಮಂದಿ ಇಲ್ಲಿ ಲಾಸ್ಕಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ದೈನಂದಿನ ಆರೈಕೆಯು ಅವರ ಮಕ್ಕಳ ಮೇಲೆ ಕೇಂದ್ರೀಕೃತವಾಗಿದೆ. ಅವರಿಗೆ ಸಂಪೂರ್ಣವಾಗಿ ನೋಡಲು ಸಾಧ್ಯವಾಗುವುದಿಲ್ಲ ಅಥವಾ ತೀರ ಅಲ್ಪ ಸ್ವಲ್ಪ ಮಸುಕಾಗಿ ಮಾತ್ರ ನೋಡುವಂತವರು. ಆದರೂ ಅವರ ದಿನವು ಕಟ್ಟುನಿಟ್ಟಾದ ಪ್ರಾರ್ಥನೆಯ ಲಯವನ್ನು ಅನುಸರಿಸುತ್ತದೆ. ಮುಂಜಾನೆ ಹೊತ್ತಿನ ಸಮಯವು ವಿಶೇಷವಾಗಿ ಮಹತ್ವದ್ದಾಗಿದೆ.

ಸಿಸ್ಟರ್ ಕಮಿಲಾರವರು ಹೇಳುತ್ತಾರೆ, ನಾವು ಪ್ರತಿಯೊಬ್ಬರೂ ಪ್ರತಿದಿನ ಬೆಳಿಗ್ಗೆ ತಮ್ಮ ಸೇವೆಯ ಉದ್ದೇಶವನ್ನು, ಶಿಲುಬೆಯ ಅರ್ಪಣೆಯ ಕಾರ್ಯದೊಂದಿಗೆ ಪ್ರಾರ್ಥಿಸುತ್ತೇವೆ, ಇದು ಜನರ ಆಧ್ಯಾತ್ಮಿಕ ಕುರುಡುತನಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಮ್ಮ ಪ್ರತಿಜ್ಞೆಯನ್ನು ನೆನಪಿಸುವ ವಿಶೇಷ ಪ್ರಾರ್ಥನೆಯಾಗಿದೆ.

ಬೆಳಿಗ್ಗೆ 6:00 ಗಂಟೆಗೆ ಅವರು ಬೆಳಗಿನ ಪ್ರಾರ್ಥನೆಯನ್ನು ಪ್ರಾರ್ಥಿಸುತ್ತಾರೆ, ಬೆಳಿಗ್ಗೆ 6:30ಕ್ಕೆ ಅವರು ದಿವ್ಯಬಲಿಪೂಜೆ ವಿಧಿಯನ್ನು ಆಚರಿಸುತ್ತಾರೆ. ನಂತರ ದಿನದ ಕರ್ತವ್ಯಗಳು ಮತ್ತು ಸಂದ್ಯಾ ಪ್ರಾರ್ಥನೆ ಮತ್ತು ಸಂಜೆ ಸಾಮೂಹಿಕ ಜಪಸರ ಪ್ರಾರ್ಥನೆಯಿರುತ್ತದೆ.

ಕುದುರೆ ಸವಾರಿ ಮೂಲಕ ಲಾಸ್ಕಿವರೆಗೆ
“ಪೂಜ್ಯ ತಾಯಿ ಎಲಿಜಬೆತ್ ರೋಜಾ ಕ್ಜಾಕಾರವರು ನಮ್ಮ ಇಡೀ ಅಂಧ ಕುಟುಂಬದ ಕುರುಡು ತಾಯಿಯಾಗಿದ್ದಾರೆ” ಎಂದು ಫ್ರಾನ್ಸಿಸ್ಕನ್ ಸಿಸ್ಟರ್ಸ್ ಸರ್ವೆಂಟ್ಸ್ ಆಫ್ ದಿ ಕ್ರಾಸ್‌ ಸಭೆಯ ಸದಸ್ಯೆ ಸಿಸ್ಟರ್ ಏಂಜೆಲಿಕಾ ಜೋಸ್ ರವರು ಲಾಸ್ಕಿಯಲ್ಲಿರುವ ಪುಟ್ಟ ಆನ್-ಸೈಟ್ ವಸ್ತುಸಂಗ್ರಹಾಲಯದ ಮೂಲಕ ವ್ಯಾಟಿಕನ್ ಸುದ್ಧಿಗೆ ಮಾರ್ಗದರ್ಶನ ನೀಡುತ್ತಾ ಹೇಳುತ್ತಾರೆ. ಝಾಕಿ ಕುಟುಂಬದ ಛಾಯಾಚಿತ್ರಗಳು, ವೈಯಕ್ತಿಕ ಚಿತ್ರಗಳು, ಮಂಡಿಯೂರಿ ಕುಳಿತಿರುವ ವ್ಯಕ್ತಿ ಮತ್ತು ಸಹೋದರಿ ಧರಿಸಿದ್ದ ಕೂದಲಿನ-ಅಂಗಿ ಇವೆ.

ಸಂದರ್ಶನಕ್ಕೆ ಕೇವಲ ಒಂದು ದಿನ ಮೊದಲು, ಕೊರಿಯನ್ನರ ಗುಂಪೊಂದು ಭೇಟಿ ನೀಡಿತು. ಮದರ್ ಝಾಕಾ ಅವರ ಕೆಲಸದ ಸುದ್ದಿ ವಿಶ್ವದಾದ್ಯಂತ ಹರಡಿರುವುದನ್ನು ಕಂಡುಕೊಂಡರು. ಯಾತನೆ, ಶಿಲುಬೆಯ ಕಷ್ಟಾನುಭವವು ತನಗೆ ಮಾತ್ರವಲ್ಲದೆ, ವರ್ಷಗಳಲ್ಲಿ ತಾನು ನೀಡಿದ ಶಿಕ್ಷಣ, ಸಾವಿರಾರು ಜನರಿಗೆ ಸ್ವರ್ಗಕ್ಕೆ ಹೇಗೆ ಮಾರ್ಗವಾಗಬಹುದು ಎಂಬುದನ್ನು ಆಕೆಯು ತೋರಿಸುತ್ತಾರೆ" ಎಂದು ಸಿಸ್ಟರ್ ಏಂಜೆಲಿಕಾರವರು ಒತ್ತಿ ಹೇಳುತ್ತಾರೆ.

1876 ರಲ್ಲಿ ಬಿಲಾ ತ್ಸೆರ್ಕ್ವಾದಲ್ಲಿ ಜನಿಸಿದ ರೋಜಾ ಅವರು ಉನ್ನತ ಶಿಕ್ಷಣ ಪಡೆದರು, ಹಲವಾರು ಭಾಷೆಗಳನ್ನು ಮಾತನಾಡುತ್ತಿದ್ದರು ಮತ್ತು ಗಮನಾರ್ಹ ಆಸ್ತಿಯನ್ನು ಪಡೆದರು. 120 ವರ್ಷಗಳ ಹಿಂದೆ, 18 ನೇ ವಯಸ್ಸಿನಲ್ಲಿ, ಅವರು ಕುದುರೆಯಿಂದ ಬಿದ್ದರು.

ವೈದ್ಯರಲ್ಲಿ ಒಬ್ಬರಾದ ಬೋಲೆಸ್ಲಾವ್ ಗೆಪ್ನರ್ರವರು, ಆಕೆಯ ಪ್ರಕರಣವನ್ನು ಅಥವಾ ಸ್ಥಿತಿಯನ್ನು ನಿರಾಶಾದಾಯಕವೆಂದು ಘೋಷಿಸಿ, ಅಂಧರಿಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುವಂತೆ ಒತ್ತಾಯಿಸಿದರು. ಅದನ್ನೇ ಅವರು ಮಾಡಿದರು. ರೋಜಾರವರು ಅಂಧರನ್ನು ನೋಡಿಕೊಳ್ಳುವ ವಿಧಾನಗಳನ್ನು ಅಧ್ಯಯನ ಮಾಡಲು, ವ್ಯಾಪಕವಾಗಿ ಪ್ರಯಾಣಿಸಿದರು, ನಂತರ ಧಾರ್ಮಿಕ ಜೀವನವನ್ನು ಆರಿಸಿಕೊಂಡರು. 1917ರಲ್ಲಿ, ಅವರು ತಮ್ಮ ಧಾರ್ಮಿಕ ಜೀವನದ ಶಾಶ್ವತ ಪ್ರತಿಜ್ಞೆಗಳನ್ನು ತೆಗೆದುಕೊಂಡರು ಮತ್ತು 1918ರಲ್ಲಿ, ಅವರ ಹೊಸ ಸಭೆಯನ್ನು ಅಧಿಕೃತವಾಗಿ ಗುರುತಿಸಲಾಯಿತು.

ಲಾಸ್ಕಿ: ಅಂಧರಿಗೊಂದು ಉಡುಗೊರೆ
ತಮ್ಮ ದೈವಕರೆಯನ್ನು ಅನುಸರಿಸಿ, ತಮ್ಮ ನಿಧಿಯಿಂದ, ರೋಜಾ ಕ್ಜಾಕಾ ವಾರ್ಸಾದಲ್ಲಿ ಅಂಧರಿಗಾಗಿ ಒಂದು ಆಶ್ರಯವನ್ನು ಸ್ಥಾಪಿಸಿದರು ಮತ್ತು ಸೊಸೈಟಿ ಫಾರ್ ದಿ ಕೇರ್ ಆಫ್ ದಿ ಬ್ಲೈಂಡ್ ನ್ನು ಸ್ಥಾಪಿಸಿದರು. ನೆರವು ಸಂಘಟಿತ ಮತ್ತು ನಿರಂತರವಾಗಿತ್ತು, ಆದರೆ ಅಂಧರಿಗಾಗಿ ಹೆಚ್ಚು ಸೂಕ್ತವಾದ ಸ್ಥಳದ ಅಗತ್ಯವಿತ್ತು.

1921ರಲ್ಲಿ, ಅವರು ಲಾಸ್ಕಿ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ ನ್ನು ನಿರ್ಮಿಸಲು ಪ್ರಾರಂಭಿಸಿದರು, ಇದು ಅತಿ ಶೀಘ್ರದಲ್ಲೇ ಪ್ರಾಥಮಿಕ ಶಾಲೆ, ನರ್ಸರಿ ಮತ್ತು ಗ್ರಂಥಾಲಯವನ್ನು ಒಳಗೊಂಡಿತ್ತು. ಅಲ್ಲಿನ ಕಾರ್ಯಾಗಾರಗಳಲ್ಲಿ, ಅಂಧರು ಪ್ರಾಯೋಗಿಕ ಕೌಶಲ್ಯಗಳನ್ನು ಕಲಿತರು.

ಒಂದು ದಿನ, ಒಬ್ಬ ಪುಟ್ಟ, ಅಳುವ ಹುಡುಗ ಲಾಸ್ಕಿಗೆ ಬಂದನು, ಅವನು ಅನೇಕ ಮಕ್ಕಳಲ್ಲಿ ಒಬ್ಬನು. ತಾಯಿ ರೋಜಾರವರು ಆತನ ಅಳುವಿನ ಕೂಗನ್ನು ಕೇಳಿದಳು ಮತ್ತು ಒಬ್ಬ ಸಹೋದರಿ ಆತನನ್ನು ಅವರ ಬಳಿಗೆ ಕರೆತಂದಳು. 'ನಿನ್ನ ಹೆಸರೇನು?' ಅವಳು ಕೇಳಿದಳು. ಅದಕ್ಕೆ ಪ್ರತಿತ್ತ್ಯುರವಾಗಿ "ವ್ಲಾಡ್ಜಿಯೂ," ಎಂದು ಉತ್ತರಿಸಿದನು. ಆಕೆಯು ಆತನನ್ನು ಅಪ್ಪಿಕೊಂಡು, "ವ್ಲಾಡ್ಜಿಯೂ, ನೀನು ಸಂತೋಷವಾಗಿರುತ್ತೀಯ; ನಾನು ಕೂಡ ಸಂತೋಷವಾಗಿದ್ದೇನೆ" ಎಂದಳು.

ವ್ಲಾಡ್ಜಿಯು ಕಿಂಡರ್‌ಗಾರ್ಟನ್, ಪ್ರಾಥಮಿಕ ಶಾಲೆ ಮತ್ತು ವೃತ್ತಿಪರ ತರಬೇತಿಯನ್ನು ಪೂರ್ಣಗೊಳಿಸಿದರು, ಮತ್ತು ನಂತರ, ಶ್ರೀ ವ್ಲಾಡಿಸ್ಲಾವ್ ಗಿ, ಅವರು ಆ ಅಪ್ಪುಗೆ ಮತ್ತು ಆ ಮಾತುಗಳನ್ನು ನೆನಪಿಸಿಕೊಂಡರು., 'ಆಕೆಯು ನನಗೆ ದೇವರನ್ನು ಕರೆತಂದರು' ಎಂದು ಹೇಳಿದರು.

ತಾಯಿ ಝಕ್ಕಾ ಮೂಲಕ, ಮಕ್ಕಳು ದೇವರ ಸಾನ್ನಿಧ್ಯ ಮತ್ತು ಆತನ ಕರುಣೆಯ ಕೃಪೆಯನ್ನು ಅನುಭವಿಸಿದರು" ಎಂದು ಸಿಸ್ಟರ್ ಏಂಜೆಲಿಕಾರವರು ನೆನಪಿಸಿಕೊಳ್ಳುತ್ತಾರೆ.

ಸಂತೋಷದ ಕೀಲಿಕೈಯಾಗಿ ಶಿಲುಬೆಯನ್ನು ಅಪ್ಪಿಕೊಳ್ಳುವುದು
ಇಂದು, ಲಾಸ್ಕಿ ಕೇಂದ್ರವು ಫ್ರಾನ್ಸಿಸ್ಕನ್ ಸಿಸ್ಟರ್‌ಗಳ ಸತತ ತಲೆಮಾರುಗಳು ಹೊಸ ಎತ್ತರಕ್ಕೆ ಏರಿಸಿದ ಕಾರ್ಯವಾಗಿದೆ. ಅವರು ಆರಂಭಿಕ ಅಭಿವೃದ್ಧಿ ಬೆಂಬಲ, ಶಿಶುವಿಹಾರ, ಪ್ರಾಥಮಿಕ ಶಾಲೆ, ಬಹು ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರಾಥಮಿಕ ಶಾಲೆ, ಸಾಮಾನ್ಯ ಮಾಧ್ಯಮಿಕ ಶಾಲೆ, ಮಸಾಜ್ ತಾಂತ್ರಿಕ ಶಾಲೆ, ಸಂಗೀತ ಶಾಲೆ ಮತ್ತು ವೃತ್ತಿಪರ ತಯಾರಿ ಕಾರ್ಯಕ್ರಮವನ್ನು ನಡೆಸುತ್ತಾರೆ. ಇಲ್ಲಿ, ಕುರುಡು ಮಗುವನ್ನು ಸ್ವಾತಂತ್ರ್ಯದ ಕಡೆಗೆ ಕೈಯಿಂದ ಮಾರ್ಗದರ್ಶನ ಮಾಡಬಹುದು.

"ಈ ಕೆಲಸವು ದೇವರಿಂದ ಮತ್ತು ದೇವರಿಗಾಗಿ ಆಗಿದೆ. ಇದಕ್ಕೆ ಬೇರೆ ಯಾವುದೇ ಕಾರಣವಿಲ್ಲ. ಅದು ಆ ಮಾರ್ಗದಿಂದ ದೂರ ಸರಿದಿದ್ದರೆ, ಅದು ಅಸ್ತಿತ್ವದಲ್ಲಿ ಇರುತ್ತಿರಲಿಲ್ಲಎಂದು ಮದರ್ ಕ್ಜಾಕಾರವರು ಹೇಳಿದರು. ಅವರು ತಮ್ಮ ಸ್ಥಿತಿಯನ್ನು ಸ್ವೀಕರಿಸುವ ಮೂಲಕ ದೈಹಿಕ ಮಿತಿಯ ಮೇಲೆ ಚೈತನ್ಯದ ವಿಜಯಕ್ಕೆ ಸಾಕ್ಷಿಯಾಗುವ ಕುರುಡು ವ್ಯಕ್ತಿಗಳ ಗಣ್ಯರನ್ನು ಸಿದ್ಧಪಡಿಸಲು ಬಯಸಿದ್ದರು ಎಂದು ಅಂಧತ್ವ ಅಧ್ಯಯನದಲ್ಲಿ ತಜ್ಞೆ ಮತ್ತು ಫ್ರಾನ್ಸಿಸ್ಕನ್ ಸೇವಕಿ ಸಿಸ್ಟರ್ ಬೆನಿಟಾರವರು ವಿವರಿಸುತ್ತಾರೆ.

ಲಾಸ್ಕಿಯ ಪದವೀಧರರು ಹೊರಹೊಮ್ಮುತ್ತಲೇ ಇದ್ದಾರೆ: ಪ್ರತಿ ವರ್ಷ ಸುಮಾರು 20–30 ವಿದ್ಯಾವಂತ ಯುವಕರು ಕೇಂದ್ರವನ್ನು ಪದವಿ ಪಡೆದು ತೊರೆಯುತ್ತಾರೆ. "ದೇವರಿಂದ ದೂರ ಸರಿಯುವುದು ದೈಹಿಕ ಕುರುಡುತನಕ್ಕಿಂತ ದೊಡ್ಡ ದುರದೃಷ್ಟತನಕ್ಕಿಂತ ಬೇರೊಂದು ಇಲ್ಲ, ಎಂದು ತಾಯಿ ಝಾಕಾ ಹೇಳಿದರು. ದೇವರಿಂದ ದೂರ ಸರಿಯುವ ಈ ದೈಹಿಕ ಕುರುಡುತನವು ನಿಜವಾದ ಅಂಗವೈಕಲ್ಯ ಎಂದು ಸಿಸ್ಟರ್ ಬೆನಿಟಾರವರು ಹೇಳುತ್ತಾರೆ.
 

26 ಮೇ 2025, 13:32