MAP

The path to the Holy Door in St Peter's Basilica The path to the Holy Door in St Peter's Basilica  (ANSA)

ರೋಮ್: ಪೂರ್ವ ಧರ್ಮಸಭೆಗಳ ಜೂಬಿಲಿ

ಮೇ 12 ರಿಂದ 14ರವರೆಗೆ, ವ್ಯಾಟಿಕನ್ ಪೂರ್ವ ಕಥೋಲಿಕ ಧರ್ಮಸಭೆಗಳ ಜೂಬಿಲಿಯನ್ನು ಆಯೋಜಿಸುತ್ತಿದೆ, ಇದು ವಿವಿಧ ಪೂರ್ವ ಧರ್ಮಸಭೆಯ ವಿಧಿಗಳಲ್ಲಿ ದೈವಿಕ ದೈವಾರಾಧನಾ ವಿಧಿಗಳ ಸರಣಿಯನ್ನು ಒಳಗೊಂಡಿದೆ.

ವ್ಯಾಟಿಕನ್ ಸುದ್ದಿ

ಮೇ 12 ರಿಂದ 14ರವರೆಗೆ ವ್ಯಾಟಿಕನ್‌ನಲ್ಲಿ ನಡೆಯುವ ದೈವಿಕ ದೈವಾರಾಧನಾ ಪ್ರಾರ್ಥನೆಯ ವಿಧಿಗಳ ಸರಣಿಗೆ ಪೂರ್ವ ಕಥೋಲಿಕ ಧರ್ಮಸಭೆಯ ಭಕ್ತವಿಶ್ವಾಸಿಗಳನ್ನು ಆಹ್ವಾನಿಸಲಾಗಿದೆ.

ಇಂದು, ಮೇ 12ರಂದು ಬೆಳಿಗ್ಗೆ 8:30ಕ್ಕೆ ಇಥಿಯೋಪಿಯಾ ಮತ್ತು ಎರಿಟ್ರಿಯಾದ ಧರ್ಮಸಭೆಗಳ ನೇತೃತ್ವದಲ್ಲಿ ಸಂತ ಪೇತ್ರರ ಮಹಾದೇವಾಲಯದಲ್ಲಿ ಇಥಿಯೋಪಿಯದ ವಿಧಿಯಲ್ಲಿ ದೈವಾರಾಧನಾ ವಿಧಿಯನ್ನು ಆಚರಿಸಲಾಯಿತು ಮತ್ತು ಮಧ್ಯಾಹ್ನ 1:00 ಗಂಟೆಗೆ, ಅರ್ಮೇನಿಯನ್ ಧರ್ಮಸಭೆಯು ಸಂತ ಮೇರಿ ಮೇಜರ್ ಮಹಾದೇವಾಲಯದಲ್ಲಿ ಅರ್ಮೇನಿಯದ ವಿಧಿಯಲ್ಲಿ ದೈವಿಕ ದೈವಾರಾಧನಾ ವಿಧಿಯನ್ನು ಆಚರಿಸಿತು. ನಂತರ, ಮಧ್ಯಾಹ್ನ 3 ಗಂಟೆಗೆ ಅದೇ ಮಹಾದೇವಾಲಯದಲ್ಲಿ, ಕಾಪ್ಟಿಕ್ ದೈವಾರಾಧನಾ ವಿಧಿಯನ್ನು ನಡೆಸಲಾಯಿತು.

ಮೇ 13ರ ವೇಳಾಪಟ್ಟಿ
ಮೇ 13ರಂದು, ಆಚರಣೆಗಳು ಮಧ್ಯಾಹ್ನ 1:00 ಗಂಟೆಗೆ ಪೂರ್ವ ಸಿರಿಯಾದ ವಿಧಿಯಲ್ಲಿ ದೈವಿಕ ದೈವಾರಾಧನಾ ವಿಧಿಯೊಂದಿಗೆ ಸಂತ ಪೇತ್ರರ ಮಹಾದೇವಾಲಯಕ್ಕೆ ಹಿಂತಿರುಗುತ್ತವೆ, ಪೂರ್ವ ಧರ್ಮಸಭೆಯ ಪ್ರಾಚೀನ ಪರಮಪ್ರಸಾದದ ದೈವಾರಾಧನಾ ವಿಧಿ, ಅಡ್ಡೈ ಮತ್ತು ಮಾರಿಯ ಅನಾಫೊರಾದೊಂದಿಗೆ, ಆ ಆಚರಣೆಯನ್ನು ಚಾಲ್ಡಿಯನ್ ಮತ್ತು ಸಿರೋ-ಮಲಬಾರ್ ಧರ್ಮಸಭೆಗಳು ಪ್ರಾರ್ಥನೆಯನ್ನು ಮುನ್ನಡೆಸುತ್ತವೆ.

ಸಂಜೆ, 6:45ಕ್ಕೆ, ಸಂತ ಮೇರಿ ಮೇಜರ್ ಮಹಾದೇವಾಲಯದಲ್ಲಿ ಸಿರಿಯಾಕ್ ನ ಕಥೋಲಿಕ ಧರ್ಮಸಭೆಯು, ಮರೋನೈಟ್ ಧರ್ಮಸಭೆಯು ಮತ್ತು ಸಿರೋ-ಮಲಂಕರ ಧರ್ಮಸಭೆಯು ಸಂದ್ಯಾ (ವೆಸ್ಪರ್ಸ್) ಪ್ರಾರ್ಥನೆಯನ್ನು ಆಯೋಜಿಸುತ್ತದೆ.

ಅಂತಿಮವಾಗಿ, ರಾತ್ರಿ 9:00 ಗಂಟೆಗೆ, ಅದೇ ಮಹಾದೇವಾಲಯದ ಮುಂಭಾಗದಲ್ಲಿ, ಬೈಜಾಂಟೈನ್ ಸಂದ್ಯಾ (ವೆಸ್ಪರ್ಸ್) ಪ್ರಾರ್ಥನೆಯಿಂದ ದೇವರ ತಾಯಿ ಮಾತೆ ಮರಿಯಳಿಗೆ ಸ್ತುತಿಗೀತೆಯಾದ ಅಕಾಥಿಸ್ಟ್ ಸ್ತೋತ್ರವು ನಡೆಯಲಿದೆ.

ವಿಶ್ವಗುರು ಹದಿನಾಲ್ಕನೇ ಲಿಯೋರವರೊಂದಿಗೆ ಸಭೆ
ಮೇ 14 ರ ಬುಧವಾರ, ಪೂರ್ವ ಧರ್ಮಸಭೆಗಳ ಜೂಬಿಲಿ ತೀರ್ಥಯಾತ್ರೆಯ ಅಂತಿಮ ದಿನ, ವಿಶ್ವಗುರು ಹದಿನಾಲ್ಕನೇ ಲಿಯೋರವರೊಂದಿಗೆ, ಅಲ್ಲಿ ನೆರೆದಿರುವ ಸಭೆ ಬೆಳಿಗ್ಗೆ 10:00 ಗಂಟೆಗೆ ಸಂತ ಆರನೇ ಪೌಲ್ ರ ಹಾಲ್‌ನಲ್ಲಿ ನಿಗದಿಯಾಗಿದೆ, ನಂತರ ಮಧ್ಯಾಹ್ನ 2:00 ಗಂಟೆಗೆ ಬೈಜಾಂಟೈನ್ ವಿಧಿಯಲ್ಲಿ ದೈವಿಕ ದೈವಾರಾಧನಾ ವಿಧಿಗೆ ಸಂತ ಪೇತ್ರರ ಮಹಾದೇವಾಲಯಕ್ಕೆ ಹಿಂತಿರುಗುವುದು, ಇದನ್ನು ಗ್ರೀಕ್ ಮೆಲ್ಕೈಟ್ ಕಥೋಲಿಕ ಧರ್ಮಸಭೆ, ಉಕ್ರೇನಿಯದ ಗ್ರೀಕ್ ಕಥೋಲಿಕ ಧರ್ಮಸಭೆ, ರೊಮೇನಿಯದ ಗ್ರೀಕ್ ಕಥೋಲಿಕ ಧರ್ಮಸಭೆ ಮತ್ತು ಇತರ ಬೈಜಾಂಟೈನ್ ವಿಧಿಯ ಧರ್ಮಸಭೆಗಳು ಪ್ರಾರ್ಥನಾ ವಿಧಿಗಳನ್ನು ಆಚರಿಸುತ್ತವೆ.

ಪೂರ್ವ ಕಥೋಲಿಕ ಧರ್ಮಸಭೆಗಳು
23 ಪೂರ್ವ ಕಥೋಲಿಕ ಧರ್ಮಸಭೆಗಳಿವೆ, ಅವು ಸ್ವ-ಆಡಳಿತ ಮತ್ತು ವಿಶ್ವಗುರುಗಳ ಜೊತೆ ಪೂರ್ಣ ಸಂಪರ್ಕದಲ್ಲಿವೆ ಮತ್ತು ಪೂರ್ವ ಕ್ರೈಸ್ತ ಧರ್ಮದಲ್ಲಿ ಬೇರೂರಿರುವ ವಿಭಿನ್ನ ದೈವಾರಾಧನಾ ವಿಧಿಗಳು, ದೈವಶಾಸ್ತ್ರ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುತ್ತವೆ.

ಈ ಧರ್ಮಸಭೆಗಳಲ್ಲಿ ಹೆಚ್ಚಿನವು ಪೂರ್ವ ಸನಾತನ ಧರ್ಮಸಭೆಯ ಸಮುದಾಯಗಳು ಮತ್ತು ರೋಮನ್ ಕಥೋಲಿಕ ಧರ್ಮಸಭೆಯ ನಡುವಿನ ಐತಿಹಾಸಿಕ ಪುನರ್ಮಿಲನದಿಂದ ಹುಟ್ಟಿಕೊಂಡಿವೆ ಮತ್ತು ಅವುಗಳನ್ನು ಪೂರ್ವ ಯುರೋಪ್, ಮಧ್ಯಪ್ರಾಚ್ಯ, ಭಾರತ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಕಾಣಬಹುದು, ಜೊತೆಗೆ ವಿಶ್ವಾದ್ಯಂತ ವಲಸೆ ಬಂದ ಸಮುದಾಯಗಳು ಸಹ ಇದರಲ್ಲಿ ಸೇರಿವೆ.
 

12 ಮೇ 2025, 12:48