MAP

MAP Francis attends an Economy of Francesco event in Assisi in 2022 MAP Francis attends an Economy of Francesco event in Assisi in 2022  (ANSA)

'ನಾಳಿನ ಆರ್ಥಿಕತೆ'ಗಾಗಿ ವಿಶ್ವಗುರುವಿನ ಕರೆಯನ್ನು ನೆನಪಿಸಿಕೊಳ್ಳುವುದು

"ನಾಳಿನ ಆರ್ಥಿಕತೆಗೆ ಆತ್ಮವನ್ನು ನೀಡಿ" ಎಂಬ ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರ ಕರೆಯನ್ನು ದಿ ಎಕಾನಮಿ ಆಫ್ ಫ್ರಾನ್ಸೆಸ್ಕೊದ ಸದಸ್ಯರಾದ ಮಾರ್ಸಿಯಾ ಕಿಂಗ್ ಧ್ಯಾನಿಸುತ್ತಾರೆ.

ಜೋಸೆಫ್ ಟುಲ್ಲೊಚ್

2019 ರಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು ವಿಶ್ವದಾದ್ಯಂತ ಯುವ ಅರ್ಥಶಾಸ್ತ್ರಜ್ಞರು ಮತ್ತು ಉದ್ಯಮಿಗಳಿಗೆ ಪತ್ರವೊಂದನ್ನು ಕಳುಹಿಸಿದರು, "ಸಾವನಲ್ಲ, ಜೀವ ತರುವ, ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರತ್ಯೇಕವಲ್ಲದ, ಮಾನವೀಯ ಮತ್ತು ಅಮಾನವೀಯವಲ್ಲದ, ಪರಿಸರವನ್ನು ಕಾಳಜಿ ವಹಿಸುವ ಮತ್ತು ಅದನ್ನು ಹಾಳು ಮಾಡದ ವಿಭಿನ್ನ ರೀತಿಯ ಆರ್ಥಿಕತೆಯನ್ನು" ನಿರ್ಮಿಸಲು ಅವರನ್ನು ಆಹ್ವಾನಿಸಿದರು.

ಈ ಪತ್ರವು "ನಾಳಿನ ಆರ್ಥಿಕತೆಗೆ ಆತ್ಮವನ್ನು ನೀಡುವ" ಗುರಿಯನ್ನು ಹೊಂದಿರುವ 100ಕ್ಕೂ ಹೆಚ್ಚು ದೇಶಗಳ ಯುವ ವೃತ್ತಿಪರರ ಸಮುದಾಯವಾದ ದಿ ಎಕಾನಮಿ ಆಫ್ ಫ್ರಾನ್ಸೆಸ್ಕೊದ ರಚನೆಗೆ ಕಾರಣವಾಯಿತು.

ಅವರಲ್ಲಿ ಪೆರುವಿನ ಸುಸ್ಥಿರತೆ ವೃತ್ತಿಪರ ಮತ್ತು ಸಂಸ್ಥೆಯ ಸ್ಥಾಪಕ ಸದಸ್ಯೆ ಮಾರ್ಸಿಯಾ ಕಿಂಗ್ ರವರು ಕೂಡ ಒಬ್ಬರು. ವ್ಯಾಟಿಕನ್ ಸುದ್ಧಿ ಜೊತೆ ಮಾತನಾಡಿದ ಕಿಂಗ್ ರವರು, ವಿಶ್ವಗುರುವಿನ ಸಾವು ಅವರ ಸೇವೆಗೆ "ತೀವ್ರ ದುಃಖ" ಮತ್ತು "ಆಳವಾದ ಕೃತಜ್ಞತೆ" ಎರಡನ್ನೂ ಉಂಟುಮಾಡಿದೆ ಎಂದು ಹೇಳಿದರು, ವಿಶೇಷವಾಗಿ "ನೆರವಿನ ಅಗತ್ಯವಿರುವವರನ್ನು ನೋಡಿಕೊಳ್ಳಿ ಮತ್ತು ನಮ್ಮ ಸಾಮಾನ್ಯ ಮನೆಯನ್ನು ನೋಡಿಕೊಳ್ಳಿ" ಎಂಬ ಅವರ ಕರೆ.

ಸೆಪ್ಟೆಂಬರ್ 2024ರಲ್ಲಿ ಫ್ರಾನ್ಸೆಸ್ಕೊದ ಆರ್ಥಿಕತೆಯ ಕಾರ್ಯಕ್ರಮದಲ್ಲಿ ವಿಶ್ವಗುರುವನ್ನು ಭೇಟಿಯಾಗಿದ್ದಾಗಿ ಕಿಂಗ್ ರವರು ಹೇಳಿದರು, ಮತ್ತು ಅವರು ಭಾಗವಹಿಸುವವರಿಗೆ ನೀಡಿದ ಮೂರು ಜ್ಞಾಪನೆಗಳಿಂದ ಪ್ರಭಾವಿತರಾದರು: ಅವುಗಳೆಂದರೆ "'ಸಾಕ್ಷಿಗಳಾಗಿರಿ', 'ಭಯಪಡಬೇಡಿ' ಮತ್ತು 'ದಣಿವಿಲ್ಲದೆ ಆಶಿಸಿ'."

EoF ನಲ್ಲಿ, ವಿಶ್ವಗುರುವನ್ನು "ತೀವ್ರವಾಗಿ ಮಿಸ್ ಮಾಡಿಕೊಳ್ಳುತ್ತೇವೆ" ಎಂದು ಕಿಂಗ್ ರವರು ಹೇಳಿದರು, ಆದರೆ ಅವರ ಪರಂಪರೆ ನಮ್ಮ ಹೃದಯಗಳಲ್ಲಿ ಶಾಶ್ವತವಾಗಿ ಉಳಿದಿದೆ, ಇದು ದೊಡ್ಡ ಕನಸು ಕಾಣಲು ಮತ್ತು ದೇವರಿಂದ ನಮ್ಮನ್ನು ನಾವು ಆಶ್ಚರ್ಯಗೊಳಿಸಿಕೊಳ್ಳಲು ಅವರ ಆಹ್ವಾನವಾಗಿತ್ತು ಎಂದು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ಪೆರುವಿಗೆ ಭೇಟಿ
ಫ್ರಾನ್ಸಿಸ್ ರವರು, ಮೊದಲ ಲತೀನ್ ಅಮೇರಿಕದ ವಿಶ್ವಗುರುವಾಗಿದ್ದರು, ಮತ್ತು ಕಿಂಗ್ ರವರು ಆಯ್ಕೆಯಾದ ತಕ್ಷಣ, ರೋಮ್ ಮತ್ತು ಲಿಮಾ ನಡುವಿನ ಅಂತರದ ಹೊರತಾಗಿಯೂ, ಅವರಿಗೆ "ಹತ್ತಿರ" ಅನಿಸಿತು ಎಂದು ಹೇಳಿದರು.

ಅವರು 2018 ರಲ್ಲಿ ಪೆರುವಿಗೆ ನೀಡಿದ ಭೇಟಿಯನ್ನು ನೆನಪಿಸಿಕೊಂಡರು, ಅದನ್ನು ಅವರು "ಆ ಒಂದು ಭೇಟಿಯನ್ನು ಒಂದು ದೊಡ್ಡ ಉಡುಗೊರೆ" ಎಂದು ಬಣ್ಣಿಸಿದರು.

ಆ ವರ್ಷದ ಜನವರಿ ತಿಂಗಳಿನಲ್ಲಿ ವಿಶ್ವಗುರು ಫ್ರಾನ್ಸಿಸ್ ರವರು ದೇಶಕ್ಕೆ ಭೇಟಿ ನೀಡಿದರು, ಮೂರು ಪ್ರಮುಖ ನಗರಗಳಿಗೆ ಭೇಟಿ ನೀಡಿದರು ಮತ್ತು ಸ್ಥಳೀಯ ಜನರಿಗೆ ಗೌರವ, ಪರಿಸರ ಸಂರಕ್ಷಣೆ ಮತ್ತು ಭ್ರಷ್ಟಾಚಾರವನ್ನು ಎದುರಿಸುವ ಮಹತ್ವವನ್ನು ಒತ್ತಿ ಹೇಳಿದರು.

ಕಿಂಗ್ ರವರು ವಿಶೇಷವಾಗಿ ಪೆರುವನ್ನು ಎನ್ಸಾಂಟಾಡಾ ('ಸಂತರುಗಳಿಂದ ತುಂಬಿದ ಸ್ಥಳ') ಎಂದು ವಿವರಿಸಿದ್ದನ್ನು ನೆನಪಿಸಿಕೊಂಡರು, ಮತ್ತು ಅವರು ವಿಶ್ವಾಸಿಗಳಿಗೆ ಮತ್ತು ನಂಬಿಕೆಯಿಲ್ಲದವರಿಗೆ ಸಮಾನವಾಗಿ ರವಾನಿಸಿದ ಭರವಸೆಯ ಸಂದೇಶವನ್ನು ಅವರು ಹೇಳಿದರು.
 

01 ಮೇ 2025, 12:50