ಹದಿಮೂರನೇ ಲಿಯೋರವರ ಕಾಲ ಮತ್ತು ನಮ್ಮ ಕಾಲ
ಕ್ರಿಸ್ಟೋಫರ್ ವೆಲ್ಸ್
ತಮ್ಮ ಚುನಾವಣೆಯ ಮರುದಿನ ಕಾರ್ಡಿನಲ್ಸ್ ಒಕ್ಕೂಡದೊಂದಿಗೆ ಭೇಟಿಯಾದ ವಿಶ್ವಗುರು ಹದಿನಾಲ್ಕನೇ ಲಿಯೋರವರು ತಮ್ಮ ವಿಶ್ವಗುರುವಿನ ಹೆಸರನ್ನು ಆಯ್ಕೆ ಮಾಡಲು ಕಾರಣವಾದ ಒಂದು ಭಾಗವನ್ನು ವಿವರಿಸಿದರು. "ಇದಕ್ಕೆ ವಿಭಿನ್ನ ಕಾರಣಗಳಿವೆ" ಎಂದು ಅವರು ವಿವರಣೆ ನೀಡುವ ಮೊದಲೇ ಹೇಳಿದರು, "ಮುಖ್ಯವಾದ ಕಾರಣ ವಿಶ್ವಗುರು ಹದಿಮೂರನೇ ಲಿಯೋ, ತಮ್ಮ ಐತಿಹಾಸಿಕ ವಿಶ್ವಪರಿಪತ್ರ "ರೇರಮ್ ನೊವಾರಮ್"ನಲ್ಲಿ ಮೊದಲ ಮಹಾ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಸಾಮಾಜಿಕ ಪ್ರಶ್ನೆಯನ್ನು ಉದ್ದೇಶಿಸಿರುವುದರಿಂದ" ಅವರು ‘ಲಿಯೋ’ ಎಂಬ ಹೆಸರನ್ನು ಆರಿಸಿಕೊಂಡರು ಎಂದು ವಿವರಿಸಿದರು.
ನಮ್ಮ ದಿನಗಳಲ್ಲಿ, ಧರ್ಮಸಭೆಯು ಮತ್ತೊಂದು ಕೈಗಾರಿಕಾ ಕ್ರಾಂತಿಗೆ ಪ್ರತಿಕ್ರಿಯೆಯಾಗಿ ಮತ್ತು ಮಾನವ ಘನತೆ, ನ್ಯಾಯ ಮತ್ತು ಶ್ರಮದ ರಕ್ಷಣೆಗೆ ಹೊಸ ಸವಾಲುಗಳನ್ನು ಒಡ್ಡುವ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿನ ಬೆಳವಣಿಗೆಗಳಿಗೆ ಪ್ರತಿಕ್ರಿಯೆಯಾಗಿ ತನ್ನ ಸಾಮಾಜಿಕ ಬೋಧನೆಯ ಖಜಾನೆಯನ್ನು ಎಲ್ಲರಿಗೂ ಲಭ್ಯಗೊಳಿಸಲಾಗಿದೆ ಎಂದು ಅವರು ಮುಂದುವರಿಸಿದರು.
ವಿಶ್ವಗುರು ಹದಿಮೂರನೇ ಲಿಯೋರವರು "ಆಳವಾದ ಸಾಮಾಜಿಕ ಬದಲಾವಣೆಯ ಕಾಲದಲ್ಲಿ ಜೀವಿಸುತ್ತಿದ್ದರು, ಆ ಕಾಲದಲ್ಲಿ ಧರ್ಮಸಭೆಗೆ ದಿನದ ಅನೇಕ ಒತ್ತುವ ಅಥವಾ ಒತ್ತಡ ನೀಡುವ ಸಾಮಾಜಿಕ ಸಮಸ್ಯೆಗಳಿಗೆ ಉತ್ತರಗಳ ಅಗತ್ಯವಿತ್ತು ಎಂದು ಒಕ್ಲಹೋಮಾದ ತುಲ್ಸಾ ವಿಶ್ವವಿದ್ಯಾಲಯದ ಕಥೋಲಿಕ ಅಧ್ಯಯನಗಳ ವಾರೆನ್ ಅಧ್ಯಕ್ಷರಾದ ಡಾ. ಡೊನಾಲ್ಡ್ ಪ್ರುಡ್ಲೊರವರು ಹೇಳುತ್ತಾರೆ.
ವಿಶ್ವಗುರು ಹದಿಮೂರನೇ ಲಿಯೋರವರಂತೆ, ನಾವು ಕೂಡ ಅಗಾಧವಾದ ಸಾಮಾಜಿಕ ಬದಲಾವಣೆಯ ಅವಧಿಯಲ್ಲಿ ಜೀವಿಸುತ್ತಿದ್ದೇವೆ. ಅದು, ಧರ್ಮಸಭೆ ಮತ್ತು ಅದರ ಬೋಧನೆಯನ್ನು ಮಾತ್ರವಲ್ಲದೆ "ಮಾನವೀಯತೆಯ ಘನತೆಯನ್ನು" ಸವಾಲು ಮಾಡುತ್ತದೆ. ವಿಶ್ವಗುರು ಹದಿನಾಲ್ಕನೇ ಲಿಯೋರವರು ತಮ್ಮ ಹೆಸರನ್ನು ಆಯ್ಕೆಮಾಡುವಾಗ, ಧರ್ಮಸಭೆಯ ಮಾನವೀಯತೆ ಮತ್ತು ಮಾನವ ಘನತೆಗೆ ಸವಾಲುಗಳಿಂದ ಗುರುತಿಸಲ್ಪಟ್ಟ "ಈ ಗಂಭೀರ ಸಮಸ್ಯೆಗಳನ್ನು" ಮತ್ತು ನಿರ್ದಿಷ್ಟವಾಗಿ ಕೃತಕ ಬುದ್ಧಿಮತ್ತೆಯಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲಿದೆ ಎಂದು ಡಾ. ಪ್ರುಡ್ಲೋರವರು ಹೇಳುತ್ತಾರೆ.
ವಿಶ್ವಗುರು ಹದಿಮೂರನೇ ಲಿಯೋರವರ ಕಾಲದಲ್ಲಿದ್ದಂತೆ, ಧರ್ಮಸಭೆ ಮತ್ತು ಜಗತ್ತು ಬದಲಾವಣೆಗಳ ಯುಗವನ್ನು ಮಾತ್ರವಲ್ಲ, ವಿಶ್ವಗುರು ಫ್ರಾನ್ಸಿಸ್ ರವರು ವಿವರಿಸಿದಂತೆ ಯುಗದ ಬದಲಾವಣೆಯನ್ನು ಅನುಭವಿಸುತ್ತಿದೆ.
ವ್ಯಾಟಿಕನ್ ಸುದ್ಧಿಯೊಂದಿಗಿನ ಈ ಸಂದರ್ಶನದಲ್ಲಿ, ಡಾ. ಪ್ರುಡ್ಲೊರವರು ವಿಶ್ವಗುರು ಹದಿಮೂರನೇ ಲಿಯೋರವರ ಯುಗ ಮತ್ತು ನಾವು ಜೀವಿಸುತ್ತಿರುವ ನಮ್ಮ ಸ್ವಂತ ಯುಗ ಹಾಗೂ ವಿಶ್ವಗುರು ಹದಿನಾಲ್ಕನೇ ಲಿಯೋರವರ ಪವಿತ್ರ ವಿಶ್ವಗುರುಗಳ ಸೇವಾಧಿಕಾರದಪೋಪ್ ಹುದ್ದೆಯ ಆರಂಭದಲ್ಲಿ ಇಂದು ಚರ್ಚ್ ಎದುರಿಸುತ್ತಿರುವ ಸವಾಲುಗಳ ನಡುವಿನ ಸಮಾನಾಂತರಗಳನ್ನು ಚಿತ್ರಿಸುತ್ತಾರೆ.
ಪ್ರಶ್ನೆ: ಡಾ. ಪ್ರುಡ್ಲೋರವರೇ, ಶುಕ್ರವಾರ ಬೆಳಿಗ್ಗೆ ವಿಶ್ವಗುರು ಹದಿನಾಲ್ಕನೇ ಲಿಯೋರವರು ತಮ್ಮ ಹೆಸರನ್ನು ʻಲಿಯೋʼ ಎಂದು ಆಯ್ಕೆ ಮಾಡಲು ಕೆಲವು ಕಾರಣಗಳ ಬಗ್ಗೆ ಕಾರ್ಡಿನಲ್‌ಗಳೊಂದಿಗೆ ಮಾತನಾಡುತ್ತಿರುವುದನ್ನು ನಾವು ಕೇಳಿದ್ದೇವೆ. ಅವರು ವಿಶೇಷವಾಗಿ 19ನೇ ಶತಮಾನದ ಅಂತ್ಯದ ಮಹಾನ್ ಸಮಾಜ ಸುಧಾರಕರಾದ ವಿಶ್ವಗುರು ಹದಿಮೂರನೇ ಲಿಯೋರವರನ್ನು ಉಲ್ಲೇಖಿಸಿದರು, ಆ ಹೆಸರನ್ನು ಹೊಂದಿದ್ದ ಕೊನೆಯ ವಿಶ್ವಗುರುವನ್ನು ಉಲ್ಲೇಖಿಸಿದರು. ಹದಿಮೂರನೇ ಲಿಯೋರವರು ಮತ್ತು ನಮ್ಮ ಕಾಲದ ನಡುವಿನ ಸಂಬಂಧದ ಬಗ್ಗೆ ವಿಶ್ವಗುರು ನಮಗೆ ಏನು ಹೇಳಿದರು ಎಂಬುದರ ಕುರಿತು ನೀವು ನಮ್ಮೊಂದಿಗೆ ಸ್ವಲ್ಪ ಮಾತನಾಡಬಹುದೇ?
ಡಾ. ಪ್ರುಡ್ಲೊ: ವಿಶ್ವಗುರು ಹದಿಮೂರನೇ ಲಿಯೋರವರು 1878 ರಿಂದ 1903 ರವರೆಗೆ ವಿಶ್ವಗುರು ಹುದ್ಧೆಯ ಸೇವೆಯನ್ನು ಸಲ್ಲಿಸಿದರು. ಆದ್ದರಿಂದ ಅವರು 20ನೇ ಶತಮಾನದ ಮೊದಲ ವಿಶ್ವಗುರುವೂ ಸಹ ಆಗಿದ್ದರು. ಅವರು ಆಳವಾದ ಸಾಮಾಜಿಕ ಬದಲಾವಣೆಯ ಕಾಲದಲ್ಲಿ ಜೀವಿಸುತ್ತಿದ್ದರು, ಆ ಸಮಯದಲ್ಲಿ ಧರ್ಮಸಭೆಗೆ, ಆ ಕಾಲದ ಅನೇಕ ಒತ್ತುವ ಅಥವಾ ಒತ್ತಡ ನೀಡುವ ಸಾಮಾಜಿಕ ಸಮಸ್ಯೆಗಳಿಗೆ ಉತ್ತರಗಳು ಬೇಕಾಗಿದ್ದವು. ವಿಶ್ವಗುರು ಹದಿನಾಲ್ಕನೇ ಲಿಯೋರವರು ಇದನ್ನು ಏಕೆ ಆರಿಸಿಕೊಂಡರು ಎಂದು ನಮಗೆ ತಿಳಿಸಿದ್ದಾರೆ, ವಿಶೇಷವಾಗಿ ಅವರ ಶ್ರೇಷ್ಠ, ಕಥೋಲಿಕ ಸಾಮಾಜಿಕ ಬೋಧನೆಯ ಚಾರ್ಟರ್ ಆದ, 1891ರ ವಿಶ್ವಪರಿಪತ್ರ ʻರೆರಮ್ ನೊವರಮ್ʼ ಅನ್ನು ಉಲ್ಲೇಖಿಸಿ, ಇದು ನಂತರದ ಎಲ್ಲಾ ಸಾಮಾಜಿಕ ಬೋಧನೆಗಳಿಗೆ ಅಡಿಪಾಯವಾಗಿದೆ ಎಂದು ಸಾಬೀತಾಗಿದೆ.
ವಿಶ್ವಗುರು ಹದಿನಾಲ್ಕನೇ ಲಿಯೋರವರಿಗೆ ತಿಳಿದಿದೆ, ಅವರ ಹಿಂದಿನ ವಿಶ್ವಗುರುಗಳ ಕಾಲದಂತೆಯೇ, ಅವರು ಅಗಾಧವಾದ ಸಾಮಾಜಿಕ ಬದಲಾವಣೆಯ ಅವಧಿಯಲ್ಲಿ ಜೀವಿಸುತ್ತಿದ್ದರು, ಈ ಬದಲಾವಣೆಯು ಧರ್ಮಸಭೆ ಮತ್ತು ಧರ್ಮಸಭೆಯ ಸಿದ್ಧಾಂತಗಳನ್ನು ಮಾತ್ರವಲ್ಲದೆ, ಮಾನವೀಯತೆಯ ಘನತೆಯನ್ನು ಸವಾಲು ಮಾಡುತ್ತಿತ್ತು.
ಹಾಗಾಗಿ ಅವರು ಈ ಹೆಸರನ್ನು ತೆಗೆದುಕೊಂಡಾಗ, ವಿಶ್ವಗುರು ಹದಿಮೂರನೇ ಲಿಯೋರವರು ಕೈಗಾರಿಕಾ ಕ್ರಾಂತಿಯ ಮಧ್ಯದಲ್ಲಿ... ಪರಿವರ್ತನೆಯ ಕಾಲದಲ್ಲಿ ಜೀವಿಸುತ್ತಿದ್ದರು ಮತ್ತು ಅವರು ಸಮಾಜವಾದ ಮತ್ತು ಅನಿಯಂತ್ರಿತ ಉದಾರ ಬಂಡವಾಳಶಾಹಿಯ ಅವಳಿ ಅಪಾಯಗಳ ನಡುವೆ ಕಥೋಲಿಕ ಮಾರ್ಗವನ್ನು, ಕಥೋಲಿಕ ವ್ಯಾಖ್ಯಾನವನ್ನು ಹೆಣೆಯಲು ಪ್ರಯತ್ನಿಸಿದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕೆಂದು ಅವರು ಬಯಸುತ್ತಾರೆ.
ಇಂದಿನ ಮಾನವೀಯತೆಗೆ ಇರುವ ಸವಾಲುಗಳು ಮತ್ತು ಮಾನವ ಘನತೆಗೆ ಇರುವ ಸವಾಲುಗಳು, ವಿಶೇಷವಾಗಿ ಕೃತಕ ಬುದ್ಧಿಮತ್ತೆಯ ಸಮಸ್ಯೆಗಳಿಂದಾಗಿ, ಧರ್ಮಸಭೆಯು ಈ ಗಂಭೀರ ಸಮಸ್ಯೆಗಳೊಂದಿಗೆ ತೊಡಗಿಸಿಕೊಳ್ಳಲಿರುವ ಹೊಸ ಅವಧಿಯನ್ನು ಗುರುತಿಸಲು ವಿಶ್ವಗುರು ಹದಿನಾಲ್ಕನೇ ಲಿಯೋರವರು ಈ ಹೆಸರನ್ನು ಪಡೆದರು ಎಂದು ಹೇಳುತ್ತಾರೆ.
ಪ್ರಶ್ನೆ: ನೀವು ಹೇಳಿದ ಹಲವು ವಿಷಯಗಳಲ್ಲಿ ಎರಡು ವಿಷಯಗಳ ಬಗ್ಗೆ ಮಾತನಾಡಲು ಇಚ್ಚಿಸುತ್ತೇನೆ. ಒಂದು, ನೀವು ಕಾರ್ಮಿಕರ ಘನತೆಯ ಬಗ್ಗೆ ಮಾತ್ರವಲ್ಲ, ಕೆಲಸದ ಘನತೆಯ ಬಗ್ಗೆಯೂ ಸಹ ಮಾತನಾಡಿದ್ದೀರಿ ಮತ್ತು ಹದಿಮೂರನೇ ಲಿಯೋರವರು ಕಾರ್ಮಿಕರ ದುಃಸ್ಥಿತಿಯನ್ನು ನಿಭಾಯಿಸಿದರು. ನೀವು ಬ್ಲೂ-ಕಾಲರ್ ಕಾರ್ಮಿಕರ ದುಃಸ್ಥಿತಿಯಿಂದ ಈಗ ಹೆಚ್ಚಿನ ಬಿಳಿ-ಕಾಲರ್ ಕಾರ್ಮಿಕರಾಗಿ ಬದಲಾಗಿರುವುದನ್ನು ಉಲ್ಲೇಖಿಸಿದ್ದೀರಿ. ಆದರೆ ನಾವು ಜಗತ್ತಿನ ಹಲವು ಕ್ಷೇತ್ರಗಳಲ್ಲಿ ಜನರನ್ನು ಶೋಷಣೆಗೆ ಒಳಪಡಿಸುವುದನ್ನು ಸಹ ನೋಡುತ್ತೇವೆ, ಅಲ್ಲಿ ಉತ್ಪಾದನಾ ಕೆಲಸಗಳು, ಅಭಿವೃದ್ಧಿ ಹೊಂದಿದ ದೇಶಗಳಿಗೆ ಉತ್ಪನ್ನಗಳನ್ನು ಉತ್ಪಾದಿಸುವಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಜನರು ಶೋಷಣೆಗೆ ಒಳಗಾಗುತ್ತಾರೆ. ಆ ಎರಡೂ ವಿಷಯಗಳು ವಿಶ್ವಗುರು ಫ್ರಾನ್ಸಿಸ್‌ರವರಿಗೂ ಬಹಳ ಮುಖ್ಯವಾಗಿದ್ದವು ಮತ್ತು ಹದಿನಾಲ್ಕನೇ ಲಿಯೋರವರು, ಆ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅದನ್ನು ಗಂಭೀರವಾಗಿ ಎತ್ತಿಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ...
ದಕ್ಷಿಣ ಅಮೆರಿಕಾದಲ್ಲಿ ಧರ್ಮಪ್ರಚಾರಕ ಧರ್ಮಾಧ್ಯಕ್ಷರು ಆಗಿರುವುದರಿಂದ ಅವರು ಶೋಷಿತ ಕಾರ್ಮಿಕರ ಅಗತ್ಯಗಳಿಗೆ ಬಹಳ ಸಂವೇದನಾಶೀಲರು ಎಂದು ನಾನು ಭಾವಿಸುತ್ತೇನೆ. ಅವರಿಗೆ ವಿಶ್ವಾದ್ಯಂತ ಆರ್ಥಿಕ ವ್ಯವಸ್ಥೆಯ ಪರಿಸ್ಥಿತಿಗಳ ಬಗ್ಗೆ ತಿಳಿದಿದೆ, ಆಗಾಗ್ಗೆ ಅದು ಅಗ್ಗದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಕೆಲವೊಮ್ಮೆ ದುರದೃಷ್ಟವಶಾತ್, ವಿಶ್ವದ ವಿವಿಧ ದೇಶಗಳಲ್ಲಿ ಗುಲಾಮ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ.
ಹಾಗಾಗಿ, ಮೊದಲ ಕೈಗಾರಿಕಾ ಕ್ರಾಂತಿಯಲ್ಲಿ ವಿಶ್ವಗುರು ಹದಿಮೂರನೇ ಲಿಯೋರವರು ಧ್ವನಿಯಿಲ್ಲದವರಿಗೆ ಧ್ವನಿಯಾಗಿದ್ದಂತೆ, ಅವರು ಆ ಜನರಿಗೆ ಧ್ವನಿಯಾಗಲಿದ್ದಾರೆ. ವಿಶ್ವಗುರು ಹದಿನಾಲ್ಕನೇ ಲಿಯೋರವರು ಆ ಸಂಪ್ರದಾಯವನ್ನು ಮುಂದುವರಿಸಲಿದ್ದಾರೆ ಮತ್ತು ಅವರು ಈ ಜಗತ್ತಿನಲ್ಲಿ, ಈ ವಿಭಿನ್ನ, ಅನ್ಯಾಯದ ಶೋಷಣೆಯ ರೂಪಗಳಿಂದ ಬೆದರಿಕೆಗೆ ಒಳಗಾದವರಿಗೆ ಧ್ವನಿಯಾಗಲಿದ್ದಾರೆ.