60ಕ್ಕೂ ಹೆಚ್ಚು ದೇಶಗಳಲ್ಲಿ ನೆರವಿನ ಅಗತ್ಯವಿರುವ ಜನರಿಗೆ ಪೇಪಲ್ ಫೌಂಡೇಶನ್ $14 ಮಿಲಿಯನ್ ನೀಡಲಿದೆ
ಫಾದರ್ ಪಾವೆಲ್ ರೈಟೆಲ್-ಆಂಡ್ರಿಯಾನಿಕ್ ಮತ್ತು ಕರೋಲ್ ಡಾರ್ಮೊರೊಸ್
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪೂಜ್ಯ ತಂದೆಯ ಉಪಕ್ರಮಗಳನ್ನು ಬೆಂಬಲಿಸುವ ಅಮೇರಿಕದ ದತ್ತಿ ಸಂಸ್ಥೆಯಾದ ಪೇಪಲ್ ಫೌಂಡೇಶನ್, ವ್ಯಾಟಿಕನ್ ಈ ಹಿಂದೆ ಗುರುತಿಸಿದ ಪರಿಹಾರ ಯೋಜನೆಗಳಿಗೆ $10 ಮಿಲಿಯನ್ ಅನುದಾನವನ್ನು ಹಂಚಿಕೆ ಮಾಡುವುದಾಗಿ ಘೋಷಿಸಿದೆ. ಧರ್ಮಪ್ರಚಾರಕರ ನಿಧಿಯ ಮೂಲಕ ತುರ್ತು ಮಾನವೀಯ ನೆರವಿಗೆ ಹೆಚ್ಚುವರಿಯಾಗಿ $4 ಮಿಲಿಯನ್ ಒದಗಿಸಲಾಗುವುದು.
ಈ ಬೆಂಬಲವು ಶುದ್ಧ ನೀರಿನ ಲಭ್ಯತೆ, ಶಾಲೆಗಳ ನಿರ್ಮಾಣ ಮತ್ತು ನವೀಕರಣ, ದೇವಾಲಯಗಳು ಮತ್ತು ಗುರುವಿದ್ಯಾಮಂದಿರಗಳ ಪುನಃಸ್ಥಾಪನೆ, ಆರೋಗ್ಯ ಸೌಲಭ್ಯಗಳ ನಿರ್ಮಾಣ ಮತ್ತು ವೃದ್ಧ ಧರ್ಮಗುರುಗಳ ಆರೈಕೆಯನ್ನು ಒಳಗೊಂಡಿರುತ್ತದೆ.
"ಕ್ರಿಸ್ತರ ಪ್ರೀತಿಯನ್ನು ಅತ್ಯಂತ ಅಗತ್ಯವಿರುವವರಿಗೆ ತಲುಪಿಸುವ ನಮ್ಮ ಧ್ಯೇಯದ ಹೃದಯಭಾಗದಲ್ಲಿ ಈ ಹೂಡಿಕೆಗಳಿವೆ" ಎಂದು ಪೇಪಲ್ ಫೌಂಡೇಶನ್‌ನ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಎಡ್ವರ್ಡ್ (ವಾರ್ಡ್) ಫಿಟ್ಜ್‌ಗೆರಾಲ್ಡ್ III ರವರು ಹೇಳಿದರು. ನ್ಯೂಯಾರ್ಕ್‌ನ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ತಿಮೋತಿ ಡೋಲನ್ ರವರನ್ನು ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಜೂಬಿಲಿ ತೀರ್ಥಯಾತ್ರೆ
ಕಾರ್ಡಿನಲ್ ಡೋಲನ್ ಮತ್ತು ವಾರ್ಡ್ ಫಿಟ್ಜ್‌ಗೆರಾಲ್ಡ್ III ಇಬ್ಬರೂ ಪ್ರಸ್ತುತ ಜೂಬಿಲಿ ವರ್ಷಕ್ಕೆ ಸಂಬಂಧಿಸಿದಂತೆ ರೋಮ್ ತೀರ್ಥಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಂತ ಪೇತ್ರರ ಸ್ಟೀವರ್ಡ್ಸ್ ಎಂದು ಕರೆಯಲ್ಪಡುವ ಪ್ರತಿಷ್ಠಾನದ 80ಕ್ಕೂ ಹೆಚ್ಚು ಸದಸ್ಯರು ತಮ್ಮ ಕುಟುಂಬಗಳೊಂದಿಗೆ ನಾಲ್ಕು ವಿಶ್ವಗುರುಗಳ ಮಹಾದೇವಾಲಯಗಳ ಪವಿತ್ರ ದ್ವಾರಗಳನ್ನು ದಾಟಲಿದ್ದಾರೆ:ಸಂತ ಪೇತ್ರರ, ಸಂತ ಜಾನ್ ಲ್ಯಾಟೆರನ್, ಸಂತ ಮೇರಿ ಮೇಜರ್ ಮತ್ತು ಸಂತ ಪೌಲ್ ಔಟ್‌ಸೈಡ್ ದಿ ವಾಲ್ಸ್ ಮಹಾದೇವಾಲಯಗಳನ್ನು ದಾಟಲಿದ್ದಾರೆ.
"ಮತ್ತಾಯನ ಶುಭಸಂದೇಶವು ನಮಗೆ ಕಲಿಸುವುದೇನೆಂದರೆ, 'ನೀವು ನನ್ನ ಈ ಸಹೋದರ ಸಹೋದರಿಯರಲ್ಲಿ ಕನಿಷ್ಠರಾದ ಒಬ್ಬರಿಗೆ ಏನು ಮಾಡುತ್ತೀರೋ, ಅದನ್ನು ನನಗೂ ಮಾಡಿದ್ದೀರಿ'" ಎಂದು ಕಾರ್ಡಿನಲ್ ತಿಮೋತಿ ಡೋಲನ್ ರವರು ಹೇಳಿದರು. ಆಳವಾಗುತ್ತಿರುವ ಆರ್ಥಿಕ ಅಸಮಾನತೆಯ ಜಗತ್ತಿನಲ್ಲಿ, ಸಂತ ಪೇತ್ರರ ಸ್ಟೀವರ್ಡ್‌ಗಳು "ಬಡವರು ಮತ್ತು ದುರ್ಬಲರಿಗೆ ವಿಶ್ವಾಸ ಮತ್ತು ಸಹಾನುಭೂತಿಯಿಂದ ಸೇವೆ ಸಲ್ಲಿಸುವ" ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಅವರು ಹೇಳಿದರು.
ಪೇಪಲ್ ಫೌಂಡೇಶನ್‌ಗೆ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ವಾರ್ಡ್ ಫಿಟ್ಜ್‌ಗೆರಾಲ್ಡ್ III ರವರು, ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಸಂತ ಪೇತ್ರರ ಉತ್ತರಾಧಿಕಾರಿಗೆ ಸೇವೆ ಸಲ್ಲಿಸುವುದು ಮತ್ತು ಅಗತ್ಯತೆಗಳು ಹೆಚ್ಚಿರುವಲ್ಲೆಲ್ಲಾ ಧರ್ಮಸಭೆಯನ್ನು ಬೆಂಬಲಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಒತ್ತಿ ಹೇಳಿದರು.
ಸ್ಪಷ್ಟವಾಗಿ ಹೇಳುವುದಾದರೆ, ವಿಶ್ವಗುರು ಫ್ರಾನ್ಸಿಸ್ ರವರ ಸೇವಾಧಿಕಾರದ ಅಡಿಯಲ್ಲಿ, ಅದು ಬಡವರನ್ನು ತಲುಪುವ ಒಂದು ನಿರ್ದಿಷ್ಟ ಸಮಯವಾಗಿತ್ತು. ಅವರಿಗೆ ಬಡವರ ಬಗ್ಗೆ ಅಪಾರ ಪ್ರೀತಿ ಇತ್ತು, ಮತ್ತು ಕಳೆದ ಕೆಲವು ವರ್ಷಗಳಿಂದ ನಾವು ಯುಸ್ಟೇಸ್ ಮೆಟಾ ಮತ್ತು ಕಾರ್ಡಿನಲ್ ಸೀನ್ ಒ'ಮ್ಯಾಲಿ ಅವರ ನೇತೃತ್ವದಲ್ಲಿ ವಿಶ್ವದಾದ್ಯಂತ ಬಡವರಿಗೆ ಸೇವೆ ಸಲ್ಲಿಸುವಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದೇವೆ, ಎಂದು ವಾರ್ಡ್ ಫಿಟ್ಜ್‌ಗೆರಾಲ್ಡ್ III ರವರು ಹೇಳಿದರು.
ಶಿಕ್ಷಣಕ್ಕೆ ಬೆಂಬಲ
ಅನುದಾನಗಳ ಜೊತೆಗೆ, ಪೇಪಲ್ ಫೌಂಡೇಶನ್ ವಾರ್ಷಿಕವಾಗಿ 100ಕ್ಕೂ ಹೆಚ್ಚು ಗುರುಗಳು, ಧಾರ್ಮಿಕ ಸಹೋದರಿಯರು ಮತ್ತು ಗುರುವಿದ್ಯಾಮಂದಿರಗಳಿಗೆ $800,000 ವಿದ್ಯಾರ್ಥಿವೇತನವನ್ನು ನಿಗದಿ ಪಡಿಸುತ್ತದೆ. ಈ ಬೆಂಬಲವು ಜಾನ್ ಮತ್ತು ಕರೋಲ್ ಸೇಮನ್ ಹಾಗೂ ಪೇಪಲ್ ಫೌಂಡೇಶನ್‌ನ ಸದಸ್ಯರೊಂದಿಗೆ ಪ್ರಾರಂಭವಾದ ದ್ವಿತೀಯ ಸಂತ ಜಾನ್ ಪಾಲ್ ರವರ ವಿದ್ಯಾರ್ಥಿವೇತನ ಕಾರ್ಯಕ್ರಮದ ಭಾಗವಾಗಿ ರೋಮ್‌ನಲ್ಲಿ ಅಧ್ಯಯನ ಮಾಡಲು ಅವರಿಗೆ ಅನುವು ಮಾಡಿಕೊಡುತ್ತದೆ.
ಆದ್ದರಿಂದ ರೋಮ್‌ನ ಸುತ್ತಮುತ್ತಲಿನ ವಿವಿಧ ಕಾಲೇಜುಗಳಲ್ಲಿ ದೈವಶಾಸ್ತ್ರ ಮತ್ತು ತತ್ತ್ವಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಮತ್ತು ಡಾಕ್ಟರೇಟ್ ಪದವಿಗಳನ್ನು ಪಡೆಯುತ್ತಿರುವ ಗುಂಪುಗಳು, ಅವರ ಮೂಲಗಳು ಪೇಪಲ್ ಪ್ರತಿಷ್ಠಾನದ ಬೆಂಬಲದಲ್ಲಿವೆ ಎಂದು ನಾವು ತುಂಬಾ ಹೆಮ್ಮೆಪಡುತ್ತೇವೆ ಮತ್ತು ಪೇಪಲ್ ಪ್ರತಿಷ್ಠಾನದ ಸದಸ್ಯರಾದ ಸಂತ ಪೇತ್ರರ ಮೇಲ್ವಿಚಾರಕರು ಅವರಿಗೆ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ನೀಡುವ ಉತ್ತಮ ಅನುಗ್ರಹದಿಂದ ಧರ್ಮಸಭೆಯ ಮೇಲಿನ ಅವರ ಪ್ರೀತಿ ಗುಣಿಸಲ್ಪಟ್ಟಿದೆ ಎಂದು ನಮಗೆ ತಿಳಿದಿದೆ" ಎಂದು ವಾರ್ಡ್ ಫಿಟ್ಜ್‌ಗೆರಾಲ್ಡ್ III ರವರು ಗಮನಿಸಿದರು.
ಧರ್ಮಸಭೆಯ ಪ್ರೀತಿ ಕಾರ್ಯಪ್ರವೃತ್ತವಾಗಿದೆ
"ಪ್ರತಿಯೊಂದು ಅನುದಾನ, ಪ್ರತಿಯೊಂದು ವಿದ್ಯಾರ್ಥಿವೇತನ ಮತ್ತು ಪ್ರತಿಯೊಂದು ಬೆಂಬಲದ ಕ್ರಿಯೆಯು ಧರ್ಮಸಭೆಯ ಪ್ರೀತಿಯ ಕ್ರಿಯೆಯ ಸ್ಪಷ್ಟ ಸಂಕೇತವಾಗಿದೆ" ಎಂದು ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಸ್ಯಾವೇಜ್ ರವರು ಒತ್ತಿ ಹೇಳಿದರು.
ಈ ಹಂಚಿಕೆಯ ವಿಶ್ವಾಸದ ಧ್ಯೇಯದ ಮೂಲಕ, ನಾವು ಪೂಜ್ಯ ತಂದೆಯ ದೃಷ್ಟಿಕೋನಕ್ಕೆ ಸೇವೆ ಸಲ್ಲಿಸುವಲ್ಲಿ ಸಾಮಾನ್ಯರು, ಗುರುಗಳು ಮತ್ತು ಧರ್ಮಸಭೆಯ ನಾಯಕತ್ವವನ್ನು ಒಂದುಗೂಡಿಸುತ್ತೇವೆ, ಜಾಗತಿಕ ಧರ್ಮಸಭೆಯನ್ನು ಬಲಪಡಿಸುವುದು ಮತ್ತು ಅದರ ಅತ್ಯಂತ ದುರ್ಬಲ ಸದಸ್ಯರನ್ನು ಮೇಲಕ್ಕೆತ್ತುವುದು.