ಜೂಬಿಲಿಗಾಗಿ 90 ದೇಶಗಳ ಯಾತ್ರಿಕರು ರೋಮ್ ನಲ್ಲಿ ಒಟ್ಟುಗೂಡುತ್ತಾರೆ
ವ್ಯಾಟಿಕನ್ ಸುದ್ದಿ
ರೋಮ್‌ನಲ್ಲಿ ನಡೆಯುವ ಬ್ಯಾಂಡ್‌ಗಳು ಮತ್ತು ಜನಪ್ರಿಯ ಮನರಂಜನೆಯ ಜೂಬಿಲಿಯಲ್ಲಿ 90ಕ್ಕೂ ಹೆಚ್ಚು ದೇಶಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಜನರು ಈ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಗಳು ಸಾಂಸ್ಥಿಕ, ಮಿಲಿಟರಿ, ಹವ್ಯಾಸಿ, ಜಾನಪದ, ಸಮುದಾಯ, ಕ್ರೀಡೆ, ಶಾಲಾ ಮತ್ತು ಕಾಲೇಜು ಬ್ಯಾಂಡ್‌ಗಳಿಗೆ ಹಾಗೂ ವಿಶ್ವದಾದ್ಯಂತದ ಎಲ್ಲಾ ರೀತಿಯ ಜನಪ್ರಿಯ ಮನರಂಜನೆಗೆ ಮೀಸಲಾಗಿವೆ.
ವೇಳಾಪಟ್ಟಿ
ಜೂಬಿಲಿಯು ಮುಖ್ಯವಾಗಿ ಇಟಲಿಯಿಂದ ಯಾತ್ರಾರ್ಥಿಗಳನ್ನು ಕರೆತರುತ್ತದೆ, ಆದರೆ ಯುನೈಟೆಡ್ ಸ್ಟೇಟ್ಸ್, ಮಾಲ್ಟಾ, ಪೋಲೆಂಡ್, ಸ್ಪೇನ್, ಫ್ರಾನ್ಸ್, ಜರ್ಮನಿ, ಯುಕೆ, ಬ್ರೆಜಿಲ್, ಮೆಕ್ಸಿಕೊ, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದ ದೊಡ್ಡ ದೊಡ್ಡ ಗುಂಪುಗಳನ್ನು ಸಹ ತರುತ್ತದೆ. ಮೇ 10ರ ಶನಿವಾರ, ಸಂತ ಪೇತ್ರರ ಮಹಾದೇವಾಲಯದಲ್ಲಿರುವ ಪವಿತ್ರ ದ್ವಾರಕ್ಕೆ ಸಂಘಟಿತ ತೀರ್ಥಯಾತ್ರೆಗಳು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ನಡೆಯಲಿವೆ. ನಂತರ, ಸಂಜೆ 4 ರಿಂದ 7 ರವರೆಗೆ, ಮಧ್ಯ ರೋಮ್‌ನ 31 ಚೌಕಗಳಲ್ಲಿ ದೊಡ್ಡ ದೊಡ್ಡ ತೆರೆದ ಬ್ಯಾಂಡ್ ಪ್ರದರ್ಶನ ನಡೆಯಲಿದ್ದು, ವಿಶ್ವದಾದ್ಯಂತದ 100ಕ್ಕೂ ಹೆಚ್ಚು ಬ್ಯಾಂಡ್‌ಗಳು ಮತ್ತು ಸಂಗೀತ ಗುಂಪುಗಳನ್ನು ಇದು ಒಳಗೊಂಡಿದೆ. ಈ ಕಾರ್ಯಕ್ರಮದ ಸ್ಥಳಗಳು, ಪ್ರಾರಂಭದ ಸಮಯಗಳು ಮತ್ತು ಬ್ಯಾಂಡ್‌ಗಳು ಸೇರಿದಂತೆ ಪ್ರದರ್ಶನಗಳ ಸಂಪೂರ್ಣ ಪಟ್ಟಿ ಅಧಿಕೃತ ಜೂಬಿಲಿ ಜಾಲತಾಣ ಮತ್ತು ಐಬಿಲೇಯಂ25 ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ.
ಮುಕ್ತಾಯದ ದಿವ್ಯಬಲಿಪೂಜೆ
ಮೇ 11, ಭಾನುವಾರ ಬೆಳಿಗ್ಗೆ 10 ಗಂಟೆಗೆ, ಪಿಯಾಝಾ ಕ್ಯಾವೂರ್‌ನಲ್ಲಿ ಧರ್ಮಪ್ರಚಾರಕ ಡಿಕಾಸ್ಟರಿಯ ಪ್ರೊ-ಪ್ರಿಫೆಕ್ಟ್ ಪರಮಪೂಜ್ಯ ಶ್ರೇಷ್ಠಗುರುವಾದ ರಿನೋ ಫಿಸಿಚೆಲ್ಲಾರವರು ಪವಿತ್ರ ದಿವ್ಯಬಲಿಪೂಜೆಯನ್ನು ನೆರವೇರಿಸಲಿದ್ದಾರೆ ಹಾಗೂ ಅವರು ಜೂಬಿಲಿ 2025ನ್ನು ಆಯೋಜಿಸುವ ಉಸ್ತುವಾರಿ ವಹಿಸಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಚೌಕಕ್ಕೆ ಪ್ರವೇಶವನ್ನು ಅನುಮತಿಸಲಾಗುವುದು ಮತ್ತು ಈ ಕಾರ್ಯಕ್ರಮದ ಹಾಜರಾತಿಗೆ ಯಾವುದೇ ಟಿಕೆಟ್ ಅಗತ್ಯವಿಲ್ಲ. ದಿವ್ಯ ಬಲಿಪೂಜೆಯ ಆಚರಣೆಯ ನಂತರ, ಯಾತ್ರಿಕರು ತಮ್ಮ ಸಂಗೀತ ವಾದ್ಯಗಳು ಮತ್ತು ಸಾಂಪ್ರದಾಯಿಕ ಸಮವಸ್ತ್ರಗಳೊಂದಿಗೆ ಸಂತ ಪೇತ್ರರ ಚೌಕದ ಕಡೆಗೆ ಸಾಗುತ್ತಾರೆ. ಮಾರ್ಗದುದ್ದಕ್ಕೂ, ಬ್ಯಾಂಡ್‌ಗಳು ತೀರ್ಥಯಾತ್ರೆಯಲ್ಲಿ ಮೆರವಣಿಗೆ ನಡೆಸುವಾಗ ಮುಕ್ತವಾಗಿ ಆಯ್ಕೆಮಾಡಿದ ತುಣುಕುಗಳನ್ನು ಪ್ರದರ್ಶಿಸುತ್ತವೆ.