ಮೆಟ್ರೋಪಾಲಿಟನ್ ಗುಡ್ಜಿಯಾಕ್: ವಿಶ್ವಗುರು ಹದಿನಾಲ್ಕನೇ ಲಿಯೋರವರು ನಮ್ಮೆಲ್ಲರೊಂದಿಗೆ ಮಾತನಾಡುವ ಒಬ್ಬ ಕುರುಬ.
ಸ್ವಿಟ್ಲಾನಾ ಡುಖೋವಿಚ್ ಮತ್ತು ಲಿಂಡಾ ಬೋರ್ಡೋನಿ
ನೂತನ ವಿಶ್ವಗುರುವನ್ನು ಸ್ವಾಗತಿಸುತ್ತಾ ಮತ್ತು ಅವರ ಆಯ್ಕೆಯ ಮಹತ್ವವನ್ನು ಧ್ಯಾನಿಸುತ್ತಾ, ಫಿಲಡೆಲ್ಫಿಯಾದ ಉಕ್ರೇನಿಯದ ಕಥೋಲಿಕ ಆರ್ಚ್‌ಪಾರ್ಕಿಯ ಮಹಾಧರ್ಮಾಧ್ಯಕ್ಷರಾದ ಮಹಾಧರ್ಮಪ್ರಾಂತ್ಯದ ಬೋರಿಸ್ ಗುಡ್ಜಿಯಾಕ್ ರವರು ವ್ಯಾಟಿಕನ್ ಸುದ್ಧಿಗೆ ಹೀಗೆ ಹೇಳಿದರು: "ಅಮೇರಿಕದ ಒಬ್ಬರು ವಿಶ್ವಗುರುವಾಗಿ ಆಯ್ಕೆಯಾಗಿರುವುದನ್ನು ನೋಡಿ, ಅಮೆರಿಕದವರಲ್ಲಿ ಒಬ್ಬನಾಗಿ ಸಂತೋಷವನ್ನು ನಾನು ಹಂಚಿಕೊಳ್ಳುತ್ತೇನೆ, ಆದರೆ ಇದು ನನ್ನ ದೇಶದ ಸಂತೋಷ ಮಾತ್ರವಲ್ಲ. ಇದು ಒಂದು ಧರ್ಮಸಭೆಯ ಸಂತೋಷ. ಇದು ಒಂದು ಆಧ್ಯಾತ್ಮಿಕತೆಯ ಸಂತೋಷವಾಗಿದೆ."
ಅರ್ಥಪೂರ್ಣವಾದ ಹೆಸರು
ನೂತನ ವಿಶ್ವಗುರು ಆಯ್ಕೆ ಮಾಡಿದ ಲಿಯೋ ಹೆಸರಿನ ಬಗ್ಗೆ ಯೋಚಿಸುತ್ತಾ, ಮೆಟ್ರೋಪಾಲಿಟನ್ ಗುಡ್ಜಿಯಾಕ್ ಅದರ ಐತಿಹಾಸಿಕ ಮತ್ತು ದೈವಶಾಸ್ತ್ರದ ಅನುರಣನದ ಬಗ್ಗೆ ಮಾತನಾಡಿದರು.
ವಿಶ್ವಗುರು ಹದಿನಾಲ್ಕನೇ ಲಿಯೋರವರು ತಮ್ಮ ಪೂರ್ವವರ್ತಿ ಹದಿನಾಲ್ಕನೇ ಲಿಯೋ ಹೆಸರನ್ನು ತೆಗೆದುಕೊಂಡಿದ್ದಾರೆ, "ಅವರು ಕಥೋಲಿಕ ಸಾಮಾಜಿಕ ಸಿದ್ಧಾಂತವನ್ನು ನಿಜವಾಗಿಯೂ ಆಧುನಿಕ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಶುಭಸಂದೇಶವನ್ನು ಆಧರಿಸಿದ ಸಿದ್ಧಾಂತ ಮತ್ತು 19ನೇ ಶತಮಾನದ ಕೈಗಾರಿಕೀಕರಣದ ಸಮಯದಲ್ಲಿ ಬಡವರು ಮತ್ತು ಕಾರ್ಮಿಕರ ದುಃಸ್ಥಿತಿಗೆ ಪ್ರತಿಕ್ರಿಯೆ." ಆದರೆ ಅದು ಮಾರ್ಕ್ಸ್ವಾದ ಮತ್ತು ಕಮ್ಯುನಿಸಂನ ಉದಯಕ್ಕೆ ಪ್ರತಿಕ್ರಿಯೆಯೂ ಆಗಿತ್ತು.
ಆದರೂ ಮಹತ್ವವು ಇನ್ನೂ ಆಳವಾಗಿ ಹೋಗುತ್ತದೆ ಎಂದು ಅವರು ವಿವರಿಸಿದರು, "ಲಿಯೋ 19ನೇ ಶತಮಾನದ ವಿಶ್ವಗುರು ಮಾತ್ರವಲ್ಲ, ವಿಶ್ವಗುರು ಲಿಯೋ ದಿ ಗ್ರೇಟ್ ಬಹಳ ಪ್ರಮುಖ ದೈವಶಾಸ್ತ್ರಜ್ಞರಾಗಿದ್ದರು, ಚಾಲ್ಸೆಡಾನ್ ಸಮ್ಮೇಳನದ ವಿಶ್ವಗುರುವಾಗಿದ್ದರು. ʻನಿಜವಾದ ದೇವರು ಮತ್ತು ನಿಜವಾದ ಮನುಷ್ಯ", ಕ್ರಿಸ್ತರು ಯಾರು ಎಂಬುದನ್ನುಧರ್ಮಸಭೆಯು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದ ಸಮ್ಮೇಳನ ಅದಾಗಿತ್ತು.
ಮೆಟ್ರೋಪಾಲಿಟನ್ ಗುಡ್ಜಿಯಾಕ್ ರವರು ಲಿಯೋ ಎಂಬ ಹೆಸರಿನಲ್ಲಿ ಬೇರೂರಿರುವ ಮತ್ತು ಭವಿಷ್ಯವನ್ನು ನೋಡುವ ದೈವಶಾಸ್ತ್ರೀಯ ಮತ್ತು ಪಾಲನಾ ಸೇವೆಯ ದೃಷ್ಟಿಕೋನವನ್ನು ನೋಡುತ್ತಾರೆ. "ಇದು ಸಿದ್ಧಾಂತದಲ್ಲಿ ಸ್ಪಷ್ಟತೆ ಮತ್ತು ಅತ್ಯಂತ ಆಮೂಲಾಗ್ರ ಸಾಮಾಜಿಕ ಸಂಪರ್ಕವನ್ನು ಒಳಗೊಂಡಿರುವ ಬಹಳ ವಿಶಾಲವಾದ ದೈವಶಾಸ್ತ್ರೀಯ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ. ಹೆಸರಿನ ಆಯ್ಕೆಯಲ್ಲಿ ಆ ಗುಣಲಕ್ಷಣಗಳನ್ನು ಪ್ರತಿನಿಧಿಸಲಾಗುತ್ತದೆ ಮತ್ತು ವಿಶ್ವಗುರು ಹದಿನಾಲ್ಕನೇ ಲಿಯೋರವರು ಫಲಪ್ರದ, ಜೀವ ನೀಡುವ ರೀತಿಯಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ."
ಒಬ್ಬ ಸೌಮ್ಯ ಕುರುಬ
ವಿಶ್ವಗುರುವು ದಯೆ ಮತ್ತು ಪ್ರೀತಿಯ ಭಾಷೆಯಿಂದ ಅಲ್ಲರನ್ನೂ ಮಾತನಾಡಿಸುತ್ತಾರೆ, ನಾವೆಲ್ಲರೂ ದೇವರಿಂದ ಪ್ರೀತಿಸಲ್ಪಟ್ಟಿದ್ದೇವೆ ಎಂದು ಒತ್ತಿ ಹೇಳುತ್ತಾರೆ. ಅವರು ಜಗತ್ತು ಮತ್ತು ಧರ್ಮಸಭೆಗೆ ಸೇತುವೆಗಳನ್ನು ನಿರ್ಮಿಸಲು, ಸಂವಾದದಲ್ಲಿ ತೊಡಗಿಸಿಕೊಳ್ಳಲು, ಎಲ್ಲರೂ ಎಲ್ಲರಿಗೂ ಮುಕ್ತವಾಗಿರಲು ಪ್ರೋತ್ಸಾಹಿಸುತ್ತಾರೆ.
ಪವಿತ್ರ ತಂದೆಯನ್ನು ಆಯ್ಕೆ ಮಾಡಿದ್ದಕ್ಕಾಗಿ, ನಾನು ದೇವರಿಗೆ ಮತ್ತು ಕಾರ್ಡಿನಲ್ಸ್‌ಗೆ ಧನ್ಯವಾದ ಹೇಳುತ್ತೇನೆ ಎಂದು ಮೆಟ್ರೋಪಾಲಿಟನ್ ಗುಡ್ಜಿಯಾಕ್ ರವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. ರೋಮ್‌ನ ಧರ್ಮಾಧ್ಯಕ್ಷರು ನನ್ನೊಂದಿಗೆ, ನಿಮ್ಮೊಂದಿಗೆ ಮತ್ತು ದೇವರ ಪ್ರೀತಿಯ ಬಗ್ಗೆ ನಮ್ಮೆಲ್ಲರೊಂದಿಗೆ ಮಾತನಾಡುತ್ತಾರೆ.