ಪ್ರಭುವಿನ ದಿನದ ಚಿಂತನೆ: ಪುನರುತ್ಥಾನಗೊಂಡ ಪ್ರಭುವನ್ನು ಗುರುತಿಸಲು ವಿಶ್ವಾಸದ ಕಣ್ಣುಗಳು ಬೇಕಾಗುತ್ತವೆ
ಫಾದರ್ ಎಡ್ಮಂಡ್ ಪವರ್, OSB
ಇಂದು ನಾವು ಸಂತ ಯೋವಾನ್ನರ ಶುಭಸಂದೇಶದ ಅಂತಿಮ ಅಧ್ಯಾಯದ ಭಾಗವನ್ನು ಒದುತ್ತೇವೆ. ಶುಭಸಂದೇಶದ ಮೂಲ ಪೂರ್ಣಗೊಂಡ ನಂತರ ಈ ಅಧ್ಯಾಯವನ್ನು ಸೇರಿಸಲಾಗಿದೆ ಎಂದು ಅನೇಕ ವಿದ್ವಾಂಸರು ನಂಬುತ್ತಾರೆ. ಅದು ಏನೇ ಇರಲಿ, ಇದು ಅಂಗೀಕೃತ ಪಠ್ಯದ ಭಾಗವಾಗಿದೆ.
ಪುನರುತ್ಥಾನದ ನಂತರ ಪ್ರಭುಯೇಸುವಿನ ಪ್ರತ್ಯಕ್ಷತೆಗಳನ್ನು ಅರ್ಥಭರಿತ ಆಳವಾದ ವಾಚನಗಳ ಮೂಲಕ, ಉದಾಹರಣೆಗೆ, ಇಂದು ರಾತ್ರಿಯ ನಿಷ್ಪರಿಣಾಮಕಾರಿ ಮೀನುಗಾರಿಕೆ ಪ್ರಯಾಣದಲ್ಲಿ ಭಾಗವಹಿಸುವವರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾದ ಶಿಷ್ಯರೆಲ್ಲರೂ ಹಠಾತ್ ಪ್ರವೃತ್ತಿಯ ವ್ಯಕ್ತಿಗಳು, ಪ್ರಾಮಾಣಿಕರು ಮತ್ತು ಸ್ವಲ್ಪ ಅತ್ಯಾಧುನಿಕತೆ ಹೊಂದಿದ್ದರು, ಎಲ್ಲರೂ ಶುಭಸಂದೇಶದಲ್ಲಿ ಮೊದಲೇ ಉಲ್ಲೇಖಿಸಲ್ಪಟ್ಟಿದ್ದಾರೆ: ಪೇತ್ರ, ಥಾಮಸ್, ನತಾನಯೇಲ್ ಮತ್ತು ಜೆಬೆದಾಯನ ಮಕ್ಕಳು.
ಮೀನುಗಾರಿಕಾ ಪ್ರಯಾಣವು "ಸಾಮಾನ್ಯ" ಜೀವನವನ್ನು ಪುನರಾರಂಭಿಸುವ ಪ್ರಯತ್ನವಾಗಿತ್ತೇ? ಪ್ರಭುಯೇಸುವಿನ ಮರಣದ ನಂತರದ ಗೊಂದಲಮಯ ಸಮಯದಲ್ಲಿ ಪರಿಚಿತ ಮತ್ತು ಸಾಂತ್ವನದಾಯಕವಾಗಿದ್ದ ಜೀವನಕ್ಕೆ ಹಿಂತಿರುಗಲು? ಆದಾಗ್ಯೂ, ಶಿಷ್ಯರಿಗೆ ಏನು ಮಾಡಬೇಕು ಎಂಬ ಅಲೋಚನೆ ತೋಚದ ಕಾರಣ, ಅವರು ಹಳೆಯ ಜೀವನಕ್ಕೆ ಹಿಂತಿರುಗಲು ಯೋಚಿಸುತ್ತಿದ್ದರು. ಇನ್ನು ಆದರೆ, ಹಿಂದೆ ಸರಿಯುವ ಸಾಧ್ಯತೆ ಇಲ್ಲ: ಅವರು ಈಗ ಅಜ್ಞಾತ ಭವಿಷ್ಯಕ್ಕೆ ಎಳೆಯಲ್ಪಡುತ್ತಿದ್ದಾರೆ. ಬೆಳಗಿನ ಜಾವ ಪ್ರಾರಂಭವಾಗುತ್ತಿದ್ದಂತೆಯೇ ಒಬ್ಬ ನಿಗೂಢ ಅಪರಿಚಿತ ವ್ಯಕ್ತಿ ಅವರಿಗೆ ಮೀನುಗಳನ್ನು ಎಲ್ಲಿ ಹಿಡಿಯಬಹುದು ಎಂದು ಹೇಳುತ್ತಾರೆ ಎಂಬ ಸೂಚನೆಯಿದೆ. ಯೂದನ ದ್ರೋಹದ ರಾತ್ರಿ (ಯೋವಾನ 13:30) ಅಂತ್ಯಗೊಳ್ಳುತ್ತಿತ್ತು. ಅವರು ಯಾರೆಂದು ತಿಳಿಯದಿದ್ದರೂ, ಅವರ ವಿಧೇಯತೆ ಹೇಗೆ ಯಶಸ್ಸನ್ನು ಕಂಡಿತು ಎಂಬುದನ್ನು ನಾವು ಇಲ್ಲಿ ನೋಡುತ್ತೇವೆ: ಮೀನಿನ ಪ್ರಮಾಣವು ಹೆಚ್ಚಾಗಿ ಇದುದ್ದರಿಂದ, ಅವರು (ಬಲೆಯನ್ನು) ಎಳೆಯಲು ಸಾಧ್ಯವಾಗಲಿಲ್ಲ. ಪುನರುತ್ಥಾನಗೊಂಡ ಪ್ರಭುವನ್ನು ಗುರುತಿಸುವ ಸಾಮರ್ಥ್ಯಕ್ಕೆ ವಿಶ್ವಾಸದ ಕಣ್ಣುಗಳು ಬೇಕಾಗುತ್ತವೆ. ಅವರ ವಿಶ್ವಾಸವು ಇನ್ನೂ ಸಾಕಷ್ಟು ಬಲವಾಗಿರಲಿಲ್ಲ. ಯೇಸು ಪ್ರೀತಿಸಿದ ಆ ಶಿಷ್ಯನ ಪ್ರವಾದಿಯ ಧ್ವನಿಯೇ ಅವರನ್ನು ಅರಿವಿಗೆ ಕರೆ ತರುತ್ತದೆ. ನಮ್ಮ ನಡುವೆ ಆತನ ಉಪಸ್ಥಿತಿಯನ್ನು ತಿಳಿದುಕೊಳ್ಳುವ ಮತ್ತು ಅದಕ್ಕೆ ಸಾಕ್ಷಿಯಾಗುವ ಮೊದಲು ನಮಗೆಲ್ಲರಿಗೂ ಇತರರ ವಿಸ್ವಾಸ ಮತ್ತು ಪ್ರಭುವಿನೊಂದಿಗಿನ ಪ್ರೀತಿಯ ಸಂಬಂಧದ ಅಗತ್ಯವಿಲ್ಲವೇ? ಮತ್ತು ಆಗಲೂ, ನಮ್ಮ ಮಾನವ ದುರ್ಬಲತೆಯಲ್ಲಿ ಬೇರೂರಿರುವ ಅನುಮಾನಗಳು ಮತ್ತು ಭಯಗಳು ಉಳಿದಿವೆ: ಶಿಷ್ಯರಲ್ಲಿ ಯಾರೂ ಆತನನ್ನು "ನೀನು ಯಾರು?" ಎಂದು ಕೇಳಲು ಧೈರ್ಯ ಮಾಡಲಿಲ್ಲ, ಕಾರಣ, ಅದು ಪ್ರಭುವೇ ಎಂದು ಅವರಿಗೆ ತಿಳಿದಿತ್ತು.
ಇಂದಿನ ಶುಭಸಂದೇಶದ ಸಂಕ್ಷಿಪ್ತ ರೂಪವು ಯೇಸು ಶಿಷ್ಯರಿಗೆ ಮೂರನೇ ಬಾರಿಗೆ ಪ್ರಕಟವಾಗುವುದರಲ್ಲಿ ಮುಕ್ತಾಯಗೊಳ್ಳುತ್ತದೆ. ದೀರ್ಘ ಆವೃತ್ತಿಯು ನೇರವಾಗಿ ಪೇತ್ರನೊಂದಿಗಿನ ಸಂಭಾಷಣೆಯತ್ತ ಚಲಿಸುತ್ತದೆ. ಇದು ಒಂದು ಪ್ರಭಾವಶಾಲಿ ಕ್ಷಣವಾಗಿದೆ. ಪೇತ್ರನ ಮೂರು ಪಟ್ಟು ಪ್ರೀತಿಯ ಘೋಷಣೆಯು ಅವನ ಮೂರು ಪಟ್ಟು ದ್ರೋಹವನ್ನು ರದ್ದುಗೊಳಿಸುತ್ತದೆ ಎಂದು ಸಂತ ಆಗಸ್ಟೀನ್ ರವರು ನೋಡುತ್ತಾರೆ. ಸಂಭಾಷಣೆಯಲ್ಲಿ ಬಳಸಲಾದ "ಪ್ರೀತಿ" ಗಾಗಿ ಎರಡು ವಿಭಿನ್ನ ಗ್ರೀಕ್ ಕ್ರಿಯಾಪದಗಳು ಪೇತ್ರನೂ ಉತ್ತರವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ವಿದ್ವಾಂಸರು ನಂಬುವಂತೆ ಮಾಡಿದೆ, ಆದ್ದರಿಂದ ಯೇಸು ಪ್ರಶ್ನೆಯ ತೀವ್ರತೆಯನ್ನು ಕಡಿಮೆ ಮಾಡುತ್ತಾರೆ. ಏನೇ ಇರಲಿ, ಪ್ರಭುವು ಪೇತ್ರನ ಘೋಷಣೆಯನ್ನು ಸ್ವೀಕರಿಸುತ್ತಾರೆ, ಆತನಿಗೆ ನಿಯೋಜನೆ ನೀಡುತ್ತಾರೆ ಮತ್ತು ನಂತರ ಅವರಿಗೆ ಪಾಸ್ಚಲ್ ರಹಸ್ಯದಲ್ಲಿ ಪೂರ್ಣವಾದ ಭರವಸೆ ನೀಡುತ್ತಾರೆ. ನಾವೂ ದೀಕ್ಷಾಸ್ನಾನ ನೀರಿನಲ್ಲಿ ಮುಳುಗಿದ್ದೇವೆ; ಇದರ ಮೂಲಕ ನಾವು ಪ್ರತಿಯೊಬ್ಬರೂ ಪ್ರಭುವನ್ನು ಅನುಸರಿಸುವ ನಮ್ಮ ವೈಯಕ್ತಿಕ ಮಾರ್ಗವನ್ನು ಅನುಸರಿಸುತ್ತೇವೆ. ಅದು ಪರಿಪೂರ್ಣತೆಯನ್ನು ಅವಲಂಬಿಸಿಲ್ಲ: ಆದರೆ, ಅದು ಪ್ರೀತಿಯ ಮೇಲೆ ಅವಲಂಬಿತವಾಗಿದೆ. ನಾವು ನಮ್ರತೆಯಿಂದ ನಮ್ಮ ಕೈಲಾದಷ್ಟು ಪ್ರಯತ್ನ ಮಾಡಿದರೆ ಪ್ರಭುವು ನಮ್ಮನ್ನು ತಿರಸ್ಕರಿಸುವುದಿಲ್ಲ ಎಂಬುದನ್ನು ನಾವು ಈ ಶುಭಸಂದೇಶದ ವಾಕ್ಯಗಳಲ್ಲಿ ಧ್ಯಾನಿಬಹುದಾಗಿದೆ.