ಪ್ರಭುವಿನ ದಿನದ ಚಿಂತನೆ: ವಿಶ್ವಾಸ
ಅಬಾಟ್ ಮೇರಿಯನ್ ನ್ಗುಯೆನ್
“ಆದರೂ ನಿಮಗೆ ನಂಬಿಕೆಯೆಂಬುದಿಲ್ಲ. ಕಾರಣ ನೀವು ನನ್ನ ನನ್ನ ಕುರಿಗಳಲ್ಲ” (ಯೋವಾನ್ನ 10:26). ಈ ಭಾನುವಾರದ ಶುಭಸಂದೇಶದ ಸ್ವಲ್ಪ ಮೊದಲು ಬಂದ ಯೇಸುವಿನ ಈ ತೀಕ್ಷ್ಣವಾದ ಮಾತುಗಳು, ವಿಶ್ವಾಸದ ಊಹಾ ಭಾಗವನ್ನು ಪ್ರಶ್ನಿಸುತ್ತವೆ. ವಿಶ್ವಾಸವು ದೇವರಲ್ಲಿ ಒಂದಾಗುವುದಕ್ಕೆ ಕಾರಣವಾಗುತ್ತದೆ ಎಂದು ನಾವು ಹೆಚ್ಚಾಗಿ ಭಾವಿಸುತ್ತೇವೆ. ನಾವು ಒಮ್ಮೆ ಬೌದ್ಧಿಕವಾಗಿ ಪ್ರಭುಯೇಸು ಯಾರೆಂದು ಒಪ್ಪಿಕೊಂಡರೆ, ಆತನ ಅನುಯಾಯಿಗಳಲ್ಲಿ ನಾವೂ ಸಹ ಒಂದು ಸ್ಥಾನವನ್ನು ಪಡೆಯಬಹುದು ಎಂದು ನಾವು ಊಹಿಸುತ್ತೇವೆ. ಆದರೆ ಇಲ್ಲಿ ಪ್ರಭುಯೇಸು ಆ ತರ್ಕವನ್ನು ಹಿಮ್ಮುಖಗೊಳಿಸುತ್ತಾರೆ. ಅವರ ದೈವಿಕತೆಯ ಕ್ರಮದಲ್ಲಿ ಒಂದಾಗುವುದು ಮೊದಲು ಬರುತ್ತದೆ. ಅಂತಹವರು ಆತನ ಮಂದೆಗೆ ಸೇರಿದವರು ಮತ್ತು ಆತನೊಂದಿಗೆ ಸತ್ಸಸಂಬಂಧದಲ್ಲಿ ವಾಸಿಸುವವರು ಮಾತ್ರ ಆತನ ಧ್ವನಿಯನ್ನು ನಿಜವಾಗಿಯೂ ಗುರುತಿಸಬಹುದು ಮತ್ತು ವಿಶ್ವಾಸಿಸಬಹುದು. “ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತ್ತಿಸುತ್ತವೆ. ನಾನು ಅವನ್ನು ಬಲ್ಲೆನು, ಅವು ನನ್ನನ್ನು ಹಿಂಬಾಲಸುತ್ತವೆ.”
ಈ ಆಳವಾದ ಸತ್ಯವು ಬೈಬಲ್‌ಗೆ ಮಾತ್ರ ಸೀಮಿತವಾಗಿಲ್ಲ; ಇದು ಧರ್ಮಸಭೆಯ ಧರ್ಮಗುರುಗಳ ಬೋಧನೆಯಲ್ಲಿ ಆಳವಾಗಿ ಬೇರೂರಿದೆ. ಕ್ರಿಸ್ತರ ದೇಹವಾಗಿ ಧರ್ಮಸಭೆಯ ರಹಸ್ಯವನ್ನು ಪ್ರತಿಬಿಂಬಿಸುವ ಸಂತ ಆಗಸ್ಟೀನ್ ರವರು, "ನಾವು, ನಮಗೆ ತಿಳಿದಿರುವ ವಿಷಯಗಳನ್ನು ಪ್ರೀತಿಸುತ್ತೇವೆ, ಹಾಗೆಯೇ ನಾವು ಪ್ರೀತಿಸುವ ವಿಷಯಗಳನ್ನು ಮಾತ್ರ ತಿಳಿದುಕೊಳ್ಳುತ್ತೇವೆ" ಎಂದು ನಮಗೆ ನೆನಪಿಸುತ್ತಾರೆ (ಕೀರ್ತನೆ 118). ಹೃದಯವು ಅರಿವಿಗೆ ಬಾಗಿಲು ತೆರೆಯುತ್ತದೆ. ಅದೇ ರೀತಿ, ಸಂತ ಐರೇನಿಯಸ್ ವಿಶ್ವಾಸವನ್ನು ಕೇವಲ ಪ್ರತಿಪಾದನೆಗಳ ಗುಂಪಾಗಿ ಅಲ್ಲ, ಬದಲಿಗೆ ಧರ್ಮಸಭೆಯೊಳಗಿನ ಜೀವನವಾಗಿ ಹಸ್ತಾಂತರಿಸಲಾಗುತ್ತದೆ ಎಂದು ಕಲಿಸುತ್ತಾರೆ: "ಧರ್ಮಸಭೆಯು ಎಲ್ಲಿದೆಯೋ ಅಲ್ಲಿ ದೇವರ ಆತ್ಮವಿದೆ; ಮತ್ತು ದೇವರ ಆತ್ಮ ಎಲ್ಲಿದೆಯೋ ಅಲ್ಲಿ ಧರ್ಮಸಭೆ ಮತ್ತು ದೇವರ ಅನುಗ್ರಹವಿದೆ" (ಧರ್ಮದ್ರೋಹಿಗಳ ವಿರುದ್ಧವಾಗಿ, III.24.1). ಹಾಗಾದರೆ, ವಿಶ್ವಾಸವು ಪ್ರಾಥಮಿಕವಾಗಿ ಬುದ್ಧಿಶಕ್ತಿಯಲ್ಲಿ ಹುಟ್ಟುವುದಿಲ್ಲ, ಬದಲಿಗೆ ಸಂಬಂಧದಲ್ಲಿ ಹುಟ್ಟುತ್ತದೆ. ನಾವು ದೇವರ ಪ್ರೀತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅದು ಅಗತ್ಯವಾಗಿ ವಿವೇಚನೆಯ ವೈಫಲ್ಯವಲ್ಲ. ಅದು ಪ್ರಭುಯೇಸುವಿನ ಮಾತನ್ನು ಸಮೀಪಿಸಲು, "ಬಂದು ನೋಡು" (ಯೋಹಾನ 1:39) ಎಂದು ಎನ್ನುವ ಕರೆಯನ್ನು ಒಪ್ಪಿಕೊಳ್ಳಲು ಆಹ್ವಾನವಾಗಿರಬಹುದು. ಮೊದಲ ಶಿಷ್ಯರೂ ಸಹ, ಹೀಗೆಯೇ ವಿಶ್ವಾಸಿಸಲು ಪ್ರಾರಂಭಿಸಿದರು. ಅವರು ತಮ್ಮ ವಿಶ್ವಾಸವನ್ನು ಕುತೂಹಲದಿಂದ, ಉಪಸ್ಥಿತಿಯಿಂದ, ಅನುಭವದಿಂದ ಪ್ರಾರಂಭಿಸಿದರು. ಅವರು ಆತನನ್ನು ಹಿಂಬಾಲಿಸಿದರು, ಆತನೊಂದಿಗೆ ಊಟ ಮಾಡಿದರು, ಆತನಿಗೆ ಕಿವಿಗೊಟ್ಟರು ಮತ್ತು ಕಾಲಕ್ರಮೇಣ ಅವರ ಹೃದಯಗಳು ವಿಶ್ವಾಸದಲ್ಲಿ ಜಾಗೃತಗೊಂಡವು.
ಈ ತತ್ವವು ಪ್ರಾಚೀನ ಕ್ರೈಸ್ತರ ಮೂಲತತ್ವದಲ್ಲಿ ಪ್ರತಿಧ್ವನಿಸುತ್ತದೆ: ಲೆಕ್ಸ್ ಒರಾಂಡಿ, ಲೆಕ್ಸ್ ಕ್ರೆಡೆಂಡಿ - "ಪ್ರಾರ್ಥನೆಯ ನಿಯಮವು ವಿಶ್ವಾಸದ ನಿಯಮ." ನಾವು ಮೊದಲು ವಿಶ್ವಾಸಿಸುವುದಿಲ್ಲ ಮತ್ತು ನಂತರ ಪ್ರಾರ್ಥಿಸುವುದಿಲ್ಲ. ಬದಲಿಗೆ, ನಮ್ಮ ಪ್ರಾರ್ಥನೆಯು ನಮ್ಮ ವಿಶ್ವಾಸವನ್ನು ರೂಪಿಸುತ್ತದೆ. ಪ್ರಾರ್ಥನೆಯ ಲಯಗಳಲ್ಲಿ, ಆರಾಧನೆಯ ಮೌನದಲ್ಲಿ, ಕೀರ್ತನೆಗಳ ಪುನರಾವರ್ತನೆಯಲ್ಲಿ, ನಮ್ಮ ಆತ್ಮಗಳು ಕುರುಬನ ಧ್ವನಿಗೆ ತಾಳವಾಗಿರುತ್ತವೆ. ಪ್ರಾರ್ಥನೆಯು ವಿಶ್ವಾಸಕ್ಕೆ ಹಿನ್ನೆಲೆಯಲ್ಲ; ಅದು ವಿಶ್ವಾಸ ಹುಟ್ಟುವ ಮೂಲತಾಣ ಅಥವಾ ಗರ್ಭವಾಗಿದೆ.
ಯೇಸು ತನ್ನ ಕುರಿಗಳು ತನ್ನ ಧ್ವನಿಯನ್ನು ಗುರುತ್ತಿಸುತ್ತವೆ ಎಂದು ಹೇಳುತ್ತಾರೆ, ಅವು ದೈವಶಾಸ್ತ್ರದಲ್ಲಿ ಕರಗತ ಮಾಡಿಕೊಂಡಿರುವುದರಿಂದ ಅಲ್ಲ, ಬದಲಿಗೆ ಅವು ಅವನನ್ನು ಅರಿತಿರುವುದರಿಂದ. ಈ ಅರಿತಿರುವುದನ್ನು ರೂಪಿಸುವ ಸ್ಥಿರತೆ, ಪುನರಾವರ್ತನೆ, ಪರಿಚಿತತೆ ಇದೆ. ಪ್ರೀತಿ ಅಥವಾ ಸ್ನೇಹದಲ್ಲಿರುವಂತೆ, ನಾವು ನಂಬಿಕೆಯನ್ನು ಒಂದೇ ಅರಿವಿನ ಕ್ರಿಯೆಗೆ ಇಳಿಸಲು ಸಾಧ್ಯವಿಲ್ಲ. ಒಟ್ಟಿಗೆ ಕಳೆದ ಸಮಯದ ಮೂಲಕ, ಕುರುಬನ ಕರೆಯನ್ನು ಮತ್ತೆ ಮತ್ತೆ ಕೇಳುವ ಮೂಲಕ ನಂಬಿಕೆ ಅಥವಾ ವಿಶ್ವಾಸ ಬೆಳೆಯುತ್ತದೆ.
ನಾವು ಇದನ್ನು ಎಷ್ಟು ಬಾರಿ ಮರೆತುಬಿಡುತ್ತೇವೆ. ನಾವು ಖಚಿತತೆ, ಸ್ಪಷ್ಟತೆ, ಪುರಾವೆಗಳನ್ನು ಹುಡುಕಿಕೊಂಡು ಹೋಗುತ್ತೇವೆ. ಸರಿಯಾದ ವಿಷಯವನ್ನು ತಿಳಿದುಕೊಳ್ಳುವುದು ನಮ್ಮನ್ನು ಸ್ವಯಂಚಾಲಿತವಾಗಿ ಸರಿಯಾದ ಕೆಲಸವನ್ನು ಮಾಡುವಂತೆ ಮಾಡಿದ ಕೊನೆಯ ಸಮಯ ಯಾವಾಗ? ಇವೆಕ್ಕೆಲ್ಲಾ ಹೆಚ್ಚಾಗಿ, ನಮ್ಮ ಅನುಭವವೇ ನಮ್ಮನ್ನು ಪರಿವರ್ತಿಸುತ್ತದೆ. ಹೃದಯವು ಮುನ್ನಡೆಸುತ್ತದೆ, ಮತ್ತು ಮನಸ್ಸು ಅನುಸರಿಸುತ್ತದೆ. ಆಳವಾದ ವಿಶ್ವಾಸಕ್ಕೆ ದಾರಿ ಯಾವಾಗಲೂ ದೃಢವಾಗಿ ಯೋಚಿಸುವುದರ ಮೂಲಕವಲ್ಲ, ಬದಲಿಗೆ ದೇವರ ಹತ್ತಿರ ಬರುವುದರ ಮೂಲಕ ಎಂಬುದನ್ನು ನೆನಪಿಸಿಕೊಳ್ಳಿ. ಕುರುಬನಿಗೆ ಹತ್ತಿರವಾಗುವುದು. ಆತನ ಮಂದೆಗೆ ಹತ್ತಿರವಾಗುವುದು. ಪ್ರಾರ್ಥನೆ ಮತ್ತು ಸಂಸ್ಕಾರದಲ್ಲಿ ಆತನ ಧ್ವನಿಗೆ ಹತ್ತಿರವಾಗುವುದಾಗಿದೆ.