ಧರ್ಮಸಭೆಯನ್ನು ಪರಿಧಿಗೆ ಕರೆದೊಯ್ದ ವಿಶ್ವಗುರು ಫ್ರಾನ್ಸಿಸ್ ರವರನ್ನು ಸ್ಮರಿಸಿಕೊಳ್ಳುವುದು
ಕ್ಲೌಡಿಯಾ ಟೊರೆಸ್
ದೇವರು ಮತ್ತು ನಮ್ಮ ಸಹೋದರ ಸಹೋದರಿಯರಿಗಾಗಿ ನಮ್ಮನ್ನು ನಾವು ಮುಕ್ತರಾಗಿಸಿಕೊಳ್ಳುವುದು ಮತ್ತು ಶುಭಸಂದೇಶಕ್ಕಾಗಿ ನಮ್ಮನ್ನು ನಾವು ಅಥವಾ ನಮ್ಮ ಜೀವನವನ್ನು ಮುಕ್ತವಾಗಿಸಿಕೊಳ್ಳುವುದು, ಅದನ್ನು ನಮ್ಮ ಜೀವನದ ಮಾರ್ಗದರ್ಶನವಾಗಿ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಪಪುವಾ ನ್ಯೂಗಿನಿಯಾದಲ್ಲಿ ಸೆಪ್ಟೆಂಬರ್ 8, 2024 ರಂದು ಭಾನುವಾರ ನಡೆದ ಪವಿತ್ರ ದಿವ್ಯಬಲಿಪೂಜೆಯ ಸಮಯದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ ದೃಢೀಕರಣವು ಕೇವಲ ಕಾಲ್ಪನಿಕ ಕಲ್ಪನೆಯಾಗಿರಲಿಲ್ಲ. ಅವರಿಗೆ ಅದು ಒಂದು ಮಾರ್ಗದರ್ಶಿ ತತ್ವವಾಗಿತ್ತು, ಅವರ ಸಾವಿಗೆ ಒಂದು ವರ್ಷಕ್ಕಿಂತ ಕಡಿಮೆ ಅಥವಾ ಹಿಂದೆ, ಮೊದಲು ರೋಮ್‌ನಿಂದ ಪೋರ್ಟ್ ಮೋರ್ಸ್ಬಿಗೆ ಪ್ರಯಾಣಿಸಲು ಪ್ರೇರೇಪಿಸಿದ ಅದೇ ತತ್ವ, ದೂರದ ತನ್ನ ಸಹೋದರ ಸಹೋದರಿಯರೊಂದಿಗೆ ಸುವಾರ್ತೆಯ ಆನಂದವನ್ನು ಹಂಚಿಕೊಳ್ಳುವಂತೆ ಮಾಡಿತು.
ದಿವಂಗತ ವಿಶ್ವಗುರುಗಳ 45ನೇ ಪ್ರೇಷಿತ ವಿದೇಶ ಪ್ರಯಾಣವನ್ನು, ಪೋರ್ಟ್ ಮಾರೆಸ್ಬಿಯ ಮಹಾಧರ್ಮಾಧ್ಯಕ್ಷರು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಏಪ್ರಿಲ್ 26 ರಂದು ವಿಶ್ವಗುರು ಫ್ರಾನ್ಸಿಸ್ ರವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ವಿಶ್ವಗುರು ಹದಿನಾಲ್ಕನೇ ಲಿಯೋರವರನ್ನು ಆಯ್ಕೆ ಮಾಡಿದ ಕಾನ್ಕ್ಲೇವ್‌ನಲ್ಲಿ ಭಾಗವಹಿಸಲು ಕಾರ್ಡಿನಲ್ ಜಾನ್ ರಿಬಾಟ್, MSC ರವರು, ಪಪುವಾ ನ್ಯೂಗಿನಿಯಾದಿಂದ ರೋಮ್‌ಗೆ ಪ್ರಯಾಣ ಬೆಳೆಸಿದರು.
ವಿಶ್ವಗುರು ಫ್ರಾನ್ಸಿಸ್ ರವರು ನಮ್ಮೊಂದಿಗೆ ಹೇಗೆ ಪ್ರಯಾಣಿಸಿದ್ದಾರೆಂದು ನಾವು ನೋಡಿದ್ದೇವೆ ಎಂದು ಕಾರ್ಡಿನಲ್ ರವರು ಹೇಳಿದರು, ದಿವಂಗತ ವಿಶ್ವಗುರು ತಮ್ಮ 12 ವರ್ಷಗಳ ವಿಶ್ವಗುರು ಪ್ರೇಷಿತ ಸೇವಾಧಿಕಾರದ ಅವಧಿಯಲ್ಲಿ ಇಟಲಿಯ ಹೊರಗೆ ಪೂರ್ಣಗೊಳಿಸಿದ 47 ಪ್ರೇಷಿತಾಧಿಕಾರದ ಪ್ರಯಾಣಗಳನ್ನು ಉಲ್ಲೇಖಿಸಿದರು. ಅವರು ತೆಗೆದುಕೊಂಡ ಒಂದು ವಿಧಾನವೆಂದರೆ ಪರಿಧಿಗೆ ಹೋಗುವುದು. ಸೆಪ್ಟೆಂಬರ್ 2 ರಿಂದ 13 ರವರೆಗೆ ಕೇವಲ ಎರಡು ವಾರಗಳಲ್ಲಿ, ಫ್ರಾನ್ಸಿಸ್ ಓಷಿಯಾನಿಯಾ ಮತ್ತು ಏಷ್ಯಾ ಎಂಬ ಎರಡು ಖಂಡಗಳಿಗೆ ಪ್ರಯಾಣ ಬೆಳೆಸಿದರು, ಇಂಡೋನೇಷ್ಯಾ, ಪಪುವಾ ನ್ಯೂಗಿನಿಯಾ, ಪೂರ್ವ ಟಿಮೋರ್ ಮತ್ತು ಸಿಂಗಾಪುರಗಳಲ್ಲಿ ತಂಗಿದರು.
2016 ರಲ್ಲಿ ವಿಶ್ವಗುರು ಫ್ರಾನ್ಸಿಸ್ ರವರು ಪಪುವಾ ನ್ಯೂಗಿನಿಯಾದಿಂದ ಮೊದಲ ಕಾರ್ಡಿನಲ್ ಆಗಿ ರಚಿಸಿದ ಕಾರ್ಡಿನಲ್ ರಿಬಾಟ್ ರವರು, ದಿವಂಗತ ವಿಶ್ವಗುರುಗಳು ಕಳೆದ ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಿದ ಇತರ ಮೂರು ದೇಶಗಳಿಂದ ಕಾರ್ಡಿನಲ್‌ಗಳನ್ನು ಸಹ ರಚಿಸಿದ್ದಾರೆ ಎಂದು ಗಮನಿಸಿದರು: ಇಂಡೋನೇಷ್ಯಾದ ಕಾರ್ಡಿನಲ್ ಇಗ್ನೇಷಿಯಸ್ ಸುಹಾರ್ಯೊ ಹಾರ್ಡ್‌ಜೋಟ್ಮೊಡ್ಜೊರವರು, ಪೂರ್ವ ತಿಮೋರ್‌ನ ಮೊದಲ ಕಾರ್ಡಿನಲ್ ವರ್ಜಿಲಿಯೊ ಡೊ ಕಾರ್ಮೊ ಡಾ ಸಿಲ್ವಾರವರು ಮತ್ತು ಸಿಂಗಾಪುರದ ಮೊದಲ ಕಾರ್ಡಿನಲ್ ವಿಲಿಯಂ ಸೆಂಗ್ ಚೈ ಗೋಹ್ ರವರು. ಪಿಎನ್‌ಜಿ ಮತ್ತು ವಿಶಾಲವಾದ ಪೆಸಿಫಿಕ್ ಪ್ರದೇಶವು "ರೋಮ್‌ನಿಂದ ದೂರವಿದ್ದರೂ", ಅವು "ಕಥೋಲಿಕ ಧರ್ಮಸಭೆಯ ಹೃದಯಕ್ಕೆ ತುಂಬಾ ಹತ್ತಿರದಲ್ಲಿವೆ" ಎಂಬ ಅರ್ಜೆಂಟೀನಾದ ವಿಶ್ವಗುರುಗಳ ನಂಬಿಕೆಯನ್ನು ದೃಢಪಡಿಸುವ ಮತ್ತೊಂದು ಸೂಚನೆಯಾಗಿತ್ತು (ಅಧಿಕಾರಿಗಳು, ನಾಗರಿಕ ಸಮಾಜ ಮತ್ತು ರಾಜತಾಂತ್ರಿಕ ದಳದೊಂದಿಗೆ ಸಭೆ, ಪೋರ್ಟ್ ಮೊರೆಸ್ಬಿ, ಪಪುವಾ ನ್ಯೂಗಿನಿಯಾ, 7 ಸೆಪ್ಟೆಂಬರ್ 2024).
ಈಗ, ವಿಶ್ವಗುರು ಹದಿನಾಲ್ಕನೇ ಲಿಯೋರವರು ಕಥೋಲಿಕ ಧರ್ಮಸಭೆಯ ನೂತನ ನಾಯಕರಾಗಿ ಅಧಿಕಾರ ವಹಿಸಿಕೊಂಡ ನಂತರ, ಕಾರ್ಡಿನಲ್ ರಿಬಾಟ್ ರವರು ಹೇಳಿದರು, “ನಾವು ವಿಶ್ವಗುರುಗಳೊಂದಿಗೆ ಕಾರ್ಡಿನಲ್‌ಗಳಾಗಿ ಒಟ್ಟಿಗೆ ಸೇರುವುದು ಬಹಳ ಮುಖ್ಯ ಏಕೆಂದರೆ ನಾವು ಅವರ ಸೃಷ್ಟಿಯಾಗಿದ್ದೇವೆ. ನಾವು ಅವರ ಸೃಷ್ಟಿಯಾಗಿದ್ದೇವೆ, ಏಕೆಂದರೆ ನಾವು ಅವರಿಗೆ ಸಹಾಯ ಮಾಡಬೇಕೆಂದು ಅವರು ಬಯಸಿದ್ದರು ಮತ್ತು ವಿಶ್ವಗುರು ಫ್ರಾನ್ಸಿಸ್ ರವರು ಪರಿಧಿಯಲ್ಲಿ ಕಾರ್ಡಿನಲ್‌ಗಳನ್ನು ರಚಿಸಿದರು... ಮತ್ತು ಅವರ ಉದ್ದೇಶ ಯಾರನ್ನೂ ನಿರ್ಲಕ್ಷಿಸುವುದು ಅಲ್ಲ, ಬದಲಿಗೆ ವಿಶ್ವದ ವಿವಿಧ ಭಾಗಗಳಿಂದ ಬಂದರೂ, ಒಂದೇ ಧರ್ಮಸಭೆಯಾಗಿ ನಮ್ಮೆಲ್ಲರನ್ನೂ ಒಗ್ಗೂಡಿಸುವುದು. ಅದಕ್ಕಾಗಿಯೇ ಭವಿಷ್ಯದಲ್ಲಿ ಧರ್ಮಸಭೆಯ ಅತ್ಯಂತ ಒತ್ತುವ ಅಥವಾ ಒತ್ತಡ ನೀಡುವ ಸವಾಲುಗಳನ್ನು ಪರಿಹರಿಸಲು ಕಾರ್ಡಿನಲ್‌ಗಳ ನಡುವೆ ಇನ್ನೂ ಹೆಚ್ಚಿನ ಸಹಯೋಗ ಮತ್ತು ಸಭೆಗಳು ನಡೆಯಲಿ ಎಂದು ಅವರು ಆಶಿಸುತ್ತಾರೆ.
ಕಾರ್ಡಿನಲ್ ರಿಬಾಟ್ ರವರು ವಿಶ್ವಗುರು ಹದಿನಾಲ್ಕನೇ ಲಿಯೋರವರ ಬಗ್ಗೆ ತಮ್ಮ ಆಶಯವೆಂದರೆ "ಅವರು ಆ ದಿಕ್ಕಿನಲ್ಲಿಯೇ ಮುಂದುವರಿಯುತ್ತಾರೆ, ಧರ್ಮಸಭೆಯು ಮತ್ತು "ಪ್ರಪಂಚದಾದ್ಯಂತದ ಎಲ್ಲಾ ಧರ್ಮಸಭೆಗಳನ್ನು ತಲುಪುತ್ತಾರೆ" ಎಂದು ತಮ್ಮ ಆಶಯವನ್ನು ಹಂಚಿಕೊಂಡರು. ಹಾಗೆ ಮಾಡುವುದರಿಂದ, ಪೇತ್ರರ ಹೊಸ ಉತ್ತರಾಧಿಕಾರಿಯು "ಈ ಅತ್ಯಂತ ಸವಾಲಿನ ಸಮಯದಲ್ಲಿ ನಮ್ಮ ವಿಶ್ವಾಸವನ್ನು ಜೀವಿಸಲು ಆತ್ಮವಿಶ್ವಾಸದಿಂದ ಮುನ್ನಡೆಸಲು ಮತ್ತು ಸತ್ಯಕ್ಕಾಗಿ ದೃಢವಾಗಿ ನಿಲ್ಲಲು ಮತ್ತು ನಮ್ಮ ಸತ್ಯ ಹಾಗೂ ನಮ್ಮ ಭರವಸೆ ಕ್ರಿಸ್ತರೇ ಆಗಿದ್ದಾರೆ. ಅತ್ಯಂತ ವೇಗವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಇವೆಲ್ಲವೂ ಪ್ರಭುಕ್ರಿಸ್ತರ ಕೃಪೆಯಿಂದ ಸಾಧ್ಯವಾಗುತ್ತದೆ ಎಂದು ಅವರು ಆಶಿಸುತ್ತಾರೆ.