MAP

Ongoing conflict and earthquake damage in Myanmar Ongoing conflict and earthquake damage in Myanmar  (AFP or licensors)

ಮ್ಯಾನ್ಮಾರ್ ಧರ್ಮಸಭೆಯು ಒಗ್ಗಟ್ಟು ಮತ್ತು ಸಹಾಯಕ್ಕಾಗಿ ಮನವಿ ಮಾಡುತ್ತದೆ

ಮಾರ್ಚ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ, ಮ್ಯಾನ್ಮಾರ್‌ನಲ್ಲಿರುವ ಧರ್ಮಸಭೆಯು ವಿಶ್ವಗುರು ಹದಿನಾಲ್ಕನೇ ಲಿಯೋರವರ ಆಯ್ಕೆಗೆ ಸಂತೋಷವನ್ನು ವ್ಯಕ್ತಪಡಿಸುತ್ತದೆ ಮತ್ತು ಭೀಕರ ಮಾನವೀಯ ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ಜಗತ್ತಿಗೆ ಮನವಿ ಮಾಡುತ್ತದೆ.

ದೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ಮಾರ್ಚ್ 28 ರಂದು ಮ್ಯಾನ್ಮಾರ್ ನ್ನು ಅಪ್ಪಳಿಸಿದ ವಿನಾಶಕಾರಿ ಭೂಕಂಪ, ವ್ಯಾಪಕ ವಿನಾಶ ಮತ್ತು ಮುಂದುಯುತ್ತಿರುವ ನಾಗರಿಕ ಅಶಾಂತಿಯ ನಂತರ, ಮಂಡಲೇಯಲ್ಲಿರುವ ದೇವಾಲಯದ ಪುನರ್ನಿರ್ಮಾಣದಲ್ಲಿ ಬೆಂಬಲ, ಒಗ್ಗಟ್ಟು ಮತ್ತು ಸಹಾಯಕ್ಕಾಗಿ ತುರ್ತು ಮನವಿಯನ್ನು ಮಾಡಿದೆ.

"ನಾವು ಈಗ ನಮ್ಮ ಭೌತಿಕ ರಚನೆಗಳನ್ನು ಮಾತ್ರವಲ್ಲದೆ, ನಮ್ಮ ಯುದ್ಧ-ಹಾನಿಗೊಳಗಾದ ಸಮುದಾಯಗಳಲ್ಲಿ ಭರವಸೆಯನ್ನು ಸಹ ಪುನರ್ನಿರ್ಮಿಸಬೇಕು" ಎಂದು ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆಗೆ ಕಳುಹಿಸಿದ ಹೇಳಿಕೆಯಲ್ಲಿ, ಮಂಡಲೆ ಮಹಾಧರ್ಮಕ್ಷೇತ್ರದ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ಫಾದರ್ ಪೀಟರ್ ಕೈ ಮಾಂಗ್ ರವರು ವಿವರಿಸಿದ್ದಾರೆ.

"ನಮ್ಮ ಧರ್ಮಸಭೆಯ ಸಮುದಾಯಗಳನ್ನು ಪುನಃಸ್ಥಾಪಿಸಲು ಸಹಾಯ ಮಾಡಲು ನಾವು ನಮ್ಮ ತುರ್ತು ಮನವಿಯನ್ನು ನವೀಕರಿಸುತ್ತೇವೆ" ಎಂದು ಅವರು ಪುನರುಚ್ಚರಿಸಿದರು.

ವಿಚಾರಣೆಯ ಸಮಯ
ಮಂಡಲೆ ಧರ್ಮಕ್ಷೇತ್ರದ ತುರ್ತು ರಕ್ಷಣಾ ತಂಡವು ದೇವಾಲಯಗಳು, ಪಾಲನಾ ಕೇಂದ್ರದ ಕಟ್ಟಡಗಳು, ಧರ್ಮೋಪದೇಶ ತರಗತಿಯ ಕೊಠಡಿಗಳು ಮತ್ತು ಸಮುದಾಯ ಕೇಂದ್ರಗಳಿಗೆ ಎದುರಾದ ಹಾನಿಯನ್ನು ಸಕ್ರಿಯವಾಗಿ ಹಂತ ಹಂತವಾಗಿ ಸರಿಪಡಿಸುತ್ತಿದೆ, ಧರ್ಮಗುರುವಿನ ಪ್ರಕಾರ, "ತುರ್ತಾಗಿ ಪುನಃಸ್ಥಾಪನೆಯ ಅಗತ್ಯವಿದೆ."

ಪುನರ್ನಿರ್ಮಾಣವು ಭೌತಿಕ ಚೇತರಿಕೆಗೆ ಮಾತ್ರವಲ್ಲ, ಆಧ್ಯಾತ್ಮಿಕ ಮತ್ತು ಸಾಮುದಾಯಿಕ ಪುನರುಜ್ಜೀವನಕ್ಕೂ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

"ಇದು ಪರೀಕ್ಷೆಯ ಸಮಯ" ಎಂದು ಧರ್ಮಗುರು ಕೈ ಮಾಂಗ್ ರವರು ಒತ್ತಾಯಿಸಿದರು, ಏಕೆಂದರೆ ಅವರು ಎಲ್ಲೆಡೆ ಭಕ್ತವಿಶ್ವಾಸಿಗಳ ಬೆಂಬಲವನ್ನು ಮನವಿ ಮಾಡಿಕೊಳ್ಳಿತ್ತಿದ್ದಾರೆ.

ಈ ಕಷ್ಟಗಳ ಹೊರತಾಗಿಯೂ, ಮ್ಯಾನ್ಮಾರ್‌ನಲ್ಲಿರುವ ಕಥೋಲಿಕ ಸಮುದಾಯವು ವಿಶ್ವಗುರು ಹದಿನಾಲ್ಕನೇ ಲಿಯೋರವರ ಆಯ್ಕೆಯನ್ನು ಆಶಾವಾದ ಮತ್ತು ಭರವಸೆಯಿಂದ ಆಚರಿಸುತ್ತಿದೆ.

ಶಾಂತಿಯನ್ನು ಬೆಂಬಲಿಸಲು ಆಹ್ವಾನ
ಮಂಡಲೆಯ ಮಹಾಧರ್ಮಾಧ್ಯಕ್ಷರಾದ ಮಾರ್ಕೊ ಟಿನ್ ವಿನ್ ರವರು ಹೊಸ ವಿಶ್ವಗುರುವಿಗೆ ಹೃತ್ಪೂರ್ವಕ ಅಭಿನಂದನೆ ಸಂದೇಶವನ್ನು ನೀಡಿ, "ಮ್ಯಾನ್ಮಾರ್‌ನಲ್ಲಿ ಶಾಂತಿಯನ್ನು ಬೆಂಬಲಿಸಲು" ಆಹ್ವಾನಿಸಿದರು.

ವಿಶ್ವಗುರುವಿನ ಆಯ್ಕೆಯು ಧಾರ್ಮಿಕ ಕ್ಷೇತ್ರಗಳನ್ನು ಮೀರಿ ಜನರಿಂದ ಆಸಕ್ತಿಯನ್ನು ಸೆಳೆದಿದೆ ಎಂದು ಮಂಡಲೆಯ ಮಹಾಧರ್ಮಾಧ್ಯಕ್ಷರಾದ ಟಿನ್ ವಿನ್ ರವರು ಹೇಳಿದರು.

"ಬೌದ್ಧರು, ಮುಸ್ಲಿಮರು ಮತ್ತು ಪ್ರೊಟೆಸ್ಟೆಂಟರು ಸೇರಿದಂತೆ ಅನೇಕ ಕಥೋಲಿಕರಲ್ಲದವರು ಚುನಾವಣೆಯನ್ನು ಆಸಕ್ತಿಯಿಂದ ವೀಕ್ಷಿಸಿದರು. ಇದು ನಮಗೆ ಸಾಕ್ಷಿ ಮತ್ತು ಸುವಾರ್ತಾಬೋಧನೆಯ ಕ್ಷಣವಾಯಿತು" ಎಂದು ಅವರು ಹೇಳಿದರು.

'ಧ್ವನಿಯಿಲ್ಲದವರಿಗೆ ಧ್ವನಿ'
ಅಂತಿಮವಾಗಿ, ಡೊಮಿನಿಕನ್ ಧರ್ಮಗುರು ಪೌಲ್ ಆಂಗ್ ಮೈಂಟ್ ಕಾರ್ಡಿನಲ್ ರವರ ಭಾವನೆಗಳನ್ನು ಪ್ರತಿಧ್ವನಿಸಿದರು.

ವಿಶ್ವಗುರು ಲಿಯೋರವರು ಮ್ಯಾನ್ಮಾರ್ ಮತ್ತು ಇತರೆಡೆಗಳಲ್ಲಿ ಮರೆತುಹೋದವರು, ಬಳಲುತ್ತಿರುವವರು, ಬಡವರು ಮತ್ತು ಅನೇಕ ನಿರಾಶ್ರಿತರ ಬಗ್ಗೆ ಗಮನ ಹರಿಸುತ್ತಾರೆ ಎಂದು ನಮಗೆ ಖಚಿತವಾಗಿದೆ, "ಅವರು ಧ್ವನಿಯಿಲ್ಲದವರಿಗೆ ಧ್ವನಿಯಾಗಿರುತ್ತಾರೆ" ಎಂದು ಧರ್ಮಗುರು ಹೇಳಿದರು.
 

15 ಮೇ 2025, 11:52