'ವಿಶ್ವಗುರುವೊಂದಿಗೆ ಹಾಡಿರಿ': ದೇವರೊಂದಿಗಿನ ಸಂಪರ್ಕದಲ್ಲಿ ಹಾಡಿ ಹೊಗಳಿರಿ
ಕೀಲ್ಸ್ ಗುಸ್ಸಿ
ಮೊದಲ "ಸಿಂಗ್ ವಿತ್ ದಿ ಪೋಪ್" ವೀಡಿಯೊದಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ವೀಡಿಯೊಗಳೊಂದಿಗೆ, ಧರ್ಮಗುರು ರಾಬರ್ಟ್ ಮೆಹ್ಲ್‌ಹಾರ್ಟ್, OPರವರು, ಜನರು, ಅವರ ಹಾಡಿನ ಸರಣಿಗೆ ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳುತ್ತಾರೆ.
ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಪಾಂಟಿಫಿಕಲ್ ಇನ್‌ಸ್ಟಿಟ್ಯೂಟ್ ಆಫ್ ಸೇಕ್ರೆಡ್ ಮ್ಯೂಸಿಕ್‌ನ ಅಧ್ಯಕ್ಷರು ಇದು ಒಂದು ಆವೇಶಪೂರಿತ ಕಲ್ಪನೆ ಎಂದು ಹಂಚಿಕೊಂಡಿದ್ದಾರೆ.
ವಿಶ್ವಗುರು ಹದಿನಾಲ್ಕನೇ ಲಿಯೋರವರು ತನ್ನ ಮೊದಲ ತ್ರಿಕಾಲ ಪ್ರಾರ್ಥನೆಯ ಶುಭಾಶಯದ ಸಮಯದಲ್ಲಿ ಹಾಡನ್ನು ಹಾಡುವುದನ್ನು ನೋಡಿದ ನಂತರ, ಜನರು ಹೆಚ್ಚು ತಮ್ಮನ್ನು ತಾವು ಈ ಹಾಡಿನೊಂದಿಗೆ ಭಾಗಿಯಾಗಲು ಸಹಾಯ ಮಾಡುವ ಅವಕಾಶ ತನಗೆ ಸಿಕ್ಕಿದೆ ಎಂದು ಅವರು ಅರಿತುಕೊಂಡರು. "ವಿಶ್ವಗುರು ತಮ್ಮ ಜನರನ್ನು ಉದ್ದೇಶಿಸಿ ಮಾತನಾಡುವುದನ್ನು ನಾನು ನೋಡಿದೆ," ಎಂದು ಧರ್ಮಗುರು ಮೆಲ್ಹಾರ್ಟ್ ರವರು ವಿವರಿಸುತ್ತಾರೆ.
ಆದರೆ "ಅವರೊಂದಿಗೆ ಸೇರಲು ಇಷ್ಟಪಡುವ ಜನರು ಇದ್ದರು, ಆದರೆ ಅವರು ನಿಜವಾಗಿಯೂ ಸಿದ್ಧರಿರಲಿಲ್ಲ" ಎಂಬುದನ್ನು ಅವರು ಗಮನಿಸಿದರು. ಅವರು ತಕ್ಷಣ ಡೊಮಿನಿಕ್ ಸಭೆಯವರು ಹೇಗೆ ಸಹಾಯ ಹಸ್ತ ನೀಡಬಹುದೆಂದು ಯೋಚಿಸಿದರು. ಅದರೊಂದಿಗೆ, "ಲೆಟ್ಸ್ ಸಿಂಗ್ ವಿತ್ ದಿ ಪೋಪ್" (ವಿಶ್ವಗುರುವೊಂದಿಗೆ ಹಾಡೋಣ) ಹಾಡಿನ ಸರಣಿ ಹುಟ್ಟಿಕೊಂಡಿತು.
ಅದು ಕಾಣುವಷ್ಟು ಸುಲಭವಲ್ಲ
ಸಂತ ಪೇತ್ರರ ಚೌಕದಲ್ಲಿ ದೈವರಾಧನೆಯ ವಿಧಿಯ ಸಮಯದಲ್ಲಿ ಹಾಡುವುದು ಕಾಣುವಷ್ಟು ಸುಲಭವಲ್ಲ ಎಂದು ಧರ್ಮಗುರು ಮೆಹ್ಲ್ಹಾರ್ಟ್ ರವರು ಒಪ್ಪಿಕೊಳ್ಳುತ್ತಾರೆ. ಅದನ್ನು ಅನುಸರಿಸುವುದು ಕಷ್ಟ, ಏಕೆಂದರೆ, ಅವರು ಹೇಳುತ್ತಾರೆ, "ನೀವು ನಿಜವಾಗಿಯೂ ಇನ್ನೊಬ್ಬರು ಹಾಡುವುದನ್ನು ಅಷ್ಟು ಚೆನ್ನಾಗಿ ಕೇಳಿಸಿಕೊಳ್ಳಲು ಸಾಧ್ಯವಿಲ್ಲ."
ಆ ವ್ಯಕ್ತಿಗೆ ಸಂಗೀತದ ಹಿನ್ನೆಲೆ ಇದ್ದರೆ ಅಥವಾ "ಪದಗಳು ಯಾವುವು ಮತ್ತು ಮಧುರ ಹೇಗೆ ಹೋಗುತ್ತದೆ" ಎಂದು ತಿಳಿಯಲು ಹಾಡನ್ನು ಮೊದಲೇ ಕೇಳಿಸಿಕೊಳ್ಳಲು ಅವಕಾಶ ಸಿಕ್ಕಿದ್ದರೆ ಸಹಾಯವಾಗುತ್ತದೆ.
ಹಾಡುವುದು ಕ್ರೈಸ್ತರ ಆಚರಣೆಗಳ ಅವಿಭಾಜ್ಯ ಅಂಗವಾಗಿದೆ ಎಂದು ಡೊಮಿನಿಕ್ ಸಭೆಯ ಧರ್ಮಗುರು ಒಪ್ಪುತ್ತಾರೆ. ಆದರೂ, ನೀವು ಶಾಸ್ತ್ರೀಯವಾಗಿ ತರಬೇತಿ ಪಡೆದಿರಲಿ ಅಥವಾ ನಿಮ್ಮ ಏಕೈಕ ಅನುಭವ ಕರೋಕೆ ಹಾಡುವುದಾಗಿದ್ದರೂ, ನಿಮ್ಮ ಸಂಗೀತ ಕೌಶಲ್ಯಗಳು ನಿಮ್ಮನ್ನು ಕ್ರೈಸ್ತ ಧರ್ಮಸಭೆಯ ದೈವಾರಾಧನಾ ವಿಧಿಯ ಪ್ರಾರ್ಥನೆಗಳಲ್ಲಿ ಭಾಗವಹಿಸುವುದನ್ನು ತಡೆಯಬಾರದು.
"ಕ್ರೈಸ್ತರು ಹಾಡುತ್ತಾರೆ; ಸಂತ ಆಗಸ್ತೀನರು ನಮಗೆ ನೆನಪಿಸುವಂತೆ ಪ್ರೇಮಿಗಳು ಹಾಡುತ್ತಾರೆ ಮತ್ತು ಕ್ರೈಸ್ತರು ದೇವರನ್ನು ಪ್ರೀತಿಸುವಂತೆಯೇ ಪ್ರೇಮಿಗಳೂ ಆಗಿರುತ್ತಾರೆ" ಎಂದು ಧರ್ಮಗುರು ಮೆಹ್ಲ್ಹಾರ್ಟ್ ರವರು ಗಮನಸೆಳೆದಿದ್ದಾರೆ. ಹಾಗಾಗಿ, ನಾವು ಸಂಗೀತ ಮತ್ತು ಹಾಡಿನಲ್ಲಿ ಮುಳುಗಿದಾಗ, ಅದು ಶ್ರುತಿಯಲ್ಲಿರಲಿ ಅಥವಾ ಇಲ್ಲದಿರಲಿ, ನಾವು ಅದನ್ನು "ಮಾನವೀಯತೆ ಮತ್ತು ದೇವರೊಂದಿಗೆ ಸಂವಹನದಲ್ಲಿ" ಮಾಡುತ್ತೇವೆ.