MAP

 Laudato si' Award Ceremony Laudato si' Award Ceremony  (CREDIT: OFM)

ಸಾರ್ವತ್ರಿಕ ಪರಿಷತ್ತಿನ ಪಿತೃಪ್ರಧಾನ ಬಾರ್ತಲೋಮಿಯೊ I ರವರು ಲೌದಾತೋ ಸಿ' ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ

ಆರ್ಡರ್ ಆಫ್ ಫ್ರಿಯರ್ಸ್ ಮೈನರ್, ಕಾನ್ಸ್ಟಾಂಟಿನೋಪಲ್‌ನ ಸಾರ್ವತ್ರಿಕ ಪರಿಷತ್ತಿನ ಪಿತೃಪ್ರಧಾನರಿಗೆ ದೈವಶಾಸ್ತ್ರಜ್ಞರಾದ ಲಿಯೊನಾರ್ಡೊ ಬಾಫ್, ಪ್ಯಾನ್-ಅಮೆಜೋನಿಯನ್ ಎಕ್ಲೇಷಿಯಲ್ ನೆಟ್‌ವರ್ಕ್ (REPAM) ಮತ್ತು ಲೌದಾತೊ ಸಿ’ ಮೂವ್‌ಮೆಂಟ್‌ ಜೊತೆಗೆ 2025 ರ ಲೌದಾತೊ ಸಿ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.

ಗೇಬ್ರಿಯಲ್ ಲೋಪೆಜ್ ಸಾಂತಮಾರಿಯಾ

ಪಾಂಟಿಫಿಕಲ್ ಆಂಟೋನಿಯನಮ್ ವಿಶ್ವವಿದ್ಯಾಲಯವು ಲೌದಾತೊ ಸಿ' ಪ್ರಶಸ್ತಿ ಸಮಾರಂಭವನ್ನು ಆಯೋಜಿಸಿತ್ತು, ಇದು ಇಬ್ಬರು ವ್ಯಕ್ತಿಗಳು ಮತ್ತು ಎರಡು ಸಂಸ್ಥೆಗಳನ್ನು ಗೌರವಿಸಿತು.

ಮೊದಲ ಪ್ರಶಸ್ತಿಯನ್ನು ಕಾನ್ಸ್ಟಾಂಟಿನೋಪಲ್‌ನ ಸಾರ್ವತ್ರಿಕ ಪರಿಷತ್ತಿನ ಪಿತೃಪ್ರಧಾನ ಬಾರ್ತಲೋಮಿಯೊ I ರವರ ಅಸಾಧಾರಣ ಪರಿಸರ ನಾಯಕತ್ವಕ್ಕಾಗಿ, ವಿಶೇಷವಾಗಿ ವಿಶ್ವಗುರು ಫ್ರಾನ್ಸಿಸ್ ರವರ ಮೇಲೆ ಅವರ ಆಳವಾದ ಪ್ರಭಾವಕ್ಕಾಗಿ ಸ್ವೀಕರಿಸಲಾಯಿತು.

ಅವರ ಪ್ರೇರಣೆ ಎರಡು ಪ್ರಮುಖ ಉಪಕ್ರಮಗಳಿಗೆ ಕೇಂದ್ರವಾಗಿತ್ತು: ಲೌದಾತೊ ಸಿ' ಎಂಬ ವಿಶ್ವಪರಿಪತ್ರ ಮತ್ತು ಸೆಪ್ಟೆಂಬರ್ 1 ರಂದು ವಾರ್ಷಿಕವಾಗಿ ಆಚರಿಸಲಾಗುವ "ಸೃಷ್ಟಿಯ ಆರೈಕೆಗಾಗಿ ವಿಶ್ವ ಪ್ರಾರ್ಥನಾ ದಿನ" ದ ಸ್ಥಾಪನೆಯ ಸ್ಮರಣೆಯಾಗಿ ಆಚರಿಸಲಾಗುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು ಎರಡೂ ಪ್ರಯತ್ನಗಳಲ್ಲಿ ಬಾರ್ತಲೋಮಿಯೊರವರನ್ನು, ಸಾಮಾನ್ಯವಾಗಿ "ಗ್ರೀನ್ ಪೇಟ್ರಿಯಾರ್ಕ್" ಎಂದು ಉಲ್ಲೇಖಿಸಿದ್ದಾರೆ ಎಂದು ಮಾಡರೇಟರ್‌ಗಳು ಎತ್ತಿ ತೋರಿಸಿದರು.

ತಮ್ಮ ಸ್ವೀಕಾರ ಭಾಷಣದಲ್ಲಿ, ಪಿತೃಪ್ರಧಾನರು ಕಥೋಲಿಕ ಧರ್ಮಸಭೆಯು ಸೆಪ್ಟೆಂಬರ್ 1 ರ ಆಚರಣೆಯನ್ನು ಅಳವಡಿಸಿಕೊಂಡ ಮೂಲಕ ಪ್ರತಿನಿಧಿಸುವ ಸಾರ್ವತ್ರಿಕ ಪರಿಷತ್ತಿನ ಮೈಲಿಗಲ್ಲನ್ನು ಎತ್ತಿ ತೋರಿಸಿದರು.

ಇದರ ಆಳವಾದ ಸಾಂಕೇತಿಕ ಅರ್ಥ ಮತ್ತು ಸಾಂಪ್ರದಾಯಿಕ ಸಂಪ್ರದಾಯದಲ್ಲಿ ಪ್ರಾಚೀನ ಮೂಲಗಳಿಂದಾಗಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಪ್ರಿಯತೆಯು ಇತರ ಅನೇಕ ಕ್ರೈಸ್ತ ಧರ್ಮದ ಪಂಗಡಗಳು ತಮ್ಮ ದೈವಾರಾಧನಾ ವಿಧಿ ಪ್ರಾರ್ಥನೆಯ ಪಂಚಾಂಗಗಳಲ್ಲಿ ಇದನ್ನು ಸಂಯೋಜಿಸಲು ಪ್ರೋತ್ಸಾಹಿಸುತ್ತಿದೆ. ಈ ಕ್ರೈಸ್ತ ಧರ್ಮದ ಬೆಳವಣಿಗೆಯನ್ನು ಬೆಳೆಸುವಲ್ಲಿ ಮತ್ತು ಬೆಂಬಲಿಸುವಲ್ಲಿ ಪಿತೃಪ್ರಧಾನ ಬಾರ್ತಲೋಮಿಯೋರವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಈ ಕಾರ್ಯಕ್ರಮದ ಸಮಯದಲ್ಲಿ ಒಪ್ಪಿಕೊಂಡರು.

ನಂತರ ಅವರು ಒಂದು ಪ್ರಬಲ ಹೇಳಿಕೆಯನ್ನು ನೀಡಿದರು: “ನಿಜವಾದ ಮಾನವ ಪರಿವರ್ತನೆ ಇಲ್ಲದಿದ್ದರೆ, ಪರಿಸರ ಬಿಕ್ಕಟ್ಟನ್ನು ಪರಿಹರಿಸಲಾಗುವುದಿಲ್ಲ. ಪರಿಸರಕ್ಕೆ ಹಾನಿ ಮಾಡುವ ಯಾವುದೇ ಮಾನವ ಕ್ರಿಯೆಯನ್ನು ಗಂಭೀರ ಪಾಪವೆಂದು ಪರಿಗಣಿಸಬೇಕು.

ಐತಿಹಾಸಿಕ ಆಚರಣೆ
ಲಿಯೊನಾರ್ಡೊ ಬಾಫ್, REPAM (ಪ್ಯಾನ್-ಅಮೆಜೋನಿಯನ್ ಎಕ್ಲೇಷಿಯಲ್ ನೆಟ್‌ವರ್ಕ್) ಮತ್ತು ಲೌದಾತೊ ಸಿ’ ಚಳುವಳಿಯನ್ನು ಗೌರವಿಸಿದ ಸಮಾರಂಭವು ಮೂರು ಮಹತ್ವದ ವಾರ್ಷಿಕೋತ್ಸವಗಳೊಂದಿಗೆ ಹೊಂದಿಕೆಯಾಯಿತು. ಕ್ಯಾಂಟಿಕಲ್‌ ಜೀವಿಗಳ 800ನೇ ವಾರ್ಷಿಕೋತ್ಸವ, ಲೌದಾತೊ ಸಿ’ ನ 10ನೇ ವಾರ್ಷಿಕೋತ್ಸವ ಮತ್ತು ನೈಸಿಯಾದ ಮೊದಲ ಸಾರ್ವತ್ರಿಕ ಪರಿಷತ್ತಿನ 1,700ನೇ ವಾರ್ಷಿಕೋತ್ಸವ.

"ಈ ಪ್ರಶಸ್ತಿಗಳು ಕೇವಲ ಸ್ವೀಕೃತಿಗಳಲ್ಲ, ಬದಲಿಗೆ ಪರಿಸರ ಪರಿವರ್ತನೆಗೆ ಸಾರ್ವತ್ರಿಕ ಕರೆಯ ಸಂಕೇತಗಳಾಗಿವೆ" ಎಂದು ಫ್ರಾನ್ಸಿಸ್ಕನ್ ಸಭೆಯ ಆದೇಶದ ಮಂತ್ರಿಯಾದ ಪ್ರಧಾನ ಧರ್ಮಗುರು ಮಾಸ್ಸಿಮೊ ಫುಸರೆಲ್ಲಿರವರು ಘೋಷಿಸಿದರು.

"ಪ್ರಶಸ್ತಿ ಸ್ವೀಕರಿಸುವ ಪ್ರತಿಯೊಬ್ಬರು ಈ ಹಂಚಿಕೆಯ ಬದ್ಧತೆಯ ವಿಶಿಷ್ಟ ಪಾಲನೆಯನ್ನು ಪ್ರತಿನಿಧಿಸುತ್ತಾರೆ" ಎಂದು ಅವರು ಹೇಳಿದರು, "ಸೃಷ್ಟಿಯನ್ನು, ದೇವರ ಕೊಡುಗೆ ಎಂದು ಗುರುತಿಸಿ ಮತ್ತು ಎಲ್ಲಾ ಜೀವಿಗಳೊಂದಿಗೆ ಆತನನ್ನು ಸ್ತುತಿಸಿ" ಎಂದು ಎಲ್ಲರೂ ಒತ್ತಾಯಿಸಿದರು.

ಅಗತ್ಯ ಪರಿವರ್ತನೆ
"ಸಮಗ್ರ ಪರಿಸರ ವಿಜ್ಞಾನಕ್ಕೆ ನಮ್ಮ ಬದ್ಧತೆಗಾಗಿ ಈ ಮನ್ನಣೆಯನ್ನು ಪಡೆಯುವುದು ಒಂದು ದೊಡ್ಡ ಗೌರವವಾಗಿದೆ" ಎಂದು ಪಿತೃಪ್ರಧಾನ ಬಾರ್ತಲೋಮಿಯೊರವರು ಹೇಳಿದರು, ಈ ಪ್ರಶಸ್ತಿಯು ಕಾನ್ಸ್ಟಾಂಟಿನೋಪಲ್‌ನ ಸಂಪೂರ್ಣ ಧರ್ಮಸಭೆಗೆ ಸೇರಿದೆ ಎಂದು ಒತ್ತಿ ಹೇಳಿದರು.

1980ರ ದಶಕದಲ್ಲಿಯೇ, ಸಾಂಪ್ರದಾಯಿಕ ಕ್ರೈಸ್ತ ಧರ್ಮವು ಹವಾಮಾನ ಬಿಕ್ಕಟ್ಟಿನ ಬಗ್ಗೆ ಎಚ್ಚರಿಕೆ ನೀಡುತ್ತಿತ್ತು, ಇದು ಇತ್ತೀಚಿನ ವರ್ಷಗಳಲ್ಲಿ ಇನ್ನಷ್ಟು ಹದಗೆಟ್ಟಿದೆ ಎಂದು ಅವರು ನೆನಪಿಸಿಕೊಂಡರು.

"ಸೃಷ್ಟಿಯೊಂದಿಗೆ ಮಾನವೀಯತೆಯ ಸಂಬಂಧದ ಮಹತ್ವವನ್ನು ಆರಂಭಿಕ ಧರ್ಮಸಭೆಯು ಸ್ಪಷ್ಟವಾಗಿ ಅರ್ಥಮಾಡಿಕೊಂಡಿತ್ತು" ಎಂದು ಅವರು ಪುನರುಚ್ಚರಿಸಿದರು. ಆದರೂ ಇತಿಹಾಸದುದ್ದಕ್ಕೂ, ಮಾನವರು ಮತ್ತು ಕೆಲವೊಮ್ಮೆ ಚರ್ಚುಗಳು ಸ್ವತಃ ಸೃಷ್ಟಿಕರ್ತ, ಸೃಷ್ಟಿ ಮತ್ತು ಎಲ್ಲಾ ಸೃಷ್ಟಿಜೀವಿಗಳ ನಡುವಿನ ಆಂತರಿಕ ಮತ್ತು ಅವಿನಾಭಾವ ಸಂಬಂಧವನ್ನು ಗ್ರಹಿಸಲು ವಿಫಲವಾಗಿವೆ ಎಂದು ಹೇಳುತ್ತಾರೆ.

ಈಕ್ವೆಡಾರ್‌ನಲ್ಲಿರುವ ಪುಯೊದ ಧರ್ಮಪ್ರಾಂತ್ಯದ ಪ್ರೇಷಿತ ಶ್ರೇಷ್ಠ ಧರ್ಮಾಧ್ಯಕ್ಷರಾದ ರಾಫೆಲ್ ಕೋಬ್ ಗಾರ್ಸಿಯಾರವರು REPAM ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಜೂಬಿಲಿ ವರ್ಷವನ್ನು ಉಲ್ಲೇಖಿಸಿ ಅವರು, "ದೇವರು ನಮಗೆ ವಾಗ್ದಾನ ಮಾಡಿದ ಸ್ವರ್ಗದ ಕಡೆಗೆ ನಾವು ಭರವಸೆಯ ಯಾತ್ರಿಕರಾಗಿ ನಡೆಯುತ್ತೇವೆ" ಎಂದು ಹೇಳಿದರು.

ಲೌದಾತೊ ಸಿ' ಚಳುವಳಿಯ ಕಾರ್ಯನಿರ್ವಾಹಕ ನಿರ್ದೇಶಕಿ ಲೋರ್ನಾ ಗೋಲ್ಡ್ ರವರು ತಮ್ಮ ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ನಾವು ಪರಿಸರ ವಿಜ್ಞಾನದ ತಿರುವಿನ ಹಂತದಲ್ಲಿದ್ದೇವೆ, ಅದು ಆತ್ಮಸಾಕ್ಷಿಯ ಪೂರ್ಣ ಪ್ರಮಾಣದ ಬಿಕ್ಕಟ್ಟಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. "ವಿಶ್ವಾಸದ ಜನರಾಗಿ, ಈ ಕರಾಳ ಕ್ಷಣವನ್ನು ಕೈರೋಸ್ ಗಿ ಪರಿವರ್ತಿಸಲು ನಾವು ಒಂದಾಗಬೇಕು – ಈದು ಒಂದು ದೈವಿಕ ಅವಕಾಶದ ಸಮಯವಾಗಿದೆ ಎಂದು ಅವರು ಹೇಳಿದರು.
 

31 ಮೇ 2025, 15:16