MAP

Fr. Sanford Rodrigues of the Archdiocese of Goa received the ‘Francis of Assisi and Carlo Acutis, for an economy of fraternity’ award in Assisi Fr. Sanford Rodrigues of the Archdiocese of Goa received the ‘Francis of Assisi and Carlo Acutis, for an economy of fraternity’ award in Assisi 

ಗೋವಾದ ಯೋಜನೆಗೆ ಪ್ರಶಸ್ತಿ

ಭಾರತದ ಗೋವಾದಲ್ಲಿ ದೌರ್ಜನ್ಯಕ್ಕೆ ಒಳಗಾದ ಯುವಕರು, ಸಂತ್ರಸ್ತರುಗಳು ಮತ್ತು ಬದುಕುಳಿದವರೊಂದಿಗೆ ಮಾಡಿದ ಕೆಲಸಕ್ಕಾಗಿ ಪ್ರಾಜೆಕ್ಟ್ ಹೋಪ್ 'ಫ್ರಾನ್ಸಿಸ್ ಆಫ್ ಅಸ್ಸಿಸಿ ಮತ್ತು ಕಾರ್ಲೊ ಅಕ್ಯುಟಿಸ್, ಫಾರ್ ಆನ್ ಎಕಾನಮಿ ಆಫ್ ಫ್ರಾಟ್ರರಿಟಿ' ಪ್ರಶಸ್ತಿಯನ್ನು ಪಡೆಯುತ್ತದೆ.

ಕೀಲ್ಸ್ ಗುಸ್ಸಿ

ಭಾನುವಾರ, ಮೇ 25 ರಂದು, "ಫ್ರಾನ್ಸಿಸ್ ಆಫ್ ಅಸ್ಸಿಸಿ ಮತ್ತು ಕಾರ್ಲೊ ಅಕ್ಯುಟಿಸ್, ಭ್ರಾತೃತ್ವದ ಆರ್ಥಿಕತೆಗಾಗಿ" ಅಂತರರಾಷ್ಟ್ರೀಯ ಬಹುಮಾನದ 2024-2025 ಆವೃತ್ತಿಯನ್ನು ಅಸ್ಸಿಸಿಯ ಸೇಂಟ್ ಮೇರಿ ಮೇಜರ್ ದೇವಾಲಯದಲ್ಲಿರುವ "ಹೋಪ್"(ಭರವಸೆ) ಯೋಜನೆಗೆ ನೀಡಲಾಯಿತು.

ಭ.ರ.ವ.ಸೆ
“ಭರವಸೆ” ಯೋಜನೆಯು “ಗುಣಪಡಿಸುವುದು, ಅವಕಾಶಗಳು, ರಕ್ಷಣೆ ಮತ್ತು ಸಬಲೀಕರಣ” ಎಂದರ್ಥ ಮತ್ತು ಇದು ಭಾರತದ ಗೋವಾದಲ್ಲಿ ನೆಲೆಗೊಂಡಿದೆ. "ಚೈಲ್ಡ್‌ಲೈನ್" ಎಂಬ ಸಹಾಯವಾಣಿ ಕಾರ್ಯಕ್ರಮವನ್ನು ಮುನ್ನಡೆಸಿದ್ದ ಸ್ಥಳೀಯ ಕಾರತಾಸ್‌ನ ಉಪಕ್ರಮದಿಂದ ಈ ಯೋಜನೆ ಬೆಳೆದಿದೆ. ಈ ಕಾರ್ಯಕ್ರಮವು ವಿಶೇಷವಾಗಿ ಬಡ ಮತ್ತು ಅತ್ಯಂತ ನಿರ್ಲಕ್ಷಿತ ಹಳ್ಳಿಗಳ ಅಪಾಯದಲ್ಲಿರುವ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಗೆ ಸಮರ್ಪಿತವಾಗಿದೆ.

2023ರಲ್ಲಿ, ಗೋವಾ ಸರ್ಕಾರವು ಕಾರ್ಯಕ್ರಮದ ನಿಯಂತ್ರಣವನ್ನು ವಹಿಸಿಕೊಂಡಿತು. ನಿರ್ಣಾಯಕ ಅಸಂಗತತೆಗಳು ಹೊರಹೊಮ್ಮಿದಾಗ, ಏಳು ಯುವಕರು, ಎಲ್ಲರೂ ಈಗಾಗಲೇ ಕಾರಿತಾಸ್ ಗೋವಾದ ಕಿವುಡ-ಅಂಧ ವ್ಯಕ್ತಿಗಳಿಗಾಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸುವ ಯೋಜನೆಯನ್ನು ಪ್ರಸ್ತುತಪಡಿಸಲು ಒಟ್ಟಾಗಿ ಕೆಲಸ ಮಾಡಿದರು.

ಅದರೊಂದಿಗೆ, “ಭರವಸೆ”ಯ ಯೋಜನೆಯು ಜನಿಸಿತು. ಇದರ ಗುರಿ: 18 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಅಪಾಯದಲ್ಲಿರುವ ಯುವಜನರನ್ನು ಮತ್ತು ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರುಗಳು ಅಥವಾ ಬದುಕುಳಿದವರು, ಅವರಲ್ಲಿ ಕೆಲವರು ಕಿವುಡ-ಕುರುಡರು, ಅವರನ್ನು ಬೆಂಬಲಿಸುವುದು.

ಈ ಯೋಜನೆಯು ಪರಿಸರ ಸ್ನೇಹಿ, ಕರಕುಶಲ ಉತ್ಪನ್ನಗಳಾದ ಟಾಯ್ಲೆಟ್ ಪೇಪರ್ ರೋಲ್‌ಗಳು, ಸಾಬೂನು, ಕೈಯಿಂದ ತಯಾರಿಸಿದ ವಸ್ತುಗಳು ಮತ್ತು ಜೈವಿಕ ವಿಘಟನೀಯ ಪ್ಯಾಕೇಜಿಂಗ್ ಅನ್ನು ರಚಿಸಲು ಮೀಸಲಾಗಿರುವ ವಿಶೇಷ ತರಬೇತಿಯನ್ನು ನೀಡುತ್ತದೆ, ಇದರಲ್ಲಿ ಬೇಡಿಕೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಕಸ್ಟಮೈಸ್ ಮಾಡಿದ ಪರಿಸರ ಸ್ನೇಹಿ ಆತಿಥ್ಯ ಕಿಟ್‌ಗಳು ಸೇರಿವೆ.

ಈ ಉತ್ಪನ್ನಗಳು ಈಗಾಗಲೇ ಯಶಸ್ವಿಯಾಗಿವೆ, ಏಕೆಂದರೆ ಅತ್ಯಂತ ಪ್ರಸಿದ್ಧ ಹೋಟೆಲ್ ಸರಪಳಿಗಳಲ್ಲಿ ಒಂದಾದ ತಾಜ್ ಹೋಟೆಲ್‌ಗಳು, ಭರವಸೆ ಯೋಜನೆಯ ಉತ್ಪನ್ನಗಳನ್ನು ಸಂಗ್ರಹಣೆ ಮಾಡುತ್ತದೆ, ಮಾರುಕಟ್ಟೆಗೆ ತರುತ್ತದೆ ಮತ್ತು ಮಾರಾಟ ಮಾಡುತ್ತದೆ.

ನಾಲ್ಕು ಅಕ್ಷರಗಳಿಗೂ ಮೀರಿದ ಸೇವೆ
ಗೋವಾ ಮಹಾಧರ್ಮಕ್ಷೇತ್ರದ ಧರ್ಮಗುರು ಸ್ಯಾನ್‌ಫೋರ್ಡ್ ರೊಡ್ರಿಗಸ್ ರವರು ಅಸ್ಸಿಸಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು ಮತ್ತು €50,000 ಬಹುಮಾನದಿಂದ ಪ್ರಯೋಜನ ಪಡೆಯಲಿರುವ ಸುಮಾರು 1,000 ಯುವಕರಿಗೆ ಧನ್ಯವಾದ ಅರ್ಪಿಸಿದರು. ವಿಜೇತರು ಭೌತಿಕ ಜಗತ್ತನ್ನು ತ್ಯಜಿಸುವ ಸಂಕೇತವಾಗಿ ಸಂತ ಫ್ರಾನ್ಸಿಸ್ ರವರುತನ್ನ ಬಟ್ಟೆಗಳನ್ನು ತೆಗೆದುಹಾಕುತ್ತಿರುವ ಚಿತ್ರವಿರುವ ಸ್ಕಾರ್ಫ್ ಅನ್ನು ಸಹ ಪಡೆದರು.

"ಭರವಸೆ" ಎಂಬ ಪದವು ಕೇವಲ ಒಂದು ಪದಕ್ಕಿಂತ ಹೆಚ್ಚಿನದು ಎಂಬುದನ್ನು ಧರ್ಮಗುರು ರೊಡ್ರಿಗಸ್ ರವರು ವಿವರಿಸಿದರು. "ಇದು ಘನತೆ ಮತ್ತು ಸ್ವಾತಂತ್ರ್ಯದ ಭವಿಷ್ಯವನ್ನು ನಿರ್ಮಿಸುವ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ವ್ಯಾಪಾರ ಜಗತ್ತನ್ನು ಒಳಗೊಳ್ಳುವ, ಭ್ರಾತೃತ್ವದ ಹೊಸ ಆರ್ಥಿಕತೆಯ ಮೂಲಕ ದುರ್ಬಲರಿಗೆ ಭರವಸೆ ನೀಡುವ ಚಳುವಳಿಯಾಗಿದೆ" ಎಂದು ಅವರು ವಿವರಿಸಿದರು.

"ಯುವಜನರು ತಮ್ಮನ್ನು ದುರುಪಯೋಗ ಮಾಡುವವರಿಂದ ಅಥವಾ ದಬ್ಬಾಳಿಕೆ ಮಾಡುವವರಿಂದ ಸ್ವತಂತ್ರವಾಗಿ ಬದುಕಲು ಸಾಧನಗಳ ಕೊರತೆಯಿಂದಾಗಿ ನಿಂದನೀಯ ವಾತಾವರಣದಲ್ಲಿ ಉಳಿಯದಂತೆ ನೋಡಿಕೊಳ್ಳುತ್ತದೆ" ಎಂದು ಭರವಸೆಯ ಯೋಜನೆಯು ಉದ್ಯಮಶೀಲತಾ ತರಬೇತಿಯು ಒತ್ತಿ ಹೇಳಿದರು.

ಮುಂದೆ ಏನಾಗುತ್ತದೆ?
ಈ ಬಹುಮಾನವು ಅಂತರರಾಷ್ಟ್ರೀಯ ಭ್ರಾತೃತ್ವ ಮತ್ತು "ಬದಲಾವಣೆ ತರುವವರ" ಸಮುದಾಯವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಧರ್ಮಗುರು ರೊಡ್ರಿಗಸ್ ರವರು ಹಂಚಿಕೊಂಡರು, ತರಬೇತಿ ಮತ್ತು ನಿರ್ವಹಣಾ ಅಭಿವೃದ್ಧಿಯ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಗುಂಪಿನೊಂದಿಗೆ ಹಂಚಿಕೊಂಡರು.

ನಾವು ಈ ಬಹುಮಾನವನ್ನು ಸ್ವೀಕರಿಸುವುದು ಅದನ್ನು ಉಳಿಸಿಕೊಳ್ಳಲು ಅಲ್ಲ, ಬದಲಾಗಿ ಅದರ ಮೇಲ್ವಿಚಾರಕರಾಗಿರಲು ಎಂದು ಅವರು ವಿವರಿಸಿದರು, ಈ ಧ್ಯೇಯದ ಮೂಲಕ ಗುಣಪಡಿಸುವ ಪ್ರತಿಯೊಂದು ಕ್ರಿಯೆ, ಪ್ರತಿಯೊಂದು ಜೀವನವನ್ನು ಉನ್ನತೀಕರಿಸುವುದು ಮತ್ತು ಭ್ರಾತೃತ್ವದ ಪ್ರತಿಯೊಂದು ಪ್ರಯತ್ನ ಪ್ರಪಂಚದಾದ್ಯಂತ ಭರವಸೆಯನ್ನು ಹರಡುತ್ತದೆ ಎಂಬುದು ಯೋಜನೆಯ ಆಶಯವಾಗಿದೆ ಎಂದು ಹೇಳಿದರು.

ನಮ್ಮ ಪ್ರದೇಶಕ್ಕೆ ಒಂದು ಭರವಸೆ
ಈ ಪ್ರಶಸ್ತಿಯನ್ನು ಸ್ವೀಕರಿಸುವುದು ಗೋವಾದ ಭರವಸೆಯ ಸಂಕೇತವಾಗಿದೆ ಎಂದು ಗೋವಾ ಪ್ರದೇಶದ ಅಧ್ಯಕ್ಷರು ಗಮನಸೆಳೆದರು, ಭರವಸೆಯ ಯೋಜನೆಯು "ಬಡತನದ ಹತಾಶೆಯಲ್ಲಿ ನಿಲ್ಲದ ಹಾಗೂ ಸ್ಪಷ್ಟವಾಗಿ ಪರಿಹರಿಸಲಾಗದ ಸಮಸ್ಯೆಯನ್ನು ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ, ಕೆಲಸ ಮತ್ತು ಬೆಳವಣಿಗೆಗೆ ಅವಕಾಶವಾಗಿ ಪರಿವರ್ತಿಸುವ ಭರವಸೆಯೊಂದಿಗೆ ನೋಡುವ ಸಾಮಾಜಿಕ ನಾವೀನ್ಯತೆ"ಯ ಕಥೆಯನ್ನು ಹೇಳುತ್ತದೆ.

ಇತರರು ಪ್ರಾಜೆಕ್ಟ್ ಹೋಪ್ ಪ್ರಶಸ್ತಿಯನ್ನು ಸ್ವೀಕರಿಸುವುದಕ್ಕೆ ಪ್ರತಿಕ್ರಿಯಿಸಿದರು. ಗೋವಾ ಮತ್ತು ದಮನ್‌ನ ಮಹಾಧರ್ಮಾಧ್ಯಕ್ಷರಾದ ಮತ್ತು ಈಸ್ಟ್ ಇಂಡೀಸ್‌ನ ಏಳನೇ ಮಠಾಧೀಶರಾದ ಕಾರ್ಡಿನಲ್ ಫಿಲಿಪ್ ನೇರಿ ಆಂಟೋನಿಯೊ ಸೆಬಾಸ್ಟಿಯೊ ಡೊ ರೊಸಾರಿಯೊ ಫೆರ್ರೊ ರವರು ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಸಂದೇಶವನ್ನು ಹಂಚಿಕೊಂಡರು ಈ ವಿಶೇಷ ಸುದ್ದಿಗೆ ಸಂತೋಷವನ್ನು ವ್ಯಕ್ತಪಡಿಸಿದರು.

ಅಸ್ಸಿಸಿಯ ಧರ್ಮಾಧ್ಯಕ್ಷ, ಮಹಾಧರ್ಮಾಧ್ಯಕ್ಷರಾದ ಡೊಮೆನಿಕೊ ಸೊರೆಂಟಿನೊರವರು, ಬಹುಮಾನದ ಮಹತ್ವವನ್ನು ವಿವರಿಸಿದರು, "ದಾನವು ರಾಜಕೀಯ ದಾನವಾದಾಗ ಅದು ಶ್ರೇಷ್ಠ, ಹೆಚ್ಚು ಪರಿಣಾಮಕಾರಿ ಮತ್ತು ನೈಜವಾದದ್ದಾಗಿರಬಹುದು" ಎಂದು ಒತ್ತಿ ಹೇಳಿದರು, ಈ ಬಹುಮಾನವು ಈ ಸೇವೆಯನ್ನು ನಾವು ಹೇಗೆ ಮಾಡಬೇಕೆಂಬುದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಹೇಳಿದರು.
 

26 ಮೇ 2025, 10:42