MAP

Soldiers patrol the streets in Srinagar Soldiers patrol the streets in Srinagar  (ANSA)

ಭಾರತ ಮತ್ತು ಪಾಕಿಸ್ತಾನ ನಡುವೆ ಶಾಶ್ವತ ಶಾಂತಿಗಾಗಿ ಕಾರ್ಡಿನಲ್ ಗ್ರೇಷಿಯಸ್ ಕರೆ ನೀಡುತ್ತಿದ್ದಾರೆ

ಕಾಶ್ಮೀರ ಪ್ರದೇಶದ ಉದ್ವಿಗ್ನತೆಯ ನಡುವೆ ಭಾರತ ಮತ್ತು ಪಾಕಿಸ್ತಾನಗಳು ಶಾಶ್ವತ ಶಾಂತಿಯ ಮಾರ್ಗವನ್ನು ಕಂಡುಕೊಳ್ಳಬೇಕೆಂದು ಮುಂಬೈಯನ ಮಹಾಧರ್ಮಾಧ್ಯಕ್ಷರಾದ ಪರಮಪೂಜ್ಯ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ರವರು ಕರೆ ನೀಡಿದ್ದಾರೆ.

ವ್ಯಾಟಿಕನ್ ಸುದ್ದಿ

ಕಾಶ್ಮೀರ ಪ್ರದೇಶದ ಮೇಲೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಮುಂದುವರಿದಿರುವುದರಿಂದ, ಮುಂಬೈಯನ ಮಹಾಧರ್ಮಾಧ್ಯಕ್ಷರಾದ ಪರಮಪೂಜ್ಯ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ರವರು ಪೂರ್ಣ ಮತ್ತು ನಿರ್ಣಾಯಕ ಒಪ್ಪಂದವನ್ನು ಕಂಡುಕೊಳ್ಳುವಂತೆ ಎರಡೂ ಕಡೆಯವರಿಗೆ ಮನವಿ ಮಾಡಿದ್ದಾರೆ.

ಏಪ್ರಿಲ್ 22 ರಂದು ಕಾಶ್ಮೀರದಲ್ಲಿ ಉಗ್ರರು ಭಯೋತ್ಪಾದಕ ದಾಳಿ ನಡೆಸಿ 26 ನಾಗರಿಕರನ್ನು ಕೊಂದ ನಂತರ ಇತ್ತೀಚೆಗೆ ಉದ್ವಿಗ್ನತೆ ಹೆಚ್ಚಾಯಿತು.

ಮೇ 10ರಂದು ಕದನ ವಿರಾಮಕ್ಕೆ ಒಪ್ಪಿಗೆಯಾಗುವವರೆಗೂ ಎರಡೂ ಕಡೆಯವರು ನಾಲ್ಕು ದಿನಗಳ ಕಾಲ ಪ್ರತೀಕಾರದ ದಾಳಿ ನಡೆಸಿದರು.

ಮರುದಿನ, ವಿಶ್ವಗುರು ಹದಿನಾಲ್ಕನೇ ಲಿಯೋರವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ಸ್ವಾಗತಿಸಿದರು, "ಶೀಘ್ರದಲ್ಲೇ ಶಾಶ್ವತ ಒಪ್ಪಂದಕ್ಕೆ ಬರಬಹುದು" ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಮುಂಬೈಯನ ಮಹಾಧರ್ಮಾಧ್ಯಕ್ಷರಾದ ಪರಮಪೂಜ್ಯ ಕಾರ್ಡಿನಲ್ ಓಸ್ವಾಲ್ಡ್ ಗ್ರೇಷಿಯಸ್ ರವರು ವಿಶ್ವಗುರುಗಳ ಮನವಿಗೆ ತಮ್ಮ ಧ್ವನಿಯನ್ನು ಸೇರಿಸಿದರು, "ಇದು ಶಾಂತಿಯ ಸಮಯ" ಎಂದು ಹೇಳಿದರು.

"ಪ್ರಾಚೀನ ಅಸಮಾಧಾನಗಳನ್ನು ಕೊನೆಗಾಣಿಸುವ ಸಮಯವಿದು" ಎಂದು ಅವರು ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದರು. "ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕೆಂದು ನಮ್ಮ ಹೃದಯಪೂರ್ವಕ ಮನವಿ. ಭಾರತ ಮತ್ತು ಪಾಕಿಸ್ತಾನಕ್ಕೆ ಮಾತ್ರವಲ್ಲದೆ ವಿಶ್ವದ ಶಾಂತಿಗೂ ಮುಖ್ಯವಾದ ಪೂರ್ಣ ಮತ್ತು ನಿರ್ಣಾಯಕ ಒಪ್ಪಂದಕ್ಕಾಗಿ ನಾವು ಆಶಿಸುತ್ತೇವೆ."

ಪಾಕಿಸ್ತಾನ ಮತ್ತು ಭಾರತ ಸಾಮಾನ್ಯ ಪರಂಪರೆಯನ್ನು ಹಂಚಿಕೊಂಡಿವೆ ಎಂದು ಕಾರ್ಡಿನಲ್ ಗ್ರೇಷಿಯಸ್ ಹೇಳಿದರು. ನಾವೆಲ್ಲರೂ ಸಹೋದರರು, ಒಂದೇ ಸಂಸ್ಕೃತಿ, ಸಂಪ್ರದಾಯಗಳು, ಆಲೋಚನೆಗಳು ಮತ್ತು ಭಾವನೆಗಳು ಎಂದು ಅವರು ಹೇಳಿದರು. ಸ್ವಾತಂತ್ರ್ಯದ ಕಾಲದಿಂದಲೂ ನಮಗೆ ನೋವುಂಟು ಮಾಡಿರುವ ಕಾಶ್ಮೀರ ಪ್ರದೇಶದ ವಿಷಯಗಳನ್ನು, ಮುಖಾಮುಖಿಯಾಗಿ ಕುಳಿತು ಮಾತುಕತೆಯ ಮೂಲಕ ಪರಿಹರಿಸಲು ಪ್ರಯತ್ನಿಸಲು ಇನ್ನೂ ಹೆಚ್ಚಿನ ಕಾರಣವಿದೆ.

ಕಾಶ್ಮೀರದಲ್ಲಿನ ವಿವಾದವು "ಯುದ್ಧಗಳು, ಶೋಕ ಮತ್ತು ನೋವುಗಳಿಗೆ ಕಾರಣವಾದ ಪ್ರಾಚೀನ ಪ್ರಾದೇಶಿಕ ವಿವಾದವಾಗಿದೆ" ಎಂದು ಭಾರತೀಯ ಕಾರ್ಡಿನಲ್ ಹೇಳಿದರು.

ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ದೀರ್ಘಕಾಲದ ಸಂಘರ್ಷಕ್ಕೆ ಇಳಿಯುವ ಬಗ್ಗೆ ಅವರು ಎಚ್ಚರಿಸಿದರು, ಅಂತಹ ಯುದ್ಧವು ಪ್ರಪಂಚದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಬಹುದು ಎಂದು ಹೇಳಿದರು.
ಕಾರ್ಡಿನಲ್ ಗ್ರೇಷಿಯಸ್ ಅಂತರರಾಷ್ಟ್ರೀಯ ಸಮುದಾಯವನ್ನು ಮಧ್ಯಸ್ಥಿಕೆ ಮತ್ತು "ತುರ್ತು ರಾಜತಾಂತ್ರಿಕ ಪ್ರಯತ್ನವನ್ನು ಸಂಘಟಿಸಲು ಆಹ್ವಾನಿಸಿದರು, ಇದನ್ನು ಎರಡೂ ಪಕ್ಷಗಳು ತಟಸ್ಥವೆಂದು ಗ್ರಹಿಸುತ್ತವೆ."

"ಇಂದು, ಧಾರ್ಮಿಕ ರಾಷ್ಟ್ರೀಯತೆಯನ್ನು ತ್ಯಜಿಸಿ ವಾಸ್ತವಿಕತೆಯೊಂದಿಗೆ ಶಾಂತಿಯನ್ನು ಉತ್ತೇಜಿಸುವುದು ನಾಯಕರ ಕರ್ತವ್ಯವಾಗಿದೆ. ಇದು ನಮ್ಮ ಆಶಯ" ಎಂದು ಅವರು ಹೇಳಿದರು.
 

19 ಮೇ 2025, 14:17