ಪ್ರಭುವಿನ ದಿನದ ಚಿಂತನೆ: ಪ್ರಭುವಿನ ಸ್ವರ್ಗಾರೋಹಣ
ಧರ್ಮಗುರು ಎಡ್ಮಂಡ್ ಪವರ್, OSB
ಪ್ರಪಂಚದ ಅನೇಕ ದೇಶಗಳಲ್ಲಿ, ಪ್ರಭುವಿನ ಸ್ವರ್ಗಾರೋಹಣದ ದಿನವನ್ನು ಅದರ ಸಾಂಪ್ರದಾಯಿಕ ದಿನವಾದ ಈಸ್ಟರ್‌ನ ಆರನೇ ವಾರದ ಗುರುವಾರದಂದು ಆಚರಿಸಲಾಗುವುದಿಲ್ಲ, ಆದರೆ ಅದರ ನಂತರದ ಭಾನುವಾರದಂದು ಆಚರಿಸಲಾಗುತ್ತದೆ. ನಾವು ಪಾಸ್ಖಕಾಲದ ಅಂತ್ಯವನ್ನು ಸಮೀಪಿಸುತ್ತಿರುವಾಗ, ಯೇಸುವಿನ ಐಹಿಕ ಜೀವನದಲ್ಲಿನ ಈ ನಿಗೂಢ ಕ್ಷಣವನ್ನು ನಾವು ಧಾರ್ಮಿಕವಾಗಿ ನೆನಪಿಸಿಕೊಳ್ಳುತ್ತೇವೆ. ಈ ವರ್ಷದ ಶುಭಸಂದೇಶಕ ಬೋಧಕರಾದ ಸಂತ ಲೂಕರು, ಪ್ರಭು ಯೇಸುವು, ಶಿಷ್ಯರಿಂದ ಬೇರ್ಪಟ್ಟು ಸ್ವರ್ಗಕ್ಕೆ ಎತ್ತಲ್ಪಟ್ಟರೆಂದು ಹೇಳುತ್ತಾರೆ. ಪ್ರೇಷಿತರ ಕೇರ್ಯಕಲಾಪಗಳೀಂದ ಆರಿಸಿಕೊಂಡ ಇಂದಿನ ಮೊದಲ ವಾಚನದಲ್ಲಿ ಆತನು ಮತ್ತೊಮ್ಮೆ ನಮಗೆ ಹೀಗೆ ಹೇಳುತ್ತಾರೆ, ಪ್ರಭುವು ಮೇಲಕ್ಕೆತ್ತಲ್ಪಟ್ಟರು ಮತ್ತು ಅವರು ಸ್ವರ್ಗಕ್ಕೆ ಏರಿಸಿದೊಡನೆ ಮೋಡವು ಅವರನ್ನು ಆವರಿಸಿ, ಪ್ರಭುವನ್ನು ಅವರ ದೃಷ್ಟಿಯಿಂದ ಮರೆಮಾಡಿತು.
"ಏರಿಸಲ್ಪಟ್ಟರು" ಎಂಬ ಕ್ರಿಯಾಪದವನ್ನು ಮತ್ತು ಅದು ನಮ್ಮ ಜೀವನಕ್ಕೆ ಹೇಗೆ ಭರವಸೆಯನ್ನು ನೀಡುತ್ತದೆ ಎಂಬುದನ್ನು ಪರಿಗಣಿಸೋಣ. ಮೊದಲ ಮೂರು ಸುವಾರ್ತೆಗಳು ಸ್ವರ್ಗಾರೋಹಣವನ್ನು ವಿವರಿಸುತ್ತವೆಯಾದರೂ, ಈ ಘಟನೆಯು ಸಂತ ಯೋವಾನ್ನರ ಪುಸ್ತಕದಲ್ಲಿ ಕಂಡುಬರುವುದಿಲ್ಲ. ವಾಸ್ತವವಾಗಿ, ನಾಲ್ಕನೇ ಸುವಾರ್ತಾಬೋಧಕರು ಆ ಕ್ಷಣವನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ವಿವರಿಸುತ್ತಾರೆ. ಸಂತ ಯೋವಾನ್ನರ ಶುಭಸಂದೇಶದಲ್ಲಿ ಪ್ರಭುಯೇಸು "ಭೂಮಿಯಿಂದ ಮೇಲಕ್ಕೆತ್ತಲ್ಪಟ್ಟ" ಬಗ್ಗೆ ಮೂರು ಉಲ್ಲೇಖಗಳಿವೆ: ಎಲ್ಲವೂ ಶಿಲುಬೆಗೇರಿಸುವಿಕೆಯನ್ನು ಉಲ್ಲೇಖಿಸುತ್ತವೆ, ಇವೆಲ್ಲವನ್ನೂ ಹೇಗಾದರೂ ಉನ್ನತೀಕರಣದೊಂದಿಗೆ ಗುರುತಿಸಲಾಗುತ್ತದೆ. ಶಿಲುಬೆಯ ಮೇಲೆ ಏರಿಸಲ್ಪಟ್ಟದ್ದು, ಅದೇ ಸಮಯದಲ್ಲಿ ಮಹಿಮೆಯಲ್ಲಿ ಮೇಲಕ್ಕೆತ್ತಲ್ಪಟ್ಟಿದೆ.
ಸ್ವರ್ಗಾರೋಹಣದ ದಿವ್ಯಬಲಿಪೂಜೆಯ ಪ್ರಾರ್ಥನೆಗಳು ನಮಗೆ ಒಂದು ಮುಖ್ಯ ಸಂಗತಿಯನ್ನು ನೆನಪಿಸುತ್ತವೆ: “ಕ್ರಿಸ್ತರ ಸ್ವರ್ಗಾರೋಹಣವು ... ನಮ್ಮ ಉನ್ನತಿ” ಯನ್ನು ಸೂಚಿಸುತ್ತದೆ (ಸಂಗ್ರಹ); ನಾವು ಸಹ ಸ್ವರ್ಗಸಾಮ್ರಾಜ್ಯಕ್ಕೆ ಏರಬಹುದು ಎಂದು ನಾವು ಪ್ರಾರ್ಥಿಸುತ್ತೇವೆ ... (ಕಾಣಿಕೆಗಳ ಮೇಲಿನ ಪ್ರಾರ್ಥನೆ); “ಆದ್ದರಿಂದ ಕ್ರೈಸ್ತ ಧರ್ಮದ ಭರವಸೆ ನಮ್ಮನ್ನು ಪ್ರಭುಕ್ರಿಸ್ತರ ಕಡೆಗೆ ಸೆಳೆಯಬಹುದು” (ಪರಮಪ್ರಸಾದದ ನಂತರ ಪ್ರಾರ್ಥನೆ). ಇದು ನಮ್ಮ ಭರವಸೆ, ನಮ್ಮ ಆಸೆ, ನಮ್ಮ ಹಣೆಬರಹ. ಆದರೆ, ಅದೇ ಸಮಯದಲ್ಲಿ, ಪವಿತ್ರಾತ್ಮದ ಶಕ್ತಿಯನ್ನು ಸ್ವೀಕರಿಸುವ ಮೊದಲು, ನಾವು ನಮ್ಮ ಜವಾಬ್ದಾರಿಯನ್ನು ಹೊರಲು ಹಿಂದೆ ಉಳಿದಿದ್ದೇವೆ, ಆದರೆ ಪವಿತ್ರಾತ್ಮದ ಶಕ್ತಿಯನ್ನು ಸ್ವೀಕರಿಸಿದ ನಂತರ ಅಲ್ಲ. ಸ್ವರ್ಗಾರೋಹಣವನ್ನು ನಾವು ವಯಸ್ಸಿಗೆ ಬಂದ, ಜ್ಞಾನದಲ್ಲಿ ಬೆಳೆಯುವ ಆಚರಣೆಯಾಗಿ ಕಾಣಬಹುದು, ಜವಾಬ್ದಾರಿಯನ್ನು ಹೊರಲು ಹಿಂದೆ ಉಳಿಯದೆ ಯೇಸುವಿನೊಂದಿಗೆ, ಸುವಾರ್ತೆ ಪ್ರಸರಿಸಲು ನಾವು ಪ್ರಬುದ್ಧತೆ ಮತ್ತು ಧೈರ್ಯದಿಂದ ನಮ್ಮನ್ನು ಅರ್ಪಿಸಿಕೊಳ್ಳುತ್ತೇವೆ.
ದೇವರು ಜಗತ್ತಿನ ಸಮಸ್ಯೆಗಳನ್ನು ಸರಿಪಡಿಸಲು ಮಾಂತ್ರಿಕವಾಗಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶದಿಂದ ಜನರು ಕೆಲವೊಮ್ಮೆ ನಿರುತ್ಸಾಹಗೊಳ್ಳುತ್ತಾರೆ. ಆದರೆ ಆತನು ನಮಗೆ ನೀಡಿರುವ ಉಡುಗೊರೆಗಳನ್ನು, ಅದರಲ್ಲೂ ವಿಶೇಷವಾಗಿ ಮುಂದಿನ ಭಾನುವಾರ ಪಾಸ್ಖಕಾಲದ ಅಂತ್ಯದಲ್ಲಿ ನಾವು ಆಚರಿಸಲಿರುವ ಪವಿತ್ರಾತ್ಮದ ಉಡುಗೊರೆಗಳನ್ನು(ಪಂಚಾಶತಮ ದಿನ), ಬಳಸಿಕೊಳ್ಳುವ ಸವಾಲನ್ನು ನಮಗೆ ಬಿಟ್ಟುಕೊಟ್ಟಿಲ್ಲವೇ?
ಈ ಭಾನುವಾರ ಸ್ವರ್ಗಾರೋಹಣವನ್ನು ಆಚರಿಸದವರಿಗೆ, ಪಾಸ್ಖಕಾಲದ ಏಳನೇ ಭಾನುವಾರದ ಶುಭಸಂದೇಶವನ್ನು ಪ್ರಭುಯೇಸುವಿನ ಕೊನೆಯ ಭೋಜನದ ಪ್ರಾರ್ಥನೆಯಿಂದ ತೆಗೆದುಕೊಳ್ಳಲಾಗಿದೆ. ತಮ್ಮ (ಅಪೊಸ್ತಲರ) ವಾಕ್ಯದ ಮೂಲಕ ನನ್ನನ್ನು ವಿಶ್ವಾಸಿಸುವರಿಗಾಗಿ ಪ್ರಭುಯೇಸುವು ತಮ್ಮ ಪಿತನಲ್ಲಿ ಬೇಡಿಕೊಳ್ಳುತ್ತಾರೆ. ಆತನು, ವಿಶ್ವಾಸಿಸುವವರಿಗಾಗಿ ತಂದೆ, ಮಗ ಮತ್ತು ಅವರ ನಡುವಿನ ಆಳವಾದ ನಿರಂತರ ಐಕ್ಯತೆಯನ್ನು ವ್ಯಕ್ತಪಡಿಸುತ್ತಾರೆ. ತನ್ನ ಸಂದೇಶವು ಲೋಕವನ್ನು ಮುಟ್ಟುವಂತೆ, ವಿಶ್ವಾಸಿಗಳು ತಮ್ಮೊಳಗೆ ಐಕ್ಯವಾಗಿರಬೇಕೆಂದು ಆತನು ಪ್ರಾರ್ಥಿಸುತ್ತಾನೆ. ಈ ಸಂದೇಶವು, ಮಾನವ ಜೀವನದ ಪ್ರತಿಯೊಂದು ಹಂತಕ್ಕೂ ಸಂಬಂಧಿಸಿದ ಸಂದೇಶವಾಗಿದೆ. ಈ ವರ್ಷದ ಮೇ 16 ರಂದು ವಿಶ್ವಗುರು ಹದಿನಾಲ್ಕನೇ ಲಿಯೋರವರ ರಾಜತಾಂತ್ರಿಕ ದಳವನ್ನು ಉದ್ದೇಶಿಸಿ ಮಾತನಾಡಿದ ಮಾತುಗಳನ್ನು ನಾವು ನೆನಪಿಸಿಕೊಳ್ಳಬಹುದು: ಸತ್ಯದ ಹೊರತಾಗಿ, ಅಂತರರಾಷ್ಟ್ರೀಯ ಸಮುದಾಯದೊಳಗೆ ನೈಜವಾದ ಶಾಂತಿಯುತ ಸಂಬಂಧಗಳನ್ನು ನಿರ್ಮಿಸಲು ಸಾಧ್ಯವಿಲ್ಲ.