MAP

File photo of Chinese Catholics celebrating their faith File photo of Chinese Catholics celebrating their faith  (AFP or licensors)

ಎರಡು ನೂತನ ದೇವಾಲಯಗಳ ಉದ್ಘಾಟನೆಯನ್ನು ಆಚರಿಸುತ್ತಿರುವ ಚೈನಾದ ಕಥೋಲಿಕರು

ಚೈನಾದ ಕಥೋಲಿಕರು ದೇಶದ ಹುಬೈ ಪ್ರಾಂತ್ಯ ಮತ್ತು ಶಾಂಕ್ಸಿ ಪ್ರಾಂತ್ಯದಲ್ಲಿ ಹೊಸ ದೇವಾಲಯಗಳ ಉದ್ಘಾಟನೆಯನ್ನು ವಿಶ್ವಾಸದ ಹಾದಿಯ ಪರಿಶ್ರಮದ ದೃಢ ಸಂಕೇತಗಳಾಗಿ ನೋಡುತ್ತಾರೆ.

ವ್ಯಾಟಿಕನ್ ಸುದ್ದಿ

ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದಲ್ಲಿ ಕಥೋಲಿಕ ಸಮುದಾಯಗಳ ಬೆಳವಣಿಗೆ ಮತ್ತು ಪರಿಶ್ರಮವು ಇತ್ತೀಚೆಗೆ ಎರಡು ಹೊಸ ದೇವಾಲಯಗಳನ್ನು ತೆರೆಯುವುದರೊಂದಿಗೆ ಗುರುತಿಸಲ್ಪಟ್ಟಿದೆ, ಇದು ಬದಲಾಗುತ್ತಿರುವ ಐತಿಹಾಸಿಕ ಸನ್ನಿವೇಶಗಳ ನಡುವೆ ನಿರಂತರ ವಿಶ್ವಾಸದ ಸ್ಪಷ್ಟ ಅಭಿವ್ಯಕ್ತಿಯಾಗಿದೆ.

ಕ್ರಿಸ್ತ ರಾಜರ ದೇವಾಲಯ
ಫೈಡ್ಸ್ ನ್ಯೂಸ್ ಏಜೆನ್ಸಿಯ ಪ್ರಕಾರ, ಮೇ 10 ರಂದು, ಹ್ಯಾಂಕೌ/ವುಹಾನ್‌ನ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಕುಯಿ ಕ್ವಿಂಗ್ಕಿ, OFMರವರು, ಹುಬೈ ಪ್ರಾಂತ್ಯದ ಕ್ಸಿಯೋಗನ್‌ನಲ್ಲಿ ನೂತನ ಕ್ರಿಸ್ತ ರಾಜರ ದೇವಾಲಯ (ಚರ್ಚ್ ಆಫ್ ಕ್ರೈಸ್ಟ್ ದಿ ಕಿಂಗ್‌ನ) ಸಾಂಭ್ರಮಿಕ ಉದ್ಘಾಟನೆಯ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಪ್ರಬೋಧನೆಯ ಸಮಯದಲ್ಲಿ, ಧರ್ಮಾಧ್ಯಕ್ಷರಾದ ಕುಯಿರವರು 33 ಮೀಟರ್ ಎತ್ತರದ ಗಂಟೆ ಗೋಪುರವನ್ನು ಸ್ವರ್ಗದ ಸಾಮ್ರಾಜ್ಯದ ಕಡೆಗೆ ಭಕ್ತರ ನೋಟವನ್ನು ನಿರ್ದೇಶಿಸುವ ಸಂಕೇತವೆಂದು ಬಣ್ಣಿಸಿದರು ಮತ್ತು ಅದೇ ಸಮಯದಲ್ಲಿ ಚೈನಾ ಸಂಪ್ರದಾಯದ ಶ್ರೀಮಂತಿಕೆಯಲ್ಲಿ ಕ್ರೈಸ್ತರ ಜೀವನವನ್ನು ಮೂಲ ಅಡಿಪಾಯಕ್ಕೆ ತರಲು ಕರೆಯಾಗಿಯೂ ಕಾರ್ಯನಿರ್ವಹಿಸಿದರು.

ಉದ್ಘಾಟನಾ ಸಮಾರಂಭವು 32 ಜನ ಯಾಜಕರು ಮತ್ತು ಸುಮಾರು 1,000 ಸ್ಥಳೀಯ ಕಥೊಲಿಕರು ಸೇರಿದಂತೆ ದೊಡ್ಡ ಸಭೆಯನ್ನು ಆಕರ್ಷಿಸಿತು. ನಾಗರಿಕ ಅಧಿಕಾರಿಗಳು ಸಹ ದೈವಾರಾಧನಾ ವಿಧಿಯಲ್ಲಿ ಭಾಗವಹಿಸಿದ್ದರು. 525 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ನೂತನ ದೇವಾಲಯವು, ರೆಕ್ಟರಿ ಮತ್ತು ಧರ್ಮ ಕೇಂದ್ರವನ್ನು ಒಳಗೊಂಡಿದೆ ಮತ್ತು 500ಕ್ಕೂ ಹೆಚ್ಚು ಆರಾಧಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಧರ್ಮಾಧ್ಯಕ್ಷರಾದ ಕುಯಿ ದೇವಾಲಯವನ್ನು "ಪ್ರಾರ್ಥನೆಯ ಸ್ಥಳ ಮತ್ತು ಅನುಗ್ರಹದ ಮೂಲ" ಎಂದು ಕರೆದರು, ಇದು ಈ ಪ್ರದೇಶದಲ್ಲಿ ಆಧ್ಯಾತ್ಮಿಕ ಮತ್ತು ವಾಸ್ತುಶಿಲ್ಪದ ಹೆಗ್ಗುರುತಾಗುತ್ತದೆ ಎಂದು ನಿರೀಕ್ಷಿಸಿದರು.

ಚೈನಾದ ಮಾತೆ ಮೇರಿ
ಅದೇ ದಿನ, ಶಾಂಕ್ಸಿ ಪ್ರಾಂತ್ಯದ ತೈಯುವಾನ್ ಮಹಾಧರ್ಮಕ್ಷೇತ್ರದಲ್ಲಿರುವ ಗುಝೈ ಧರ್ಮಕೇಂದ್ರವು, ಮೇ 13ರಂದು ಅವರ ಹಬ್ಬದ ದಿನಕ್ಕೂ ಸ್ವಲ್ಪ ಮುಂಚಿತವಾಗಿ, ಚೈನಾದ ಮಾತೆ ಮೇರಿಗೆ ಸಮರ್ಪಿತವಾದ ನೂತನ ದೇವಾಲಯವನ್ನು ಪವಿತ್ರಗೊಳಿಸಿತು.

ಸಮಾರಂಭದ ನೇತೃತ್ವ ವಹಿಸಿದ್ದ ಧರ್ಮಾಧ್ಯಕ್ಷರಾದ ಪೌಲ್ ಮೆಂಗ್ ನಿಂಗ್ಯೂರವರು, ಪುಟ್ಟ ಗ್ರಾಮೀಣ ಧರ್ಮಕೇಂದ್ರದ ಇತಿಹಾಸವನ್ನು ಪ್ರತಿಬಿಂಬಿಸಿದರು, ಅದರ ಸದಸ್ಯರ ಸ್ಥಿತಿಸ್ಥಾಪಕತ್ವ ಮತ್ತು ಧರ್ಮಪ್ರಚಾರಕರ ಸೇವೆಯ ಸಮರ್ಪಣೆಯನ್ನು ಗಮನಿಸಿದರು. ವಯಸ್ಸಾದ ಜನಸಂಖ್ಯೆಯಂತಹ ಸವಾಲುಗಳನ್ನು ಎದುರಿಸುತ್ತಿದ್ದರೂ, ವಲಸೆ ಕಾರ್ಮಿಕರ ಉಪಸ್ಥಿತಿಯಿಂದ ಸಮೃದ್ಧವಾಗಿರುವ ಸಮುದಾಯದ ಚೈತನ್ಯವನ್ನು ಧರ್ಮಾಧ್ಯಕ್ಷರಾದ ಮೆಂಗ್ ರವರು ಶ್ಲಾಘಿಸಿದರು ಮತ್ತು ಧರ್ಮಕೇಂದ್ರದ ಐಕ್ಯತೆ ಮತ್ತು ಸಿನೊಡಾಲಿಟಿಯ ಮನೋಭಾವವನ್ನು ಎತ್ತಿ ತೋರಿಸಿದರು. ಅವರು ಸಾಮಾನ್ಯರನ್ನು ಧರ್ಮಕೇಂದ್ರದ "ಚಾಲನಾ ಶಕ್ತಿ" ಎಂದು ಶ್ಲಾಘಿಸಿದರು ಮತ್ತು ಪ್ರಾರ್ಥನಾ ನಾಯಕತ್ವ ಮತ್ತು ಧರ್ಮಕೇಂದ್ರದ ನಿರ್ವಹಣೆಯಲ್ಲಿ ಅವರ ಸಕ್ರಿಯ ಪಾತ್ರವನ್ನು ಪ್ರೋತ್ಸಾಹಿಸಿದರು.

ಈ ಸಮುದಾಯಗಳು ವಿಶ್ವಾಸ ಮತ್ತು ಸಾಕ್ಷಿಯಲ್ಲಿ ಬೆಳೆಯುತ್ತಲೇ ಇರುವುದರಿಂದ ಕ್ರಿಸ್ತರ ಮಾರ್ಗದರ್ಶನ ಮತ್ತು ಪೂಜ್ಯ ಕನ್ಯಾ ಮಾತೆಮೇರಿಯ ಮಧ್ಯಸ್ಥಿಕೆಗಾಗಿ ಪ್ರಾರ್ಥನೆಗಳೊಂದಿಗೆ ಎರಡೂ ಆಚರಣೆಗಳು ಮುಕ್ತಾಯಗೊಂಡವು.
 

15 ಮೇ 2025, 12:10