ಮಾಸ್ಕೋವಿನ ಸಹಾಯಕ ಧರ್ಮಾಧ್ಯಕ್ಷ: ರಷ್ಯಾದ ಧರ್ಮಸಭೆ
ಫೆಡೆರಿಕೊ ಪಿಯಾನಾ
ರಷ್ಯಾದಲ್ಲಿ, ಮೇ 8 ರಂದು ವಿಶ್ವಗುರು ಹುದ್ದೆಗೆ ಆಯ್ಕೆಯಾದ ಸಂಜೆ, ಸಂತ ಪೇತ್ರರ ಮಹಾದೇವಾಲಯದ ಪ್ರಧಾನ ಬಾಲ್ಕನಿಯಲ್ಲಿ ವಿಶ್ವಗುರು ಹದಿನಾಲ್ಕನೇ ಲಿಯೋರವರು ಶಾಂತಿಯ ಕುರಿತು ಮಾತನಾಡಿದ ಮಾತುಗಳಿಂದ ಅನೇಕ ಜನರು ಭಾವುಕರಾದರು.
"ನಿಶ್ಶಸ್ತ್ರಗೊಳಿಸಿದ, ನಿಶ್ಯಸ್ತ್ರಗೊಳಿಸುವ ಶಾಂತಿಗಾಗಿ ಅವರ ಮನವಿಯಿಂದ ನಾವು ಪ್ರಭಾವಿತರಾಗಿದ್ದೇವೆ, ಈ ಮೇಲಿನ ಪದಗಳು ಅವರ ಭಾಷಣಗಳಲ್ಲಿ ಪುನರಾವರ್ತಿಸಿದ ಪದಗಳು, ಸರಳ ಆದರೆ ಒಳನೋಟವುಳ್ಳ ಪರಿಕಲ್ಪನೆಯಾಗಿದೆ. ಇವರ ಈ ಒಳನೋಟವುಳ್ಳ ಭಾಷಣವು ಭರವಸೆಯನ್ನು ಹುಟ್ಟುಹಾಕಿದೆ" ಎಂದು ಧರ್ಮಾಧ್ಯಕ್ಷರಾದ ಡುಬಿನಿನ್ ರವರು ಗಮನಿಸಿದರು.
ಮಾಸ್ಕೋದಲ್ಲಿರುವ ದೇವರ ತಾಯಿಯ ಮಹಾಧರ್ಮಕ್ಷೇತ್ರದ ಸಹಾಯಕ ಧರ್ಮಾಧ್ಯಕ್ಷಕರು ವ್ಯಾಟಿಕನ್ ಸುದ್ಧಿ ಜೊತೆ ಮಾತನಾಡುತ್ತಾ, ರಷ್ಯಾದ ಅನೇಕ ಜನರು ಏಕತೆಗೆ ಅವರು ಪ್ರಾಮುಖ್ಯತೆ ನೀಡುವುದನ್ನು ಮೆಚ್ಚುತ್ತಾರೆ ಎಂದು ಹೇಳಿದರು.
"ವಿಶ್ವಗುರುಗಳು ತಮ್ಮ ಪೇತ್ರರ ಪ್ರೇಷಿತ ಸೇವಾಧಿಕಾರದ ಸೇವೆಯ ಆರಂಭವನ್ನು ಗುರುತಿಸುವ ದೈವಾರಾಧನಾ ವಿಧಿಯ ಆಚರಣೆಯ ಪ್ರಬೋಧನೆಯ ಸಮಯದಲ್ಲಿ ಆ ಪದವನ್ನು ಕನಿಷ್ಠ ಎಂಟು ಬಾರಿ ಪುನರಾವರ್ತಿಸಿದರು" ಎಂದು ಅವರು ಹೇಳಿದರು. ಇದು ನಮ್ಮ ಧರ್ಮಸಭೆಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಒಂದು ಪ್ರಮುಖವಾದ ಉಪದೇಶವಾಗಿತ್ತು.
ದೊಡ್ಡ ಸಮಾಧಾನ
ಸಹಾಯಕ ಧರ್ಮಾಧ್ಯಕ್ಷಕರಾದ ಡುಬಿನಿನ್ ರವರ ಪ್ರಕಾರ, ಸಂಭಾಷಣೆ, ಒಗ್ಗಟ್ಟು ಮತ್ತು ಧರ್ಮಪ್ರಚಾರಕ ಉತ್ಸಾಹವು ವಿಶ್ವಗುರು ಹದಿನಾಲ್ಕನೇ ಲಿಯೋರವರ ಇತರ ಪ್ರಮುಖ ವಿಷಯಗಳಾಗಿವೆ, ಎಂಬುದು ತಕ್ಷಣವೇ ಪ್ರತಿಧ್ವನಿಸಿತು.
ಅವರು ವಿಶ್ವಗುರು ಫ್ರಾನ್ಸಿಸ್ ರವರ, ವಿಶ್ವಗುರುವಿನ ಸೇವಾಧಿಕಾರದ ನಿರಂತರತೆಯ ರೇಖೆಯನ್ನು ಎಳೆಯುತ್ತಾರೆ ಮತ್ತು ಅದು ನಮಗೆ ಹೆಚ್ಚಿನ ಸಾಂತ್ವನ ಹಾಗೂ ಹೊಸ ಪ್ರಚೋದನೆಯನ್ನು ನೀಡುತ್ತದೆ ಎಂದು ಅವರು ಹೇಳಿದರು, ಸಂಘರ್ಷದಿಂದ ಪರೀಕ್ಷಿಸಲ್ಪಟ್ಟ ಸ್ಥಳೀಯ ಧರ್ಮಸಭೆಯ ಗಾಯಗಳನ್ನು ಶಮನಗೊಳಿಸುವ ಮತ್ತು ಯುದ್ಧದ ಸಂಪೂರ್ಣ ನಿಲುಗಡೆಗಾಗಿ ನಿರಂತರವಾಗಿ ಪ್ರಾರ್ಥಿಸುತ್ತಿರುವ ಮುಲಾಮು ಎಂದು ಅವರು ಕರೆದರು.
ರಷ್ಯಾದ ಧರ್ಮಸಭೆಯು ತನ್ನ ಧರ್ಮಕೇಂದ್ರಗಳು "ವೈವಿಧ್ಯಮಯ ರಾಷ್ಟ್ರೀಯತೆಗಳು, ಸಾಂಸ್ಕೃತಿಕ ಹಿನ್ನೆಲೆಗಳು ಮತ್ತು ದೃಷ್ಟಿಕೋನಗಳನ್ನು" ಪ್ರತಿನಿಧಿಸುವುದರಿಂದ ಪಕ್ಷಪಾತದ ವಿಭಜನೆಗಳನ್ನು ಮೀರಿ ಉಳಿಯಲು ಪ್ರಯತ್ನಿಸುತ್ತದೆ ಎಂದು ಧರ್ಮಾಧ್ಯಕ್ಷಕರಾದ ಡುಬಿನಿನ್ ರವರು ಹೇಳಿದರು.
"ಈ ಪರಿಸ್ಥಿತಿಯಲ್ಲಿ, ಧರ್ಮಸಭೆಯು ಜನರೊಂದಿಗೆ ಅವರ ಎಲ್ಲಾ ನೋವು ಮತ್ತು ಸಂಕಟಗಳನ್ನು ಹಂಚಿಕೊಳ್ಳುತ್ತದೆ" ಎಂದು ಅವರು ಹೇಳಿದರು. "ಘಟನೆಗಳನ್ನು ನೇರವಾಗಿ ಬದಲಾಯಿಸಲು ಸಾಧ್ಯವಾಗದಿರುವ ಶಕ್ತಿಹೀನತೆಯನ್ನು ನಾವು ಆಳವಾಗಿ ಅನುಭವಿಸುತ್ತೇವೆ, ಆದರೆ ಪವಿತ್ರಾತ್ಮರಿಂದ ಮಾರ್ಗದರ್ಶಿಸಲ್ಪಟ್ಟ ವಿಶ್ವಗುರು ಹದಿನಾಲ್ಕನೇ ಲಿಯೋರವರ ಕ್ರಿಯೆಯಲ್ಲಿ ನಾವು ನಂಬಿಕೆ ಇಡುತ್ತೇವೆ."
ಮುಕ್ತ ಹೃದಯದ ವಿಶ್ವಗುರು
ನೂತನ ವಿಶ್ವಗುರು ಆಯ್ಕೆಯಾದಾಗ, ರಷ್ಯಾದ ಸಮಾಜದ ಹೆಚ್ಚಿನವರು, ಧರ್ಮಸಭೆಯಿಂದ ದೂರವಿರುವವರೂ ಸಹ ತಕ್ಷಣದ ಒಳ್ಳೆಯ ಪ್ರಭಾವ ಬೀರಿದ ವ್ಯಕ್ತಿಯ ಬಗ್ಗೆ ಆಶ್ಚರ್ಯ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಯೌವ್ವನದ, ಶಕ್ತಿಯುತ ಮತ್ತು ಆಳವಾದ ವ್ಯಕ್ತಿತ್ವದ ವಿಶ್ವಗುರುವನ್ನು ನೋಡಿ ಸಮಾಜವು ಅವರು ಸಕಾರಾತ್ಮಕವಾಗಿ ಆಶ್ಚರ್ಯಚಕಿತರಾದರು, ಎಂದು ಅನೇಕ ಜನರ ಅಭಿಪ್ರಾಯವಾಗಿದೆ, ಎಂದು ಧರ್ಮಾಧ್ಯಕ್ಷರಾದ ಡುಬಿನಿನ್ ರವರು ಹೇಳಿದರು. "ಅವರನ್ನು ಮುಕ್ತ ಹೃದಯದ ವ್ಯಕ್ತಿ ಎಂದು ಗ್ರಹಿಸಲಾಗುತ್ತದೆ, ಅವರು ಇತರರ ಹೃದಯಗಳನ್ನು ಸಹ ತೆರೆಯಬಲ್ಲರು. ನಮ್ಮ ಸಮಾಜದಲ್ಲಿರುವ ಎಲ್ಲಾ ಭಯಗಳನ್ನು ಹೋಗಲಾಡಿಸಲು ಅಂತಹ ಮುಕ್ತ ಹೃದಯದ ವ್ಯಕ್ತಿ ಅತ್ಯವಶ್ಯಕ."
ಅವರು ಸಲೂಸ್ ಪಾಪುಲಿ ರೊಮಾನಿ ಪ್ರತಿಮೆಯ ಪ್ರತಿಯು ರಷ್ಯಾದಾದ್ಯಂತ ಕಥೋಲಿಕ ಧರ್ಮಕೇಂದ್ರಗಳಿಗೆ ಮಾಡುತ್ತಿರುವ ತೀರ್ಥಯಾತ್ರೆಯನ್ನು ಸೂಚಿಸಿದರು.
ನಮ್ಮ ದೇವರ ತಾಯಿಯ ಚಿತ್ರವನ್ನು ವಿಶ್ವಗುರು ಫ್ರಾನ್ಸಿಸ್ ರವರು ಧರ್ಮಾಧ್ಯಕ್ಷರುಗಳ ಸಾಂತ್ವನದ ಸಂಕೇತವನ್ನು ಕೇಳಿದ ನಂತರ ಅವರು ನಮಗೆ ನೀಡಲು ಬಯಸಿದ್ದ ಉಡುಗೊರೆಯಾಗಿತ್ತು, ಏಕೆಂದರೆ ಅನೇಕ ಭಕ್ತವಿಶ್ವಾಸಿಗಳು ಜೂಬಿಲಿಗಾಗಿ ರೋಮ್‌ಗೆ ಯಾತ್ರಿಕರಾಗಿ ಬರಲು ಸಾಧ್ಯವಾಗುವುದಿಲ್ಲ, ಅಂತವರಿಗೆ ಇದು ಸಾಂತ್ವನದ ಸಂಕೇತವಾಗಿದೆ" ಎಂದು ಅವರು ಹೇಳಿದರು. ಈ "ಪವಿತ್ರ ವರ್ಷದ ಕೊನೆಯಲ್ಲಿ, ಪವಿತ್ರ ಪ್ರತಿಮೆಯನ್ನು ಮಾಸ್ಕೋ ಪ್ರಧಾನಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ."
ಸಂವಾದದ ಮಹತ್ವ
ಅಂತರ್ಧರ್ಮೀಯ ಸಂವಾದದ ಕುರಿತು, ಧರ್ಮಾಧ್ಯಕ್ಷರಾದ ಡುಬಿನಿನ್ ರವರು, ಮುಸ್ಲಿಮರ ಗುಂಪೊಂದು ಫ್ರಾಟೆಲ್ಲಿ ಟುಟ್ಟಿಯನ್ನು ಅನುವಾದಿಸಿದ್ದಾರೆ ಎಂದು ಹೇಳಿದರು, ಇದು ವಿಶ್ವಗುರು ಫ್ರಾನ್ಸಿಸ್ ರವರ ಸಹೋದರತ್ವ ಮತ್ತು ಸಾಮಾಜಿಕ ಸ್ನೇಹಕ್ಕೆ ಮೀಸಲಾಗಿರುವ ವಿಶ್ವಪರಿಪತ್ರವಾಗಿದೆ.
ನಾವು ದಾಖಲೆಯ ರಷ್ಯನ್ ಭಾಷೆಗೆ ಅನುವಾದವನ್ನು ಸಿದ್ಧಪಡಿಸುತ್ತಿದ್ದಾಗ, ಮುಸ್ಲಿಮರು ನಮಗಿಂತ ಮೊದಲು ಅದನ್ನು ರಷ್ಯನ್ ಭಾಷೆಗೆ ಅನುವಾದವನ್ನು ಮಾಡಿದ್ದಾರೆ ಎಂದು ತಿಳಿದು ನಮಗೆ ಸಂತೋಷವಾಯಿತು ಮತ್ತು ಈ ವಿಷಯವನ್ನು ಆಶ್ಚರ್ಯದಿಂದ ತಿಳಿದುಕೊಂಡೆವು ಎಂದು ಅವರು ಹೇಳಿದರು. ನಂತರ ಅವರು ಅದನ್ನು ಮುದ್ರಿಸಿದರು ಮತ್ತು ನಾವು ಅದನ್ನು ಒಟ್ಟಿಗೆ ಪ್ರಸ್ತುತಪಡಿಸಿದೆವು. ನಮ್ಮ ಇತಿಹಾಸದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲು: ಆ ದಾಖಲೆಯು, ಸಂವಾದವನ್ನು ಜಾಗೃತಗೊಳಿಸಿತು, ಏಕೆಂದರೆ ಮುಸ್ಲಿಮರು ವಿಶ್ವಪರಿಪತ್ರದ ಸಂದೇಶವು ನಿಜವಾಗಿಯೂ ಎಲ್ಲಾ ಮಾನವೀಯತೆಯನ್ನು ಉದ್ದೇಶಿಸುತ್ತದೆ ಎಂದು ಗ್ರಹಿಸಿದರು.