MAP

AUSTRIA-GERMANY-HISTORY-WWII-CONFLICT-LIBERATION-COMMEMORATION AUSTRIA-GERMANY-HISTORY-WWII-CONFLICT-LIBERATION-COMMEMORATION 

ಪೂರ್ವ ಧರ್ಮಸಭೆಗಳ ಸುದ್ದಿ - ಮೇ 22, 2025

ಈ ವಾರದ ಸುದ್ದಿಯು ಪೂರ್ವ ಧರ್ಮಸಭೆಗಳ, L'Œuvre d'Orient ಸಹಯೋಗದೊಂದಿಗೆ ನಿರ್ಮಿಸಲಾಗಿದೆ: ನೈಸಿಯಾ ಕೌನ್ಸಿಲ್‌ನ 1700ನೇ ವಾರ್ಷಿಕೋತ್ಸವ, ಪೂರ್ವ ಧರ್ಮಸಭೆಗಳು ವಿಶ್ವಗುರು ಹದಿನಾಲ್ಕನೇ ಲಿಯೋರವರನ್ನು ಸ್ವಾಗತಿಸುತ್ತವೆ ಮತ್ತು ಅರ್ಮೇನಿಯಾದಲ್ಲಿ ಗೌರವಿಸಲ್ಪಟ್ಟ ಮಾನ್ಸಿಗ್ನರ್ ಗೊಲ್ನಿಷ್ ರವರನ್ನು ಸ್ವಾಗತಿಸುತ್ತವೆ.

ಈ ವಾರದ ಪೂರ್ವ ಧರ್ಮಸಭೆಗಳ ಸುದ್ದಿಯಲ್ಲಿ:

ನೈಸಿಯಾ ಕೌನ್ಸಿಲ್‌ನ 1700 ನೇ ವಾರ್ಷಿಕೋತ್ಸವ
ಮಂಗಳವಾರ, ಮೇ 20, 325ರಲ್ಲಿ ಧರ್ಮಸಭೆಯ ಇತಿಹಾಸದಲ್ಲಿ ಕರೆಯಲ್ಪಟ್ಟ ಮೊದಲ ಸಾರ್ವತ್ರಿಕ ಪರಿಷತ್ತಾದ ನೈಸಿಯಾ ಕೌನ್ಸಿಲ್‌ನ 1700ನೇ ವಾರ್ಷಿಕೋತ್ಸವವಾಗಿತ್ತು. ಇದರ ಸ್ಮರಣಾರ್ಥವಾಗಿ, 2025ರ ವರ್ಷದುದ್ದಕ್ಕೂ ಹಲವಾರು ಸಾರ್ವತ್ರಿಕ ಆಚರಣೆಗಳನ್ನು ನಡೆಸಲಾಗುತ್ತಿದೆ. ವಿಶ್ವಗುರು ಫ್ರಾನ್ಸಿಸ್ ರವರು ಕಾನ್ಸ್ಟಾಂಟಿನೋಪಲ್‌ನ ಪಿತೃಪ್ರಧಾನ ಬಾರ್ತಲೋಮೆವ್ ರವರೊಂದಿಗೆ ಆಧುನಿಕ ಟರ್ಕಿಯಲ್ಲಿರುವ ನೈಸಿಯಾಗೆ ಜಂಟಿ ಭೇಟಿಯನ್ನು ಯೋಜಿಸಿದ್ದರು. ಮೇ 19 ರಂದು, ಪಿತೃಪ್ರಧಾನರನ್ನು ರೋಮ್‌ನಲ್ಲಿ ವಿಶ್ವಗುರು ಹದಿನಾಲ್ಕನೇ ಲಿಯೋರವರು ಬರಮಾಡಿಕೊಂಡರು ಮತ್ತು ನೂತನ ವಿಶ್ವಗುರು ವರ್ಷದ ಅಂತ್ಯದ ವೇಳೆಗೆ ಟರ್ಕಿಗೆ ಭೇಟಿ ನೀಡುವ ಉದ್ದೇಶ ಹೊಂದಿದ್ದಾರೆಂದು ಘೋಷಿಸಲಾಯಿತು.

ಪೂರ್ವ ಧರ್ಮಸಭೆಗಳು ವಿಶ್ವಗುರು ಹದಿನಾಲ್ಕನೇ ಲಿಯೋರವರನ್ನು ಸ್ವಾಗತಿಸುತ್ತವೆ
ಮೇ 18, ಭಾನುವಾರ, ಪೂರ್ವ ಧರ್ಮಸಭೆಗಳ ಹಲವಾರು ಪಿತೃಪ್ರಧಾನರು ಮತ್ತು ಧರ್ಮಾಧ್ಯಕ್ಷರುಗಳು ವಿಶ್ವಗುರು ಹದಿನಾಲ್ಕನೇ ಲಿಯೋರವರ ಪ್ರೇಷಿತಾ ಸೇವಾಧಿಕಾರದ ಹುದ್ಧೆಯ ಪೀಠಾಧಿಕಾರದ ಜವಾಬ್ದಾರಿಯನ್ನು ಸ್ವೀಕರಿಸುವ ದಿವ್ಯಬಲಿಪೂಜೆಯಲ್ಲಿ ಭಾಗವಹಿಸಿದ್ದರು. ರೋಮ್‌ನಲ್ಲಿ, ನೂತನ ವಿಶ್ವಗುರುಗಳು ಪೂರ್ವದ ಧರ್ಮಸಭೆಗಳಿಗೆ ವಿಶ್ವಗುರು ಫ್ರಾನ್ಸಿಸ್ ರವರ ಕಾಳಜಿಯನ್ನು ಮುಂದುವರಿಸುತ್ತಾರೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಅನೇಕರು ಲೆಬನಾನ್‌ಗೆ ವಿಶ್ವಗುರುವಿನ ಭೇಟಿಯನ್ನು ನಿರೀಕ್ಷಿಸುತ್ತಿದ್ದಾರೆ. ವಿಶ್ವಗುರು ಹದಿನಾಲ್ಕನೇ ಲಿಯೋರವರು ಲತೀನ್ ಕಥೋಲಿಕರ ವಿಶ್ವಗುರು ಮಾತ್ರವಲ್ಲ, ಅವರು ಎಲ್ಲಾ ಕಥೋಲಿಕ ಧರ್ಮಸಭೆಗಳ ವಿಶ್ವಗುರುಗಳಾಗಿರುತ್ತಾರೆ ಎಂದು ಅವರು ಹೇಳುತ್ತಾರೆ.

ಅರ್ಮೇನಿಯಾದಲ್ಲಿ ಶ್ರೇಷ್ಠಗುರು (ಮಾನ್ಸಿಗ್ನರ್) ಗೊಲ್ನಿಷ್ ರವರನ್ನು ಗೌರವಿಸಲಾಯಿತು
ಮೇ 20, ಮಂಗಳವಾರ, ಲುವ್ರೆ ಡಿ'ಓರಿಯಂಟ್‌ನ ಮಹಾನಿರ್ದೇಶಕರಾದ ಶ್ರೇಷ್ಠಗುರು (ಮಾನ್ಸಿಗ್ನರ್) ಪ್ಯಾಸ್ಕಲ್ ಗೊಲ್ನಿಷ್ ರವರಿಗೆ ಅರ್ಮೇನಿಯಾದ ಯೆರೆವಾನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು. ನಂತರ ಅವರು ಅರ್ಮೇನಿಯಾದ ಫ್ರೆಂಚ್ ರಾಯಭಾರಿ ಮತ್ತು ಅರ್ಮೇನಿಯದ ಕಥೋಲಿಕ ಮಹಾಧರ್ಮಾಧ್ಯಕ್ಷರೊಂದಿಗೆ ಅರ್ಮೇನಿಯದ ನರಮೇಧ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಅವರು ಲುವ್ರೆ ಡಿ'ಓರಿಯಂಟ್ ಪರವಾಗಿ ಒಂದು ಮರವನ್ನು ನೆಟ್ಟರು. ಅರ್ಮೇನಿಯದ ಜನರಿಗೆ ಸಂಘಟನೆಯ ಅಚಲ ಬೆಂಬಲವನ್ನು ಶ್ರೇಷ್ಠಗುರು ಗೊಲ್ನಿಷ್ ರವರು ಪುನರುಚ್ಚರಿಸಿದರು ಮತ್ತು ನರಮೇಧ ನಿರಾಕರಣೆಯನ್ನು ಖಂಡಿಸಿದರು.
 

22 ಮೇ 2025, 13:07