ವಿಶ್ವದಾದ್ಯಂತ ಕ್ರೈಸ್ತ ನಾಯಕರು ವಿಶ್ವಗುರು ಹದಿನಾಲ್ಕನೇ ಲಿಯೋರವರನ್ನು ಸ್ವಾಗತಿಸಿದರು
ಲಿಂಡಾ ಬೋರ್ಡೋನಿ
ವಿಶ್ವಗುರು ಹದಿನಾಲ್ಕನೇಯ ಲಿಯೋರವರ ಆಯ್ಕೆಗೆ ಕ್ರೈಸ್ತ ಧರ್ಮ ಪ್ರಪಂಚದಾದ್ಯಂತ ಹರ್ಷಿಸುತ್ತಿದೆ, ಬೆಂಬಲ ಮತ್ತು ಭರವಸೆಯ ಸಂದೇಶಗಳು ಬರುತ್ತಿವೆ. ಆಂಗ್ಲಿಕನ್, ಲುಥೆರನ್, ಆರ್ಥೊಡಾಕ್ಸ್ ಮತ್ತು ಇವಾಂಜೆಲಿಕಲ್ ಸಮುದಾಯಗಳ ನಾಯಕರು, ತಮ್ಮ ಅಭಿನಂದನೆಗಳು ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ. ಶಾಂತಿ, ನ್ಯಾಯ ಮತ್ತು ಏಕತೆಯ ಹಂಚಿಕೆಯ ಮೌಲ್ಯಗಳನ್ನು ಒತ್ತಿ ಹೇಳಿದ್ದಾರೆ.
ಆಂಗ್ಲಿಕನ್ ಐಕ್ಯತೆ: "ಭಯವಿಲ್ಲದೆ ಗೋಚರಿಸುವ ಏಕತೆ"
ಆಂಗ್ಲಿಕನ್ ಐಕ್ಯತೆಯ ಪ್ರಧಾನ ಕಾರ್ಯದರ್ಶಿ ಪರಮಪೂಜ್ಯ ಶ್ರೇಷ್ಠಗುರು ಆಂಥೋನಿ ಪೊಗ್ಗೊರವರು ಹೇಳಿಕೆ ನೀಡಿ, " ವಿಶ್ವಗುರು ಹದಿನಾಲ್ಕನೇಯ ಲಿಯೋರವರ ಚುನಾವಣೆ ಮತ್ತು ನೇಮಕಾತಿಯನ್ನು ನಾವು ಬಹಳ ಸಂತೋಷದಿಂದ ಸ್ವಾಗತಿಸುತ್ತೇವೆ... ಅವರ ಪವಿತ್ರತೆಯು ತಮ್ಮ ಜಾಗತಿಕ ಸೇವೆಯನ್ನು ವಹಿಸಿಕೊಂಡಂತೆ ನಾವು ನಮ್ಮ ಪ್ರಾರ್ಥನೆಗಳು, ಆಚರಣೆ ಮತ್ತು ಪ್ರೋತ್ಸಾಹವನ್ನು ಹಂಚಿಕೊಳ್ಳುತ್ತೇವೆ."
ಲುಥೆರನ್ ವಿಶ್ವ ಒಕ್ಕೂಟ: "ಕ್ರಿಸ್ತರ ಹಂಚಿಕೆಯ ಸಾಕ್ಷಿ"
ಲುಥೆರನ್ ವಿಶ್ವ ಒಕ್ಕೂಟದ (LWF) ಪ್ರಧಾನ ಕಾರ್ಯದರ್ಶಿ ಪರಮಪೂಜ್ಯ ಶ್ರೇಷ್ಠಗುರು ಡಾ. ಆನ್ ಬರ್ಗ್ಹಾರ್ಡ್ ರವರು ಅಭಿನಂದನೆಗಳು ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದರು. "ರೋಮ್‌ನ ಧರ್ಮಾಧ್ಯಕ್ಷರಾಗಿ ನಿಮ್ಮ ಆಯ್ಕೆಯನ್ನು ಲುಥೆರನ್ ವಿಶ್ವ ಒಕ್ಕೂಟವು ಪವಿತ್ರಾತ್ಮರಲ್ಲಿ ಆಳವಾದ ಸಂತೋಷ ಮತ್ತು ಕೃತಜ್ಞತೆಯಿಂದ ಸ್ವಾಗತಿಸುತ್ತದೆ."
ಪೂರ್ವ ಸನಾತನ ಧರ್ಮಸಭೆಗಳು: ಸಂವಾದವನ್ನು ಅಳವಡಿಸಿಕೊಳ್ಳುವುದು
ಅಮೆರಿಕದ ಗ್ರೀಕ್ ಸನಾತನ ಕ್ರೈಸ್ತ-ಧರ್ಮದ ಮಹಾಧರ್ಮಾಧ್ಯಕ್ಷರಾದ ಎಲ್ಪಿಡೋಫೊರೊಸ್ ರವರು, ನೂತನ ವಿಶ್ವಗುರುವನ್ನು "ಭ್ರಾತೃತ್ವ ಗೌರವ" ದೊಂದಿಗೆ ಸ್ವಾಗತಿಸಿದರು.
ವಿಶ್ವಗುರುವಿನ ಹೆಸರನ್ನು ಆಯ್ಕೆ ಮಾಡಿದ ಬಗ್ಗೆ ಸಾರ್ವತ್ರಿಕ ಪಿತೃಪ್ರಧಾನ ಬಾರ್ತಲೋಮೆವ್ ರವರು ಹೀಗೆ ಹೇಳಿದರು: "ವಾಸ್ತವವಾಗಿ, ಅಮೇರಿಕ ಮೂಲದ ವಿಶ್ವಗುರು ಆಯ್ಕೆಯಾಗಿದ್ದಾರೆ, ಅವರು ಹದಿನಾಲ್ಕನೆಯ ಲಿಯೋ ಎಂಬ ನಾಮಾಂಕಿತವನ್ನು ಸ್ವಿಕರಿಸಿದ್ದಾರೆ... ಹದಿನಾಲ್ಕನೆಯ ಲಿಯೋರವರು ಸಾಮಾಜಿಕ ಬೋಧನೆಗಳಿಗಾಗಿ ಗುರುತಿಸಲ್ಪಟ್ಟರು. ಹದಿನಾಲ್ಕನೆಯ ಲಿಯೋರವರು ಜಗತ್ತಿಗೆ ಧರ್ಮಸಭೆಯ ಕೊಡುಗೆಯನ್ನು ಸ್ವೀಕರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ..."
"ನಾನು ಅವರ ವಿಶ್ವಗುರುವಿನ ಪದವಿಗೇರಿಸುವ ಸಾಂಭ್ರಮಿಕ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಯಾಣಿಸಲು ಉದ್ದೇಶಿಸಿದ್ದೇನೆ. ಪೂರ್ವ ಮತ್ತು ಪಶ್ಚಿಮಗಳ ನಡುವಿನ ಸಂವಾದವನ್ನು ಮುನ್ನಡೆಸಬೇಕೆಂದು ಪ್ರಸ್ತಾಪಿಸುತ್ತೇನೆ" ಎಂದು ಕುಲಸಚಿವ ಬಾರ್ತಲೋಮೆವ್ ರವರು ಭಾಗವಹಿಸುವ ಇಂಗಿತವನ್ನು ವ್ಯಕ್ತಪಡಿಸಿದರು.
ಗಾಜಾದ ಸನಾತನ ಕ್ರೈಸ್ತ ಸಮುದಾಯ: ಶಾಂತಿಗಾಗಿ ಭರವಸೆ
ಯುದ್ಧಪೀಡಿತ ಗಾಜಾದಲ್ಲಿ, ಸನಾತನ ಕ್ರೈಸ್ತ ಧರ್ಮಸಭೆಯವರೂ ಸಹ ಭರವಸೆಯೊಂದಿಗೆ ಪ್ರತಿಕ್ರಿಯಿಸಿದರು. ಗ್ರೀಕ್ ಸನಾತನ ಕ್ರೈಸ್ತ ಧರ್ಮಸಭೆಯ ಫಾದರ್ ಯೂಸೆಫ್ ಅಸಾದ್ ರಾಯಿಟರ್ಸ್ ರವರು ಹೀಗೆ ಹೇಳಿದರು: "ವಿಶ್ವಗುರು ಫ್ರಾನ್ಸಿಸ್ ರವರು ಮಾಡಿದಂತೆ ಅವರು ನಮ್ಮ ಶಾಂತಿಗೆ ಪ್ರಾಮುಖ್ಯತೆ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ."